ಬಸವನಬಾಗೇವಾಡಿ: ತಾಲೂಕಿನ ಮನಗೂಳಿ ಹಿರೇಮಠದ ಕಲ್ಯಾಣ ಮಂಟಪ ಲೋಕಾರ್ಪಣೆ, ನೂತನ ರಥೋತ್ಸವ, ಡಾ.ಜಗದ್ಗುರು ಡಾ.ಮಹಾಂತ ಶಿವಾಚಾರ್ಯ ಸ್ವಾಮೀಜಿ ಅವರ ೧೧ ನೇ ಪುಣ್ಯಾರಾಧನೆ, ೫೦೦೮ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ, ೨೦೦೮ ಕುಂಭ, ೨೫ ಮಂಟಪ ಪೂಜೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಜ.೩ ಮತ್ತು ೪ ರಂದು ಹಮ್ಮಿಕೊಂಡ ಹಿನ್ನೆಲೆಯಲ್ಲಿ ಹಿರೇಮಠದ ಪೀಠಾಧಿಪತಿ ಅಭಿನವ ಸಂಗನಬಸವ ಶಿವಾಚಾರ್ಯ ಸ್ವಾಮೀಜಿ ಅವರು ಗುರುವಾರ ಮನಗೂಳಿ ಪಟ್ಟಣದಲ್ಲಿ ಪಾದಯಾತ್ರೆ ಮಾಡುವ ಮೂಲಕ ದುಶ್ಚಟಗಳ ತ್ಯಜಿಸುವಂತೆ ಪ್ರತಿಯೊಬ್ಬರಿಗೆ ರುದ್ರಾಕ್ಷಿ ಧಾರಣೆ ಮಾಡಿ ಕಾರ್ಯಕ್ರಮದ ಜಾಗೃತಿಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು, ೩ ಮತ್ತು ೪ ರಂದು ಶ್ರೀಮಠದಿಂದ ಹಮ್ಮಿಕೊಂಡಿರುವ ಕಾರ್ಯಕ್ರಮದಂಗವಾಗಿ ಶ್ರೀಮಠದ ಭಕ್ತರಿರುವ ೪೦ ಗ್ರಾಮಗಳಲ್ಲಿ ಪಾದಯಾತ್ರೆ ಮಾಡುವ ಜೊತೆಗೆ ಭಕ್ತರಿಗೆ ರುದ್ರಾಕ್ಷಿ ವಿತರಿಸುವ ಜೊತೆಗೆ ಯಾರೂ ದುಶ್ಚಟಗಳಿಗೆ ದಾಸರಾಗದೇ ಸನ್ಮಾರ್ಗ ಜೀವನವನ್ನು ತಮ್ಮದಾಗಿಸಿಕೊಳ್ಳಬೇಕೆಂದು ಹೇಳುವ ಜೊತೆಗೆ ಈ ಎರಡು ದಿನಗಳ ಕಾಲ ನಡೆಯುವ ಕಾರ್ಯಕ್ರಮಕ್ಕೆ ಎಲ್ಲರೂ ಬಂದು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ರಾಮು ಬಿರಾದಾರ, ಖಂಡುಬಾ ಘೋರ್ಪಡೆ, ರೇವಣಸಿದ್ದಪ್ಪ ಕಾಲದೀಪ, ಭೀಮಣ್ಣ ಔರಸಂಗ, ಮುದುಕಪ್ಪ ಮಣ್ಣೂರ, ಶೇಖಪ್ಪ ಬಿರಾದಾರ, ರೇವಣಸಿದ್ದ ತಪಶೆಟ್ಟಿ, ಶ್ರೀಶೈಲ ಬಿರಾದಾರ, ಪ್ರಕಾಶ ಕುಂಬಾರ, ಯಂಕಪ್ಪ ಬನ್ನೂರ, ಈರಪ್ಪ ಕಂಬಿ, ಮಾಂತಪ್ಪ ತೊನಿಶ್ಯಾಳ, ಬಸವರಾಜ ತಪಶೆಟ್ಟಿ, ಕೃಷ್ಣ ಬೂದಿಹಾಳ, ಮಡಿವಾಳಪ್ಪ ತೊನಿಶ್ಯಾಳ, ಶಿವಾನಂದ ಗುಜ್ಜಗೊಂಡ, ಶಿವಾಜಿ ಘೋರ್ಪಡೆ, ರಾಜು ಹುಣಸಿಕಟ್ಟಿ ಇತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

