ಮುದ್ದೇಬಿಹಾಳ: ಪಟ್ಟಣದ ತಹಶೀಲ್ದಾರ ಕಚೇರಿಯ ಆವರಣದಲ್ಲಿ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ನಾಗರಬೆಟ್ಟ ಗ್ರಾಮದ ರೈತರು ನಡೆಸುತ್ತಿದ್ದ ಧರಣಿ ಸತ್ಯಾಗ್ರಹ ಅಧಿಕಾರಿಗಳ ಭರವಸೆಯ ಮೇರೆಗೆ ಅಂತ್ಯಗೊಂಡಿದೆ.
ಧರಣಿ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ ಬಲರಾಮ ಕಟ್ಟಿಮನಿ ಧರಣಿ ನಿರತರಿಗೆ ಸದರಿ ಗುಡ್ಡಗಳ ಬಗ್ಗೆ ವಿಮರ್ಷಾತ್ಮಕ ವರದಿ ತರಿಸಿಕೊಂಡು ನಾಳ್ಕು ತಿಂಗಳೊಳಗಾಗಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯನ್ನ ನೀಡಿದರು. ತಹಶೀಲ್ದಾರರ ಭರವಸೆಯ ಮೇರೆಗೆ ಧರಣಿ ನಿರತರು ಧರಣಿಯನ್ನು ಅಂತ್ಯಗೊಳಿಸಿದರು.
ಈ ವೇಳೆ ತಾಲೂಕು ರೈತ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಎಂ.ಎಸ್.ಸಿದರೆಡ್ಡಿ ಮಾತನಾಡಿ ತಹಶೀಲ್ದಾರ ಅವರು ನಮ್ಮ ಬೇಡಿಕೆಗಳಿಗೆ ಸೂಕ್ತ ಕ್ರಮ ವಹಿಸುವದಾಗಿ ತಿಳಿಸಿರುವುದರ ಪ್ರಯುಕ್ತ ಈ ಧರಣಿಯನ್ನು ಅಂತ್ಯಗೊಳಿಸುತ್ತಿದ್ದೇವೆ ಎಂದರು.
ಈ ವೇಳೆ ಗ್ಯಾನಪ್ಪ ರಕ್ಕಸಗಿ, ಶರಣಪ್ಪ ದಡ್ಡಿ, ಪರಮಪ್ಪ ಗುರಿಕಾರ, ಶಾಂತಗೌಡ ಸಿದರೆಡ್ಡಿ, ಹಣಮಂತ ಜಾಲಿಬೆಂಚಿ, ನಿಂಗಪ್ಪ ಹುರಿಕಾರ, ಬಸಪ್ಪ ಟಕ್ಕಳಕಿ, ನಿಂಗಪ್ಪ ರಕ್ಕಸಗಿ, ಕೆ.ಬಿ.ಮುರಾಳ, ಮಾಂತಯ್ಯ ಮಠ, ಶಂಕರಗೌಡ ಸಿದರೆಡ್ಡಿ, ಜುಮ್ಮಣ್ಣ ಟಕ್ಕಳಕಿ, ನಾನಾಗೌಡ ಸಿದರೆಡ್ಡಿ ಸೇರಿದಂತೆ ಮತ್ತೀತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

