Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಆದೇಶ ಪತ್ರದಲ್ಲಿ ಕನ್ನಡದ ಕೊಲೆ! | ಲೋಪದೋಷ ಗಮನಿಸದ ಡಿಡಿಪಿಐ ಬಸವನಬಾಗೇವಾಡಿ: ತಾಲೂಕಿನ ಮಸಬಿನಾಳ ಗ್ರಾಮದಲ್ಲಿ ನಡೆದ ಸಂವಿಧಾನ ಜಾಗೃತಿ ಕಾರ್ಯಕ್ರಮದಲ್ಲಿ ನೀಲಿ ತಿಲಕ, ನೀಲಿ ಶಾಲು ಧರಿಸಲು ನಿರಾಕರಿಸಿದ ಶಿಕ್ಷಕ ಶಿವಾನಂದ ಕೆಳಗಿನಮನಿ ಅವನನ್ನು ಕರ್ತವ್ಯದಿಂದ ಅಮಾನತ್ತುಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ(ನಾಗವಾರ ಬಣ) ಕಾರ್ಯಕರ್ತರು ಬಿಇಒ ಕಚೇರಿ ಆವರಣದಲ್ಲಿ ಶುಕ್ರವಾರ ಅಹೋರಾತ್ರಿ ಧರಣಿ ಆರಂಭಿಸಿದರು.ಸುದ್ದಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಬಿಇಒ ವಸಂತ ರಾಠೋಡ ಹಾಗೂ ಪಿಐ ವಿಜಯಕುಮಾರ ಮುರಗುಂಡಿ ಆಗಮಿಸಿ ಪ್ರತಿಭಟನೆ ಕೈ ಬಿಡುವಂತೆ ಪ್ರತಿಭಟನಾ ನಿರತರನ್ನು ಮನ ಒಲಿಸಲು ಪ್ರಯತ್ನಿಸಿದರು, ಪಟ್ಟು ಬಿಡದ ಪ್ರತಿಭಟನಾಕಾರರು ಶಿಕ್ಷಕ ಶಿವಾನಂದ ಕೆಳಗಿನಮನಿಯನ್ನು ಕೂಡಲೇ ಅಮಾನತ್ತುಗೊಳಿಸಿ, ಇಲ್ಲವಾದರೆ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ಪ್ರತಿಭಟನಾ ಸ್ಥಳಕ್ಕೆ ಆಗಮಿಸುವಂತೆ ಪಟ್ಟು ಹಿಡಿದರು, ತಡರಾತ್ರಿವರೆಗೂ ಪ್ರತಿಭಟನೆ ಮುಂದುವರೆಯಿತು,ಬಿಇಓ ವಸಂತ ರಾಠೋಡ ಹಾಗೂ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎನ್ ಎಸ್ ನಾಗೂರ ಅವರು ಕೆಲ ಹೊತ್ತು ದೂರವಾಣಿ ಮೂಲಕ ಚರ್ಚಿಸಿ…
ಬಸವನಬಾಗೇವಾಡಿ: ರಾಜ್ಯ ಸರ್ಕಾರ ವಿಶ್ವಗುರು ಬಸವೇಶ್ವರರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿ ಆದೇಶಿಸಿರುವ ಹಿನ್ನಲೆಯಲ್ಲಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ವಿವಿಧ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ವಿವಿಧ ಪಕ್ಷದ ಮುಖಂಡರ ಸಮ್ಮುಖದಲ್ಲಿ ಬಸವೇಶ್ವರರ ಭಾವ ಚಿತ್ರ ಅನಾವರಣಗೊಳಿಸಲಾಯಿತು.ಈ ಸಂಧರ್ಭದಲ್ಲಿ ಹಿರೇಮಠದ ಶಿವಪ್ರಕಾಶ ಶಿವಾಚಾರ್ಯ ಸ್ವಾಮಿಜಿ ಮಾತನಾಡಿ ವಿಶ್ವಗುರು ಬಸವೇಶ್ವರರನ್ನು ರಾಜ್ಯದ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿರುವುದು ಸ್ವಾಗತಾರ್ಹ. ಆದರೆ ಬಸವೇಶ್ವರರು ಜಗತ್ತಿಗೆ ಸಮಾನತೆಯ ಸಂದೇಶವನ್ನು ಸಾರುವ ಮೂಲಕ ಇಡೀ ವಿಶ್ವಕ್ಕೆ ಗುರುವಾಗಿದ್ದಾರೆ ಅಂತಹ ಮಹಾನ್ ಶರಣರನ್ನ ಕೇವಲ ನಮ್ಮ ರಾಜ್ಯದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದರೆ ಸಾಲದು, ಬಸವೇಶ್ವರ ಆಚಾರ ವಿಚಾರಗಳು ಇಡೀ ಜಗತ್ತಿಗೆ ಪಸರಿಸುವಂತಾಗಬೇಕು. ಈ ನಿಟ್ಟಿನಲ್ಲಿ ಪ್ರಧಾನಿ ಮೋದಿ ಅವರು ಬಸವೇಶ್ವರರನ್ನು ದೇಶದ ಸಾಂಸ್ಕೃತಿಕ ನಾಯಕ ಎಂದು ಘೋಷಿಸುವಂತಾಗಬೇಕು ಎಂದರು.ತಹಶೀಲ್ದಾರ ಯಮನಪ್ಪ ಸೋಮನಕಟ್ಟಿ ಮಾತನಾಡಿದರು.ಈ ಸಂಧರ್ಬದಲ್ಲಿ ಮುಖಂಡರಾದ ಲೋಕನಾಥ ಅಗರಾವಲ, ಬಸಣ್ಣ ದೆಸಾಯಿ ಕಲ್ಲೂರ, ಬಸವರಾಜ ಗೊಳಸಂಗಿ, ಬಸವರಾಜ ಹಾರಿವಾಳ, ಶೇಖರ ಗೊಳಸಂಗಿ, ಸಾಹಿತಿ ಲ,ರು, ಗೊಳಸಂಗಿ,…
ತಿಕೋಟಾ: ಮಕ್ಕಳ ವ್ಯವಹಾರಿಕ ಜ್ಞಾನ ಹೆಚ್ಚಳಕ್ಕೆ ಸಂತೆ ಮೇಳ ಏರ್ಪಡಿಸಿ, ದೈನಂದಿನ ಜೀವನದಲ್ಲಿ ನಡೆಯುವ ವ್ಯಾಪಾರದಲ್ಲಿನ ವಸ್ತುಗಳ ತೂಕ ಇತರ ವ್ಯವಹಾರ ಕುರಿತು ಮಕ್ಕಳಿಗೆ ಜ್ಞಾನ ಹೆಚ್ಚುಸಲು ಶಾಲಾ ಸಂತೆ ಮೇಳವನ್ನು ತಾಲ್ಲೂಕಿನ ರತ್ನಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಾಲೆಯ ಮಕ್ಕಳಿಂದ ಶನಿವಾರ ಏರ್ಪಡಿಸಲಾಯಿತು.ಮಕ್ಕಳು ಅತೀ ಉತ್ಸುಕತೆಯಿಂದ ಎಲ್ಲ ಭಾಗವಹಿಸಿ ವ್ಯಾಪಾರ ವಹಿವಾಟು ಮಾಡಿದರು. ಗ್ರಾಮದ ಜನರು ಕೂಡಾ ಶಾಲಾ ಸಂತೆಗೆ ಆಗಮಿಸಿ ಕಾಯಿಪಲ್ಯೆ, ಧಾನ್ಯ, ತರಕಾರಿ, ಹಣ್ಣು ಹಾಗೂ ಇತರೆ ದಿನಸಿ ಸಾಮಗ್ರಿ ಖರೀದಿಸಿ ಮಕ್ಕಳ ವ್ಯವಹಾರಿಕ ಜ್ಞಾನ ಕಂಡು ಸಂತಸ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯ ಎಸ್.ಎಲ್.ಹೊನ್ನುಟಗಿ, ಸಿಆರ್ಪಿ ಬಸವರಾಜ ತೇಲಿ, ಸದಾಶಿವ ಖೋತ, ಮಹೇಶ ಕಂಟೆ, ರಾಮಜಿ ಮಿಸಾಳ, ಮಲ್ಲಪ್ಪ ಕರ್ಚೆ, ಸಾಂಯವ್ವ ಮಿಸಾಳ, ಮಲ್ಲವ್ವ ಮಿಸಾಳ, ಬಾಲಕೃಷ್ಣ ಯಡವೆ, ಮಾಳಪ್ಪಾ ಯಡವೆ, ಶ್ರೀಶೈಲ್ ಮುಂಜೆ, ಅಶೋಕ ಖರ್ಚೆ, ಪಾರ್ವತಿ ಮಿಸಾಳ ಇದ್ದರು.
ಸಿಂದಗಿಯಲ್ಲಿ ವಿಶ್ವಗುರು ಬಸವಣ್ಣ ಸಾಂಸ್ಕೃತಿಕ ನಾಯಕ ಭಾವಚಿತ್ರ ಅನಾವರಣ ಸಿಂದಗಿ: ನಾಡಿನ ಎಲ್ಲ ಮಠಾಧೀಶರ, ವಿದ್ವಾಂಸರ, ಚಿಂತಕರ ಮತ್ತು ಸಚಿವರ ಜೊತೆಗೆ ಚರ್ಚೆ ಮಾಡಿ ವಿಶ್ವಗುರು ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದ್ದು ಶ್ಲಾಘನೀಯವಾದದು ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ಪಟ್ಟಣದ ತಾಲೂಕಾಡಳಿತ ಸೌಧದಲ್ಲಿ ಕಂದಾಯ ಇಲಾಖೆ ತಾಲೂಕಾಡಳಿತ ವತಿಯಿಂದ ವಿಶ್ವಗುರು ಬಸವಣ್ಣ ಸಾಂಸ್ಕೃತಿಕ ನಾಯಕ ಭಾವಚಿತ್ರ ಅನಾವರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ವಿಶ್ವಗುರು ಬಸವಣ್ಣನವರ ಅನುಯಾಯಿಯಾದ ಸಿ.ಎಂ. ಸಿದ್ಧರಾಮಯ್ಯನವರು ಸಾಮಾಜಿಕ ನ್ಯಾಯದಡಿಯಲ್ಲಿ ೧೨ನೇ ಶತಮಾನದ ಅಣ್ಣ ಬಸವಣ್ಣನವರು ಹಾಕಿಕೊಟ್ಟ ಮಾರ್ಗದಲ್ಲಿ ಅವರ ತತ್ವಾದರ್ಶಗಳನ್ನು ರಾಜಕೀಯದಲ್ಲಿ ತಮ್ಮ ಅಧಿಕಾರವಧಿಯಲ್ಲಿ ಬೆಳಕು ಚೆಲ್ಲಿದ್ದು ಸಂತಸ ತಂದಿದೆ. ಅನುಕರಣೆ ಆಚರಣೆಯಾಗಬೇಕು ಎಂಬ ಮಹದಾಸೆಯನ್ನು ಹೊಂದಿದ್ದಾರೆ. ಬಸವಣ್ಣನವರ ಆಚಾರ ವಿಚಾರಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮನುಷ್ಯ ಕಾಯಕ ಮಾಡಬೇಕು ಕಾಯಕದಿಂದ ಬಂದಂತಹ ಲಾಭವನ್ನು ದಾಸೋಹ ಮಾಡಬೇಕು. ಇಂಗಳೇಶ್ವರ ಗ್ರಾಮದಲ್ಲಿ ಶರಣರ ೧೧೦೦ ವಚನಗಳನ್ನು ೧೧೦೦ ಕಲ್ಲುಗಳಲ್ಲಿ ಕೆತ್ತನೆ ಮಾಡಿಸಿ ಶಾಶ್ವತವಾಗಿ ಉಳಿಯುವಂತೆ ಮಾಡಿದ್ದಾರೆ ಎಂದರು.ಜಾನಪದ…
ಕೊಲ್ಹಾರ: ಜಗತ್ತಿನ ಎಲ್ಲ ವಿಷಯ ಹಾಗೂ ಮಾಹಿತಿ ಅಂತರ್ಜಾಲದಲ್ಲಿ ಲಭ್ಯವಿರುತ್ತದೆ ಆದರೆ ವಿದ್ಯಾರ್ಥಿಗಳು ಅಂತರ್ಜಾಲದ ಬಗ್ಗೆ ಅರಿತು,ಸದ್ಬಳಕೆ ಮಾಡಿಕೊಂಡು ಹೆಚ್ಚಿನ ಜ್ಞಾನಾರ್ಜನೆ ಪಡೆದುಕೊಳ್ಳಬೇಕು ಎಂದು ಶಿಕ್ಷಕ ಜಗದೀಶ ಸಾಲಳ್ಳಿ ಹೇಳಿದರು.ಮಸೂತಿ ಗ್ರಾಮದ ಶ್ರೀ ಗುರು ಸಂಗನಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬ್ಯಾಗರಹಿತ ದಿನ ಸಂಭ್ರಮ ಶನಿವಾರ ಅಂಗವಾಗಿ ಆಧುನಿಕ ತಂತ್ರಜ್ಞಾನದ ಸಾಧನಗಳು ಹಾಗೂ ಅಂತರ್ಜಾಲ ಸದ್ಬಳಕೆ ಕುರಿತು ಮಕ್ಕಳಿಗೆ ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ಮಕ್ಕಳಿಗೆ ಕಂಪ್ಯೂಟರ್ ಹಾಗೂ ಅಂತರ್ಜಾಲ ಜೋಡನೆ ತೋರಿಸಿ ಇಂದಿನ ದಿನಗಳಲ್ಲಿ ದೂರದರ್ಶನ,ಮೊಬೈಲ್, ಇಂಟರ್‌ನೆಟ್‌ನಂತಹ ಆಧುನಿಕ ತಂತ್ರಜ್ಞಾನಗಳನ್ನು ವಿದ್ಯಾರ್ಥಿಗಳು ಮನರಂಜನೆ, ಕಾಲಹರಣಕ್ಕೆ ಮತ್ತಿತರರ ಕೆಲಸಗಳಿಗೆ ಅತಿಯಾದ ಬಳಕೆಯಿಂದ ಮಕ್ಕಳು ಮಾನಸಿಕ ಮತ್ತು ದೈಹಿಕ ಅಸ್ವಸ್ಥರಾಗುತ್ತಿದ್ದಾರೆ. ವಿದ್ಯಾರ್ಥಿಗಳು ಅಗತ್ಯವಿದ್ದಷ್ಟು ಬಳಸಿ ಸದ್ಬಳಕೆ ಮಾಡಿಕೊಂಡು ಜ್ಞಾನಾರ್ಜನೆಯನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಎಲ್ಲರೂ ಮುಂದಾಗಬೇಕು ಎಂದರು.ಜಾಹೀರಾತುಗಳನ್ನು ಪರೀಕ್ಷಿಸದೇ ನಂಬಿಗಸ್ತ ಮೂಲಗಳಿಂದ ತಿಳಿಯದೆ ಬಳಸಬಾರದು, ಮೊಬೈಲಗೆ ಅಪರಿಚಿತ ಸಂಖ್ಯೆಗಳಿಂದ ಲಾಟರಿ ಬಂದಿದೆ, ಬ್ಯಾಂಕಗಳಿಂದ ಓಟಿಪಿ ನಂಬರ ಕಳುಹಿಸಿ ಹೀಗೆ ಬ್ಯಾಂಕ್ ಹಣ ಖೋತಾ ಆಗುವ ಕುರಿತು,…
ಕೊಲ್ಹಾರ: ವಿದ್ಯಾರ್ಥಿಗಳು ಜ್ಞಾನಾರ್ಜನೆ ಮಾಡುವಾಗ ಸಮಯ ವ್ಯರ್ಥ ಮಾಡದೆ ಹಗಲಿರುಳು ಶ್ರಮಿಸಿದರೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಅಭಿಪ್ರಾಯ ವ್ಯಕ್ತಪಡಿಸಿದರು.ಕೊಲ್ಹಾರ ಪಟ್ಟಣದ ರಾಣಿ ಚನ್ನಮ್ಮ ವಸತಿ ಶಾಲೆಯ ಸ್ನೇಹ ಸಮ್ಮೇಳನ ಹಾಗು ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಬಿಳ್ಕೋಡುವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಪ್ರತಿಭಾವಂತ ವಿದ್ಯಾರ್ಥಿಗಳಾಗಬೇಕಾದರೆ ನಿರಂತರ ಅಧ್ಯಯನ ಅತ್ಯವಶ್ಯ. ಪಾಲಕರು ಸಹ ಮಕ್ಕಳ ವಿದ್ಯಾಭ್ಯಾಸ ಹಾಗು ಆರೋಗ್ಯದ ಕಡೆಗೆ ಗಮನ ಹರಿಸಬೇಕು. ವಿದ್ಯಾರ್ಥಿಗಳು ಜೀವನದ ಸ್ಪಷ್ಟ ಗುರಿ ಹಾಗು ಉದ್ದೇಶ ಹೊಂದಿರಬೇಕು. ಭಾರತೀಯ ಸಂಸ್ಕೃತಿಯ ಮತ್ತು ಪರಂಪರೆಗಳನ್ನು ಅರಿತು ಭಾವೈಕ್ಯತೆಯ ಜೀವನಕ್ಕೆ ಪ್ರಾಧ್ಯಾನತೆ ನೀಡಬೇಕು ಎಂದರು.ರಾಣಿ ಚನ್ನಮ್ಮ ವಸತಿ ಶಾಲೆಯ ಸಹ ಶಿಕ್ಷಕ ಸಂಜಯ ದಿವಟಗಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಸಭೆಯ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಕರಿಗೊಂಡ ಮಾತನಾಡಿದರು.ಭುವನೇಶ್ವರಿ ಮೇಟಿ, ಎಸ್ ಜಿ ಗಡಾದ. ಬಿ ಕೆ ಅಂದೋಡಗಿ, ಎಸ್ ಜಿ ಮೇತ್ರಿ. ಎಚ್ ಎಸ್ ಪಾಟೀಲ. ಎಸ್ ಆರ್ ಬೀರುಣಗಿ. ಜೆ…
ದೇವರಹಿಪ್ಪರಗಿ: ಬಸವ ಸಂಸ್ಕೃತಿ ರೂಢಿಸಿಕೊಂಡಾಗ ಬದುಕು ಸಾರ್ಥಕವಾಗುತ್ತದೆ ಎಂದು ಶರಣ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಎಸ್.ಎನ್.ಬಸವರೆಡ್ಡಿ ಹೇಳಿದರು.ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ಶನಿವಾರದಂದು ಜರುಗಿದ ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವೇಶ್ವರ ಭಾವಚಿತ್ರ ಅನಾವರಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.ಬಸವಣ್ಣನವರ ಸಾಂಸ್ಕೃತಿಕ ಆಚಾರ, ವಿಚಾರಗಳನ್ನು ತಿಳಿದುಕೊಂಡು ಅದರಂತೆ ನಡೆದಾಗ ಮಾತ್ರ ಜೀವನಕ್ಕೆ ಸಾರ್ಥಕತೆ ಬಂದಂತಾಗುತ್ತದೆ ಎಂದರು.ನಿವೃತ್ತ ನೌಕರರರ ಸಂಘದ ಅಧ್ಯಕ್ಷ ಸಿ.ಕೆ.ಕುದರಿ, ಬಸವಶರಣ ಸಂಗಮ ಸಮೀತಿ ಅಧ್ಯಕ್ಷ ಸಂಗಣ್ಣ ತಡವಲ್, ಉಪತಹಶೀಲ್ದಾರ ಸುರೇಶ ಮ್ಯಾಗೇರಿ, ಕಸಾಪ ತಾಲ್ಲೂಕು ಅಧ್ಯಕ್ಷ ಜಿ.ಪಿ.ಬಿರಾದಾರ ಮಾತನಾಡಿದರು. ತಹಶೀಲ್ದಾರ ಪ್ರಕಾಶ ಸಿಂದಗಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.ನಂತರ ಪಟ್ಟಣದ ವಿಜಯಪುರ ರಸ್ತೆಯಲ್ಲಿನ ಬಸವೇಶ್ವರ ವೃತ್ತಕ್ಕೆ ತೆರಳಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಲಾಯಿತು.ಇದೇ ಸಂದರ್ಭದಲ್ಲಿ ಬಸವೇಶ್ವರ ಸಾಂಸ್ಕೃತಿಕ ಭವನ ನಿರ್ಮಿಸಲು ತಾಲ್ಲೂಕು ಆಡಳಿತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ವಿವಿಧ ಪರಿಷತ್ ಪದಾಧಿಕಾರಿಗಳು ಮನವಿ ಸಲ್ಲಿಸಿದರು.ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಅಶೋಕ ಹೆಗಡೆ, ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಸಿ.ಹಿರೇಮಠ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ…
ಕೆಂಭಾವಿ: ಪಟ್ಟಣದ ಆಶ್ರಯ ಕಾಲೋನಿಯ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿರುವ ತಂತಿಗಳು ಕೈಗೆಟುಕುವ ಹಂತದಲ್ಲಿದ್ದು,ಈ ತಂತಿಗಳು ಭೂಮಿಯಿಂದ ಕೆಲವೇ ಅಡಿಗಳಷ್ಟು ಅಂತರದಲ್ಲಿದಿರುವುದರಿಂದ ಅವಘಡ ಸಂಭವಿಸುವ ಮುನ್ನ ತೆರವುಗೊಳಿಸಬೇಕೆಂದು ಕರವೇ ವಲಯಾಧ್ಯಕ್ಷ ಕುಮಾರ ಮೋಪಾಗರ ಆಗ್ರಹಿಸಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೈಗೆಟುಕುವ ರೀತಿಯಲ್ಲಿ ವಿದ್ಯುತ್ ವೈರ್ಜೋತು ಬಿದ್ದಿದೆ. ಮನೆಯ ಮುಂಭಾಗದಲ್ಲೇ ವಿದ್ಯುತ್ ತಂತಿ ಹಾಯ್ದು ಹೋಗಿದ್ದು,ಇದೇ ಸ್ಥಳದಲ್ಲಿ ಹುಲ್ಲಿನ ಬಣವೆಗಳು, ರೈತರ ಮನೆಗಳಿವೆ. ಕೆಲವೊಂದು ಸಮಯದಲ್ಲಿ ಜೋರಾದ ಗಾಳಿ ಬೀಸಿದರೆ ತಂತಿಗಳು ಪರಸ್ಪರ ತಗುಲಿ ಬೆಂಕಿ ಹೊತ್ತುಕೊಳ್ಳುವ ಸಂಭವ ಹೆಚ್ಚಿದೆ. ವಿದ್ಯುತ್ ಕಂಬಗಳ ಹೈಟೆನ್ಷನ್ ವೈರ್ ಕೆಲವೇ ಅಡಿ ಎತ್ತರಕ್ಕಿದ್ದು ಅಪಾಯಕ್ಕೆ ಆಹ್ವಾನ ನೀಡುತ್ತಲೇ ಬಂದಿದೆ ಎಂದು ಕಿಡಿಕಾರಿದ್ದಾರೆ.ಈ ಕುರಿತು ಈಗಾಗಲೇ ಜೆಸ್ಕಾಂ, ಪುರಸಭೆ ಅಧಿಕಾರಿಗಳ ಗಮನಕ್ಕೆ ತಂದರು, ಪತ್ರ ಬರೆದರೂ ಕೂಡಾ ಯಾವುದೇ ಪ್ರಯೋಜನವಾಗಿಲ್ಲ ಇವರುಗಳ ನಿರ್ಲಕ್ಷ್ಯದ ಪರಿಣಾಮ ಇಲ್ಲಿಯ ಜನರು ಜೀವ ಕೈಯಲ್ಲಿ ಹಿಡಿದು ಕಾಲ ಕಳೆಯುತ್ತಿರುವ ಸನ್ನಿವೇಶ ಸೃಷ್ಟಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಇನ್ನಾದರೂ ಅಪಾಯಕ್ಕೆ ಆಹ್ವಾನ…
ಮೋರಟಗಿ: ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವನೆ ಹೆಚ್ಚಿಸಲು ಕ್ರೀಡೆ ಮಹತ್ವ ಪಾತ್ರ ವಹಿಸುತ್ತದೆ ಕಠಿಣ ಪರಿಶ್ರಮದಿಂದ ಮತ್ತು ಸತತ ಪ್ರಯತ್ನದಿಂದ ಯಶಸ್ಸು ಸಾಧ್ಯವಾಗುತ್ತದೆ ಎಂದು ವಿಜಯಪುರ ಅಂಜುಮನ್ ಪ.ಪೂ. ಕಾಲೇಜು ನಿವೃತ್ತ ಪ್ರಾಚಾರ್ಯ ಎಂ ಎ ಅವಟಿ ಹೇಳಿದರು.ಗ್ರಾಮದ ಕಲ್ಪವೃಕ್ಷ ಶಾಲೆಯಲ್ಲಿ ಶನಿವಾರ ವಾರ್ಷಿಕ ಸ್ನೇಹ ಸಮ್ಮೇಳನದ ಅಂಗವಾಗಿ ನಡೆದ ವಿವಿಧ ಕ್ರೀಡೆಗಳು ಸಂಸ್ಕೃತಿಕ ಚಟುವಟಿಕೆಗಳಲ್ಲಿ ಜಯಶಾಲಿಯಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ವಿಶೇಷ ಸನ್ಮಾನಿತರಾಗಿ ಆಗಮಿಸಿ ಅವರು ಮಾತನಾಡಿದರು.ವಿದ್ಯಾರ್ಥಿಗಳು ಪಾಠದ ಜೊತೆಗೆ ಆಟಕ್ಕೂ ಆದ್ಯತೆ ನೀಡಬೇಕು ಮಕ್ಕಳ ಆರೋಗ್ಯಕರ ಜೀವನಕ್ಕೆ ಆಟೋಟ ಪ್ರಾಮುಖ್ಯತೆ ವಹಿಸುತ್ತದೆ. ಸೋತೆನೆಂದು ಸುಮ್ಮನಿದ್ದರೆ ಸಾಧನೆಯ ಹಾದಿ ಸಿಗುವುದಿಲ್ಲ. ಸೋಲು ಗೆಲುವಿನ ಸೋಪಾನ ಎಂದು ತಿಳಿದು ಸತತ ಪ್ರಯತ್ನ ಮಾಡಿದಾಗ ಮಾತ್ರ ಜಯ ಸಿಗಲು ಸಾಧ್ಯವಾಗುತ್ತದೆ ಎಂದರು.ನಂತರ ಹಿರಿಯರಾದ ಎನ್ ಎನ್ ಪಾಟೀಲ್ ಮಾತನಾಡಿ, ಪಾಲಕರು ನಿಮ್ಮ ಮೇಲೆ ಇಟ್ಟಿರುವ ಭರವಸೆಗಳನ್ನು ಹುಸಿ ಹೋಗದಂತೆ ನೋಡಿಕೊಂಡು ಉತ್ತಮ ವ್ಯಾಸಂಗ ಮಾಡಿ ಆದರ್ಶ ವಿದ್ಯಾರ್ಥಿಗಳಾಗಿ ಹೊರಹೊಮ್ಮಬೇಕು ಎಂದರು.ನಿವೃತ್ತ ಪ್ರಾಚಾರ್ಯ ಎಂ…
ದೇವರಹಿಪ್ಪರಗಿ: ಸಂವಿಧಾನದ ಆಶಯಗಳನ್ನು ಅರಿಯುವಂತಾಗಲು ಇಂದಿನ ಜಾಗೃತಿ ಜಾಥಾ ಸಹಕಾರಿಯಾಗಿದೆ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ ಹೇಳಿದರು.ಪಟ್ಟಣದಲ್ಲಿ ಶುಕ್ರವಾರ ಸಂವಿಧಾನ ದಿನಾಚರಣೆಯ ಪ್ರಯುಕ್ತ ಸರ್ಕಾರದ ಆದೇಶದಂತೆ ಜರುಗಿದ ಜಾಗೃತಿ ಜಾಥಾದಲ್ಲಿ ಪಾಲ್ಗೊಂಡು ಮಾತನಾಡಿದರು.ಸಂವಿಧಾನದ ಆಚರಣೆ ಮತ್ತು ಮಹತ್ವವನ್ನು ಸಾರ್ವಜನಿಕರು ತಿಳಿದುಕೊಳ್ಳಬೇಕಾಗಿದೆ. ಆದ್ದರಿಂದ ಜಿಲ್ಲೆಯ ಎಲ್ಲ ನಗರ ಪಟ್ಟಣ, ಗ್ರಾಮಗಳಲ್ಲಿ ಸಂಚರಿಸಲಿದೆ ಎಂದರು. ನಂತರ ಬಿ.ಆರ್.ಅಂಬೇಡ್ಕರ್ ವೃತ್ತಕ್ಕೆ ತೆರಳಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.ಸಂವಿಧಾನ ಜಾಗೃತಿ ಜಾಥಾದ ರಥ ಪಟ್ಟಣ ಪ್ರವೇಶಿಸುತ್ತಿದ್ದಂತೆ ತಹಶೀಲ್ದಾರ ಪ್ರಕಾಶ ಸಿಂದಗಿ ನೇತೃತ್ವದಲ್ಲಿ ಬಸವೇಶ್ವರ ವೃತ್ತದಲ್ಲಿ ಸ್ವಾಗತಿಸಲಾಯಿತು. ನಂತರ ಟಿಪ್ಪುಸುಲ್ತಾನ ವೃತ್ತದಲ್ಲಿ ಅಧಿಕೃತವಾಗಿ ಚಾಲನೆ ನೀಡಲಾಯಿತು. ನಂತರ ಜಾಥಾದ ರಥ ಮೊಹರೆ ಹಣಮಂತ್ರಾಯ ವೃತ್ತದ ಮೂಲಕ ರಾಷ್ಟ್ರೀಯ ಹೆದ್ದಾರಿಯ ಮೂಲಕ ಕರಿದೇವರ ದೇವಸ್ಥಾನದ ರಸ್ತೆಯಲ್ಲಿ ಸಾಗಿ ಸಂಚರಿಸಿ ಬಿ.ಎಲ್.ಡಿ.ಇ ಸಂಸ್ಥೆಯ ಹಳೆಯ ಪ್ರೌಢಶಾಲಾ ಆವರಣ ತಲುಪಿತು.ಇಲ್ಲಿ ಸಂವಿಧಾನದ ಕುರಿತು ಉಪನ್ಯಾಸ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಈ ಸಂದರ್ಭದಲ್ಲಿ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಂಡರು.ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಲ್.ಡಿ.ಮುಲ್ಲಾ,…
