ಉದಯರಶ್ಮಿ ದಿನಪತ್ರಿಕೆ
ನವದೆಹಲಿ: ಇಲ್ಲಿಯ ವಸಂತ ಕುಂಜ್‌ನಲ್ಲಿರುವ ಶ್ರೀ ವೇದವ್ಯಾಸ ಗುರುಕುಲ ಹಾಗೂ ಶ್ರೀ ಕೃಷ್ಣಧಾಮ ಮಠದಲ್ಲಿ ಉಡುಪಿಯ ಪೇಜಾವರ ಅಧೋಕ್ಷಜ ಮಠದ ಪೀಠಾಧಿಪತಿಗಳಾದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರು ತಮ್ಮ ಚಾತುರ್ಮಾಸ್ಯ ಆರಂಭಿಸಿದ್ದು, ಈ ಸಂದರ್ಭದಲ್ಲಿ ವಿಜಯಪುರ ಸಂಸದ ರಮೇಶ ಜಿಗಜಿಣಗಿ ಹಾಗೂ ಬಾಗಲಕೋಟೆ ಸಂಸದ ಪಿ.ಸಿ. ಗದ್ದಿಗೌಡರ ಅವರು ಶ್ರೀಗಳನ್ನು ಭೇಟಿ ಮಾಡಿ ವಿಶೇಷ ಗೌರವ ಸಲ್ಲಿಸಿ, ಶ್ರೀಗಳಿಂದ ಅನುಗ್ರಹ ಪಡೆದುಕೊಂಡರು.
ನವದೆಹಲಿಯಲ್ಲಿ ಕೈಗೊಂಡಿರುವ ಈ ಪವಿತ್ರ ಧಾರ್ಮಿಕ ಸಂಕಲ್ಪ ಯಶಸ್ವಿಯಾಗಲಿದೆ ಎಂದು ಸಂಸದ ಜಿಗಜಿಣಗಿ ಶುಭ ಕೋರಿದರು. ಅನೇಕ ಹೊತ್ತು ಶ್ರೀಗಳೊಂದಿಗೆ ವಿವಿಧ ವಿಷಯಗಳ ಬಗ್ಗೆ ಜಿಗಜಿಣಗಿ ಅವರು ಚರ್ಚೆ ನಡೆಸಿದರು.

