ಕೆಂಭಾವಿ: ಪಟ್ಟಣದ ಆಶ್ರಯ ಕಾಲೋನಿಯ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿರುವ ತಂತಿಗಳು ಕೈಗೆಟುಕುವ ಹಂತದಲ್ಲಿದ್ದು,
ಈ ತಂತಿಗಳು ಭೂಮಿಯಿಂದ ಕೆಲವೇ ಅಡಿಗಳಷ್ಟು ಅಂತರದಲ್ಲಿದಿರುವುದರಿಂದ ಅವಘಡ ಸಂಭವಿಸುವ ಮುನ್ನ ತೆರವುಗೊಳಿಸಬೇಕೆಂದು ಕರವೇ ವಲಯಾಧ್ಯಕ್ಷ ಕುಮಾರ ಮೋಪಾಗರ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೈಗೆಟುಕುವ ರೀತಿಯಲ್ಲಿ ವಿದ್ಯುತ್ ವೈರ್
ಜೋತು ಬಿದ್ದಿದೆ. ಮನೆಯ ಮುಂಭಾಗದಲ್ಲೇ ವಿದ್ಯುತ್ ತಂತಿ ಹಾಯ್ದು ಹೋಗಿದ್ದು,
ಇದೇ ಸ್ಥಳದಲ್ಲಿ ಹುಲ್ಲಿನ ಬಣವೆಗಳು, ರೈತರ ಮನೆಗಳಿವೆ. ಕೆಲವೊಂದು ಸಮಯದಲ್ಲಿ ಜೋರಾದ ಗಾಳಿ ಬೀಸಿದರೆ ತಂತಿಗಳು ಪರಸ್ಪರ ತಗುಲಿ ಬೆಂಕಿ ಹೊತ್ತುಕೊಳ್ಳುವ ಸಂಭವ ಹೆಚ್ಚಿದೆ. ವಿದ್ಯುತ್ ಕಂಬಗಳ ಹೈಟೆನ್ಷನ್ ವೈರ್ ಕೆಲವೇ ಅಡಿ ಎತ್ತರಕ್ಕಿದ್ದು ಅಪಾಯಕ್ಕೆ ಆಹ್ವಾನ ನೀಡುತ್ತಲೇ ಬಂದಿದೆ ಎಂದು ಕಿಡಿಕಾರಿದ್ದಾರೆ.
ಈ ಕುರಿತು ಈಗಾಗಲೇ ಜೆಸ್ಕಾಂ, ಪುರಸಭೆ ಅಧಿಕಾರಿಗಳ ಗಮನಕ್ಕೆ ತಂದರು, ಪತ್ರ ಬರೆದರೂ ಕೂಡಾ ಯಾವುದೇ ಪ್ರಯೋಜನವಾಗಿಲ್ಲ ಇವರುಗಳ ನಿರ್ಲಕ್ಷ್ಯದ ಪರಿಣಾಮ ಇಲ್ಲಿಯ ಜನರು ಜೀವ ಕೈಯಲ್ಲಿ ಹಿಡಿದು ಕಾಲ ಕಳೆಯುತ್ತಿರುವ ಸನ್ನಿವೇಶ ಸೃಷ್ಟಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನಾದರೂ ಅಪಾಯಕ್ಕೆ ಆಹ್ವಾನ ನೀಡುತ್ತಿರುವ ವಿದ್ಯುತ್ ತಂತಿಗಳು ಮತ್ತು ಕಂಬಗಳನ್ನು ಸರಿಪಡಿಸಿಕೊಡುವಂತೆ ಕುಮಾರ ಮೋಪಾಗರ ಒತ್ತಾಯಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

