ಸಿಂದಗಿಯಲ್ಲಿ ವಿಶ್ವಗುರು ಬಸವಣ್ಣ ಸಾಂಸ್ಕೃತಿಕ ನಾಯಕ ಭಾವಚಿತ್ರ ಅನಾವರಣ
ಸಿಂದಗಿ: ನಾಡಿನ ಎಲ್ಲ ಮಠಾಧೀಶರ, ವಿದ್ವಾಂಸರ, ಚಿಂತಕರ ಮತ್ತು ಸಚಿವರ ಜೊತೆಗೆ ಚರ್ಚೆ ಮಾಡಿ ವಿಶ್ವಗುರು ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದ್ದು ಶ್ಲಾಘನೀಯವಾದದು ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಪಟ್ಟಣದ ತಾಲೂಕಾಡಳಿತ ಸೌಧದಲ್ಲಿ ಕಂದಾಯ ಇಲಾಖೆ ತಾಲೂಕಾಡಳಿತ ವತಿಯಿಂದ ವಿಶ್ವಗುರು ಬಸವಣ್ಣ ಸಾಂಸ್ಕೃತಿಕ ನಾಯಕ ಭಾವಚಿತ್ರ ಅನಾವರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿಶ್ವಗುರು ಬಸವಣ್ಣನವರ ಅನುಯಾಯಿಯಾದ ಸಿ.ಎಂ. ಸಿದ್ಧರಾಮಯ್ಯನವರು ಸಾಮಾಜಿಕ ನ್ಯಾಯದಡಿಯಲ್ಲಿ ೧೨ನೇ ಶತಮಾನದ ಅಣ್ಣ ಬಸವಣ್ಣನವರು ಹಾಕಿಕೊಟ್ಟ ಮಾರ್ಗದಲ್ಲಿ ಅವರ ತತ್ವಾದರ್ಶಗಳನ್ನು ರಾಜಕೀಯದಲ್ಲಿ ತಮ್ಮ ಅಧಿಕಾರವಧಿಯಲ್ಲಿ ಬೆಳಕು ಚೆಲ್ಲಿದ್ದು ಸಂತಸ ತಂದಿದೆ. ಅನುಕರಣೆ ಆಚರಣೆಯಾಗಬೇಕು ಎಂಬ ಮಹದಾಸೆಯನ್ನು ಹೊಂದಿದ್ದಾರೆ. ಬಸವಣ್ಣನವರ ಆಚಾರ ವಿಚಾರಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮನುಷ್ಯ ಕಾಯಕ ಮಾಡಬೇಕು ಕಾಯಕದಿಂದ ಬಂದಂತಹ ಲಾಭವನ್ನು ದಾಸೋಹ ಮಾಡಬೇಕು. ಇಂಗಳೇಶ್ವರ ಗ್ರಾಮದಲ್ಲಿ ಶರಣರ ೧೧೦೦ ವಚನಗಳನ್ನು ೧೧೦೦ ಕಲ್ಲುಗಳಲ್ಲಿ ಕೆತ್ತನೆ ಮಾಡಿಸಿ ಶಾಶ್ವತವಾಗಿ ಉಳಿಯುವಂತೆ ಮಾಡಿದ್ದಾರೆ ಎಂದರು.
ಜಾನಪದ ವಿದ್ವಾಂಸ ಡಾ. ಎಂ.ಎಂ.ಪಡಶೆಟ್ಟಿ ಮಾತನಾಡಿದರು.
ಈ ವೇಳೆ ಸಾರಂಗಮಠದ ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ಸಾನಿಧ್ಯತೆ ವಹಿಸಿದ್ದರು. ತಹಶೀಲದಾರ ಪ್ರದೀಪಕುಮಾರ ಹಿರೇಮಠ, ಕ್ಷೇತ್ರ ಶಿಕ್ಷಣಾಧಿಕಾರಿ ಆರೀಫ್ ಬಿರಾದಾರ, ನೌಕರರ ಸಂಘದ ಅಧ್ಯಕ್ಷ ಅಶೋಕ ತೆಲ್ಲೂರ, ರಾಷ್ಟ್ರೀಯ ಬಸವದಳದ ಅಧ್ಯಕ್ಷ ಮಲ್ಲಿಕಾರ್ಜುನ ಅರ್ಜುಣಗಿ, ತಾಪಂ ಸಹಾಯಕ ನಿರ್ದೇಶಕ ನಿತ್ಯಾನಂದ ಯಲಗೋಡ ವೇದಿಕೆ ಮೇಲಿದ್ದರು.
ಇದೇ ಸಂದರ್ಭದಲ್ಲಿ ಮಾಜಿ ಲಿಂಬೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಅಶೋಕ ಅಲ್ಲಾಪೂರ, ಸಾಹಿತಿ ಡಾ. ಚನ್ನಪ್ಪ ಕಟ್ಟಿ, ಡಾ. ಎಚ್.ವೈ.ಸಿಂಗೆಗೋಳ, ಸುರೇಶ ಪೂಜಾರ, ಚಂದ್ರಶೇಖರ ದೇವರಡ್ಡಿ, ಸಿದ್ಧಬಸವ ಕುಂಬಾರ, ಆರ್.ಆರ್.ಪಾಟೀಲ, ಶಿವಾನಂದ ಕಲಬುರ್ಗಿ, ಸುನಂದಾ ಯಂಪೂರೆ, ಐ.ಎ.ಮಕನದಾರ, ಜಿ.ಎಸ್.ರೋಡಗಿ, ಶಾರದಾ ಬೆಟಗೇರಿ, ಗುರುಪಾದಪ್ಪ ಬಸರಕೋಡ, ಬಸವರಾಜ ಗುಗ್ಗರಿ, ಶ್ರೀಶೈಲ ಯಳಮೇಲಿ, ದಾನಪ್ಪ ಜೋಗೂರ, ಗ್ರೇಡ್-೨ ತಹಶೀಲದಾರ ಇಂದಿರಾಬಾಯಿ ಬಳಗಾನೂರ, ನಿಖಿಲ ಖಾನಾಪೂರ ಸೇರಿದಂತೆ ವಿಶ್ವಗುರು ಬಸವಣ್ಣನವರ ಅಭಿಮಾನಿಗಳು ಇನ್ನಿತರರು ಇದ್ದರು.

