ಕೊಲ್ಹಾರ: ಜಗತ್ತಿನ ಎಲ್ಲ ವಿಷಯ ಹಾಗೂ ಮಾಹಿತಿ ಅಂತರ್ಜಾಲದಲ್ಲಿ ಲಭ್ಯವಿರುತ್ತದೆ ಆದರೆ ವಿದ್ಯಾರ್ಥಿಗಳು ಅಂತರ್ಜಾಲದ ಬಗ್ಗೆ ಅರಿತು,ಸದ್ಬಳಕೆ ಮಾಡಿಕೊಂಡು ಹೆಚ್ಚಿನ ಜ್ಞಾನಾರ್ಜನೆ ಪಡೆದುಕೊಳ್ಳಬೇಕು ಎಂದು ಶಿಕ್ಷಕ ಜಗದೀಶ ಸಾಲಳ್ಳಿ ಹೇಳಿದರು.
ಮಸೂತಿ ಗ್ರಾಮದ ಶ್ರೀ ಗುರು ಸಂಗನಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬ್ಯಾಗರಹಿತ ದಿನ ಸಂಭ್ರಮ ಶನಿವಾರ ಅಂಗವಾಗಿ ಆಧುನಿಕ ತಂತ್ರಜ್ಞಾನದ ಸಾಧನಗಳು ಹಾಗೂ ಅಂತರ್ಜಾಲ ಸದ್ಬಳಕೆ ಕುರಿತು ಮಕ್ಕಳಿಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಮಕ್ಕಳಿಗೆ ಕಂಪ್ಯೂಟರ್ ಹಾಗೂ ಅಂತರ್ಜಾಲ ಜೋಡನೆ ತೋರಿಸಿ ಇಂದಿನ ದಿನಗಳಲ್ಲಿ ದೂರದರ್ಶನ,ಮೊಬೈಲ್, ಇಂಟರ್‌ನೆಟ್‌ನಂತಹ ಆಧುನಿಕ ತಂತ್ರಜ್ಞಾನಗಳನ್ನು ವಿದ್ಯಾರ್ಥಿಗಳು ಮನರಂಜನೆ, ಕಾಲಹರಣಕ್ಕೆ ಮತ್ತಿತರರ ಕೆಲಸಗಳಿಗೆ ಅತಿಯಾದ ಬಳಕೆಯಿಂದ ಮಕ್ಕಳು ಮಾನಸಿಕ ಮತ್ತು ದೈಹಿಕ ಅಸ್ವಸ್ಥರಾಗುತ್ತಿದ್ದಾರೆ. ವಿದ್ಯಾರ್ಥಿಗಳು ಅಗತ್ಯವಿದ್ದಷ್ಟು ಬಳಸಿ ಸದ್ಬಳಕೆ ಮಾಡಿಕೊಂಡು ಜ್ಞಾನಾರ್ಜನೆಯನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಎಲ್ಲರೂ ಮುಂದಾಗಬೇಕು ಎಂದರು.
ಜಾಹೀರಾತುಗಳನ್ನು ಪರೀಕ್ಷಿಸದೇ ನಂಬಿಗಸ್ತ ಮೂಲಗಳಿಂದ ತಿಳಿಯದೆ ಬಳಸಬಾರದು, ಮೊಬೈಲಗೆ ಅಪರಿಚಿತ ಸಂಖ್ಯೆಗಳಿಂದ ಲಾಟರಿ ಬಂದಿದೆ, ಬ್ಯಾಂಕಗಳಿಂದ ಓಟಿಪಿ ನಂಬರ ಕಳುಹಿಸಿ ಹೀಗೆ ಬ್ಯಾಂಕ್ ಹಣ ಖೋತಾ ಆಗುವ ಕುರಿತು, ಇನಸ್ಟ್ರಾಗ್ರಾಂ, ಫೇಸ್ಬುಕ್ ಸೇರಿದಂತೆ ಹಲವಾರು ಸಾಮಾಜಿಕ ಜಾಲತಾಣಗಳಲ್ಲಿ ಹೆಣ್ಣು ಮಕ್ಕಳು ತಮ್ಮ ಭಾವಚಿತ್ರ ಹಂಚಿಕೊಂಡಾಗ ಆಗುವ ದುರುಪಯೋಗ, ಮಕ್ಕಳು ಮೊಬೈಲ್ ಆಟಕ್ಕಾಗಿ ಬಳಕೆ, ಬದಲಾಗಿ ಹೊರಗಡೆ ಆಟವಾಡುವುದರಿಂದ ಕಣ್ಣಿನ ಸುರಕ್ಷತೆ ಜೊತೆಗೆ ಆಗುವ ಲಾಭಗಳ ಕುರಿತು ಶಿಕ್ಷಕ ಜಗದೀಶ ಸಾಲಳ್ಳಿಯವರ ಮಾರ್ಗದರ್ಶನದಲ್ಲಿ ೧೦ ವಿವಿಧ ಕಿರು ನಾಟಕಗಳ ಮೂಲಕ ಜಾಗೃತಿ ಮೂಡಿಸಲಾಯಿತು. ಮಕ್ಕಳನ್ನು ತಂಡಗಳಾಗಿ ವಿಂಗಡಿಸಿ ಗುಂಪು ಚರ್ಚೆ, ನಟಿಸು-ಕಲಿ, ಚರ್ಚಾಕೋಟ, ಚಟುವಟಿಕೆಗಳ ಮೂಲಕ ಅರಿವು ಮೂಡಿಸಿ ಕೊನೆಗೆ ಪ್ರತಿಜ್ಞೆ ಮಾಡಿಸಲಾಯಿತು.
ಈ ಸಂದರ್ಭದಲ್ಲಿ ಶಾಲೆಯ ಸಹ ಶಿಕ್ಷಕರಾದ ವಿದ್ಯಾ ತಳವಾರ, ನೀಲಮ್ಮ ಹಿರೇಮಠ, ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

