ತಿಕೋಟಾ: ಮಕ್ಕಳ ವ್ಯವಹಾರಿಕ ಜ್ಞಾನ ಹೆಚ್ಚಳಕ್ಕೆ ಸಂತೆ ಮೇಳ ಏರ್ಪಡಿಸಿ, ದೈನಂದಿನ ಜೀವನದಲ್ಲಿ ನಡೆಯುವ ವ್ಯಾಪಾರದಲ್ಲಿನ ವಸ್ತುಗಳ ತೂಕ ಇತರ ವ್ಯವಹಾರ ಕುರಿತು ಮಕ್ಕಳಿಗೆ ಜ್ಞಾನ ಹೆಚ್ಚುಸಲು ಶಾಲಾ ಸಂತೆ ಮೇಳವನ್ನು ತಾಲ್ಲೂಕಿನ ರತ್ನಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಾಲೆಯ ಮಕ್ಕಳಿಂದ ಶನಿವಾರ ಏರ್ಪಡಿಸಲಾಯಿತು.
ಮಕ್ಕಳು ಅತೀ ಉತ್ಸುಕತೆಯಿಂದ ಎಲ್ಲ ಭಾಗವಹಿಸಿ ವ್ಯಾಪಾರ ವಹಿವಾಟು ಮಾಡಿದರು. ಗ್ರಾಮದ ಜನರು ಕೂಡಾ ಶಾಲಾ ಸಂತೆಗೆ ಆಗಮಿಸಿ ಕಾಯಿಪಲ್ಯೆ, ಧಾನ್ಯ, ತರಕಾರಿ, ಹಣ್ಣು ಹಾಗೂ ಇತರೆ ದಿನಸಿ ಸಾಮಗ್ರಿ ಖರೀದಿಸಿ ಮಕ್ಕಳ ವ್ಯವಹಾರಿಕ ಜ್ಞಾನ ಕಂಡು ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯ ಎಸ್.ಎಲ್.ಹೊನ್ನುಟಗಿ, ಸಿಆರ್ಪಿ ಬಸವರಾಜ ತೇಲಿ, ಸದಾಶಿವ ಖೋತ, ಮಹೇಶ ಕಂಟೆ, ರಾಮಜಿ ಮಿಸಾಳ, ಮಲ್ಲಪ್ಪ ಕರ್ಚೆ, ಸಾಂಯವ್ವ ಮಿಸಾಳ, ಮಲ್ಲವ್ವ ಮಿಸಾಳ, ಬಾಲಕೃಷ್ಣ ಯಡವೆ, ಮಾಳಪ್ಪಾ ಯಡವೆ, ಶ್ರೀಶೈಲ್ ಮುಂಜೆ, ಅಶೋಕ ಖರ್ಚೆ, ಪಾರ್ವತಿ ಮಿಸಾಳ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

