ಬಸವನಬಾಗೇವಾಡಿ: ರಾಜ್ಯ ಸರ್ಕಾರ ವಿಶ್ವಗುರು ಬಸವೇಶ್ವರರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿ ಆದೇಶಿಸಿರುವ ಹಿನ್ನಲೆಯಲ್ಲಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ವಿವಿಧ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ವಿವಿಧ ಪಕ್ಷದ ಮುಖಂಡರ ಸಮ್ಮುಖದಲ್ಲಿ ಬಸವೇಶ್ವರರ ಭಾವ ಚಿತ್ರ ಅನಾವರಣಗೊಳಿಸಲಾಯಿತು.
ಈ ಸಂಧರ್ಭದಲ್ಲಿ ಹಿರೇಮಠದ ಶಿವಪ್ರಕಾಶ ಶಿವಾಚಾರ್ಯ ಸ್ವಾಮಿಜಿ ಮಾತನಾಡಿ ವಿಶ್ವಗುರು ಬಸವೇಶ್ವರರನ್ನು ರಾಜ್ಯದ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿರುವುದು ಸ್ವಾಗತಾರ್ಹ. ಆದರೆ ಬಸವೇಶ್ವರರು ಜಗತ್ತಿಗೆ ಸಮಾನತೆಯ ಸಂದೇಶವನ್ನು ಸಾರುವ ಮೂಲಕ ಇಡೀ ವಿಶ್ವಕ್ಕೆ ಗುರುವಾಗಿದ್ದಾರೆ ಅಂತಹ ಮಹಾನ್ ಶರಣರನ್ನ ಕೇವಲ ನಮ್ಮ ರಾಜ್ಯದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದರೆ ಸಾಲದು, ಬಸವೇಶ್ವರ ಆಚಾರ ವಿಚಾರಗಳು ಇಡೀ ಜಗತ್ತಿಗೆ ಪಸರಿಸುವಂತಾಗಬೇಕು. ಈ ನಿಟ್ಟಿನಲ್ಲಿ ಪ್ರಧಾನಿ ಮೋದಿ ಅವರು ಬಸವೇಶ್ವರರನ್ನು ದೇಶದ ಸಾಂಸ್ಕೃತಿಕ ನಾಯಕ ಎಂದು ಘೋಷಿಸುವಂತಾಗಬೇಕು ಎಂದರು.
ತಹಶೀಲ್ದಾರ ಯಮನಪ್ಪ ಸೋಮನಕಟ್ಟಿ ಮಾತನಾಡಿದರು.
ಈ ಸಂಧರ್ಬದಲ್ಲಿ ಮುಖಂಡರಾದ ಲೋಕನಾಥ ಅಗರಾವಲ, ಬಸಣ್ಣ ದೆಸಾಯಿ ಕಲ್ಲೂರ, ಬಸವರಾಜ ಗೊಳಸಂಗಿ, ಬಸವರಾಜ ಹಾರಿವಾಳ, ಶೇಖರ ಗೊಳಸಂಗಿ, ಸಾಹಿತಿ ಲ,ರು, ಗೊಳಸಂಗಿ, ಸುನೀಲ ಚಿಕ್ಕೊಂಡ, ಶಿವಾನಂದ ಮಂಗಾನ್ನವರ, ಮಹಾಂತೇಶ ಸಾಸಾಬಾಳ, ಶ್ರೀಕಾಂತ ಕೊಟ್ರಶೆಟ್ಟಿ, ಅಶೋಕ ಚಲವಾದಿ, ಸಂಗಮೇಶ ಒಲೇಕಾರ, ಸಂಜು ಬಿರಾದಾರ, ಸಂಕನಗೌಡ ಪಾಟೀಲ, ಶೇಕರಗೌಡ ಪಾಟೀಲ, ಸುಭಾಸ ಚಿಕ್ಕೊಂಡ, ಪುರಸಭೆ ಮುಖ್ಯಧಿಕಾರಿ ರುದ್ರೇಶ ಚಿತ್ತರಗಿ, ಇಒ ಬಸವರಾಜ ಹನಗಂಡಿ, ಸಿಡಿಪಿಒ ನಿರ್ಮಲ ಸುಪುರ, ಲೋಕಪಯೋಗಿ ಇಲಾಖೆ ಜೆ, ವಿ ಕಿರಸೂರ, ಜಿಲ್ಲ ಪಮಚಾಯತ್ ಎಇಇ ವಿಲಾಸ ರಾಠೋಡ, ಆರೋಗ್ಯ ವೈದ್ಯಾಧಿಕಾರಿ ಶಶಿಧರ ಒತಗೇರಿ, ಸಮಾಜ ಕಲ್ಯಾಣ ಇಲಾಖೆ ಭವಾನಿ ಪಾಟೀಲ, ಕ್ಷೇತ್ರ ಸಮನ್ವಯ ಅಧಿಕಾರಿ ಪಾಂಡು ರಾಠೋಡ ಸೇರಿದಂತೆ ಮುಂತಾದವರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

