ಕೊಲ್ಹಾರ: ವಿದ್ಯಾರ್ಥಿಗಳು ಜ್ಞಾನಾರ್ಜನೆ ಮಾಡುವಾಗ ಸಮಯ ವ್ಯರ್ಥ ಮಾಡದೆ ಹಗಲಿರುಳು ಶ್ರಮಿಸಿದರೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಅಭಿಪ್ರಾಯ ವ್ಯಕ್ತಪಡಿಸಿದರು.
ಕೊಲ್ಹಾರ ಪಟ್ಟಣದ ರಾಣಿ ಚನ್ನಮ್ಮ ವಸತಿ ಶಾಲೆಯ ಸ್ನೇಹ ಸಮ್ಮೇಳನ ಹಾಗು ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಬಿಳ್ಕೋಡುವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಪ್ರತಿಭಾವಂತ ವಿದ್ಯಾರ್ಥಿಗಳಾಗಬೇಕಾದರೆ ನಿರಂತರ ಅಧ್ಯಯನ ಅತ್ಯವಶ್ಯ. ಪಾಲಕರು ಸಹ ಮಕ್ಕಳ ವಿದ್ಯಾಭ್ಯಾಸ ಹಾಗು ಆರೋಗ್ಯದ ಕಡೆಗೆ ಗಮನ ಹರಿಸಬೇಕು. ವಿದ್ಯಾರ್ಥಿಗಳು ಜೀವನದ ಸ್ಪಷ್ಟ ಗುರಿ ಹಾಗು ಉದ್ದೇಶ ಹೊಂದಿರಬೇಕು. ಭಾರತೀಯ ಸಂಸ್ಕೃತಿಯ ಮತ್ತು ಪರಂಪರೆಗಳನ್ನು ಅರಿತು ಭಾವೈಕ್ಯತೆಯ ಜೀವನಕ್ಕೆ ಪ್ರಾಧ್ಯಾನತೆ ನೀಡಬೇಕು ಎಂದರು.
ರಾಣಿ ಚನ್ನಮ್ಮ ವಸತಿ ಶಾಲೆಯ ಸಹ ಶಿಕ್ಷಕ ಸಂಜಯ ದಿವಟಗಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಕರಿಗೊಂಡ ಮಾತನಾಡಿದರು.
ಭುವನೇಶ್ವರಿ ಮೇಟಿ, ಎಸ್ ಜಿ ಗಡಾದ. ಬಿ ಕೆ ಅಂದೋಡಗಿ, ಎಸ್ ಜಿ ಮೇತ್ರಿ. ಎಚ್ ಎಸ್ ಪಾಟೀಲ. ಎಸ್ ಆರ್ ಬೀರುಣಗಿ. ಜೆ ಎಮ್ ಬಿರಾದಾರ. ಎಸ್ ಪಿ ಕಂಬಾರ. ವಾ ಬಿ ಗಾಮಾ. ಪಿ ಬಿ ಕೂಡಗಿ ಶ್ರೀಮತಿ ದೇಸಾಯಿ, ವಿದ್ಯಾರ್ಥಿ ಪ್ರತಿನಿಧಿ ಸ್ಪಂದನಾ ವಾಲಿಕಾರ ಉಪಸ್ಥಿತರಿದ್ದರು.
ಆನಂದ ಲಮಾಣಿ ಸ್ವಾಗತಿಸಿದರು, ಬಿ.ಎಮ್.ಸಜ್ಜನ ನಿರೂಪಿಸಿದರು, ಸ್ಪಂದನಾ ವಾಲಿಕಾರ ವಂದಿಸಿದರು. ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು. ವರ್ಷದ ಉದ್ದಕ್ಕೂ ಬಹುಮಾನ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಿದರು. ಅಕ್ಷತಾ ತೋಟಗೇರ ಆದರ್ಶ ವಿದ್ಯಾರ್ಥಿನಿಯಾಗಿ ಆಯ್ಕೆ ಮಾಡಿ ಗೌರವಿಸಲಾಯಿತು.
Subscribe to Updates
Get the latest creative news from FooBar about art, design and business.
Related Posts
Add A Comment

