ಮೋರಟಗಿ: ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವನೆ ಹೆಚ್ಚಿಸಲು ಕ್ರೀಡೆ ಮಹತ್ವ ಪಾತ್ರ ವಹಿಸುತ್ತದೆ ಕಠಿಣ ಪರಿಶ್ರಮದಿಂದ ಮತ್ತು ಸತತ ಪ್ರಯತ್ನದಿಂದ ಯಶಸ್ಸು ಸಾಧ್ಯವಾಗುತ್ತದೆ ಎಂದು ವಿಜಯಪುರ ಅಂಜುಮನ್ ಪ.ಪೂ. ಕಾಲೇಜು ನಿವೃತ್ತ ಪ್ರಾಚಾರ್ಯ ಎಂ ಎ ಅವಟಿ ಹೇಳಿದರು.
ಗ್ರಾಮದ ಕಲ್ಪವೃಕ್ಷ ಶಾಲೆಯಲ್ಲಿ ಶನಿವಾರ ವಾರ್ಷಿಕ ಸ್ನೇಹ ಸಮ್ಮೇಳನದ ಅಂಗವಾಗಿ ನಡೆದ ವಿವಿಧ ಕ್ರೀಡೆಗಳು ಸಂಸ್ಕೃತಿಕ ಚಟುವಟಿಕೆಗಳಲ್ಲಿ ಜಯಶಾಲಿಯಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ವಿಶೇಷ ಸನ್ಮಾನಿತರಾಗಿ ಆಗಮಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಪಾಠದ ಜೊತೆಗೆ ಆಟಕ್ಕೂ ಆದ್ಯತೆ ನೀಡಬೇಕು ಮಕ್ಕಳ ಆರೋಗ್ಯಕರ ಜೀವನಕ್ಕೆ ಆಟೋಟ ಪ್ರಾಮುಖ್ಯತೆ ವಹಿಸುತ್ತದೆ. ಸೋತೆನೆಂದು ಸುಮ್ಮನಿದ್ದರೆ ಸಾಧನೆಯ ಹಾದಿ ಸಿಗುವುದಿಲ್ಲ. ಸೋಲು ಗೆಲುವಿನ ಸೋಪಾನ ಎಂದು ತಿಳಿದು ಸತತ ಪ್ರಯತ್ನ ಮಾಡಿದಾಗ ಮಾತ್ರ ಜಯ ಸಿಗಲು ಸಾಧ್ಯವಾಗುತ್ತದೆ ಎಂದರು.
ನಂತರ ಹಿರಿಯರಾದ ಎನ್ ಎನ್ ಪಾಟೀಲ್ ಮಾತನಾಡಿ, ಪಾಲಕರು ನಿಮ್ಮ ಮೇಲೆ ಇಟ್ಟಿರುವ ಭರವಸೆಗಳನ್ನು ಹುಸಿ ಹೋಗದಂತೆ ನೋಡಿಕೊಂಡು ಉತ್ತಮ ವ್ಯಾಸಂಗ ಮಾಡಿ ಆದರ್ಶ ವಿದ್ಯಾರ್ಥಿಗಳಾಗಿ ಹೊರಹೊಮ್ಮಬೇಕು ಎಂದರು.
ನಿವೃತ್ತ ಪ್ರಾಚಾರ್ಯ ಎಂ ಎ ಅವಟಿ ಅವರಿಗೆ ಸಂಸ್ಥೆಯ ಆಡಳಿತ ಮಂಡಳಿಯಿಂದ ಸನ್ಮಾನಿಸಲಾಯಿತು. ಆಟೋಟಗಳಲ್ಲಿ ವಿಜಯಶಾಲಿಯಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಸ್ಥಾಪಕ ಅಧ್ಯಕ್ಷ ಶಿವಶರಣಗೌಡ ಬಿರಾದಾರ, ವಿಜಯಪುರ ಜಿಲ್ಲಾ ಮಾಧ್ಯಮಿಕ ಶಾಲೆಗಳ ಮಹಾಮಂಡಳ ಮಾಜಿ ಅಧ್ಯಕ್ಷ ಐ.ಟಿ. ಬಾವಲತ್ತಿ, ಆಡಳಿತ ಅಧಿಕಾರಿ ಎಸ್ ಹೆಚ್ ಧೂಳಬಾ, ಸಮನ್ವಯ ಅಧಿಕಾರಿ ಎಸ್ ವ್ಹಿ ಬಿರಾದಾರ, ನಿವೃತ್ತ ದೈಹಿಕ ಶಿಕ್ಷಕ ಸಿ ಕೆ ಸಿಂಪಿ, ಎಂ ವ್ಹಿ ಗುತ್ತರಗಿ ಎಸ್ ಎಂ ಲಂಗೋಟಿ, ಆರ್ ಐ ಚೌದರಿ, ಎಸ್ ಬಿ ತಮ್ಮಾಗೋಳ, ಸಿಬ್ಬಂದಿ ವರ್ಗ ಮತ್ತು ಆಡಳಿತ ಮಂಡಳಿ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

