ಉದಯರಶ್ಮಿ ದಿನಪತ್ರಿಕೆ
ವಿಜಯಪುರದ ಪ್ರತಿಷ್ಠಿತ ಸಹಕಾರಿ ಬ್ಯಾಂಕುಗಳಲ್ಲಿ ಒಂದಾಗಿರುವ ಶ್ರೀ ಮಹಾಲಕ್ಷ್ಮಿ ಸಹಕಾರಿ ಬ್ಯಾಂಕ್
ಹಿಂದುಳಿದ ವರ್ಗ (ಅ) ನಿರ್ದೇಶಕ ಸ್ಥಾನಕ್ಕೆ ವಿನಾಯಕ ಬಸವರಾಜ ಪತ್ತಾರ ಅವರು ಅವಿರೋಧವಾಗಿ ಆಯ್ಕೆಯಾದರು.
ಈ ವೇಳೆ ಅವರನ್ನು ಹೃದಯಸ್ಪರ್ಶಿಯಾಗಿ ಸನ್ಮಾನಿಸಿ ಅಭಿನಂದಿಸಲಾಯಿತು.
ಈ ಪ್ರತಿಷ್ಠಿತ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಆಯ್ಕೆ ಮಾಡುವ ಮೂಲಕ ಸೇವೆ ಮಾಡುವ ಅವಕಾಶ ಕಲ್ಪಿಸಿದ್ದಕ್ಕೆ ನಾನು ಚಿರ ಋಣಿ, ಎಲ್ಲ ನಿರ್ದೇಶಕರ, ಗ್ರಾಹಕರ, ಸಿಬ್ಬಂದಿಗಳ ಸಹಾಯ ಸಹಕಾರದೊಂದಿಗೆ ನನಗೆ ವಹಿಸಿರುವ ಜವಾಬ್ದಾರಿ ನಿಭಾಯಿಸುವೆ, ಬ್ಯಾಂಕಿನ ಪ್ರಗತಿಗಾಗಿ ಪ್ರಾಮಾಣಿಕವಾಗಿ ಶ್ರಮಿಸುವೆ ಎಂದು ವಿನಾಯಕ ಪತ್ತಾರ ಹೇಳಿದರು.
ಈ ಸಂದರ್ಭದಲ್ಲಿ ಶ್ರೀ ಮಹಾಲಕ್ಷ್ಮಿ ಸಹಕಾರ ಬ್ಯಾಂಕ್ ಅಧ್ಯಕ್ಷ ಮುಕುಂದ ಕುಲಕರ್ಣಿ, ಉಪಾಧ್ಯಕ್ಷ ವಿಕಾಸ ಪದಕಿ, ನಿರ್ದೇಶಕರಾದ ವಿಜಯ ಜೋಶಿ, ಕೃಷ್ಣಾ ಗುನ್ನಾಳಕರ,ಗೋವಿಂದ ಜೋಶಿ ಶಂಕರ ಕುಲಕರ್ಣಿ, ಪವನ ಕುಲಕರ್ಣಿ, ವೀಣಾ ಟಂಕಸಾಲಿ, ರಾಧಾ ತಾವರಗೇರಿ, ಸಚೀನ್ ಮದ್ದಿಮಠ, ವಿಶ್ವನಾಥ ತಳವಾರ, ಪವನ ಮುರಾಳ, ಅಶೋಕ ಉಪಾಧ್ಯೆ, ವ್ಯವಸ್ಥಾಪಕರಾದ ಪದ್ಮಾವತಿ ಕುಲಕರ್ಣಿ, ಕಲ್ಯಾಣಿ ಸಂಗಮ, ಕೃಷ್ಣಾ ಜೋಶಿ, ಮಾಜಿ ನಿರ್ದೇಶಕರು, ಸಿಬ್ಬಂದಿ ಮೊದಲಾದವರು ಉಪಸ್ಥಿತರಿದ್ದರು.

