Subscribe to Updates
Get the latest creative news from FooBar about art, design and business.
Author: editor.udayarashmi@gmail.com
ದೇವರಹಿಪ್ಪರಗಿ: ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಏಕವಲಯ ಮಹಿಳಾ ಕಬಡ್ಡಿ ಪಂದ್ಯಾವಳಿ ಹಾಗೂ ಯುನಿವರ್ಸಿಟಿ ಬ್ಲೂö್ಯ ತಂಡದ ಆಯ್ಕೆ ಇದೇ ಪ್ರಥಮ ಬಾರಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಶ್ರಯದಲ್ಲಿ ಜರುಗುತ್ತಿದ್ದು, ಯಾವುದೇ ಕುಂದುಕೊರತೆಗಳಿಲ್ಲದೇ ಯಶಸ್ವಿಯಾಗಿ ಜರುಗಬೇಕು ಎಂದು ತಹಶೀಲ್ದಾರ ಪ್ರಕಾಶ ಸಿಂದಗಿ ಹೇಳಿದರು.ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ಶುಕ್ರವಾರ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಏಕವಲಯ ಮಹಿಳಾ ಕಬಡ್ಡಿ ಪಂದ್ಯಾವಳಿ ಅಂಗವಾಗಿ ಜರುಗಿದ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.೨೦೨೩-೨೪ನೇ ಸಾಲಿನಲ್ಲಿ ಪಂದ್ಯಾವಳಿ ಆಯೋಜನೆಗೆ ಅನುಮತಿ ದೊರೆತಿದೆ. ಪಂದ್ಯಾವಳಿ ಇದೇ ದಿ:೧೬ ಗುರುವಾರದಂದು ಆರಂಭಗೊಳ್ಳಲಿದೆ. ಇದರ ಆಯೋಜನೆಗೆ ಅಗತ್ಯವಾದ ನೆರವನ್ನು ಸ್ಥಳೀಯ ಆಡಳಿತ, ವಿವಿಧ ಸಂಘ, ಸಂಸ್ಥೆಗಳು ಹಾಗೂ ಗಣ್ಯವ್ಯಕ್ತಿಗಳಿಂದ ಪಡೆದು ಯಶಸ್ವಿಗೊಳಿಸೋಣ ಎಂದರು.ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ನಿರ್ದೇಶಕ ಅಶೋಕಕುಮಾರ ಜಾಧವ ಮಾತನಾಡಿ, ಕ್ರೀಡಾಳುಗಳ ವಸತಿ ಸೌಕರ್ಯ, ಸಾರಿಗೆ, ಕ್ರೀಡಾಂಗಣ ಸೇರಿದಂತೆ ಪಂದ್ಯಾವಳಿಯ ರೂಪುರೇಷೆಗಳ ಬಗ್ಗೆ ಮಾಹಿತಿ ನೀಡಿದರು.ಕಾಲೇಜು ಪ್ರಾಂಶುಪಾಲ ಅಶೋಕ ಹೆಗಡೆ, ಅಧೀಕ್ಷಕ ಜಗನ್ನಾಥ ಸಜ್ಜನ ಉಪನ್ಯಾಸಕರುಗಳಾದ ಶಿವಪುತ್ರ…
ದೇವರಹಿಪ್ಪರಗಿ: ಪಟ್ಟಣ ಪಂಚಾಯತಿಗೆ ಮೂವರು ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಿ ಸರಕಾರ ಆದೇಶ ಮಾಡಿದೆ.ಪೌರಸಭೆಗಳ ಅಧಿನಿಯಮದಂತೆ ಯುವ ಮುಖಂಡ ಶ್ಯಾಮಣ್ಣ ಅಡಿವೆಪ್ಪ ಮೆಟಗಾರ, ಸುನೀಲ ಸುರೇಶ ಕನಮಡಿ ಹಾಗೂ ಹುಸೇನಬಾಷಾ ರಾಜೇಸಾಬ ಕೊಕಟನೂರ ಇವರನ್ನು ಪಟ್ಟಣ ಪಂಚಾಯಿತಿ ಸದಸ್ಯರಾಗಿ ನಾಮನಿರ್ದೇಶನಗೊಂಡಿದ್ದಾರೆ. ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೆ ಗೌರವಾನ್ವಿತ ರಾಜ್ಯಪಾಲರ ಹೆಸರಿನಲ್ಲಿ ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ ಟಿ.ಮಂಜುನಾಥ ನಾಮನಿರ್ದೇಶನ ಮಾಡಿ ಆದೇಶ ಹೊರಡಿಸಿದ್ದಾರೆ ಎಂದು ಮುಖ್ಯಾಧಿಕಾರಿ ಎಲ್.ಡಿ.ಮುಲ್ಲಾ ತಿಳಿಸಿದ್ದಾರೆ.
ದೇವರಹಿಪ್ಪರಗಿ: ಟಿಪ್ಪುಸುಲ್ತಾನ ವೃತ್ತದಲ್ಲಿ ಟಿಪ್ಪು ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಜಯಂತ್ಯುತ್ಸವ ಆಚರಿಸಲಾಯಿತು.ಪಟ್ಟಣದಲ್ಲಿ ಶುಕ್ರವಾರ ಟಿಪ್ಪು ಜಯಂತಿ ಅಂಗವಾಗಿ ಟಿಪ್ಪು ಕ್ರಾಂತಿಸೇನೆಯ ಪದಾಧಿಕಾರಿಗಳು ವೃತ್ತದಲ್ಲಿ ಸಭೆ ಸೇರಿ ಟಿಪ್ಪುಸುಲ್ತಾನ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ ಪುಷ್ಪನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಜೆಡಿಎಸ್ ಯುವಘಟಕದ ಅಧ್ಯಕ್ಷ ಮುನೀರ್‌ಅಹ್ಮದ್(ಮುನ್ನಾ) ಮಳಖೇಡ ಮಾತನಾಡಿ, ಟಿಪ್ಪು ಸುಲ್ತಾನ ಬ್ರಿಟೀಷರು ದೇಶ ದರೋಡೆ ಮಾಡದಂತೆ ತಡೆದ ಪ್ರಥಮ ವೀರರಾಗಿದ್ದು, ಅಪ್ಪಟ ಕನ್ನಡ ಪ್ರೇಮಿಯಾಗಿದ್ದರು. ಸಾಮಾಜಿಕ ಸಾಮರಸ್ಯಕ್ಕೆ ಸಾಕ್ಷಿಯಾಗಿದ್ದ ಟಿಪ್ಪು ಸುಲ್ತಾನರು ದೇಶದ ಸ್ವಾತಂತ್ರ್ಯಕ್ಕಾಗಿ ತನ್ನ ಮಕ್ಕಳನ್ನೇ ಒತ್ತೆ ಇಟ್ಟು ಹೋರಾಡಿ ವೀರಮರಣ ಹೊಂದಿರುವುದು ಇತಿಹಾಸವಾಗಿದೆ. ಇಂತಹ ಮಹಾನ ಚೇತನ ನಮಗೆಲ್ಲ ದಾರಿದೀಪವಾಗಿದ್ದಾರೆ ಎಂದರು.ಇಮಾಮ್ ಮುಲ್ಲಾ, ಮಹಿಬೂಬ್ ಸುತಾರ, ಇಸ್ಮಾಯಿಲ್ ಮರೋಳ, ಯಾಸೀನ್ ಮಳಖೇಡ, ಉಸ್ಮಾನ್ ಹಚ್ಯಾಳ, ಸುನೀಲ ಕನಮಡಿ, ಭಾಷಾಸಾಬ್ ಹಳ್ಳಿ, ಹುಸೇನ್ ಕೋಕಟನೂರ, ಸಮೀರ್ ಹಚ್ಯಾಳ, ಶಬ್ಬೀರ್ ನದಾಫ್, ಇರ್ಫಾನ್ ನದಾಫ್ ಇದ್ದರು.
ವಿಜಯಪುರದಲ್ಲಿ ಟಿಪ್ಪುಸುಲ್ತಾನ ಜಯಂತೋತ್ಸವ | ಸನ್ಮಾನ | ಧ್ವಜಾರೋಹಣ ವಿಜಯಪುರ: ನಗರದ ಟಿಪ್ಪು ಸುಲ್ತಾನ ಸರ್ಕಲ್‌ನಲ್ಲಿ ಟಿ.ಎಸ್.ಎಸ್. ಸಂಘನೆಯ ವತಿಯಿಂದ ಶುಕ್ರವಾರ ಮೈಸೂರು ಹುಲಿ ಟಿಪ್ಪು ಸುಲ್ತಾನ ಅವರ ಜಯಂತೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.ಟಿಪ್ಪು ಸುಲ್ತಾನ ಅವರ ಭಾವಚಿತ್ರಕ್ಕೆ ಸರ್ವಧರ್ಮಿಯರು ಒಗ್ಗೂಡಿ ಪುಷ್ಪಾರ್ಚನೆ ಸಲ್ಲಿಸಿ ಟಿಪ್ಪು ಧ್ವಜಾರೋಹಣ ನೆರವೇರಿಸಿ ಜೈಕಾರ ಹಾಕಿದರು.ಈ ಸಂದರ್ಭ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಕೆ.ಪಿ.ಸಿ.ಸಿ. ಸದಸ್ಯ ಹಮೀದ್ ಮುಶ್ರೀಫ್ ಮಾತನಾಡಿ, ತಮ್ಮ ಉದರದಿಂದ ಹುಟ್ಟಿದ ಮಕ್ಕಳನ್ನೆ ಒತ್ತಿ ಇಟ್ಟು ದೇಶದ ರಕ್ಷಣೆ ಮಾಡಿದ ಟಿಪ್ಪು ಸುಲ್ತಾನ ಆದರ್ಶವನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು. ಆದರೆ ದೇಶದ್ರೋಹಿಗಳು ಟಿಪ್ಪು ಕುರಿತು ಟೀಕೆ ಮಾಡುತ್ತಿದ್ದಾರೆ. ಇದು ಸರಿಯಲ್ಲ. ಟಿಪ್ಪು ಹಿಂದು ಮಂದಿರಗಳ ರಕ್ಷಣೆಗೆ ಶ್ರಮಿಸಿದ್ದಾರೆ. ಇಂಥಹ ಮಹಾನ್ ಪುರುಷರು ಸರ್ವ ಧರ್ಮದವರಿಗೂ ಆದರ್ಶ ಎಂದರು.ಅಧ್ಯಕ್ಷತೆವಹಿಸಿದ ರೈತ ಮುಖಂಡ ಭೀಮಶಿ ಕಲಾದಗಿ ಮಾತನಾಡಿ, ಟಿಪ್ಪು ಜಯಂತಿ ಅರ್ಥಪೂರ್ಣ ಆಚರಣೆ ಮಾಡಿದ್ದಕ್ಕಾಗಿ ಸಂತೋಷವಾಗಿದೆ. ಟಿಪ್ಪು ಒಬ್ಬ ಮಹಾನ್ ದೊರೆ. ಸಮಾಜ ಕಟ್ಟುವ ಕೆಲಸ ಮಾಡಿದ್ದಾರೆ. ಇಂತಹ ಮಹಾನ್…
ಸಿಂದಗಿ: ಮಕ್ಕಳ ವಿಶೇಷ ಗ್ರಾಮ ಸಭೆ ಮಾಡುವುದರ ಉದ್ದೇಶ, ಮಕ್ಕಳ ಕುಂದುಕೊರತೆಗಳ ಕುರಿತು ಸ್ಥಳೀಯ ಸರ್ಕಾರದ ಮುಂದಿಡುವುದು ಎಂದು ಸಂಗಮ ಸಂಸ್ಥೆ ನಿರ್ದೇಶಕ ಫಾದರ್ ಸಂತೋಷ ಹೇಳಿದರು.ತಾಲೂಕಿನ ಬಂದಾಳ ಶಾಲೆಯ ಆವರಣದಲ್ಲಿ ಸಂಗಮ ಸಮಗ್ರ ಗ್ರಾಮೀಣ ಅಭಿವೃದ್ಧಿ ಕೇಂದ್ರ ಹಾಗೂ ಬಂದಾಳ ಗ್ರಾಮ ಪಂಚಾಯತ್ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಮಕ್ಕಳ ವಿಶೇಷ ಸಭೆಯಲ್ಲಿ ಮಾತನಾಡಿದ ಅವರು, ಸ್ಥಳೀಯ ಸರ್ಕಾರವೆಂದರೆ ಗ್ರಾಮ ಪಂಚಾಯತ್, ಗ್ರಾಮ ಪಂಚಾಯತ್ ಅಧಿಕಾರಿಗಳು ಗ್ರಾಮ ಸಭೆಯಲ್ಲಿದ್ದಾರೆ. ಮಕ್ಕಳು ತಮ್ಮ ಕುಂದುಕೊರತೆಗಳನ್ನು ಅವರಿಗೆ ಧೈರ್ಯವಾಗಿ ಹೇಳಬೇಕು ಎಂದರು.ಬಂದಾಳ ಪಂಚಾಯತ್ ಅಧೀನದಲ್ಲಿ ಬರುವ ಶಾಲೆಯ ಮಕ್ಕಳ ಬೇಡಿಕೆಗಳು: ಸರಕಾರಿ ಕನ್ನಡ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ ಬಂದಾಳ ಶಾಲಾ ಮಕ್ಕಳ ಬೇಡಿಕೆಗಳು- ಶುದ್ದ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ, ಅಡುಗೆಕೊಣೆ ಹೈಸ್ಕೂಲ್ ಕಟ್ಟಡ, ಆಟದ ಮೈದಾನ, ಕಂಪೌಂಡ್, ಶಾಲಾ ಜಾಗಕ್ಕೆ ಉತಾರಿ, ಮತ್ತು ಗ್ರಂಥಲಾಯ ವ್ಯವಸ್ಥೆ ಮಾಡಬೇಕು.ಓತಿಹಾಳ ಶಾಲೆಯ ಮಕ್ಕಳ ಬೇಡಿಕೆಗಳು: ಗ್ರಂಥಾಲಯ, ಪ್ರಾಜೆಕ್ಟರ್, ಸಿ.ಸಿ.ಟಿ.ವಿ, ಆಟೋಟ ಸಾಮಾಗ್ರಿಗಳು,…
ಸಿಂದಗಿ: ರಾಷ್ಟ್ರ ನಿರ್ಮಾಣವೆಂದರೆ ಗಗನ ಚುಂಬಿ ಕಟ್ಟಡಗಳನ್ನು ನಿರ್ಮಾಣ ಮಾಡುವದಲ್ಲ. ನಿಜಾವಾದ ಅರ್ಥದಲ್ಲಿ ರಾಷ್ಟ್ರ ನಿರ್ಮಾಣವೆಂದರೆ ಮೌಲ್ಯಪೂರ್ಣ ಪ್ರಜೆಗಳ ನಿರ್ಮಾಣ. ಅದು ಶಿಕ್ಷಕನ ಮುಖ್ಯ ಕಾರ್ಯವಾಗಬೇಕು ಎಂದು ಮಕ್ಕಳ ಸಾಹಿತಿ ಪಂಡಿತ ಅವಜಿ ಹೇಳಿದರು.ಪಟ್ಟಣದ ಶ್ರೀ ಪದ್ಮರಾಜ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ಬಿ.ಇಡಿ ಅಂತಿಮ ವರ್ಷದ ಪ್ರಶಿಕ್ಷಣಾರ್ಥಿಗಳ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ದೀಪದಾನ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ಯಾವ ವಿದ್ಯಾರ್ಥಿ ನಿರಂತರವಾಗಿ ಅಧ್ಯಯನ ಮಾಡುತ್ತಾರೆಯೋ ಅವರು ಮಾತ್ರ ಇಂದಿನ ವೈಜ್ಞಾನಿಕ ಜಗತ್ತಿನಲ್ಲಿ ಶಿಕ್ಷಕನಾಗಲು ಸಾಧ್ಯ. ನಮ್ಮ ಸಂಸ್ಕೃತಿಯಲ್ಲಿ ಶಿಕ್ಷಕನನ್ನು ದೇವರಿಗೆ ಹೋಲಿಸಿದ್ದಾರೆ. ಆರೋಗ್ಯಕ ಸಮಾಜ, ಆರ್ಥಿಕತೆಯ ಅಭಿವೃದ್ದಿಯಲ್ಲಿ ರಾಷ್ಟ್ರದ ಉನ್ನತಿಕರಣದಲ್ಲಿ ಶಿಕ್ಷಕ ಮತ್ತು ಶಿಕ್ಷಣದ ಪಾತ್ರ ಮುಖ್ಯವಾಗಿದೆ. ಶಿಕ್ಷಕರ ಮೇಲೆ ಬಹು ದೊಡ್ಡ ಜವಾಬ್ದಾರಿ ಇದೆ. ಅದನ್ನು ಪ್ರತಿ ಶಿಕ್ಷಕರು ಮತ್ತು ಶಿಕ್ಷಕರಾಗುವವರು ಶ್ರದ್ಧಾ ಭಕ್ತಿಯಿಂದ ಪೂರೈಸಲೇಬೇಕು ಎಂದರು.ಈ ವೇಳೆ ಅಧ್ಯಕ್ಷತೆ ವಹಿಸಿದ್ದ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಮಕ್ಕಳ ಹಿರಿಯ ಸಾಹಿತಿ ಹ.ಮ.ಪೂಜಾರ ಮಾತನಾಡಿದರು.ವೇದಿಕೆ ಮೇಲೆ ಪ್ರಾಚಾರ್ಯ…
ವಿಜಯಪುರ: ಇತ್ತೀಚೆಗೆ ತುಮಕೂರಿನಲ್ಲಿ ನಡೆದ 2022-23 ನೇ ಸಾಲಿನ ರಾಜ್ಯ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ವಿಜಯಪುರ ಜಿಲ್ಲೆಯಿಂದ ಹಾಕಿ ಪಂದ್ಯಾವಳಿಯಲ್ಲಿ ಭಾಗವಹಿಸಿ ಅತ್ಯುತ್ತಮ ಪ್ರದರ್ಶನ ನೀಡಿ ರಾಷ್ಟ್ರ ಮಟ್ಟದ ಹಾಕಿ ಪಂದ್ಯಾವಳಿ ಆಡಲು ಓಡಿಸ್ಸಾ ರಾಜ್ಯದ ಭುವನೇಶ್ವರ ನಗರಕ್ಕೆ ತೆರಳುತ್ತಿರುವ ಜಿಲ್ಲಾ ನೌಕರರ ಸಂಘದ ಖಜಾಂಚಿ ಸೈಯದ್ ಜುಬೇರ ಕೆರೂರ ಅವರಿಗೆ ಶುಕ್ರವಾರ ನಗರದ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ತಳವಾರ ಅವರು ತಮ್ಮ ಕಛೇರಿಯಲ್ಲಿ ಸನ್ಮಾನಿಸಿದರು.ಸನ್ಮಾನಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ತಳವಾರ ಹಾಕಿ ಆಟದಲ್ಲಿ ಉತ್ತಮ ಪ್ರದರ್ಶನ ನೀಡಿದ ಜುಬೇರ ಕೇರೂರ ಅವರು ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ್ದು ಓಡಿಸ್ಸಾದ ಭುವನೇಶ್ವರದಲ್ಲಿ ನಡೆಯುವ ಪಂದ್ಯಾವಳಿಯಲ್ಲಿಯೂ ಸಹ ತಂಡವನ್ನು ಜಯಶಾಲಿಯಾಗಿಸಿ ನಮ್ಮ ಜಿಲ್ಲೆಯ ಕೀರ್ತಿ ಹೆಚ್ಚಿಸಲಿ ಎಂದು ಶುಭ ಹಾರೈಸಿದರು.ಈ ಸಂದರ್ಭದಲ್ಲಿ ಎಸ್.ಎಂ.ಪಡಶೆಟ್ಟಿ, ಎ.ಎಪ್.ಅರಳಿಮಟ್ಟಿ, ಡಿ.ಕೆ.ತವಸೆ, ಬಸೀರ್ ನದಾಪ್ ಇದ್ದರು.
ಇಂಡಿ: ಅವಕಾಶಗಳು ಎಲ್ಲರಿಗೂ ಸಮನಾಗಿದ್ದು, ಅದನ್ನು ಸರಿಯದ ಹಂತದಲ್ಲಿ ಉಪಯೋಗಿಸಿಕೊಳ್ಳುವವನು ಯಶಸ್ವಿಯಾಗುತ್ತಾನೆ ಎಂದು ಇಂಡಿಯ ಜಿ.ಆರ್.ಗಾಂಧಿ ಕಲಾ ಮತ್ತು ವೈ.ಎ. ಪಾಟೀಲ ವಾಣಿಜ್ಯ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ. ಜಯಪ್ರಕಾಶ.ಡಿ ಹೇಳಿದರು.ಅವರು ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಉದ್ಯೋಗ ಭರವಸಾ ಕೋಶ ಮತ್ತು ಐಕ್ಯೂಎಸಿ ಘಟಕದ ಸಹಯೋದಲ್ಲಿ ಹಮ್ಮಿಕೊಂಡ “ಉದ್ಯೋಗ ಭರವಸಾ ಕೋಶದ”ಪಾತ್ರ ಮತ್ತು ಪ್ರಾಮುಖ್ಯತೆ ಪುನಶ್ಚೇತನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.ಉದ್ಯೋಗ ಪಡೆಯಬಹುದಾದ ಸಂಗತಿಗಳನ್ನು ಹೇಳಿದ ಅವರು ಇಂದಿನ ವಿದ್ಯಾರ್ಥಿಗಳಲ್ಲಿ ನಿರಂತರ ಓದು ಮತ್ತು ಗುರಿ ತಲುಪುವಲ್ಲಿನ ಮಹತ್ವದ ಕುರಿತಾಗಿ ಮಾತನಾಡಿದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯ ಪ್ರೊ. ಆರ್.ಎಚ್.ರಮೇಶ ಮಾತನಾಡಿ”ಉದ್ಯೋಗಭರವಸಾ ವಿಷಯದಲ್ಲಿ ಶಿಕ್ಷಕ ಮತ್ತು ವಿದ್ಯಾರ್ಥಿಯ ಜವಾಬ್ದಾರಿ ಸಮನಾಗಿರುತ್ತದೆ. ವಿದ್ಯಾರ್ಥಿಯು ನಿತ್ಯವೂ ನೂತನ ಸಂಗತಿಗಳನ್ನು ತಿಳಿದುಕೊಳ್ಳಲು ಆಸಕ್ತನಾಗಿರಬೇಕು, ಸತತ ಪ್ರಯತ್ನದಿಂದ, ಹಿಡಿದ ಹಾದಿಯನ್ನು ಸುಲಭವಾಗಿ ಮುಟ್ಟಬಹುದು ಎಂದರು.ವೇದಿಕೆಯಲ್ಲಿ ಉದ್ಯೋಗ ಭರವಸಾ ಕೋಶದ ಸಂಯೋಜಕರಾದ ತಿಪ್ಪಣ್ಣ ಎಸ್. ವಗ್ದಾಳ, ಐಕ್ಯೂಎಸಿ ಸಂಯೋಜಕರಾದ ಡಾ. ಶೀರಿನೂಸುಲ್ತಾನ ಇನಾಂದಾರ, ಪ್ರೊ. ಕಿರಣ ರೇವಣಕರ,…
ದೀಪಾವಳಿ ಹಿಂದೂಗಳಿಗೆಲ್ಲ ಸಡಗರ ಸಂಭ್ರಮದ ಹಬ್ಬ. ವರ್ಷವಿಡೀ ಆಚರಿಸುವ ಹಬ್ಬಗಳಲ್ಲೆಲ್ಲಾ ದೀಪಾವಳಿಗೆ ಅತ್ಯಂತ ಮಹತ್ವದ ಸ್ಥಾನವಿದೆ. ಬೆಳಕಿನ ಹಬ್ಬ ದೀಪಾವಳಿ ಮತ್ತೆ ಬಂದಿದೆ. ಭಾರತದಾದ್ಯಂತ ಆಚರಿಸುವ ಹಬ್ಬವೆಂದರೆ ದೀಪಾವಳಿ. “ತಮಸೋಮ ಜ್ಯೋತಿಗಮಯ” ಕತ್ತಲಿನಿಂದ ಬೆಳಕಿನ ಕಡೆಗೆ ದೀಪಾವಳಿ ಎಂದರೆ ಯಾರಿಗೂ ಖುಷಿಯಿಲ್ಲ ಹೇಳಿ. ದೀಪಗಳ ಹಬ್ಬದ ವೈಶಿಷ್ಟವೇ ಅಂಥಾದ್ದು. ದೀಪ+ ವಳಿ= ದೀಪಾವಳಿ. ಎಲ್ಲಿ ಕತ್ತಲಿದೆಯೋ ಅಲ್ಲಿ ಬೆಳಕಿರಬೇಕು. ಕತ್ತಲೆಂದರೆ ಅಜ್ಞಾನ ಕತ್ತಲೆಂದರೆ ಅಂಧಕಾರ. ಕತ್ತಲೆಂದರೆ ಸೋಲು. ಬೆಳಕು ಎಂದರೆ ಯಶಸ್ಸು. ಕತ್ತಲೆಂದರೆ ಕಷ್ಟಗಳ ಸಂಕೋಲೆ ಬೆಳಕೆಂದರೆ ಬಿಡುಗಡೆ. ಅಂದರೆ ನಮ್ಮ ಅಜ್ಞಾನವನ್ನು ಬೆಳಕಿನ ಮೂಲಕ ತೊಡೆದು ಹಾಕೋ ಹಬ್ಬವೇ ದೀಪಾವಳಿ. ಈ ದೀಪಾವಳಿ ಅಮಾವಾಸ್ಯೆಗೂ ಇಲ್ಲಿ ಮಹತ್ವವಿದೆ. ಅಮಾವಾಸ್ಯೆಯ ದಿನ ಲಕ್ಷ್ಮೀ ಪೂಜೆಯೂ ನಡೆಯುತ್ತದೆ. ಲಕ್ಷ್ಮಿಯು ಕತ್ತಲನ್ನು ಕಳೆದು ಬೆಳಕು ತರುವ ಮಹಾ ತೇಜಸ್ವಿನಿ. ಕತ್ತಲೆಯಿಂದ ಬೆಳಕಿನ ಕಡೆಗೆ ಸಾಗುವುದೇ ಬದುಕು. ಹೀಗಾಗಿ ದೀಪಾವಳಿಯಲ್ಲಿ ನಡೆಯುವ ಜ್ಯೋತಿ ಸ್ವರೂಪಿಣಿ ಲಕ್ಷ್ಮಿಯು ಪೂಜೆ ಭಯ ಭಕ್ತಿಯಿಂದ ಪೂಜೆ ಮಾಡುತ್ತಾರೆ. ಹಬ್ಬದ ದಿನ…
ವಿಜಯಪುರ: ಅಂದಾಜು ೪೦ ವಯಸ್ಸಿನ ಸೀತಾ ಅಶೋಕ ದರ್ಗಾ ಎಂಬ ಮಹಿಳೆ ಕಾಣೆಯಾಗಿರುವ ಕುರಿತು ವಿಜಯಪುರ ಗೋಲಗುಂಬಜ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಹಿಳೆ ಪತ್ತೆಗಾಗಿ ಸಾರ್ವಜನಿಕರಲ್ಲಿ ಪೊಲೀಸ್ ಠಾಣೆ ಪಿಎಸ್.ಐ. ಅವರು ಮನವಿ ಮಾಡಿಕೊಂಡಿದ್ದಾರೆ.ಕಾಣೆಯಾದ ಮಹಿಳೆ ೪.೬ ಅಡಿ ಎತ್ತರ, ತಲೆಯಲ್ಲಿ ಕಪ್ಪು ಕೂದಲು, ಸಾಧಗಪ್ಪು ಮೈಬಣ್ಣ, ಸಾಧಾರಣ ಮೈಕಟ್ಟು, ದುಂಡು ಮುಖ, ನೆಟ್ಟನೆಯ ಮೂಗು, ಕೆಂಪು ಬಣ್ಣದ ಸೀರೆ ಧರಿಸಿದ್ದು, ಕನ್ನಡ ಭಾಷೆ ಮಾತನಾಡತ್ತಿದ್ದು, ಈ ಚಹರೆಪಟ್ಟಿಯುಳ್ಳ ಮಹಿಳೆ ಪತ್ತೆಯಾದಲ್ಲಿ ಸಾರ್ವಜನಿಕರು ಗೋಲ್ ಗುಂಬಜ್ ಪೊಲೀಸ್ ಠಾಣೆ, ಪಿ.ಎಸ್. ದೂರವಾಣಿ ಸಂಖ್ಯೆ : ೦೮೩೫೨-೨೫೦೨೧೪, ಎಸ್.ಡಿ.ಪಿ.ಓ- ೦೮೩೫೨-೨೫೦೨೫೨, ೦೮೩೫೨-೨೫೩೧೦೦, ೦೮೩೫೨-೨೫೦೧೫೨, ೦೮೩೧-೨೪೦೫೨೦೧ ದೂರವಾಣಿ ಸಂಖ್ಯೆಗೆ ಮಾಹಿತಿ ನೀಡುವಂತೆ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.
