ತಿಕೋಟಾ: ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಹೊರಹಾಕಲು ಸಾಹಿತ್ಯ ಸಂಭ್ರಮ ಕಾರ್ಯಕ್ರಮ ಸಹಕಾರಿಯಾಗಿದೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ ಹೇಳಿದರು.
ತಾಲ್ಲೂಕಿನ ಬಾಬಾನಗರ ಗ್ರಾಮದ ಸರ್ಕಾರಿ ಗಂಡು ಮಕ್ಕಳ ಶಾಲೆಯಲ್ಲಿ ಸೋಮವಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಭಾರತ ಜ್ಞಾನ ವಿಜ್ಞಾನ ಸಮಿತಿ ಹಾಗೂ ಗ್ರಾಮ ಪಂಚಾಯತ ಸಹಯೋಗದಲ್ಲಿ ಮೂರು ದಿನಗಳ ಕಾಲ ನಡೆಯುತ್ತಿರುವ ಮಕ್ಕಳ ಸಾಹಿತ್ಯ ಸಂಭ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಗ್ರಾಮಿಣ ಭಾಗದ ಸರಕಾರಿ ಶಾಲೆಯ ಮಕ್ಕಳಿಗೆ ಈ ವೇದಿಕೆ ವರದಾನವಾಗಲಿ, ಆ ಮೂಲಕ ಮಕ್ಕಳು ಸೂಪ್ತ ಪ್ರತಿಭೆಯನ್ನು ಹೊರಹಾಕಲು ಇಂತಹ ವೇದಿಕೆಗಳನ್ನು ಸೂಕ್ತವಾಗಿ ಬಳಸಿಕೊಳ್ಳಬೇಕೆಂದು ಮಕ್ಕಳಿಗೆ ತಿಳಿಸಿದರು.
ವಿಜಯಪುರ ಗ್ರಾಮೀಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗ ಪ್ರಮೋದಿನಿ ಬಳೋಲಮಟ್ಟಿ ಮಾತನಾಡಿ, ಮಕ್ಕಳಲ್ಲಿ ಕ್ರೀಯಾಶೀಲ ಮನೋಭಾವನೆಯನ್ನು ಬೆಳೆಸಿ ಸಾಹಿತ್ಯಾಭಿರುಚಿ ಹೆಚ್ಚಿಸಿ ಮಕ್ಕಳಲ್ಲಿ ಅಡಗಿರುವ ಕಥೆ, ನಾಟಕ, ಕವನ, ಪತ್ರಿಕಾ ವರದಿಗಾರ ಹೀಗೆ ಹಲವಾರು ಸಾಹಿತ್ಯಾಭಿರುಚಿಯನ್ನು ಬೆಳೆಸಲು ಇದೊಂದು ಉತ್ತಮ ಕಾರ್ಯಕ್ರಮವಾಗಿದೆ ಎಂದು ಬಣ್ಣಿಸಿದರು.
ಗ್ರಾಮ ಪಂಚಾಯತಿ ಸದಸ್ಯ ಸಿದ್ಧಗೊಂಡ ರುದ್ರಗೌಡರ ಮಾತನಾಡಿದರು.
ಭಾರತ ಜ್ಞಾನ ವಿಜ್ಞಾನ ಸಮಿತಿಯ ಗೌರವಾಧ್ಯಕ್ಷ ಎಸ್.ವಿ.ಬುರ್ಲಿ ಮಾತನಾಡಿದರು.
ಬಸವಣ್ಞ, ಅಕ್ಕಮಹಾದೇವಿ, ಅಂಬೇಡ್ಕರ್ ಇತರ ಶರಣರ ಹಾಗೂ ರಾಷ್ಟ್ರನಾಯಕರ ವೇಷಭೂಷಣ ತೊಟ್ಟು ಮಕ್ಕಳು ಮೆರವಣಿಗೆಯಲ್ಲಿ ಸಾಗಿದರು. ಹೂವು, ಟೋಪಿ, ಗಣ್ಯರಿಗೆ ಕೊಡಲು ಬ್ಯಾಡ್ಜ ಎಲ್ಲವೂ ಮಕ್ಕಳು ಪೇಪರನಿಂದ ತಯಾರಿಸಿದ್ದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷರಾದ ಶಹರಾಬಾನು ಎಳಾಪುರ, ಅಂದಾಜು ಮತ್ತು ಮೌಲ್ಯಮಾಪನಾಧಿಕಾರಿ ಎ. ಬಿ.ಅಲ್ಲಾಪೂರ, ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗ ಪ್ರವೀಣ ಕುಮಾರ ಸಾಲಿ, ಉಪಾಧ್ಯಕ್ಷ ಈರಣಗೌಡ ರುದ್ರಗೌಡ್ರ, ಅಶೋಕಗೌಡ್ರ ರುದ್ರಗೌಡ್ರ, ಶೋಭಾ ಸೀಳಿನ, ರೇಣುಕಾ ಸೊಲ್ಲಾಪುರ, ಸುಮಾ ಚೌಧರಿ, ಎಸ್.ಎಂ.ಅವಟಿ, ಮಂಜುನಾಥ ಹೊನಕಟ್ಟಿ, ಯಲ್ಲಾಲಿಂಗ ಹೊನವಾಡ, ಜೋತಿಂದ್ರ ಆಯತವಾಡ, ಅಕ್ಬರ ಮುಲ್ಲಾ, ಜಿ. ಟಿ. ಕಾಗವಾಡ, ಬಿ. ಎಸ್. ಕುಮಠಗಿ, ಎಲ್. ಟಿ. ಮುಲ್ಲಾ, ಎಸ್. ಆಯ್. ಬಾಗಲಕೋಟ, ನಂದಾ ತಿಕೋಟಿ, ಎಂ. ಎಸ್. ಮಠಪತಿ, ರಮೇಶ ಅರಕೇರಿ, ಎಂ.ವೈ. ಧನಗೊಂಡ ಬೀರಪ್ಪಾ ಖಂಡೇಕಾರ ಉಪಸ್ತಿತರಿದ್ದರು.
ಕಾರ್ಯಕ್ರಮವನ್ನು ಐ. ಎ. ತೇಲಿ ಸ್ವಾಗತಿಸಿದರು, ಎಂ.ಐ. ಮುಲ್ಲಾ ವಂದಿಸಿದರು, ವಿಧ್ಯಾರ್ಥಿನಿಯರಾದ ಕುಮಾರಿ, ವಿಜಯಲಕ್ಷ್ಮಿ ಸಾವಳಗಿ ಮತ್ತು ಸ್ವಾತಿ ಐಗಳಿ ನಿರೂಪಿಸಿದರು, ಎಂ.ಐ. ಮುಲ್ಲಾ ವಂದಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

