ಕಲಕೇರಿ: ಜಿಲ್ಲಾ ಪಂಚಾಯತ ವಿಜಯಪುರ, ತಾಲೂಕ ಪಂಚಾಯತ ತಾಳಿಕೋಟಿ ಅವರ ನಿರ್ದೇಶನದೊಂದಿಗೆ ಕಲಕೇರಿ ಗ್ರಾಮ ಪಂಚಾಯತ ನೇತೃತ್ವದಲ್ಲಿ ಗ್ರಾಮದ ವಿವಿಧ ಪ್ರಗತಿಪರ ಸಂಘಟನೆಗಳು ಮತ್ತು ವಿವಿಧ ಶಾಲಾ ಕಾಲೇಜುಗಳ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಬೃಹತ್ ಮೆರವಣಿಗೆಯೊಂದಿಗೆ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮ ಜರುಗಿತು.
ಭಾರತ ರತ್ನ ಡಾ ಬಿ ಆರ್ ಅಂಬೇಡ್ಕರ್ ಅವರ ರಥ ಹುಣಶ್ಯಾಳ ಮಾರ್ಗವಾಗಿ ಕಲಕೇರಿ ಗ್ರಾಮವನ್ನು ಪ್ರವೇಶಿಸುತ್ತಿದ್ದಂತೆಯೇ ಮಾಲಾರ್ಪಣೆ ಮಾಡಿ ಅದ್ದೂರಿಯಿಂದ ಸ್ವಾಗತಿಸಿ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಅವರ ಭಾವಚಿತ್ರಕ್ಕೆ ತಾಳಿಕೋಟಿ ತಹಶೀಲ್ದಾರ ಕೀರ್ತಿ ಚಾಲಕ ಅವರ ನೇತೃತ್ವದಲ್ಲಿ ಪುಷ್ಪಮಾಲೆಯನ್ನು ಹಾಕುವ ಮೂಲಕ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳ ವಿವಿಧ ವೇಷಭೂಷಣಗಳೊಂದಿಗೆ ಘೋಷಣೆಗಳನ್ನು ಕೂಗುತ್ತಾ ಗ್ರಾಮದ ದಿ.ತಂಗಮ್ಮ ದೇಸಾಯಿ ಕಲ್ಯಾಣ ಮಂಟಪದ ಪಕ್ಕದ ರಸ್ತೆಯಿಂದ ಗ್ರಾಮದ ಪ್ರಮುಖ ರಸ್ತೆಗಳ ಮೂಲಕ ಸಾಗಿದ ಮೆರವಣಿಗೆಯುದ್ದಕ್ಕೂ ನಮ್ಮ ಸಂವಿಧಾನ ನಮ್ಮ ಹೆಮ್ಮೆ ಎಂಬ ಕೂಗು ಕೇಳಿಬಂದಿತು.
ಗುರುಮಡಿವಾಳೇಶ್ವರ ದೇವಸ್ಥಾನದ ಆವರಣದಲ್ಲಿ ಜರುಗಿದ ಕಾರ್ಯಕ್ರಮದ ಪ್ರಾರಂಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ ಲಮಾಣಿ ಅವರು ಸಂವಿಧಾನ ಪೀಠಿಕೆಯ ಪ್ರಮಾಣ ವಚನ ಬೋಧಿಸಿದರು.
ನಂತರ ಮಾತನಾಡಿದ ಉಪನ್ಯಾಸಕ ಬಸವರಾಜ ಕುಂಬಾರ ಅವರು, ದೇಶದ ಸ್ವಾತಂತ್ರ‍್ಯ ನಂತರ ಅವಶ್ಯವಾಗಿರುವ ಎಲ್ಲ ಕಾನೂನು ಹಕ್ಕು ಮತ್ತು ಕರ್ತವ್ಯಗಳನ್ನು ಒಳಗೊಂಡ ಸಂವಿಧಾನ ಹೃದಯ ಮತ್ತು ತಾಯಿ ಇದ್ದಂತೆ ಎಂದರು,
ಕಾರ್ಯಕ್ರಮದ ವೇದಿಕೆಯ ಮೇಲೆ ಗ್ರಾಪಂ ಅಧ್ಯಕ್ಷ ರಾಜಅಹ್ಮದ್ ಸಿರಸಗಿ, ಉಪಾಧ್ಯಕ್ಷರ ಪ್ರತಿನಿಧಿ ಪರಶುರಾಮ ಬೇಡರ, ತಾಲೂಕ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಿ.ಆರ್.ಬಿರಾದಾರ, ನೋಡಲ್ ಅಧಿಕಾರಿ ಶಿವರಾಜ ನಾಯಕ, ಸಮಾಜ ಕಲ್ಯಾಣ ಇಲಾಖೆಯ ಉಮೇಶ ಲಮಾಣಿ, ಪಿಡಿಓ ಬಸನಗೌಡ ಚಾಧರಿ, ಇಸಿಓ ಐ.ಎಫ್.ಬಾಲ್ಕಿ, ಪಿಎಸ್‌ಐ ರೋಹಿಣಿ ಪಾಟೀಲ, ಮಾಜಿ ತಾಪಂ ಸದಸ್ಯ ಲಕ್ಕಪ್ಪ ಬಡಿಗೇರ, ಡಿಎಸ್‌ಎಸ್ ತಾಲೂಕ ಸಂಚಾಲಕರಾದ ಶ್ರೀಶೈಲ ಜಾಲವಾದಿ, ಸಿಆರ್‌ಪಿ ಶ್ರೀಶೈಲ ನಾಯ್ಕೋಡಿ, ಗ್ರಾಮಲೆಕ್ಕಾಧಿಕಾರಿ ಈರಣ್ಣ ಪತ್ತಾರ, ಶಿವು ಹೊಸಮನಿ ಸೇರಿದಂತೆ ಗ್ರಾಪಂ ಸದಸ್ಯರು, ವಿವಿಧ ಇಲಾಖೆಯ ಅಧಿಕಾರಿಗಳು, ಮುಖಂಡರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

