ಸಿಂದಗಿ: ಶಿವಾಜಿ ಮಹಾರಾಜರು ಒಬ್ಬ ಅದ್ಭುತ ಸಾಮ್ರಾಟ ತನ್ನ ಯುದ್ಧ ಕಲೆಗಳಿಂದಲೇ ಸಾಮ್ರಾಜ್ಯವನ್ನು ಕಟ್ಟಿದ ಧೀರ ಎಂದು ಇಂಡಿ ಶಾಸಕ ಯಶವಂತ್ರಾಯಗೌಡ ಪಾಟೀಲ ಹೇಳಿದರು.
ತಾಲೂಕಿನ ಗೋಲಗೇರಿ ಗ್ರಾಮದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಲೆ ಮತ್ತು ಜೀವನದ ಸಂಸ್ಕೃತಿಗಳನ್ನು ಶಿವಾಜಿ ಮಹಾರಾಜರು ತನ್ನ ತಾಯಿಯಿಂದಲೇ ಕಲಿತ ವಿದ್ಯೆಗಳಾಗಿದ್ದವು.ಮಹಾಪುರುಷರ ಆಚರಣೆಗಳನ್ನು ಕೇವಲ ಜಾತಿಗಳಿಗೆ ಸೀಮಿತಗೊಳಿಸದೆ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಬೇಕು ಎಂದು ಹೇಳಿದರು
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ರವಿರಾಜ ದೇವರಮನಿ, ಬಸವರಾಜ ಮಾರಲಭಾವಿ, ಪತ್ರಕರ್ತ ಮಲ್ಲು ಕೆಂಭಾವಿ, ಮಡಿವಾಳ ನಾಯ್ಕೋಡಿ, ಕುಮಾರ ಗೊಂಧಳಿ, ನೀಲಕಂಠ ಚಲವಾದಿ, ಬಾಬು ಜಾಲವಾದಿ, ಗೋಲ್ಲಾಳ ನಾಯ್ಕೋಡಿ, ಮಹಾಂತೇಶ ಗೊಂಧಳಿ, ಭೈರವ ಬನ್ನೆ, ರಾಜಾರಾಮ ಗೊಂಧಳಿ, ಸುದೀಪ ಗೊಂಧಳಿ, ಚೌಡು ಹಡಪದ ಸೇರಿದಂತೆ ಅನೇಕರು ಇದ್ದರು.
ತಾಲೂಕು ಆಡಳಿತ: ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯೋತ್ಸವ ಆಚರಣೆ ಮಾಡಲಾಯಿತು. ಈ ವೇಳೆ ತಹಶೀಲ್ದಾರ್ ಪ್ರದೀಪಕುಮಾರ ಹಿರೇಮಠ, ಕಂದಾಯ ನಿರೀಕ್ಷಕ ಐ.ಎ.ಮಕಾಂದಾರ, ಜಿ.ಎಸ್.ರೋಡಗಿ, ನಿಖಿಲ ಖಾನಾಪೂರ, ಕಸಾಪ ಮಾಜಿ ತಾಲೂಕಾಧ್ಯಕ್ಷ ಚಂದ್ರಶೇಖರ ದೇವರೆಡ್ಡಿ ಸೇರಿದಂತೆ ಸಿಬ್ಬಂದಿಗಳು ಇದ್ದರು.
ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿಗಳ ಕಾರ್ಯಾಲಯ:
ಪಟ್ಟಣದ ಎಪಿಎಂಸಿ ಯಾರ್ಡನಲ್ಲಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯೋತ್ಸವ ಆಚರಣೆ ಮಾಡಲಾಯಿತು. ಈ ವೇಳೆ
ಸಿಡಿಪಿಒ ಶಂಭುಲಿಂಗ ಹಿರೇಮಠ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಪೂಜಾ ಸಮಾರಂಭದಲ್ಲಿ ಎಸಿಡಿಪಿಒ ಎಸ್.ಎನ್.ಕೋರವಾರ, ವಿಜಯಕುಮಾರ ಸೇರಿದಂತೆ ಮೇಲ್ವಿಚಾರಕಿಯರು ಮತ್ತು ಸಿಬ್ಬಂದಿಗಳು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

