ಮುದ್ದೇಬಿಹಾಳ: ದಾನಗಳಲ್ಲಿ ರಕ್ತದಾನವೂ ಶ್ರೇಷ್ಠವಾದದ್ದು. ಆರೋಗ್ಯವಂತರು ರಕ್ತದಾನ ಮಾಡಿದಲ್ಲಿ ಹಲವಾರು ಜೀವಗಳನ್ನು ಉಳಿಸಬಹುದು ಎಂದು ತಾಲೂಕ ಆಸ್ಪತ್ರೆಯ ಹಿರಿಯ ತಜ್ಞ ವೈದ್ಯ ಡಾ.ಅನಿಲಕುಮಾರ್ ಶೇಗುಣಿಸಿ ಹೇಳಿದರು.
ಪಟ್ಟಣದ ಎಂ.ಜಿ.ವ್ಹಿ.ಸಿ ಮಹಾವಿದ್ಯಾಲಯದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ವಿಜಯಪುರ, ಮಾತೋಶ್ರೀ ಗಂಗಮ್ಮ ವೀರಪ್ಪ ಚಿನಿವಾರ ಕಲಾ ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯ, ಸೌಟ್ಸ್ & ಗೈಡ್ಸ್, ಎನ್.ಎಸ್.ಎಸ್, ಭಾರತೀಯ ಯೂತ್ ರೆಡ್ ಕ್ರಾಸ್, ಎಚ್‌ಡಿಎಫ್‌ಸಿ ಬ್ಯಾಂಕ್ ಲಿಮಿಟೆಡ್ ಮುದ್ದೇಬಿಹಾಳ ಇವರ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ರಕ್ತದಾನದ ಶಿಬಿರವನ್ನು ಉದ್ದೇಶಿಸಿ ಅವರು ಮಾತನಾಡಿದರು.
ರಕ್ತದಾನ ಮಹಾದಾನ, ಆರೋಗ್ಯವಂತ ಭಾರತ ನಿರ್ಮಾಣವಾಗಬೇಕಾದರೆ ತರುಣರು ರಕ್ತದಾನಕ್ಕೆ ಮುಂದಾಗಬೇಕು. ನಮ್ಮ ಒಂದೊಂದು ಹನಿರಕ್ತವು ಒಂದೊಂದು ಜೀವವನ್ನು ಬದುಕಿಸುತ್ತದೆ. ಸಾಮಾಜಿಕ ಕಳಕಳಿಯಿಂದ ಮಹಾ ವಿದ್ಯಾಲಯವು ಪ್ರತಿವರ್ಷ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳುತ್ತಿರುವ ಕಾರ್ಯ ಶ್ಲಾಘನೀಯ ಎಂದರು.
ಸ್ಕೌಟ್ಸ್ ಮತ್ತು ಗೈಡ್ಸ್ ನ ಸಂಯೋಜಕ ಪ್ರೊ ಎಸ್.ಎಸ್.ಹೂಗಾರ್ ಮಾತನಾಡಿದರು.
ಶಿಬಿರದಲ್ಲಿ ೩೬ ಯೂನಿಟ್ ರಕ್ತವನ್ನು ಕಾಲೇಜಿನ ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಮತ್ತು ಸಿಬ್ಬಂದಿ ದಾನ ಮಾಡಿದರು. ವಿಜಯಪುರದ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ನಿರ್ದೇಶಕರುಗಳಾದ ಎಸ್.ಜಿ.ಮುರನಾಳ ಹಾಗೂ ಆನಂದಗೌಡ ಬಿರಾದರ ಇವರು ಕಾಲೇಜಿನ ಮುಖ್ಯಸ್ಥರಿಗೆ ರೆಡ್ ಕ್ರಾಸ್ ಸಂಸ್ಥೆಯಿಂದ ಅಭಿನಂದನಾ ಪತ್ರ ಹಾಗೂ ರಕ್ತದಾನ ಮಾಡಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಿದರು. ಶಿಬಿರದಲ್ಲಿ ಕಾಲೇಜಿನ ಪ್ರಾಚಾರ್ಯ ಪ್ರೊ.ಎಸ್.ಎನ್.ಪೋಲೇಸಿ, ಡಾ.ಎಂ.ಐ.ಬಿರಾದಾರ, ಡಾ. ಎ.ಎ.ಮುಲ್ಲಾ, ಪ್ರೊ.ಎಸ್ .ಎಸ್.ಬಿರಾದಾರ, ಪ್ರೊ.ವ್ಹಿ.ಎಸ್.ಲಮಾಣಿ, ಎಚ್.ಡಿ.ಎಫ್.ಸಿ ಬ್ಯಾಂಕ್ ನ ಸಂತೋಷ ಭಜಂತ್ರಿ, ಆಕಾಶ್ ಪತ್ತಾರ, ಆರೋಗ್ಯ ಇಲಾಖೆಯ ವೈದ್ಯಾಧಿಕಾರಿ ಡಾ.ಸಂಗಮೇಶ ದಶವಂತ, ಪ್ರಯೋಗ ಶಾಲಾ ತಾಂತ್ರಿಕ ಅಧಿಕಾರಿ ವ್ಹಿ.ವ್ಹಿ.ಪವಾಡಶೆಟ್ಟಿ, ಎಸ್.ಡಿ.ಹಲ್ಯಾಳ, ವಿಜಯಲಕ್ಷ್ಮಿ ಹುನಗುಂದ, ರೆಡ್ ಕ್ರಾಸ್ ಸಂಸ್ಥೆಯ ಲ್ಯಾಬ್ ಟೆಕ್ನಿಷಿಯನ್ ವಿನೋದ್ ಗೋಳಸಂಗಿ. ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಎಸ್.ಗೌಡರ, ಎಸ್.ಆರ್.ಸಜ್ಜನ್, ಆಂಬುಲೆನ್ಸ್ ಚಾಲಕ ರವಿ ಡೆಂಗಿ ಸೇರಿದಂತೆ ಕಾಲೇಜಿನ ಪ್ರಾಚಾರ್ಯರು ವಿದ್ಯಾರ್ಥಿಗಳು ಹಾಗೂ ಸ್ಕೌಟ್ಸ್ ಗೈಡ್ಸ್ನ ಪದಾಧಿಕಾರಿಗಳು ಭಾಗಿಯಾಗಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

