ವಿಜಯಪುರ: ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಸ್ಟಡಿ ಸರ್ಕಲ್ ಕಾರ್ಯಕ್ರಮದ ಅಡಿಯಲ್ಲಿ ಮುಂಬರುವ ಪೊಲೀಸ್ ಕಾನ್ಸಟೇಬಲ್ ಹುದ್ದೆಗೆ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಪರೀಕ್ಷಾ ಪೂರ್ವ ತರಬೇತಿ ಆಯೋಜಿಸಲಾಗಿದೆ.
ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಫೆ.೨೬ ರಿಂದ ಮಾರ್ಚ್ ೦೭ರವರೆಗೆ ಸ್ಪರ್ಧಾತ್ಮಕ ಪರೀಕ್ಷೆಯ ಪಠ್ಯಕ್ರಮನುಸಾರವಾಗಿ ವಿಜಯಪುರ ನಗರದ ಮಿನಾಕ್ಷಿ ಚೌಕ್‌ನಲ್ಲಿರುವ ನಾಗಪಾಲ ಬಿಲ್ಡಿಂಗ್, ಸೌರಭ ಫಾರ್ಮಾ ಎದುರಿಗೆ, ಇಜೇರಿ ಕರಿಯರ್ ಅಕಾಡೆಮಿಯಲ್ಲಿ ಉಚಿತ ತರಬೇತಿ ಆಯೋಜಿಸಲಾಗಿದೆ.
ತರಬೇತಿಗೆ ಹಾಜರಾಗಲಿಚ್ಛಿಸುವ ಅಭ್ಯರ್ಥಿಗಳು ಕೆಎಸ್‌ಪಿನಲ್ಲಿ ಅಧಿಸೂಚಿತ ಕಾನ್ಸಟೇಬಲ್ ಹುದ್ದೆಗೆ ಸಲ್ಲಿಸಿರುವ ತಮ್ಮ ಅರ್ಜಿಯ ಝರಾಕ್ಸ್ ಪ್ರತಿ ಹಾಗೂ ಆಧಾರ ಕಾರ್ಡ ಝರಾಕ್ಸ್ದೊಮದಿಗೆ ದಿನಾಂಕ: ೨೬-೦೨-೨೦೨೪ರೊಳಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಖುದ್ದಾಗಿ ಅಥವಾ ಕಚೇರಿಯ empbjp@gmail.com ಇಮೇಲ್ ಮೂಲಕ ನೊಂದಾಯಿಸಿಕೊಳ್ಳಬಹುದಾಗಿದೆ.
ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಸ್ಟೇಶನ ರಸ್ತೆ, ವಿಜಯಪುರ ಅಥವಾ ದೂರವಾಣಿ : ೦೮೩೫೨-೨೫೦೩೮೩, ಮೊ: ೯೦೭೧೦೫೫೫೫೭, ೯೩೪೧೭೭೭೭೫೭ ಸಂಖ್ಯೆಗೆ ಸಂಪರ್ಕಿಸುವಂತೆ ಜಿಲ್ಲಾ ಉದ್ಯೋಗಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
