ಬಸವನಬಾಗೇವಾಡಿ: ಛತ್ರಪತಿ ಶಿವಾಜಿ ಮಹಾರಾಜರ ನಡೆಸಿದ್ದ ಉತ್ತಮ ಆಡಳಿತ ಮತ್ತು ಅವರ ಶೌರ್ಯ ನಮಗೆ ಸದಾ ಸ್ಫೂರ್ತಿ ಎಂದು ರಾಷ್ಟ್ರೀಯ ಬಸವಸೈನ್ಯದ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ ಹೇಳಿದರು.
ಪಟ್ಟಣದ ವೀರರಾಣಿ ಕಿತ್ತೂರ ಚೆನ್ನಮ್ಮ ವೃತ್ತದಲ್ಲಿ ರಾಷ್ಟೀಯ ಬಸವಸೈನ್ಯ ಸಂಘಟನೆ ಛತ್ರಪತಿ ಶಿವಾಜಿ ಮಹಾರಾಜರ ಜಯಂತೋತ್ಸವದಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಛತ್ರಪತಿ ಶಿವಾಜಿ ಮಹಾರಾಜರು ಮಹಾರಾಷ್ಟ್ರದ ಪುಣೆಯ ಹತ್ತಿರ ಇರುವ ಶಿವನೇರಿ ಎಂಬಲ್ಲಿ 1630ನೆ ಫೆಬ್ರವರಿ 19 ರಂದು ಜನಿಸಿದರು. ಪ್ರಾಥಮಿಕ ಶಿಕ್ಷಣವನ್ನು ಅಣ್ಣ ಸಾಂಬಾಜಿ ಅವರಿಂದ ಪಡೆದು ದಾದಾಜಿ ಕೊಂಡದೇವ ಅವರಿಂದ ಸಂಪೂರ್ಣ ಯುದ್ಧ ಕೌಶಲ್ಯ ಕಲಿತರು. 12ನೆಯ ವಯಸ್ಸಿನಲ್ಲಿ ಕತ್ತಿವರಸೆ,ಕುದುರೆ ಸವಾರಿಯಲ್ಲಿ ಪಳಗಿದ್ದರು. 1674ರಲ್ಲಿ ಮರಾಠಾ ಸಾಮ್ರಾಜ್ಯ ಸ್ಥಾಪಿಸಿ 1680ರವರೆಗೆ ಶೌರ್ಯದಿಂದ ರಾಜ್ಯವನ್ನು ಆಳಿದವರು ಶಿವಾಜಿ ಮಹಾರಾಜರು. ಕೇವಲ ಹಿಂದೂ ಧರ್ಮಕ್ಕೆ ಸೀಮಿತವಾಗದೆ ಧಾರ್ಮಿಕ ಸಹಿಷ್ಣುಹಿಯಾಗಿದ್ದರು. ತಮ್ಮ ಆಡಳಿತ ಅವದಿಯಲ್ಲಿ ಹಿಂದೂ ಮುಸ್ಲಿಂ ಅನ್ನದೆ ಎಲ್ಲರನ್ನೂ ಸಮಾನವಾಗಿ ಕಾಣುತ್ತಿದ್ದರು .ಎಲ್ಲ ಧರ್ಮದವರಿಗೂ ಸಂಪೂರ್ಣ ಧಾರ್ಮಿಕ ಸ್ವಾತಂತ್ರ್ಯವನ್ನು ಕೊಟ್ಟಿದ್ದರು. ಭಾರತದ ಭೂಮಿ ಅನಾದಿಕಾಲದಿಂದಲೂ ಅನೇಕ ಬಲಿಷ್ಠ ಧೈರ್ಯವಂತ, ವೀರ ಯೋಧರು ಸಾಹಸಿ ವನಿತೆಯರು ಆಡಳಿತಗಾರರನ್ನು ಹೊಂದಿದೆ. ತಮ್ಮ ತಾಯಿನಾಡು ಸ್ವರಾಜ್ಯವನ್ನು ರಕ್ಷಿಸಲು ಅದೆಷ್ಟೋ ಮಂದಿ ತಮ್ಮ ಪ್ರಾಣವನ್ನೇ ತ್ಯಾಗ ಬಲಿದಾನ ಮಾಡಿದ್ದಾರೆ. ಅಂತಹ ಮಹಾನ್ ಧೈರ್ಯಶಾಲಿ ರಾಜರಲ್ಲಿ ಛತ್ರಪತಿ ಶಿವಾಜಿ ಮಹಾರಾಜರು ಒಬ್ಬರು. ಅವರ ಧೈರ್ಯಶಾಲಿ ಬುದ್ಧಿವಂತಿಕೆಯಿಂದ ಮರಾಠಾ ಸಾಮ್ರಾಜ್ಯ ಕಟ್ಟಿದವರು ಶಿವಾಜಿ ಮಹಾರಾಜರು. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ಸಾಗೋಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ರಾಷ್ಟೀಯ ಬಸವಸೈನ್ಯದ ಮುಖಂಡ ಶ್ರೀಕಾಂತ ಕೊಟ್ರಶೆಟ್ಟಿ, ತಾಲೂಕು ಅಧ್ಯಕ್ಷ ಸಂಜು ಬಿರಾದಾರ, ಸುನೀಲಗೌಡ ಚಿಕ್ಕೊಂಡ, ಜಟ್ಟಿಂಗರಾಯ ಮಾಲಗಾರ, ನಿಂಗಪ್ಪ ಅವಟಿ, ಮಹಾಂತೇಶ ಹೆಬ್ಬಾಳ ,ಮೀರಸಾ ಕೊರಬು ,ಪ್ರವೀಣ ಪೂಜಾರಿ, ಶಂಕರ ರಜಪೂತ ,ಬದ್ರು ಮಣೂರ, ವಿವೇಕ ಜೋಗಿ, ಮಂಜುನಾಥ ಚಿಕ್ಕೊಂಡ ,ಬಸವರಾಜ ಗೊಳಸಂಗಿ, ನಿಂಗಪ್ಪ ಕುಳಗೇರಿ ಸೇರಿದಂತೆ ಇತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

