Author: editor.udayarashmi@gmail.com

ಸಿಂದಗಿ: ಗ್ರಂಥಾಲಯ ಎಂದರೆ ಮಹಾವಿದ್ಯಾಲಯದ ಹೃದಯ ಭಾಗವಿದ್ದಂತೆ. ಪ್ರಸ್ತುತ ಗ್ರಂಥಾಲಯವು ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಓದುಗರನ್ನು ಪ್ರೇರಣೆ ನೀಡುವಂತಿದೆ ಎಂದು ತಹಶೀಲ್ದಾರ್ ಪ್ರದೀಪಕುಮಾರ ಹಿರೇಮಠ ಮೆಚ್ಚುಗೆ ವ್ಯಕ್ತಪಡಿಸಿದರು.ಪಟ್ಟಣದ ಶ್ರೀಪದ್ಮರಾಜ ವಿದ್ಯಾವರ್ಧಕ ಸಂಸ್ಥೆ ಸಾರಂಗಮಠದ ಜಿ.ಪಿ.ಪೋರವಾಲ ಕಲಾ,ವಾಣಿಜ್ಯ ಹಾಗೂ ವ್ಹಿ.ವ್ಹಿ.ಸಾಲಿಮಠ ವಿಜ್ಞಾನ ಮಹಾವಿದ್ಯಾಲಯದಲ್ಲಿ ನೂತನವಾಗಿ ನಿರ್ಮಾಣವಾದ ಕೇಂದ್ರ ಗ್ರಂಥಾಲಯವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗ್ರಂಥಾಲಯದಲ್ಲಿ ದಿನ ಪತ್ರಿಕೆ, ಮಾಸ ಪತ್ರಿಕೆ, ನಿಯತಕಾಲಿಕೆಗಳು, ಕಂಪ್ಯೂಟರ್‌ಗಳಿದ್ದು ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.ಈ ವೇಳೆ ಮಹಾವಿದ್ಯಾಲಯದ ಪ್ರಾಚಾರ್ಯ ಡಿ.ಎಂ.ಪಾಟೀಲ, ಗ್ರಂಥಪಾಲಕಿ ಡಾಶ್ರೀದೇವಿ ಸಿಂದಗಿ,ಐಕ್ಯೂಎಸಿ ಸಂಯೋಜಕ ಡಾ.ರವಿ ಲಮಾಣಿ, ಎಸ್.ಎಸ್.ಮುತ್ತಿನಪೆಂಡಿಮಠ, ದೈಹಿಕ ನಿರ್ದೇಶಕ ರವಿ ಗೋಲಾ, ಡಾ.ಪ್ರಕಾಶ್ ರಾಠೋಡ ಬಸವರಾಜ ಮಹಾಜನಶೆಟ್ಟಿ, ಬಿ.ಆರ್. ಅರಳಗುಂಡಗಿ, ಸಚಿನ್ ಕೊಪ್ಪಾ ಸೇರಿದಂತೆ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳಿದ್ದರು.

Read More

ಸಿಂದಗಿ: ಗಬಸಾವಳಗಿ ಗ್ರಾಮವನ್ನು ಆಲಮೇಲ ತಾಲೂಕಿಗೆ ಸೇರ್ಪಡೆ ಮಾಡಿರುವುದು ಅನ್ಯಾಯವಾಗಿದ್ದು, ಫೆ.೨೩ರಂದು ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದು ಜೆಡಿಎಸ್ ಮುಖಂಡ ಶಿವಕುಮಾರ ಬಿರಾದಾರ ಹೇಳಿದರು.ಈ ವೇಳೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಸಿಂದಗಿ ತಾಲೂಕಿಗೆ ನಮ್ಮ ಗಬಸಾವಳಗಿ ಗ್ರಾಮವು ಹತ್ತಿರ ಮತ್ತು ಮಾರ್ಗ ಸುಲಭವಾಗಿದೆ, ಆದರೆ ಆಲಮೇಲ ಪಟ್ಟಣಕ್ಕೆ ಹೋಗಬೇಕಾದರೆ ಸರಿಯಾದ ಮಾರ್ಗವಿಲ್ಲ ಮತ್ತು ಸಿಂದಗಿಗೆ ಬಂದೇ ಹೋಗಬೇಕಾಗುತ್ತದೆ. ಆದಕಾರಣ ನಮ್ಮ ಗ್ರಾಮವನ್ನು ಸಿಂದಗಿ ತಾಲೂಕಿಗೆ ಮರು ಸೇರ್ಪಡೆ ಮಾಡಬೇಕು ಎಂದು ಸಿಂದಗಿ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ ವೃತ್ತದಿಂದ ಬೈಕ್ ರ‍್ಯಾಲಿ ಮೂಲಕ ತಹಶೀಲ್ದಾರ್ ಕಛೇರಿ ತಲುಪಿ ಮನವಿ ಪತ್ರ ಸಲ್ಲಿಸಲಾಗುವುದು ಎಂದು ಹೇಳಿದರು.ಈ ವೇಳೆ ಹೋರಾಟ ಸಮಿತಿಯ ಅದ್ಯಕ್ಷ ಪ್ರಭುಗೌಡ ಬಿರಾದರ, ಅಪ್ಪಾಸಾಹೇಬಗೌಡ ಬಿರಾದರ ಸೇರಿದಂತೆ ಹಲವರಿದ್ದರು.

Read More

ಸಿಂದಗಿ: ಎ.೬ ರಂದು ಪಟ್ಟಣದ ಹೆಚ್.ಜಿ.ಪಪೂ ಮಹಾವಿದ್ಯಾಲಯದ ಮೈದಾನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಸಿಂದಗಿ ಹಮ್ಮಿಕೊಳ್ಳುತ್ತಿರುವ ೬ನೆಯ ಕನ್ನಡ ಸಾಹಿತ್ಯ ಸಮ್ಮೇಳನವು ಎಲ್ಲ ಕನ್ನಡ ಮನಸ್ಸುಗಳು ಕೂಡಿಕೊಂಡು ನಾಡದೇವಿಯ ಮೆರವಣಿಗೆಯೊಂದಿಗೆ ಅದ್ದೂರಿಯಾಗಿ ಜರುಗಿಸೋಣ ಎಂದು ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ ವಿನಂತಿಸಿದರು.ಪಟ್ಟಣದ ಬಸವ ಮಂಟಪದಲ್ಲಿ ೬ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು.ಸಮ್ಮೇಳನದ ವೇದಿಕೆ ಸಜ್ಜಾಗಿದೆ, ಬಿತ್ತಿಪತ್ರಗಳ ಅಂಟಿಸುಕೆ ನಡೆಸಿದೆ, ಅಲ್ಲದೆ ವಿವಿಧ ಬಗೆಯ ಜವಾರಿ ಊಟದ ವ್ಯವಸ್ಥೆ ನಡೆದಿದೆ. ಸುಮಂಗಲೆಯರ ಕುಂಭಮೇಳದೊಂದಿಗೆ ಸವಾಧ್ಯಕ್ಷರ ಮೆರವಣಿಗೆಗೆ ಸಾರವಾಡದ ಗೊಂಬೆ ಕುಣಿತ, ಕರಡಿ ಮಜಲು, ಲಂಬಾಣಿ ನೃತ್ಯ, ಹಲಗಿ ಕುಣಿತ ಸೇರಿದಂತೆ ಸರಕಾರಿ ಶಾಲೆಗಳ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಹಲವು ಕಲಾ ತಂಡಗಳು ಕಾರ್ಯಕ್ರಮದಲ್ಲಿ ಬಾಗವಹಿಸಲಿವೆ. ಕಾರಣ ಎಲ್ಲ ಸಾಹಿತ್ಯಾಭಿಮಾನಿಗಳು ಒಂದಾಗಿ ಅಕ್ಕರೆಯ ಅಕ್ಷರ ಜಾತ್ರೆಯನ್ನು ರಾಜ್ಯದಲ್ಲಿ ಮಾದರಿಯಾಗುವ ರೀತಿಯಲ್ಲಿ ಆಚರಿಸೋಣ ಎಂದರು.ಈ ವೇಳೆ ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿ ಮಾಜಿ ಅದ್ಯಕ್ಷ ಅಶೋಕ…

Read More

ಯಡ್ರಾಮಿ: ಪಟ್ಟಣಕ್ಕೆ ಸಂವಿಧಾನ ರಥ ಯಾತ್ರೆ ಫೆ.22 ರಂದು ಆಗಮಿಸುತ್ತಿದ್ದು ತಾಲೂಕಾಡಳಿತವು ಸರ್ವ ಸಿದ್ಧತೆಯಿಂದ ಭವ್ಯ ಸ್ವಾಗತ ಮಾಡುವುದರ ಮೂಲಕ ಈ ಜನ ಜಾಗೃತಿ ಕಾರ್ಯಕ್ರಮಕ್ಕೆ ಸರ್ವರೂ ಕೈಜೋಡಿಸಬೇಕೆಂದು ದಲಿತ ಸೇನೆ ಕರ್ನಾಟಕ ಸಂಘಟನೆ ತಾಲೂಕು ಅಧ್ಯಕ್ಷ ಸಂಗಮೇಶ ಗಂಗಾಕರ್ ಹಾಗೂ ಕಾರ್ಯದರ್ಶಿ ರಾಜು ಎಸ್.ಗೆಜ್ಜಿ ಮನವಿ ಮಾಡಿದ್ದಾರೆ.ಸಂವಿಧಾನದ ಪೀಠಿಕೆ ಹಾಗೂ ಸಂವಿಧಾನ ಕುರಿತು ಜನಜಾಗೃತಿ ಮೂಡಿಸುವ ಸದುದ್ದೇಶದಿಂದ ಈ ರಥ ಯಾತ್ರೆ ಕಾರ್ಯಕ್ರಮ ಸರ್ಕಾರ ಮಾಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಯಡ್ರಾಮಿ ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿಯೂ ರಥ ಯಾತ್ರೆ ಕಾರ್ಯಕ್ರಮ ನಡೆಯಲಿದ್ದು ಎಲ್ಲರೂ ಸೇರಿ ಸಂವಿಧಾನಕ್ಕೆ ಗೌರವ ನೀಡುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಲು ಕೋರಿದ್ದಾರೆ.

Read More

ತಾಳಿಕೋಟಿ: ಸಮೀಪದ ಹಿರೂರ ಗ್ರಾಮದಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಅವರು ರಚಿಸಿದ ಭಾರತದ ಸಂವಿಧಾನ ಎಲ್ಲ ಧರ್ಮದ ಜನರಿಗೂ ಸಮಾನ ಅವಕಾಶ ಹಾಗೂ ಹಕ್ಕುಗಳನ್ನು ನೀಡಿದೆ ಸವಿಧಾನದಿಂದ ಯಾರಿಗೂ ಅನ್ಯಾಯವಾಗಿಲ್ಲ ಎಂದು ಪ್ರೊ. ಬಸ ವರಾಜ ಜಾಲವಾದಿ ಹೇಳಿದರು.ಬುಧವಾರ ತಾಲೂಕಿನ ಹಿರೂರ ಗ್ರಾಮದಲ್ಲಿ ಜಿಲ್ಲಾ ಪಂಚಾಯತ ವಿಜಯಪುರ ತಾಲೂಕು ಪಂಚಾಯತ ತಾಳಿಕೋಟಿ ಹಾಗೂ ಗ್ರಾಮ ಪಂಚಾಯತಿ ಹಿರೂರು ಇವರ ಸಹಯೋಗದಲ್ಲಿ ಹಮ್ಮಿಕೊಂಡ ಸಂವಿಧಾನ ಜಾಗೃತಿ ಜಾಥಾದ ವೇದಿಕೆ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಆಗಮಿಸಿ ಅವರು ಮಾತನಾಡಿದರು. ಸಂವಿಧಾನ ಜಾರಿಗೆ ಬಂದು 75 ವರ್ಷಗಳುಗತಿಸುತ್ತಿದ್ದರೂ ನಾವು ಇಲ್ಲಿಯವರೆಗೆ ಅಂಬೇಡ್ಕರ್ ಅವರನ್ನು ತಿಳಿದುಕೊಳ್ಳಲು ವಿಫಲರಾಗಿದ್ದೇವೆ ಇದು ನಮ್ಮ ದೊಡ್ಡ ದುರಂತವಾಗಿದೆ ಅವರನ್ನು ದೇವರೆಂದು ಪೂಜಿಸುವ ಅಗತ್ಯ ಇಲ್ಲ ಅವರು ಕೊಟ್ಟು ಹೋದ ಈ ಗ್ರಂಥವನ್ನು ಸರಿಯಾಗಿ ತಿಳಿದುಕೊಳ್ಳುವ ಅಗತ್ಯವಿದೆ ಎಂದ ಅವರು, ಇದು ಇಡೀ ಜಗತ್ತಿಗೆ ಮಾದರಿಯ ಯೋಗ್ಯವಾದ ಒಂದು ಸಂವಿಧಾನವಾಗಿದೆ ಇದರಲ್ಲಿ ಎಲ್ಲರ ಹಕ್ಕುಗಳ ಕುರಿತು ಅದರಲ್ಲೂ ವಿಶೇಷವಾಗಿ ಮಹಿಳೆಯರ ಹಕ್ಕುಗಳ ಕುರಿತು…

Read More

ಆಲಮಟ್ಟಿ: ಅಜಾದ್ ಹಿಂದ್ ಎಂಬ ಸೈನ್ಯವನ್ನು ಕಟ್ಟಿ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ನೇತಾಜಿ ಅವರು ನಮಗೆ ಸದಾಕಾಲ ಸ್ಮರಣೀಯವಾಗಿ ನಿಲ್ಲುತ್ತಾರೆ ಎಂದು ಶಿಕ್ಷಕ ಸಾಹಿತಿ ಬಸವರಾಜ ಹಂಚಲಿ ಹೇಳಿದರುಇಲ್ಲಿಯ ಜವಾಹರ ನವೋದಯ ವಿದ್ಯಾಲಯಲ್ಲಿ, ಬಸವನಬಾಗೇವಾಡಿ ತಾಲ್ಲೂಕಿನ ಹಂಗರಗಿ ಗ್ರಾಮದ ಶ್ರೀ ಚನ್ನಬಸವೇಶ್ವರ ಪ್ರತಿಷ್ಠಾನ ಹಮ್ಮಿಕೊಂಡ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ನೆನಹು ಕಾರ್ಯಕ್ರಮದಲ್ಲಿ ಮಾತನಾಡಿದರು.ನಮಗೆ ಸಿನಿಮಾ ನಟರು ನಿಜವಾದ ಹೀರೋಗಳಾಗದೇ ದೇಶಕ್ಕಾಗಿ ತ್ಯಾಗ ಮಾಡಿದ ಭಗತ್ ಸಿಂಗ್ ಮಹಾತ್ಮ ಗಾಂಧಿ ವಲ್ಲಭಾಯಿ ಪಟೇಲ್ ವೀರ ಸಾವರ್ಕರ್ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಆದರ್ಶರಾಗಬೇಕೆಂದು ಅಭಿಪ್ರಾಯಪಟ್ಟರು ನಮಗೆ ಸ್ವಾತಂತ್ರ್ಯ ಸುಮ್ಮನೆ ಬಂದಿಲ್ಲ ಅದನ್ನು ಪಡೆಯಲಾಗಿದೆ ಎನ್ನುವುದನ್ನು ನಾವೆಲ್ಲ ತಿಳಿದುಕೊಳ್ಳಬೇಕಾಗಿದೆ ಎಂದು ಹೇಳಿದರುಕಾರ್ಯಕ್ರಮವನ್ನು ಉದ್ಘಾಟಿಸಿದ ಪ್ರೊ ಪಿಎಲ್ ಹಿರೇಮಠ ಮಾತನಾಡಿದರು.ಜವಾಹರ ನವೋದಯ ವಿದ್ಯಾಲಯದ ಉಪಪಾಚಾರ್ಯ ಜ್ಞಾನೇಶ್ವರ್ ತಾವಡೆ, ಮಹಾಂತೇಶ ಆದಿಗೊಂಡ, ಪ್ರತಿಷ್ಠಾನದ ಕಾರ್ಯದರ್ಶಿ ಮುತ್ತು ಪತ್ತಾರ ಮಾತನಾಡಿದರು.ಚನ್ನಬಸವೇಶ್ವರ ಪ್ರತಿಷ್ಠಾವ ಅಧ್ಯಕ್ಷರಾದ ವಿವೇಕಾನಂದ ಕಲ್ಯಾಣ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಬಸವನಬಾಗೇವಾಡಿ ಕದಳಿ ವೇದಿಕೆ…

Read More

ಬಸವನಬಾಗೇವಾಡಿ: ತಾಲೂಕಿನ ಅರಳಿಚಂಡಿ ಗ್ರಾಮದಲ್ಲಿ ಫೆ.22 ರಂದು ಬೆಳಗ್ಗೆ 9 ಗಂಟೆಗೆ ಮಹರ್ಷಿ ವಾಲ್ಮೀಕಿ ಮೂರ್ತಿ ಪ್ರತಿಷ್ಠಾಪನೆ ಹಾಗೂ ತಾಲೂಕು ಮಟ್ಟದ ವಾಲ್ಮೀಕಿ ಸಮಾವೇಶ ಹಮ್ಮಿಕೊಳ್ಳಲಾಗಿದೆ. ದಿವ್ಯ ಸಾನಿಧ್ಯವನ್ನು ರಾಜನಳ್ಳಿ ವಾಲ್ಮೀಕಿ ಗುರುಪೀಠದ ಜಗದ್ಗುರು ಮಹರ್ಷಿ ವಾಲ್ಮೀಕಿ ಪ್ರಸನ್ನಾನಂದ ಪುರಿ ಸ್ವಾಮೀಜಿ, ಸಾನಿಧ್ಯವನ್ನು ಇಂಗಳೇಶ್ವರದ ಚನ್ನಬಸವ ಸ್ವಾಮೀಜಿ, ಬಸವನಬಾಗೇವಾಡಿಯ ಸಿದ್ದಲಿಂಗ ಸ್ವಾಮೀಜಿ, ಅರಳಿಚಂಡಿಯ ಅವ್ಬಪ್ಪ ಮುತ್ಯಾ, ಪರಮಾನಂದ ಮಹಾರಾಜರು, ರಾಜನಾಳದ ಹುಚ್ಚಪ್ಪ ಮುತ್ಯಾ ವಹಿಸುವರು. ಅಧ್ಯಕ್ಷತೆಯನ್ನು ಸಚಿವ ಶಿವಾನಂದ ಪಾಟೀಲ ವಹಿಸುವರು. ಮಾಜಿ ಸಚಿವ ವಿ.ಎಸ್. ಉಗ್ರಪ್ಪ ಉದ್ಘಾಟಿಸುವರು. ಮಾಜಿ ಸಚಿವ ಬಿ.ರಾಮಲು ಭಾವಚಿತ್ತಕ್ಕೆ ಪುಷ್ಪಾರ್ಚನೆ ನೆರವೇರಿಸುವರು. ಮಾಜಿ ಸಚಿವ ನರಸಿಂಹನಾಯಕ ಜ್ಯೋತಿ ಬೆಳಗಿಸುವರು. ಮುಖ್ಯ. ಅತಿಥಿಗಳಾಗಿ ಸಂಸದ ರಮೇಶ ಜಿಗಜಿಣಗಿ, ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ, ಜೆಡಿಎಸ್ ಧುರೀಣ ಅಪ್ಪುಗೌಡ ಪಾಟೀಲ, ಸಹಕಾರ ಮಹಾಮಂಡಳ ನಿರ್ದೇಶಕ ಐ.ಸಿ.ಪಟ್ಟಣಶೆಟ್ಟಿ, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಸುರೇಶ ಹಾರಿವಾಳ, ಪಿಕೆಪಿಎಸ್ ಅಧ್ಯಕ್ಷ ಸಂಗನಗೌಡ ಚಿಕ್ಕೊಂಡ, ಇಂಗಳೇಶ್ವರ ಗ್ರಾಪಂ ಅಧ್ಯಕ್ಷ ಬನ್ನೆಪ್ಪ ಡೋಣೂರ, ವಾಲ್ಮೀಕಿ ಗುರುಪೀಠದ ಧರ್ಮದರ್ಶಿ…

Read More

ಬಸವನಬಾಗೇವಾಡಿ: ಮಗುವಿನ ಬೆಳವಣಿಗೆಯಲ್ಲಿ ತಾಯಿ ಪಾತ್ರ ಬಹುಮುಖ್ಯವಾಗಿದೆ. ತಾಯಿ ಮನಸ್ಸು ಮಾಡಿದರೆ ಮಗು ಇಡೀ ಜಗತ್ತನ್ನು ಬೆಳಗಬಲ್ಲ ವ್ಯಕ್ತಿಯಾಗಿ ರೂಪಿಸಬಹುದು ಎಂದು ಶಿಕ್ಷಕ ಅಶೋಕ ಹಂಚಲಿ ಹೇಳಿದರು.ಪಟ್ಟಣದ ನಂದಿ ಶಿಕ್ಷಣ ಸಂಸ್ಥೆಯ ನಂದಿ ಪ್ರಾಥಮಿಕ ಮತ್ತು ಪ್ರೌಢಶಾಲೆ ಮತ್ತು ನಂದಿ ಸಂಸ್ಕ್ರತ ಪಾಠಶಾಲೆಯ ಶಾಲಾ ವಾರ್ಷಿಕೋತ್ಸವದಂಗವಾಗಿ ಸೋಮವಾರ ಸಂಜೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,ಮಕ್ಕಳು ಹೆಚ್ಚು ಅಂಕ ಪಡೆಯಬೇಕೆಂಬ ವಿಷಯ ಜೋತು ಬೀಳದೇ ಅವರಿಗೆ ಸಂಸ್ಕಾರಯುತ ಶಿಕ್ಷಣ ಸಿಗುವಂತೆ ಮಾಡಬೇಕು. ಹೃದಯದಲ್ಲಿ ಕತ್ತಲೆ ಇರಬಾರದು. ಜ್ಞಾನ-ಸಂಸ್ಕಾರ ಎಂಬ ಬೆಳಕು ಇದ್ದರೆ ಎಲ್ಲೆಡೆ ಬೆಳಗಬಲ್ಲದು. ಜನಪದ ತಾಯಂದಿರು ನೀಡಿರುವ ಮೌಲ್ಯಗಳನ್ನು ಅರಿತು ಅವುಗಳನ್ನು ಮಕ್ಕಳಿಗೆ ನೀಡಿದರೆ ಸಂಸ್ಕಾರಯುತ ಮಕ್ಕಳು ಹೊರಬರಲು ಸಾಧ್ಯ. ನಂದಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಸವರಾಜ ಪೂಜಾರಿ ಅವರು ತಮ್ಮ ನಂಬಿದ ಪೋಷಕರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ನಿರತರಾಗಿದ್ದಾರೆ. ಇವರ ಶೈಕ್ಷಣಿಕ ಕಾಳಜಿ ಶ್ಲಾಘನೀಯ. ಈ ಸಂಸ್ಥೆಯಲ್ಲಿ ಶಿಕ್ಷಣ ಪಡೆದ ಮಕ್ಕಳು ನಾಡಿನಲ್ಲಿ ಬೆಳಗುವಂತಾಗಲಿ ಎಂದರು.ಕಾರ್ಯಕ್ರಮ ಉದ್ಘಾಟಿಸಿ ಬಿಇಓ…

Read More

ಬಸವನಬಾಗೇವಾಡಿ: ಪಟ್ಟಣದ ಪುರಸಭೆ ಆಡಳಿತಾಧಿಕಾರಿ, ಉಪವಿಭಾಗಾಧಿಕಾರಿ ಶ್ವೇತಾ ಮೋಹನ ಬೀಡಿಕರ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ವಿಜಯಪುರದಲ್ಲಿ ನಡೆದ ಬಜೆಟ್ ಮಂಡನೆಯ ಸಭೆಯಲ್ಲಿ ೨೦೨೪-೨೫ ನೇ ಸಾಲಿನ ಪುರಸಭೆಯ ಆಯವ್ಯಯ ಅಂದಾಜು ಪತ್ರಿಕೆಗೆ ಅನುಮೋದನೆ ನೀಡುವುದರೊಂದಿಗೆ ರೂ.೪.೨೪ ಲಕ್ಷ ಉಳಿತಾಯ ಬಜೆಟ್ ಮಂಡಿಸಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಎಚ್.ಎಸ್.ಚಿತ್ತರಗಿ ತಿಳಿಸಿದ್ದಾರೆ.ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ವಿವಿಧ ಮೂಲಗಳಿಂದ ಪುರಸಭೆಗೆ ೩೫ ಕೋಟಿ,೫೮ ಲಕ್ಷ, ೬೪ ಸಾವಿರ ರೂಪಾಯಿ ಆದಾಯ ನಿರೀಕ್ಷಿಸಲಾಗಿದೆ. ೩೫ ಕೋಟಿ, ೫೪ಲಕ್ಷ, ೪೦ ಸಾವಿರ ರೂಪಾಯಿ ವಿವಿಧ ಖರ್ಚುಗಳನ್ನು ನಿರೀಕ್ಷಿಸಲಾಗಿದೆ. ಆಸ್ತಿ ತೆರಿಗೆಯಿಂದ ರೂ. ೧೧೮.೧೨ ಲಕ್ಷ, ನೀರಿನ ಶುಲ್ಕದಿಂದ ರೂ.೮೩.೫೧ ಲಕ್ಷ, ವಾಣಿಜ್ಯ ಮಳಿಗೆಯಿಂದ ರೂ.೧೫೩.೨೮ ಲಕ್ಷ, ಎಸ್ಎಫ್ಸಿಯಿಂದ ರೂ.೪೬.೪೨ ಲಕ್ಷ, ೧೫ ನೇ ಹಣಕಾಸಿನಿಂದ ರೂ.೩೫೦ ಲಕ್ಷ ಆದಾಯ ನಿರೀಕ್ಷಿಸಲಾಗಿದೆ. ರಸ್ತೆ ಮತ್ತು ಚರಂಡಿ ದುರಸ್ತಿಗೆ ರೂ. ರೂ.೫೦ ಲಕ್ಷ, ಘನತ್ಯಾಜ್ಯ ನಿರ್ವಹಣೆಗೆ ರೂ. ೭೫ ಲಕ್ಷ, ಎಸ್ಎಫ್ಸಿ ಪ.ಜಾತಿ, ಪ.ಪಂಗಡದ ಅಭಿವೃದ್ಧಿ ಕಾರ್ಯಗಳಿಗೆ…

Read More

ದೇವರಹಿಪ್ಪರಗಿ: ದೇವರಹಿಪ್ಪರಗಿ ಮತಕ್ಷೇತ್ರದ ಬಿಜೆಪಿ ಹಿರಿಯ ಮುಖಂಡ ಪ್ರಭುಗೌಡ ಬಿರಾದಾರ (ಅಸ್ಕಿ) ಇವರು ಜಿಲ್ಲಾ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.ಈ ಹಿಂದೆಯೂ ಜಿಲ್ಲಾ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿ ಅನುಭವ ಹೊಂದಿರುವ ಪ್ರಭುಗೌಡರ ಪಕ್ಷ ಸಂಘಟನಾಶಕ್ತಿಯನ್ನು ಗುರುತಿಸಿ ಎರಡನೆಯ ಬಾರಿಗೆ ಪುನಃ ಜಿಲ್ಲಾ ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಆರ್.ಎಸ್.ಪಾಟೀಲ (ಕುಚಬಾಳ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More