ಸಿಂದಗಿ: ಗಬಸಾವಳಗಿ ಗ್ರಾಮವನ್ನು ಆಲಮೇಲ ತಾಲೂಕಿಗೆ ಸೇರ್ಪಡೆ ಮಾಡಿರುವುದು ಅನ್ಯಾಯವಾಗಿದ್ದು, ಫೆ.೨೩ರಂದು ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದು ಜೆಡಿಎಸ್ ಮುಖಂಡ ಶಿವಕುಮಾರ ಬಿರಾದಾರ ಹೇಳಿದರು.
ಈ ವೇಳೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಸಿಂದಗಿ ತಾಲೂಕಿಗೆ ನಮ್ಮ ಗಬಸಾವಳಗಿ ಗ್ರಾಮವು ಹತ್ತಿರ ಮತ್ತು ಮಾರ್ಗ ಸುಲಭವಾಗಿದೆ, ಆದರೆ ಆಲಮೇಲ ಪಟ್ಟಣಕ್ಕೆ ಹೋಗಬೇಕಾದರೆ ಸರಿಯಾದ ಮಾರ್ಗವಿಲ್ಲ ಮತ್ತು ಸಿಂದಗಿಗೆ ಬಂದೇ ಹೋಗಬೇಕಾಗುತ್ತದೆ. ಆದಕಾರಣ ನಮ್ಮ ಗ್ರಾಮವನ್ನು ಸಿಂದಗಿ ತಾಲೂಕಿಗೆ ಮರು ಸೇರ್ಪಡೆ ಮಾಡಬೇಕು ಎಂದು ಸಿಂದಗಿ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ ವೃತ್ತದಿಂದ ಬೈಕ್ ರ‍್ಯಾಲಿ ಮೂಲಕ ತಹಶೀಲ್ದಾರ್ ಕಛೇರಿ ತಲುಪಿ ಮನವಿ ಪತ್ರ ಸಲ್ಲಿಸಲಾಗುವುದು ಎಂದು ಹೇಳಿದರು.
ಈ ವೇಳೆ ಹೋರಾಟ ಸಮಿತಿಯ ಅದ್ಯಕ್ಷ ಪ್ರಭುಗೌಡ ಬಿರಾದರ, ಅಪ್ಪಾಸಾಹೇಬಗೌಡ ಬಿರಾದರ ಸೇರಿದಂತೆ ಹಲವರಿದ್ದರು.
Related Posts
Add A Comment