ಬಸವನಬಾಗೇವಾಡಿ: ಪಟ್ಟಣದ ಪುರಸಭೆ ಆಡಳಿತಾಧಿಕಾರಿ, ಉಪವಿಭಾಗಾಧಿಕಾರಿ ಶ್ವೇತಾ ಮೋಹನ ಬೀಡಿಕರ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ವಿಜಯಪುರದಲ್ಲಿ ನಡೆದ ಬಜೆಟ್ ಮಂಡನೆಯ ಸಭೆಯಲ್ಲಿ ೨೦೨೪-೨೫ ನೇ ಸಾಲಿನ ಪುರಸಭೆಯ ಆಯವ್ಯಯ ಅಂದಾಜು ಪತ್ರಿಕೆಗೆ ಅನುಮೋದನೆ ನೀಡುವುದರೊಂದಿಗೆ ರೂ.೪.೨೪ ಲಕ್ಷ ಉಳಿತಾಯ ಬಜೆಟ್ ಮಂಡಿಸಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಎಚ್.ಎಸ್.ಚಿತ್ತರಗಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ವಿವಿಧ ಮೂಲಗಳಿಂದ ಪುರಸಭೆಗೆ ೩೫ ಕೋಟಿ,೫೮ ಲಕ್ಷ, ೬೪ ಸಾವಿರ ರೂಪಾಯಿ ಆದಾಯ ನಿರೀಕ್ಷಿಸಲಾಗಿದೆ. ೩೫ ಕೋಟಿ, ೫೪ಲಕ್ಷ, ೪೦ ಸಾವಿರ ರೂಪಾಯಿ ವಿವಿಧ ಖರ್ಚುಗಳನ್ನು ನಿರೀಕ್ಷಿಸಲಾಗಿದೆ. ಆಸ್ತಿ ತೆರಿಗೆಯಿಂದ ರೂ. ೧೧೮.೧೨ ಲಕ್ಷ, ನೀರಿನ ಶುಲ್ಕದಿಂದ ರೂ.೮೩.೫೧ ಲಕ್ಷ, ವಾಣಿಜ್ಯ ಮಳಿಗೆಯಿಂದ ರೂ.೧೫೩.೨೮ ಲಕ್ಷ, ಎಸ್ಎಫ್ಸಿಯಿಂದ ರೂ.೪೬.೪೨ ಲಕ್ಷ, ೧೫ ನೇ ಹಣಕಾಸಿನಿಂದ ರೂ.೩೫೦ ಲಕ್ಷ ಆದಾಯ ನಿರೀಕ್ಷಿಸಲಾಗಿದೆ. ರಸ್ತೆ ಮತ್ತು ಚರಂಡಿ ದುರಸ್ತಿಗೆ ರೂ. ರೂ.೫೦ ಲಕ್ಷ, ಘನತ್ಯಾಜ್ಯ ನಿರ್ವಹಣೆಗೆ ರೂ. ೭೫ ಲಕ್ಷ, ಎಸ್ಎಫ್ಸಿ ಪ.ಜಾತಿ, ಪ.ಪಂಗಡದ ಅಭಿವೃದ್ಧಿ ಕಾರ್ಯಗಳಿಗೆ ರೂ. ೧೫ ಲಕ್ಷ, ನೀರು ಸರಬರಾಜು ವಿತರಣಾ ವ್ಯವಸ್ಥೆಗೆ ರೂ.೫೦ ಲಕ್ಷ ಖರ್ಚು ನಿರೀಕ್ಷಿಸಲಾಗಿದೆ. ಈ ಸಂದರ್ಭದಲ್ಲಿ ಪುರಸಭೆ ವ್ಯವಸ್ಥಾಪಕ ವಿರೇಶ ಹಟ್ಟಿ, ಕಿರಿಯ ಅಭಿಯಂತರ ಸಂತೋಷ ಗಿಡ್ಡಸಣ್ಣನವರ, ಲೆಕ್ಕಿಗ ಗುರುರಾಜ ಮಾಗಾವಿ ಇತರರು ಇದ್ದರು ಎಂದು ಮುಖ್ಯಾಧಿಕಾರಿ ಎಚ್.ಎಸ್.ಚಿತ್ತರಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
