ಸಿಂದಗಿ: ಗ್ರಂಥಾಲಯ ಎಂದರೆ ಮಹಾವಿದ್ಯಾಲಯದ ಹೃದಯ ಭಾಗವಿದ್ದಂತೆ. ಪ್ರಸ್ತುತ ಗ್ರಂಥಾಲಯವು ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಓದುಗರನ್ನು ಪ್ರೇರಣೆ ನೀಡುವಂತಿದೆ ಎಂದು ತಹಶೀಲ್ದಾರ್ ಪ್ರದೀಪಕುಮಾರ ಹಿರೇಮಠ ಮೆಚ್ಚುಗೆ ವ್ಯಕ್ತಪಡಿಸಿದರು.
ಪಟ್ಟಣದ ಶ್ರೀಪದ್ಮರಾಜ ವಿದ್ಯಾವರ್ಧಕ ಸಂಸ್ಥೆ ಸಾರಂಗಮಠದ ಜಿ.ಪಿ.ಪೋರವಾಲ ಕಲಾ,ವಾಣಿಜ್ಯ ಹಾಗೂ ವ್ಹಿ.ವ್ಹಿ.ಸಾಲಿಮಠ ವಿಜ್ಞಾನ ಮಹಾವಿದ್ಯಾಲಯದಲ್ಲಿ ನೂತನವಾಗಿ ನಿರ್ಮಾಣವಾದ ಕೇಂದ್ರ ಗ್ರಂಥಾಲಯವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗ್ರಂಥಾಲಯದಲ್ಲಿ ದಿನ ಪತ್ರಿಕೆ, ಮಾಸ ಪತ್ರಿಕೆ, ನಿಯತಕಾಲಿಕೆಗಳು, ಕಂಪ್ಯೂಟರ್‌ಗಳಿದ್ದು ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.
ಈ ವೇಳೆ ಮಹಾವಿದ್ಯಾಲಯದ ಪ್ರಾಚಾರ್ಯ ಡಿ.ಎಂ.ಪಾಟೀಲ, ಗ್ರಂಥಪಾಲಕಿ ಡಾಶ್ರೀದೇವಿ ಸಿಂದಗಿ,ಐಕ್ಯೂಎಸಿ ಸಂಯೋಜಕ ಡಾ.ರವಿ ಲಮಾಣಿ, ಎಸ್.ಎಸ್.ಮುತ್ತಿನಪೆಂಡಿಮಠ, ದೈಹಿಕ ನಿರ್ದೇಶಕ ರವಿ ಗೋಲಾ, ಡಾ.ಪ್ರಕಾಶ್ ರಾಠೋಡ ಬಸವರಾಜ ಮಹಾಜನಶೆಟ್ಟಿ, ಬಿ.ಆರ್. ಅರಳಗುಂಡಗಿ, ಸಚಿನ್ ಕೊಪ್ಪಾ ಸೇರಿದಂತೆ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

