ಸಿಂದಗಿ: ಎ.೬ ರಂದು ಪಟ್ಟಣದ ಹೆಚ್.ಜಿ.ಪಪೂ ಮಹಾವಿದ್ಯಾಲಯದ ಮೈದಾನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಸಿಂದಗಿ ಹಮ್ಮಿಕೊಳ್ಳುತ್ತಿರುವ ೬ನೆಯ ಕನ್ನಡ ಸಾಹಿತ್ಯ ಸಮ್ಮೇಳನವು ಎಲ್ಲ ಕನ್ನಡ ಮನಸ್ಸುಗಳು ಕೂಡಿಕೊಂಡು ನಾಡದೇವಿಯ ಮೆರವಣಿಗೆಯೊಂದಿಗೆ ಅದ್ದೂರಿಯಾಗಿ ಜರುಗಿಸೋಣ ಎಂದು ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ ವಿನಂತಿಸಿದರು.
ಪಟ್ಟಣದ ಬಸವ ಮಂಟಪದಲ್ಲಿ ೬ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಸಮ್ಮೇಳನದ ವೇದಿಕೆ ಸಜ್ಜಾಗಿದೆ, ಬಿತ್ತಿಪತ್ರಗಳ ಅಂಟಿಸುಕೆ ನಡೆಸಿದೆ, ಅಲ್ಲದೆ ವಿವಿಧ ಬಗೆಯ ಜವಾರಿ ಊಟದ ವ್ಯವಸ್ಥೆ ನಡೆದಿದೆ. ಸುಮಂಗಲೆಯರ ಕುಂಭಮೇಳದೊಂದಿಗೆ ಸವಾಧ್ಯಕ್ಷರ ಮೆರವಣಿಗೆಗೆ ಸಾರವಾಡದ ಗೊಂಬೆ ಕುಣಿತ, ಕರಡಿ ಮಜಲು, ಲಂಬಾಣಿ ನೃತ್ಯ, ಹಲಗಿ ಕುಣಿತ ಸೇರಿದಂತೆ ಸರಕಾರಿ ಶಾಲೆಗಳ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಹಲವು ಕಲಾ ತಂಡಗಳು ಕಾರ್ಯಕ್ರಮದಲ್ಲಿ ಬಾಗವಹಿಸಲಿವೆ. ಕಾರಣ ಎಲ್ಲ ಸಾಹಿತ್ಯಾಭಿಮಾನಿಗಳು ಒಂದಾಗಿ ಅಕ್ಕರೆಯ ಅಕ್ಷರ ಜಾತ್ರೆಯನ್ನು ರಾಜ್ಯದಲ್ಲಿ ಮಾದರಿಯಾಗುವ ರೀತಿಯಲ್ಲಿ ಆಚರಿಸೋಣ ಎಂದರು.
ಈ ವೇಳೆ ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿ ಮಾಜಿ ಅದ್ಯಕ್ಷ ಅಶೋಕ ಅಲ್ಲಾಪುರ ಮಾತನಾಡಿದರು.
ಕನ್ನಡ ಸಾಹಿತ್ಯ ಪರಿಷತ್ತು ಗೌರವಾಧ್ಯಕ್ಷ ಮಹಾಂತೇಶ ಪಟ್ಟಣಶೆಟ್ಟಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಗುರುದೇವಾಶ್ರಮದ ಶಾಂತಗಂಗಾಧರ ಸ್ವಾಮಿಗಳು, ಕಸಾಪ ತಾಲೂಕಾದ್ಯಕ್ಷ ಶಿವಾನಂದ ಬಡಾನೂರ, ಮಾಜಿ ತಾಲೂಕಾದ್ಯಕ್ಷ ಚಂದ್ರಶೇಖರ ದೇವರಡ್ಡಿ, ಸಿದ್ದಲಿಂಗ ಚೌಧರಿ, ಶಿವಪ್ಪಗೌಡ ಬಿರಾದಾರ, ಎಂ.ಎ.ಖತೀಬ, ಶೋಭಾ ಚಿಗರಿ, ಭೀಮು ವಾಲೀಕಾರ, ಸುನಂದಾ ಯಂಪೂರೆ, ಮಹಾನಂದಾ ಬಮ್ಮಣ್ಣಿ, ಮಹಾದೇವಪ್ಪ ಗಾಯಕವಾಡ, ಅಂಬಿಕಾ ಪಾಟೀಲ, ಆನಂದ ಶಾಬಾದಿ, ರಮೇಶ ಪೂಜಾರಿ, ಸಾಯಬಣ್ಣ ದೇವರಮನಿ, ಪಂಡಿತ ಯಂಪೂರೆ, ಜಯಶ್ರೀ ಹದನೂರ, ಪ್ರತಿಬಾ ಚಳ್ಳಗಿ, ಶರಣಮ್ಮ ನಾಯಕ, ಡಾ.ಪ್ರಕಾಶ ಮೂಡಲಗಿ ರಾಗರಂಜನಿ, ಅಣಾರಾಯ ವಾಲೀಕಾರ ಸೇರಿದಂತೆ ಅನೇಕರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

