ಆಲಮಟ್ಟಿ: ಅಜಾದ್ ಹಿಂದ್ ಎಂಬ ಸೈನ್ಯವನ್ನು ಕಟ್ಟಿ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ನೇತಾಜಿ ಅವರು ನಮಗೆ ಸದಾಕಾಲ ಸ್ಮರಣೀಯವಾಗಿ ನಿಲ್ಲುತ್ತಾರೆ ಎಂದು ಶಿಕ್ಷಕ ಸಾಹಿತಿ ಬಸವರಾಜ ಹಂಚಲಿ ಹೇಳಿದರು
ಇಲ್ಲಿಯ ಜವಾಹರ ನವೋದಯ ವಿದ್ಯಾಲಯಲ್ಲಿ, ಬಸವನಬಾಗೇವಾಡಿ ತಾಲ್ಲೂಕಿನ ಹಂಗರಗಿ ಗ್ರಾಮದ ಶ್ರೀ ಚನ್ನಬಸವೇಶ್ವರ ಪ್ರತಿಷ್ಠಾನ ಹಮ್ಮಿಕೊಂಡ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ನೆನಹು ಕಾರ್ಯಕ್ರಮದಲ್ಲಿ ಮಾತನಾಡಿದರು.
ನಮಗೆ ಸಿನಿಮಾ ನಟರು ನಿಜವಾದ ಹೀರೋಗಳಾಗದೇ ದೇಶಕ್ಕಾಗಿ ತ್ಯಾಗ ಮಾಡಿದ ಭಗತ್ ಸಿಂಗ್ ಮಹಾತ್ಮ ಗಾಂಧಿ ವಲ್ಲಭಾಯಿ ಪಟೇಲ್ ವೀರ ಸಾವರ್ಕರ್ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಆದರ್ಶರಾಗಬೇಕೆಂದು ಅಭಿಪ್ರಾಯಪಟ್ಟರು ನಮಗೆ ಸ್ವಾತಂತ್ರ್ಯ ಸುಮ್ಮನೆ ಬಂದಿಲ್ಲ ಅದನ್ನು ಪಡೆಯಲಾಗಿದೆ ಎನ್ನುವುದನ್ನು ನಾವೆಲ್ಲ ತಿಳಿದುಕೊಳ್ಳಬೇಕಾಗಿದೆ ಎಂದು ಹೇಳಿದರು
ಕಾರ್ಯಕ್ರಮವನ್ನು ಉದ್ಘಾಟಿಸಿದ ಪ್ರೊ ಪಿಎಲ್ ಹಿರೇಮಠ ಮಾತನಾಡಿದರು.
ಜವಾಹರ ನವೋದಯ ವಿದ್ಯಾಲಯದ ಉಪಪಾಚಾರ್ಯ ಜ್ಞಾನೇಶ್ವರ್ ತಾವಡೆ, ಮಹಾಂತೇಶ ಆದಿಗೊಂಡ, ಪ್ರತಿಷ್ಠಾನದ ಕಾರ್ಯದರ್ಶಿ ಮುತ್ತು ಪತ್ತಾರ ಮಾತನಾಡಿದರು.
ಚನ್ನಬಸವೇಶ್ವರ ಪ್ರತಿಷ್ಠಾವ ಅಧ್ಯಕ್ಷರಾದ ವಿವೇಕಾನಂದ ಕಲ್ಯಾಣ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಬಸವನಬಾಗೇವಾಡಿ ಕದಳಿ ವೇದಿಕೆ ಅಧ್ಯಕ್ಷ ಸಾವಿತ್ರಿ ಕಲ್ಯಾಣಶೆಟ್ಟಿ, ಆಲಮಟ್ಟಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಕವಿತಾ ಬಡಿಗೇರ, ಗುತ್ತಿಗೆದಾರ ಹುಸೇನ್ ಒಂಟಿ, ಶ್ರೀಶೈಲ ಸಿರುಗುಪ್ಪಿ ಇದ್ದರು. ಡಾ ಮಾಹಾದೇವ ಹೂಗಾರ್ ಡಾ. ಬಸವರಾಜ ಹಡಪದ, ರಶ್ಮಿ ಪಾಟೀಲ್ ಅವರನ್ನು ಸನ್ಮಾನಿಸಲಾಯಿತು.
Subscribe to Updates
Get the latest creative news from FooBar about art, design and business.
Related Posts
Add A Comment

