Author: editor.udayarashmi@gmail.com

ಗೋಲಗೇರಿಯ ಸರಕಾರಿ ಕನ್ನಡ ಹೆಣ್ಣುಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ, ಸಾಹಿತಿ, ವ್ಯಂಗ್ಯಚಿತ್ರಕಾರ ಶರಣು ಚಟ್ಟಿ ಅವರಿಗೆ ಸಿಂದಗಿಯ ಎಚ್.ಜಿ.ಮಹಾವಿದ್ಯಾಲಯದಲ್ಲಿ ನಡೆದ ಆರನೇ ಸಿಂದಗಿ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸುವರ್ಣ ಕರ್ನಾಟಕ ಗೌರವ ಪುರಸ್ಕಾರ ಪ್ರದಾನ ಮಾಡಲಾಯಿತು.ಈ ಸಂದರ್ಭದಲ್ಲಿ ಆಲಮೇಲ ವಿರಕ್ತಮಠದ ಜಗದೇವ ಮಲ್ಲಿಬೊಮ್ಮಯ್ಯ ಸ್ವಾಮೀಜಿ, ಸಿಂದಗಿಯ ಶಾಂತಗಂಗಾಧರ ಸ್ವಾಮೀಜಿ, ಸಮ್ಮೇಳನದ ಸರ್ವಾಧ್ಯಕ್ಷ ರಾ.ಶಿ.ವಾಡೇದ, ಮಕ್ಕಳ ಸಾಹಿತಿ ಹ.ಮ.ಪೂಜಾರ, ಕ.ಸಾ.ಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ, ತಾಲೂಕಾಧ್ಯಕ್ಷ ಶಿವಾನಂದ ಬಡಾನೂರ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.ಶಿಕ್ಷಕರ ಈ ಸಾಧನೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಆರೀಫ್ ಬಿರಾದಾರ, ಕ್ಷೇತ್ರ ಸಮನ್ವಯಾಧಿಕಾರಿ ಐ.ಎಸ್.ಟಕ್ಕೆ, ಗೋಲಗೇರಿ ಕ್ಲಸ್ಟರ್ ಸಿ.ಆರ್.ಪಿ ರಾಜಶೇಖರ್ ಬಿರಾದಾರ, ಯಲಗೋಡ ಕ್ಲಸ್ಟರ್ ಸಿ.ಆರ್.ಪಿ. ವೀರೇಶ್ ಕರಕಳ್ಳಿಮಠ, ಸಾಹಿತಿ ಕೆ.ಜಿ.ಹತ್ತಳ್ಳಿ, ಆರಕ್ಷಕ ಸಾಹಿತಿ ಮೌಲಾಲಿ ಆಲಗೂರ, ಮುಖ್ಯ ಶಿಕ್ಷಕ ಆರ್.ಜಿ.ಬನಸಿ, ಪೂರ್ಣಿಮಾ ಸಜ್ಜನ, ಸಂಗೀತಾ ಡಾಲೆ, ಎಂ.ಎಸ್.ಮಣೂರ, ಎಸ್.ಬಿ.ಕನ್ನೊಳ್ಳಿ, ಸಿ.ಎಸ್.ಹಿರೇಮಠ, ಬಸವರಾಜ ಮಾಳೇಗಾರ ಆರ್.ಎಸ್.ಕರ್ನಾಳ, ಮಡಿವಾಳ ನಾಯ್ಕೋಡಿ, ಸಂತೋಷ ನಂದರಗಿ, ಬಿ.ಐ.ಬನ್ನೆ ಸೇರಿದಂತೆ ಸಹೋದ್ಯೋಗಿ ಮಿತ್ರರು…

Read More

ಸಂಸದ ಉಮೇಶ ಜಾಧವ ಆಪ್ತನ ಹತ್ಯೆ | ಕಣ್ಣಿಗೆ ಖಾರದ ಪುಡಿ ಹಾಕಿ ಕೊಚ್ಚಿ ಕೊಲೆ | ಜೊತೆಗಿದ್ದವರಿಂದಲೇ ಹತ್ಯೆ ಶಂಕೆ ಅಫಜಲಪುರ: ಕಲಬುರಗಿ ಸಂಸದ ಡಾ. ಉಮೇಶ ಜಾಧವ ಆಪ್ತವಲಯದಲ್ಲಿದ್ದ ಯುವ ಮುಖಂಡ ಗಿರೀಶ ಚಕ್ರ(೩೧) ಬರ್ಬರವಾಗಿ ಹತ್ಯೆಯಾಗಿದ್ದಾರೆ.ಘಟನೆ ಕುರಿತು ಮೃತ ಗಿರೀಶಬಾಬು ಚಕ್ರ ಸಹೋದರ ಮಲ್ಲಣ್ಣ ಚಕ್ರ(೫೦) ದೇವಲ ಗಾಣಗಾಪೂರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಗುರುವಾರ ರಾತ್ರಿ ಸಾಗನೂರ ಗ್ರಾಮದಲ್ಲಿ ಗಿರೀಶಬಾಬು ಗೆಳೆಯ ಸಚೀನ ಶರಣಪ್ಪ ಕಿರಸಾವಳಗಿ ಮತ್ತು ಮೂರು ಜನ ಸಹಚರರು ಗಿರೀಶ ಚಕ್ರ ಅವರಿಗೆ ಶಾಲು ಹೊದಿಸಿ ಹೂಹಾರ ಹಾಕಿ ಸನ್ಮಾನಿಸಿ ಅಭಿನಂದಿಸಿದ್ದಲ್ಲದೆ ಬಿಎಸ್‌ಎನ್‌ಎಲ್ ಸಲಹಾ ಸಮಿತಿ ಸದಸ್ಯರಾಗಿ ಆಯ್ಕೆಯಾಗಿದ್ದಕ್ಕೆ ಪಾರ್ಟಿ ಕೋಡುವಂತೆ ಕೇಳಿದಾಗ ಎಲ್ಲರೂ ಕೂಡಿಕೊಂಡು ಸಾಗನೂರ ಗ್ರಾಮದ ಸಂತೋಷ ಗಡಗಿ ಎಂಬಾತನ ಜಮೀನಿನಲ್ಲಿ ಪಾರ್ಟಿ ಮಾಡಲು ಸಿದ್ದತೆ ಮಾಡಿಕೊಂಡಿದ್ದಾರೆ. ಈ ವೇಳೆ ಸಚೀನ ಕಿರಸಾವಳಗಿ ಬೀಯರ್ ತರಿಸುವಂತೆ ಗಿರೀಶನಿಗೆ ಕೇಳಿಕೊಂಡಾಗ ಗಿರೀಶ ತನ್ನ ಅಳಿಯನನ್ನು ಕಾರಿನಲ್ಲಿ ಬೀಯರ್ ತರಲು ಕಳುಹಿಸಿದ್ದಾರೆ. ಈ ಸಮಯದಲ್ಲೇ…

Read More

ಅಫಜಲಪುರ: ಪಿಯುಸಿ ಪರೀಕ್ಷೆ ಆರಂಭವಾಗಿದ್ದು ಮೊದಲ ದಿನದ ಪರೀಕ್ಷೆ ಸರಾಗವಾಗಿ ನಡೆದವು. ತಾಲೂಕಿನ ೪ ಪರೀಕ್ಷಾ ಕೇಂದ್ರಗಳಲ್ಲಿ ೨೪೫೧ವಿದ್ಯಾರ್ಥಿಗಳ ಪೈಕಿ ೨೩೭೪ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ೧೧೮ ವಿದ್ಯಾರ್ಥಿಗಳು ಗೈರಾಗಿದ್ದಾರೆ.ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ೭೭೨ ವಿದ್ಯಾರ್ಥಿಗಳ ಪೈಕಿ ೭೪೩ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ೨೯ ವಿದ್ಯಾರ್ಥಿಗಳು ಗೈರಾಗಿದ್ದಾರೆ ಎಂದು ಪರೀಕ್ಷಾಧಿಕಾರಿ ಗುರುಲಿಂಗಯ್ಯ ಸಾಲಿಮಠ ತಿಳಿಸಿದ್ದಾರೆ. ತಾಲೂಕಿನ ಕರ್ಜಗಿ ಪಿಯು ಕಾಲೇಜಿನಲ್ಲಿ ೫೬೦ ವಿದ್ಯಾರ್ಥಿಗಳ ಪೈಕಿ ೫೨೯ ವಿದ್ಯಾರ್ಥಿಗಳು ಪರೀಕ್ಷರೆ ಬರೆದರೆ ೩೧ ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ಪರೀಕ್ಷಾಧಿಕಾರಿ ಸಂಜಯ ಪಾಟೀಲ್ ತಿಳಿಸಿದ್ದಾರೆ. ಪಟ್ಟಣದ ಬಸವರಾಜ ಪಾಟೀಲ್ ಸೇಡಂ ಕಾಲೇಜಿನಲ್ಲಿ ೩೫೦ ವಿದ್ಯಾರ್ಥಿಗಳ ಪೈಕಿ ೩೩೩ ವಿದ್ಯಾರ್ಥಿಗಳು ಪರೀಕ್ಷೆ ಬರೆದರೆ ೧೭ ವಿದ್ಯಾರ್ಥಿಗಳು ಗೈರಾಗಿದ್ದಾರೆ. ದಯಾನಂದ ಬಂದರವಾಡ ತಿಳಿಸಿದ್ದಾರೆ. ಮಹಾಂತಮ್ಮ ಪಾಟೀಲ್ ಪಿಯು ಕಾಲೇಜಿನಲ್ಲಿ ೭೬೧ ವಿದ್ಯಾರ್ಥಿಗಳ ಪೈಕಿ ೭೨೮ ವಿದ್ಯಾರ್ಥಿಗಳು ಪರೀಕ್ಷೆ ಬರೆದರೆ ೪೧ ವಿದ್ಯಾರ್ಥಿಗಳು ಗೈರಾಗಿದ್ದಾರೆ ಎಂದು ಪರೀಕ್ಷಾಧಿಕಾರಿ ಸುರೇಶ ಗಣಿಹಾರ ತಿಳಿಸಿದ್ದಾರೆ.

Read More

ಕಲಬುರ್ಗಿ ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷ ನಿತಿನ್ ಗುತ್ತೇದಾರ ಆರೋಪ ಅಫಜಲಪುರ: ಶಾಸಕ ಎಂ.ವೈ ಪಾಟೀಲ್ ಅವರು ಹಿರಿಯರಿದ್ದಾರೆ, ಅವರಿಗೆ ನಾನು ಬಹಳಷ್ಟು ಗೌರವ ಕೊಡುತ್ತೇನೆ. ಆದರೆ ಅವರು ಶಾಸಕರಾಗಿಯೂ ತಮ್ಮ ಅಧಿಕಾರ ಚಲಾಯಿಸಲು ಸಾಧ್ಯವಾಗುತ್ತಿಲ್ಲ, ಮಗನ ಆರ್ಭಟದ ಮುಂದೆ ಶಾಸಕರ ಆಟ ನಡೆಯುತ್ತಿಲ್ಲ ಹೀಗಾಗಿ ತಾಲೂಕಿನಾದ್ಯಂತ ಸಮಸ್ಯೆಗಳು ತಾಂಡವವಾಡುತ್ತಿವೆ ಎಂದು ಮಾಜಿ ಜಿ.ಪಂ ಅಧ್ಯಕ್ಷ ನಿತೀನ್ ಗುತ್ತೇದಾರ ಹೇಳಿದರು.ಅವರು ತಾಲೂಕಿನ ಬಡದಾಳ ಗ್ರಾಮದಲ್ಲಿ ನಾಗರಿಕ ಹೋರಾಟ ಸಮಿತಿ ವತಿಯಿಂದ ಗ್ರಾಮದ ಸಂಪರ್ಕ ರಸ್ತೆಗಳಿಗಾಗಿ ನಡೆಯುತ್ತಿರು ಅನಿರ್ಧಿಷ್ಟ ಧರಣಿ ಸತ್ಯಾಗ್ರಹಕ್ಕೆ ಬೆಂಬಲ ವ್ಯಕ್ತ ಪಡಿಸಿ ಮಾತನಾಡುತ್ತಾ, ನಾವೆಲ್ಲರೂ ರಾಜಕೀಯವಾಗಿ ವೈರಿಗಳಾಗಿರಬಹುದು ಆದರೆ ಜನರ ಸಮಸ್ಯೆಗಳಿಗೆ ಸ್ಪಂದಿಸುವಾಗ ನಾವು ರಾಜಕೀಯ ಮಾಡಬಾರದು. ಚುನಾವಣೆಗಳಲ್ಲಿ ನೀವು ಯಾರಿಗೆ ಬೇಕಿದ್ದರು ಮತ ಹಾಕಬಹುದು, ಆದರೆ ಗೆದ್ದ ಮೇಲೆ ಗೆದ್ದವರು ಎಲ್ಲರಿಗೂ ಸಮಾನವಾಗಿ ಕಾಣಬೇಕು. ಎಲ್ಲಾ ಗ್ರಾಮಗಳಿಗೂ ಸೌಲಭ್ಯಗಳನ್ನು ಕಲ್ಪಿಸುವ ಕೆಲಸ ಮಾಡಬೇಕು. ಆದರೆ ಶಾಸಕರು ಪುತ್ರ ಕೆಲವು ಗ್ರಾಮಗಳ ಮೇಲೆ ಹಗೆತನ ಸಾಧಿಸುತ್ತಿದ್ದಾರೆ. ತಾಲೂಕಿನಲ್ಲಿ ಬಡದಾಳ…

Read More

ವಿಜಯಪುರ: ಜಿಲ್ಲೆಯಲ್ಲಿ ಬೆಳೆಯುವ ಬೆಳೆಗಳಿಗೆ ಯೋಗ್ಯ ಬೆಲೆ ಹಾಗೂ ಆಹಾರ ಉತ್ಪಾದನೆಗೆ ಪ್ರೊತ್ಸಾಹಿಸುವ ನಿಟ್ಟಿನಲ್ಲಿ ಸ್ಥಾಪಿಸಲಾಗುತ್ತಿರುವ ಫುಡ್ ಪಾರ್ಕ್ನಲ್ಲಿ ಉಗ್ರಾಣಗಳು, ಶೀತಲಗೃಹಗಳು, ಲ್ಯಾಬೋರೇಟರಿಗಳನ್ನು ನಿರ್ಮಾಣ ಮಾಡಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ಜಿಲ್ಲೆಯ ಆಹಾರ ಉತ್ಪಾದನೆ ಹಾಗೂ ಜಿಲ್ಲೆಯ ಬೆಳೆಗಳಿಗೆ ಯೋಗ್ಯ ಬೆಲೆ ದೊರಕುವ ನಿಟ್ಟಿನಲ್ಲಿ ಸುದೀರ್ಘವಾಗಿ ಚರ್ಚಿಸಲಾಯಿತು.ಶನಿವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ದಿ ಸಚಿವರಾದ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆ ಸುಸಜ್ಜಿತ ಫುಡ್ ಪಾರ್ಕ್ ಅಭಿವೃದ್ದಿ ಕುರಿತು ಚರ್ಚಿಸಲಾಯಿತು.ಸಭೆಯಲ್ಲಿ ವಿವಿಧ ಬೆಳೆಗಾರರು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿ ಸಲಹೆ ನೀಡಿ, ೨೦ ರಿಂದ ೨೫ ಸಾವಿರ ಮೆಟ್ರಿಕ್ ಟನ್ ಸ್ಟೋರೇಜ್‌ಗೆ ಅವಕಾಶವಿದ್ದು, ಅದೇ ಮಹಾರಾಷ್ಟ್ರ ರಾಜ್ಯದ ತಾಸಗಾಂವನಲ್ಲಿ ೧ಲಕ್ಷ ಮೆಟ್ರಿಕ್ ಟನ್ ಸ್ಟೋರೇಜ್‌ಗೆ ಅವಕಾಶವಿರುವುದರಿಂದ ಜಿಲ್ಲೆಯಲ್ಲಿನ ಸ್ಟೋರೇಜ್ ಪ್ರಮಾಣ ಹೆಚ್ಚಿಸಬೇಕು. ಆನ್‌ಲೈನ್ ಟ್ರೆಡಿಂಗ್‌ನಲ್ಲಿರುವ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಬೇಕು. ಜಿಲ್ಲೆಯಲ್ಲಿ ಬೆಳೆಯಲಾಗುತ್ತಿರುವ ಪ್ರಮುಖ ಬೆಳೆಗಳಾದ ದ್ರಾಕ್ಷಿ, ದಾಳಿಂಬೆ,…

Read More

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಮಟ್ಟದ ಸಮ್ಮೇಳನದಲ್ಲಿ ಶಾಸಕ ಯಶವಂತ್ರಾಯಗೌಡ ಅಭಿಮತ ಇಂಡಿ: ಈ ಹಿಂದಿನ ಕಾಂಗ್ರೇಸ್ ಸರಕಾರದ ಅವಧಿಯಲ್ಲಿ ರಾಜ್ಯದ ಶಿಕ್ಷಕರಿಗೆ ೩೦% ವೇತನ ಹೆಚ್ಚಳ ಮಾಡುವ ಮೂಲಕ ಪ್ರತಿ ವರ್ಷ ಹತ್ತು ಸಾವಿರ ಕೋಟಿ ರೂ ಹೆಚ್ಚಿನ ಅನುದಾನ ನೀಡಿ ಸಿದ್ದರಾಮಯ್ಯನವರು ಶಿಕ್ಷಕರ ವೇತನ ಹೆಚ್ಚಿಸಿದ್ದಾರೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.ಶನಿವಾರ ಪಟ್ಟಣದ ಸಿಂದಗಿ ರಸ್ತೆಯಲ್ಲಿರುವ ತಾಲೂಕಾ ಸರಕಾರಿ ಪ್ರಾಥಮಿಕ ಸಹಕಾರಿ ಪತ್ತಿನ ಸಂಘ ಮತ್ತು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ನೂತನ ಕಟ್ಟಡಗಳ ಉದ್ಘಾಟನೆ ಹಾಗೂ ತಾಲೂಕಾ ಮಟ್ಟದ ಶೈಕ್ಷಣಿಕ ಸಮ್ಮೇಳನದಲ್ಲಿ ಅವರು ಮಾತನಾಡಿದರು.ಶಿಕ್ಷಕರು ಬಡ ಮಕ್ಕಳ ಭವಿಷ್ಯ ರೂಪಿಸುವ ಕಾರ್ಯ ಮಾಡಬೇಕು. ದೇಶದ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಶ್ರೇಷ್ಠವಾಗಿದೆ. ಸರಕಾರಿ ಶಾಲೆಗಳೆಂಬ ತುಷ್ಠಿಕರಣ ಕೀಳರಿಮೆ ಬಿಟ್ಟು ಸರಕಾರಿ ಶಾಲೆಯಲ್ಲಿ ಒಳ್ಳೆಯ ಶಿಕ್ಷಣ ನೀಡಲು ಶಿಕ್ಷಕರು ಮುಂದಾಗಬೇಕು ಎಂದರು.ದೇಶದಲ್ಲಿ ಎಲ್ಲ ರಂಗದಲ್ಲಿಯೂ ಸಹಕಾರಿ ಸಂಘಗಳು ಯಶಸ್ವಿ ಕಂಡಿದ್ದು ಸರಕಾರ…

Read More

ಪ್ರಧಾನಮಂತ್ರಿ ಅವಾಸ್ ಯೋಜನೆಯಡಿ ನಿರ್ಮಿಸಲಾದ ಮನೆಗಳ ಲೋಕಾರ್ಪಣೆಗೊಳಿಸಿದ ಶಾಸಕ ಯತ್ನಾಳ ಅಭಿಮತ ವಿಜಯಪುರ: ನಗರದಲ್ಲಿ ಯಾರು ಕೂಡ ಪತ್ರಾಸ್ ಮನೆಯಲ್ಲಿ ವಾಸ ಮಾಡಬಾರದು, ಪ್ರತಿಯೊಬ್ಬರೂ ಆರ್.ಸಿ.ಸಿ ಮನೆ ಹೊಂದಬೇಕು ಎಂಬುವುದು ನನ್ನ ಸಂಕಲ್ಪವಾಗಿದೆ. ಆ ನಿಟ್ಟಿನಲ್ಲಿ ಈಗಾಗಲೇ ಸಾಕಷ್ಟು ಆಶ್ರಯ ಮನೆಗಳನ್ನು ನಿರ್ಮಿಸಲಾಗಿದ್ದು, ಹಲವು ಮನೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.ಮಹಾನಗರ ಪಾಲಿಕೆ ವಾರ್ಡ್ ನಂ.14 ರ ಮಾಂಗಗಾರುಡಿ (ರಾಣಿ ಬಗೀಚ) ಕೊಳಗೇರಿ ಪ್ರದೇಶದಲ್ಲಿ ಶನಿವಾರ ಕರ್ನಾಟಕ ಕೊಳಗೆರಿ ಅಭಿವೃದ್ಧಿ ಮಂಡಳಿಯಿಂದ ಪ್ರಧಾನಮಂತ್ರಿ ಅವಾಸ್ ಯೋಜನೆ ಸರ್ವರಿಗೂ ಸೂರು (ನ) ಯೋಜನೆಯಡಿ ನಿರ್ಮಿಸಲಾದ ಮನೆಗಳ ಲೋಕಾರ್ಪಣಾ ಸಮಾರಂಭ ಉದ್ಘಾಟಿಸಿ, ಫಲಾನುಭವಿಗಳಿಗೆ ಹಂಚಿಕೆ ಪತ್ರ ವಿತರಿಸಿ ಅವರು ಮಾತನಾಡಿದರು.ಸ್ಲಂ ಪ್ರದೇಶಗಳಲ್ಲಿ ಈ ಹಿಂದೆ ಮಳೆ ಬಂದರೆ ಅಲ್ಲಿನ ಪರಿಸ್ಥಿತಿ ನೋಡಲಾಗುತ್ತಿರಲಿಲ್ಲ. ಈಗ ನಿರೀಕ್ಷೆ ಮೀರಿ ಬದಲಾಯಿಸಲಾಗಿದ್ದು, ಅತ್ಯುತ್ತಮ ಮನೆಗಳನ್ನು ನಿರ್ಮಿಸಿಕೊಂಡು ಖುಷಿಯಿಂದ ವಾಸ ಮಾಡುತ್ತಿದ್ದಾರೆ. ಸರಿ ಸುಮಾರು 10 ಸಾವಿರ ಮನೆಗಳನ್ನು ನಮ್ಮ ಸರ್ಕಾರ…

Read More

ಬ್ರಹ್ಮದೇವನಮಡು: ಆಲಮೇಲ ತಾಲೂಕಿನಲ್ಲಿ ಆರಂಭವಾಗಬೇಕಿದ್ದ ತೋಟಗಾರಿಕೆ ಕಾಲೇಜು ಮತ್ತು ಪ್ರಾದೇಶಿಕ ಸಾರಿಗೆ ಕಚೇರಿ ರದ್ದು ಮಾಡಿದ ಕೀರ್ತಿ ಹಿಂದಿನ ಬಿಜೆಪಿ ಸಕಾ೯ರಕ್ಕೆ ಸಲ್ಲುತ್ತದೆ, ಸುಳ್ಳು ಆಶ್ವಾಸನೆ ನೀಡಿ ಸಾರ್ವಜನಿಕರಿಗೆ ಮರಳು ಮಾಡುತ್ತಿರುವ ಬಿಜೆಪಿ ಪಕ್ಷಕ್ಕೆ ಮುಂಬರುವ ಚುನಾವಣೆಯಲ್ಲಿ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಸದಸ್ಯ ಸುರೇಶ ಮಳಲಿ (ಸುಂಗಠಾಣ) ಆಕ್ರೋಶ ವ್ಯಕ್ತಪಡಿಸಿದ್ದಾರೆ.ಈ ಕುರಿತು ಶನಿವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ನಮ್ಮ ಜಿಲ್ಲೆ ಗೆ ಒಂದು ಮಂತ್ರಿಸ್ಥಾನ ಕೂಡ ನೀಡಲಿಲ್ಲ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜಿಲ್ಲೆಗೆ ೨ ಸಚಿವ ಸ್ಥಾನ ನೀಡಿದೆ. ಐದು ಉಚಿತ ಯೋಜನೆಗಳನ್ನು ಮನೆ ಬಾಗಿಲಿಗೆ ತಲುಪಿಸಿದೆ. ಹೀಗಾಗಿ ರಾಜ್ಯ ಮತ್ತು ಜಿಲ್ಲೆಯ ಬಿಜೆಪಿ ನಾಯಕರಿಗೆ ಮತ ಕೇಳಲು ನೈತಿಕ ಹಕ್ಕಿಲ್ಲ ಎಂದರು. ೨೦೧೮ರ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ದಿ,ಎಂ ಸಿ ಮನಗೂಳಿ ಅವರು ಸತತ ಪರಿಶ್ರಮ ಪ್ರಯತ್ನದಿಂದ ಆಲಮೇಲ ತಾಲೂಕು ಮಾಡಿ ಅಲ್ಲಿ…

Read More

ದೇವರಹಿಪ್ಪರಗಿ: ಗ್ರಾಮೀಣ ಮಹಿಳೆಯರ ಆರೋಗ್ಯ ಕಾಪಾಡುವಲ್ಲಿ ಶೌಚಾಲಯ ಬಹುಮುಖ್ಯ ಪಾತ್ರ ವಹಿಸುತ್ತದೆ ಎಂದು ಉಜ್ವಲ ಸಂಸ್ಥೆಯ ಯೋಜನಾ ಸಂಯೋಜಕಿ ಸುನಂದಾ ತೋಳಬಂದಿ ಹೇಳಿದರು.ತಾಲ್ಲೂಕಿನ ಬಮ್ಮನಜೋಗಿ ಗ್ರಾಮದಲ್ಲಿ ಶನಿವಾರ ನಮ್ಮೂರು ಯುವಸೇವಾ ಸಮಿತಿಯಿಂದ ಮಹಿಳೆಯರಿಗಾಗಿ ನಿರ್ಮಿಸಲಾಗಿರುವ ಶೌಚಾಲಯ ಸಂಕೀರ್ಣ ಉದ್ಘಾಟಿಸಿ ಮಾತನಾಡಿದರು.ಪ್ರತಿ ಗ್ರಾಮದಲ್ಲಿ ನಾವು ದೇವಾಲಯಕ್ಕೆ ನೀಡುವ ಪ್ರಾಮುಖ್ಯತೆಯನ್ನು ಶೌಚಾಲಯಕ್ಕೂ ನೀಡಬೇಕು. ದೇವಾಲಯ ಮಾನಸಿಕ ಸ್ವಾಸ್ಥ್ಯ ಕಾಪಾಡಿದರೆ ಶೌಚಾಲಯ ದೈಹಿಕ ಕ್ಷಮತೆಗೆ ಕಾರಣವಾಗಿದೆ. ನಮ್ಮ ಗ್ರಾಮಗಳಲ್ಲಿ ಇಂದಿಗೂ ಶೌಚದ ಕುರಿತು ನಾಚಿಕೆ ಹಾಗೂ ನಿರ್ಲಕ್ಷ್ಯ ಭಾವವಿದೆ. ಇದು ಮಹಿಳೆಯರ ಮೇಲೆ ಹೆಚ್ಚಿನ ಪರಿಣಾಮ ಬೀರುವಂತಾಗಿದೆ. ಮಹಿಳೆಯರ ಕ್ಷೇಮ ಹಾಗು ಕ್ಷಮತೆಗಾಗಿ ಪ್ರತಿ ಮನೆ ಶೌಚಾಲಯ ಹೊಂದಿರುವುದು ಅಗತ್ಯ ಎಂದರು.ಗ್ರಾಮದಲ್ಲಿ ಅತ್ಯಾಧುನಿಕ ಮಹಿಳಾ ಶೌಚಾಲಯದ ರೂವಾರಿಯಾದ ಆದಿಜಾಂಬವ ನಿಗಮದ ಪ್ರಧಾನ ವ್ಯವಸ್ಥಾಪಕ ರಾಮನಗೌಡ ಕನ್ನೋಳ್ಳಿ ಮಾತನಾಡಿದರು.ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ಎಲ್.ಎಚ್. ಚಲವಾದಿ, ವಿಠ್ಠಲ ಯಂಕಂಚಿ, ಸಾಗರ್ ಘಾಟಗೆ, ಗುರುಗೌಡ ಬಿರಾದಾರ, ಗಣೇಶ ಬಿರಾದಾರ, ರಾಮನಗೌಡ ಬಿರಾದಾರ, ಚಿದಾನಂದ ಹಿರೇಮಠ, ರೇವಣಸಿದ್ಧ ಯಂಕಂಚಿ, ಲಕ್ಷ್ಮಣ ಹೊಸಮನಿ,…

Read More

ಜನ-ಜಾನುವಾರುಗಳಿಗೆ ತೊಂದರೆ | ಗ್ರಾಮಸ್ಥರಿಂದ ಹೆದ್ದಾರಿ ತಡೆ | ಸಂಚಾರ ಅಸ್ತವ್ಯಸ್ತ ಬಸವನಬಾಗೇವಾಡಿ: ತಾಲೂಕಿನ ಕಾನ್ನಾಳ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಜನ-ಜಾನುವಾರುಗಳಿಗೆ ತೊಂದರೆಯಾಗಿದೆ. ಅಧಿಕಾರಿಗಳು ಗ್ರಾಮದ ಹತ್ತಿರವಿರುವ ಮುಳವಾಡ ಏತ ನೀರಾವರಿ ಕಾಲುವೆಯಿಂದ ಗ್ರಾಮದ ಕೆರೆ(ಬಾಂದಾರ)ಗೆ ನೀರು ಬಿಡುವಂತೆ ಆಗ್ರಹಿಸಿ ಶನಿವಾರ ಮಿನಿವಿಧಾನಸೌಧ ಮುಂಭಾಗ ಹಾಯ್ದು ಹೋಗಿರುವ ರಾಜ್ಯ ಬಿಜ್ಜಳ ಹೆದ್ದಾರಿಯಲ್ಲಿ ತಾಲೂಕಿನ ಕಾನ್ನಾಳ ಗ್ರಾಮಕ್ಕೆ ಕುಡಿಯುವ ನೀರಿಗಾಗಿ ಕಾಲುವೆಯಿಂದ ಬಾಂದಾರಕ್ಕೆ ನೀರು ಬಿಡುವಂತೆ ಆಗ್ರಹಿಸಿ ಗ್ರಾಮಸ್ಥರು ಕೆಲ ಹೊತ್ತು ರಸ್ತೆ ತಡೆದು ಪ್ರತಿಭಟನೆ ಮಾಡಿದ ಘಟನೆ ಜರುಗಿತು.ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಎಂದು ಕಳೆದ ಫೆ.೨೨ ರಂದು ತಹಸೀಲ್ದಾರರಿಗೆ ಮನವಿ ಸಲ್ಲಿಸಿದರೂ ಇದುವರೆಗೂ ಯಾವುದೇ ಪ್ರಯೋಜನವಾಗದೇ ಇರುವದರಿಂದಾಗಿ ಇಂದು ಬೆಳಗ್ಗೆ ಗ್ರಾಮಸ್ಥರು, ಕಾನ್ನಾಳ ಗ್ರಾಮದ ಪಂಚಾಯಿತಿ ಸದಸ್ಯರು ಗ್ರಾಮಕ್ಕೆ ಕಾಲುವೆ ನೀರು ಬಿಡಲು ಆಗ್ರಹಿಸಿ ತಹಸೀಲ್ದಾರ ಅವರಿಗೆ ಮನವಿ ಸಲ್ಲಿಸಿದರು.ನಂತರ ಪ್ರತಿಭಟನೆ ಮೆರವಣಿಗೆ ಮೂಲಕ ವಿಜಯಪುರ ರಸ್ತೆಯಲ್ಲಿರುವ ತಾಲೂಕು ಪಂಚಾಯಿತಿ ಕಚೇರಿಗೆ ತೆರಳಿ ಅಲ್ಲಿಯೂ ಮನವಿ ಸಲ್ಲಿಸಿದರು.ಮನವಿಯಲ್ಲಿ ನಮ್ಮ…

Read More