ಬ್ರಹ್ಮದೇವನಮಡು: ಆಲಮೇಲ ತಾಲೂಕಿನಲ್ಲಿ ಆರಂಭವಾಗಬೇಕಿದ್ದ ತೋಟಗಾರಿಕೆ ಕಾಲೇಜು ಮತ್ತು ಪ್ರಾದೇಶಿಕ ಸಾರಿಗೆ ಕಚೇರಿ ರದ್ದು ಮಾಡಿದ ಕೀರ್ತಿ ಹಿಂದಿನ ಬಿಜೆಪಿ ಸಕಾ೯ರಕ್ಕೆ ಸಲ್ಲುತ್ತದೆ, ಸುಳ್ಳು ಆಶ್ವಾಸನೆ ನೀಡಿ ಸಾರ್ವಜನಿಕರಿಗೆ ಮರಳು ಮಾಡುತ್ತಿರುವ ಬಿಜೆಪಿ ಪಕ್ಷಕ್ಕೆ ಮುಂಬರುವ ಚುನಾವಣೆಯಲ್ಲಿ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಸದಸ್ಯ ಸುರೇಶ ಮಳಲಿ (ಸುಂಗಠಾಣ) ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಶನಿವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ನಮ್ಮ ಜಿಲ್ಲೆ ಗೆ ಒಂದು ಮಂತ್ರಿಸ್ಥಾನ ಕೂಡ ನೀಡಲಿಲ್ಲ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜಿಲ್ಲೆಗೆ ೨ ಸಚಿವ ಸ್ಥಾನ ನೀಡಿದೆ. ಐದು ಉಚಿತ ಯೋಜನೆಗಳನ್ನು ಮನೆ ಬಾಗಿಲಿಗೆ ತಲುಪಿಸಿದೆ. ಹೀಗಾಗಿ ರಾಜ್ಯ ಮತ್ತು ಜಿಲ್ಲೆಯ ಬಿಜೆಪಿ ನಾಯಕರಿಗೆ ಮತ ಕೇಳಲು ನೈತಿಕ ಹಕ್ಕಿಲ್ಲ ಎಂದರು. ೨೦೧೮ರ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ದಿ,ಎಂ ಸಿ ಮನಗೂಳಿ ಅವರು ಸತತ ಪರಿಶ್ರಮ ಪ್ರಯತ್ನದಿಂದ ಆಲಮೇಲ ತಾಲೂಕು ಮಾಡಿ ಅಲ್ಲಿ ತೋಟಗಾರಿಕೆ ಕಾಲೇಜು ಪ್ರಾದೇಶಿಕ ಸಾರಿಗೆ ಕಚೇರಿ ಸ್ಥಾಪನೆ ಮಾಡಲು ಅನುಮತಿ ತಂದಿದ್ದರೂ ಮಂಜೂರು ಮಾಡಿದ ಮೇಲೆ ಸಮ್ಮಿಶ್ರ ಸರ್ಕಾರ ಪತನವಾಗಿ ವಾಮಮಾರ್ಗದ ಮೂಲಕ ಬಿಜೆಪಿ ಸರ್ಕಾರ ಬಂದ ಮೇಲೆ ರದ್ದಾಗಿದ್ದ ತೋಟಗಾರಿಕೆ ಕಾಲೇಜನ್ನು ಛಲ ಬಿಡದ ನೂತನ ಶಾಸಕ ಅಶೋಕ್ ಮನಗೂಳಿ ಪ್ರಯತ್ನದಿಂದ ಮಂಜೂರಾತಿ ದೊರಕಿದೆ.
ಉಪಚುನಾವಣೆಯಲ್ಲಿ ೯೩ ಸಾವಿರ ಮತಹಾಕಿ ಅರಿಸಿ ಕಳುಹಿಸಿದರೂ ಸಿಂದಗಿ ಮಾಜಿ ಶಾಸಕರಿಂದ ಮತ್ತು ಬೊಮ್ಮಾಯಿ ಸರ್ಕಾರದಿಂದ ಅಭಿವೃದ್ದಿ ಕೆಲಸ ಆಗಲಿಲ್ಲ. ಕಾರಣ ವಿಜಯಪುರ ಜಿಲ್ಲೆಯ ಮತದಾರರು ಮುಂದೆ ಬರುವ ಲೋಕಸಭಾ ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ತಕ್ಕ ಪಾಠ ಕಲಿಸಬೇಕು ಎಂದು ಮತದಾರರಲ್ಲಿ ಮಳಲಿ ಮನವಿ ಮಾಡಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

