ಕಲಬುರ್ಗಿ ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷ ನಿತಿನ್ ಗುತ್ತೇದಾರ ಆರೋಪ
ಅಫಜಲಪುರ: ಶಾಸಕ ಎಂ.ವೈ ಪಾಟೀಲ್ ಅವರು ಹಿರಿಯರಿದ್ದಾರೆ, ಅವರಿಗೆ ನಾನು ಬಹಳಷ್ಟು ಗೌರವ ಕೊಡುತ್ತೇನೆ. ಆದರೆ ಅವರು ಶಾಸಕರಾಗಿಯೂ ತಮ್ಮ ಅಧಿಕಾರ ಚಲಾಯಿಸಲು ಸಾಧ್ಯವಾಗುತ್ತಿಲ್ಲ, ಮಗನ ಆರ್ಭಟದ ಮುಂದೆ ಶಾಸಕರ ಆಟ ನಡೆಯುತ್ತಿಲ್ಲ ಹೀಗಾಗಿ ತಾಲೂಕಿನಾದ್ಯಂತ ಸಮಸ್ಯೆಗಳು ತಾಂಡವವಾಡುತ್ತಿವೆ ಎಂದು ಮಾಜಿ ಜಿ.ಪಂ ಅಧ್ಯಕ್ಷ ನಿತೀನ್ ಗುತ್ತೇದಾರ ಹೇಳಿದರು.
ಅವರು ತಾಲೂಕಿನ ಬಡದಾಳ ಗ್ರಾಮದಲ್ಲಿ ನಾಗರಿಕ ಹೋರಾಟ ಸಮಿತಿ ವತಿಯಿಂದ ಗ್ರಾಮದ ಸಂಪರ್ಕ ರಸ್ತೆಗಳಿಗಾಗಿ ನಡೆಯುತ್ತಿರು ಅನಿರ್ಧಿಷ್ಟ ಧರಣಿ ಸತ್ಯಾಗ್ರಹಕ್ಕೆ ಬೆಂಬಲ ವ್ಯಕ್ತ ಪಡಿಸಿ ಮಾತನಾಡುತ್ತಾ, ನಾವೆಲ್ಲರೂ ರಾಜಕೀಯವಾಗಿ ವೈರಿಗಳಾಗಿರಬಹುದು ಆದರೆ ಜನರ ಸಮಸ್ಯೆಗಳಿಗೆ ಸ್ಪಂದಿಸುವಾಗ ನಾವು ರಾಜಕೀಯ ಮಾಡಬಾರದು. ಚುನಾವಣೆಗಳಲ್ಲಿ ನೀವು ಯಾರಿಗೆ ಬೇಕಿದ್ದರು ಮತ ಹಾಕಬಹುದು, ಆದರೆ ಗೆದ್ದ ಮೇಲೆ ಗೆದ್ದವರು ಎಲ್ಲರಿಗೂ ಸಮಾನವಾಗಿ ಕಾಣಬೇಕು. ಎಲ್ಲಾ ಗ್ರಾಮಗಳಿಗೂ ಸೌಲಭ್ಯಗಳನ್ನು ಕಲ್ಪಿಸುವ ಕೆಲಸ ಮಾಡಬೇಕು. ಆದರೆ ಶಾಸಕರು ಪುತ್ರ ಕೆಲವು ಗ್ರಾಮಗಳ ಮೇಲೆ ಹಗೆತನ ಸಾಧಿಸುತ್ತಿದ್ದಾರೆ. ತಾಲೂಕಿನಲ್ಲಿ ಬಡದಾಳ ಗ್ರಾಮ ಸೌಲಭ್ಯ ವಂಚಿತವಾಗಿದೆ. ಹೀಗಾಗಿ ಈ ಗ್ರಾಮದ ಸಮಸ್ಯೆಗಳನ್ನು ತಾಲೂಕು ಜಿಲ್ಲಾಮಟ್ಟಕ್ಕೆ ಕೊಂಡೋಯ್ಯುತ್ತೇನೆ ಹೇಳಿದರು.
ಈ ಸಂದರ್ಭದಲ್ಲಿ ನಾಗರಿಕ ಹೋರಾಟ ಸಮಿತಿಯ ಮುಖಂಡರಾದ ಭೀಮಾಶಂಕರ ಖೈರಾಟ, ಶರಣಗೌಡ ಪೊಲೀಸಪಾಟೀಲ, ಈರಣ್ಣ ಶಂಕರಶೆಟ್ಟಿ, ಗ್ರಾ.ಪಂ ಸದಸ್ಯ ಗಿರೀಶ ಉಡಗಿ, ಮುಖಂಡರಾದ ಮಹಾಂತೇಶ ಬಡದಾಳ, ರಾಜು ಸಾಣಾಕ, ಗೋರಖನಾಥ ಮಳಗಿ, ಶಿವು ಗೊಬ್ಬೂರ, ರಾಘವೇಂದ್ರ ಕಲಶೆಟ್ಟಿ, ಅಮೃತ ಮೇತ್ರಿ, ಚಂದ್ರಕಾಂತ ಶಿರೂರ, ಟಾಕಣ್ಣ ಪಾಟೀಲ್, ಜಾವೇದ ಮುಜಾವರ, ಸಿದ್ದು ಶೆಟ್ಟಿ, ಪ್ರಕಾಶ ಖೈರಾಟ, ಶರಣು ಅಗಸರ, ಶರಣು ಗುತ್ತೇದಾರ, ಬಸು ನಿಂಬಾಳ, ಸಂತೋಷ ಫುಲಾರಿ, ಶಿವು ಅಲ್ದಿ ಸೇರಿದಂತೆ ಅನೇಕರು ಇದ್ದರು.

