ಗೋಲಗೇರಿಯ ಸರಕಾರಿ ಕನ್ನಡ ಹೆಣ್ಣುಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ, ಸಾಹಿತಿ, ವ್ಯಂಗ್ಯಚಿತ್ರಕಾರ ಶರಣು ಚಟ್ಟಿ ಅವರಿಗೆ ಸಿಂದಗಿಯ ಎಚ್.ಜಿ.ಮಹಾವಿದ್ಯಾಲಯದಲ್ಲಿ ನಡೆದ ಆರನೇ ಸಿಂದಗಿ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸುವರ್ಣ ಕರ್ನಾಟಕ ಗೌರವ ಪುರಸ್ಕಾರ ಪ್ರದಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಆಲಮೇಲ ವಿರಕ್ತಮಠದ ಜಗದೇವ ಮಲ್ಲಿಬೊಮ್ಮಯ್ಯ ಸ್ವಾಮೀಜಿ, ಸಿಂದಗಿಯ ಶಾಂತಗಂಗಾಧರ ಸ್ವಾಮೀಜಿ, ಸಮ್ಮೇಳನದ ಸರ್ವಾಧ್ಯಕ್ಷ ರಾ.ಶಿ.ವಾಡೇದ, ಮಕ್ಕಳ ಸಾಹಿತಿ ಹ.ಮ.ಪೂಜಾರ, ಕ.ಸಾ.ಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ, ತಾಲೂಕಾಧ್ಯಕ್ಷ ಶಿವಾನಂದ ಬಡಾನೂರ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಶಿಕ್ಷಕರ ಈ ಸಾಧನೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಆರೀಫ್ ಬಿರಾದಾರ, ಕ್ಷೇತ್ರ ಸಮನ್ವಯಾಧಿಕಾರಿ ಐ.ಎಸ್.ಟಕ್ಕೆ, ಗೋಲಗೇರಿ ಕ್ಲಸ್ಟರ್ ಸಿ.ಆರ್.ಪಿ ರಾಜಶೇಖರ್ ಬಿರಾದಾರ, ಯಲಗೋಡ ಕ್ಲಸ್ಟರ್ ಸಿ.ಆರ್.ಪಿ. ವೀರೇಶ್ ಕರಕಳ್ಳಿಮಠ, ಸಾಹಿತಿ ಕೆ.ಜಿ.ಹತ್ತಳ್ಳಿ, ಆರಕ್ಷಕ ಸಾಹಿತಿ ಮೌಲಾಲಿ ಆಲಗೂರ, ಮುಖ್ಯ ಶಿಕ್ಷಕ ಆರ್.ಜಿ.ಬನಸಿ, ಪೂರ್ಣಿಮಾ ಸಜ್ಜನ, ಸಂಗೀತಾ ಡಾಲೆ, ಎಂ.ಎಸ್.ಮಣೂರ, ಎಸ್.ಬಿ.ಕನ್ನೊಳ್ಳಿ, ಸಿ.ಎಸ್.ಹಿರೇಮಠ, ಬಸವರಾಜ ಮಾಳೇಗಾರ ಆರ್.ಎಸ್.ಕರ್ನಾಳ, ಮಡಿವಾಳ ನಾಯ್ಕೋಡಿ, ಸಂತೋಷ ನಂದರಗಿ, ಬಿ.ಐ.ಬನ್ನೆ ಸೇರಿದಂತೆ ಸಹೋದ್ಯೋಗಿ ಮಿತ್ರರು ಅಭಿನಂದಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

