ದೇವರಹಿಪ್ಪರಗಿ: ಗ್ರಾಮೀಣ ಮಹಿಳೆಯರ ಆರೋಗ್ಯ ಕಾಪಾಡುವಲ್ಲಿ ಶೌಚಾಲಯ ಬಹುಮುಖ್ಯ ಪಾತ್ರ ವಹಿಸುತ್ತದೆ ಎಂದು ಉಜ್ವಲ ಸಂಸ್ಥೆಯ ಯೋಜನಾ ಸಂಯೋಜಕಿ ಸುನಂದಾ ತೋಳಬಂದಿ ಹೇಳಿದರು.
ತಾಲ್ಲೂಕಿನ ಬಮ್ಮನಜೋಗಿ ಗ್ರಾಮದಲ್ಲಿ ಶನಿವಾರ ನಮ್ಮೂರು ಯುವಸೇವಾ ಸಮಿತಿಯಿಂದ ಮಹಿಳೆಯರಿಗಾಗಿ ನಿರ್ಮಿಸಲಾಗಿರುವ ಶೌಚಾಲಯ ಸಂಕೀರ್ಣ ಉದ್ಘಾಟಿಸಿ ಮಾತನಾಡಿದರು.
ಪ್ರತಿ ಗ್ರಾಮದಲ್ಲಿ ನಾವು ದೇವಾಲಯಕ್ಕೆ ನೀಡುವ ಪ್ರಾಮುಖ್ಯತೆಯನ್ನು ಶೌಚಾಲಯಕ್ಕೂ ನೀಡಬೇಕು. ದೇವಾಲಯ ಮಾನಸಿಕ ಸ್ವಾಸ್ಥ್ಯ ಕಾಪಾಡಿದರೆ ಶೌಚಾಲಯ ದೈಹಿಕ ಕ್ಷಮತೆಗೆ ಕಾರಣವಾಗಿದೆ. ನಮ್ಮ ಗ್ರಾಮಗಳಲ್ಲಿ ಇಂದಿಗೂ ಶೌಚದ ಕುರಿತು ನಾಚಿಕೆ ಹಾಗೂ ನಿರ್ಲಕ್ಷ್ಯ ಭಾವವಿದೆ. ಇದು ಮಹಿಳೆಯರ ಮೇಲೆ ಹೆಚ್ಚಿನ ಪರಿಣಾಮ ಬೀರುವಂತಾಗಿದೆ. ಮಹಿಳೆಯರ ಕ್ಷೇಮ ಹಾಗು ಕ್ಷಮತೆಗಾಗಿ ಪ್ರತಿ ಮನೆ ಶೌಚಾಲಯ ಹೊಂದಿರುವುದು ಅಗತ್ಯ ಎಂದರು.
ಗ್ರಾಮದಲ್ಲಿ ಅತ್ಯಾಧುನಿಕ ಮಹಿಳಾ ಶೌಚಾಲಯದ ರೂವಾರಿಯಾದ ಆದಿಜಾಂಬವ ನಿಗಮದ ಪ್ರಧಾನ ವ್ಯವಸ್ಥಾಪಕ ರಾಮನಗೌಡ ಕನ್ನೋಳ್ಳಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ಎಲ್.ಎಚ್. ಚಲವಾದಿ, ವಿಠ್ಠಲ ಯಂಕಂಚಿ, ಸಾಗರ್ ಘಾಟಗೆ, ಗುರುಗೌಡ ಬಿರಾದಾರ, ಗಣೇಶ ಬಿರಾದಾರ, ರಾಮನಗೌಡ ಬಿರಾದಾರ, ಚಿದಾನಂದ ಹಿರೇಮಠ, ರೇವಣಸಿದ್ಧ ಯಂಕಂಚಿ, ಲಕ್ಷ್ಮಣ ಹೊಸಮನಿ, ಗುರಪ್ಪ ಇಜೇರಿ, ದ್ಯಾವಪ್ಪ ಮಾದರ, ಚಿದಾನಂದ ಬಿರಾದಾರ, ಮಡಿವಾಳಪ್ಪ ಅಗಸರ, ಶಶಿಕಾಂತ ಸುಂಗಠಾಣ, ಗೊಲ್ಲಾಳಪ್ಪಗೌಡ ಪಾಟೀಲ, ರವಿ ಹೊಸಮನಿ, ಬಸಣ್ಣ ನಂದಗೇರಿ, ಗೊಲ್ಲಾಳಪ್ಪ ಕನ್ನೋಳ್ಳಿ, ಗೌಡಪ್ಪ ಬಿರಾದಾರ, ಹೆಗ್ಗೊಂಡಪ್ಪಗೌಡ ಬಿರಾದಾರ, ಸಿದ್ಧನಗೌಡ ಬಿರಾದಾರ, ಸಿದ್ರಾಮಗೌಡ ಪಾಟೀಲ ಸೇರಿದಂತೆ ಮಹಿಳೆಯರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

