ಉದಯರಶ್ಮಿ ದಿನಪತ್ರಿಕೆ
ಧಾರವಾಡ: ನಗರದಲ್ಲಿ ಆ.೦೨ ರಂದು ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ ಪುಣೆ ಇದರ ವತಿಯಿಂದ ನಡೆಯುತ್ತಿರುವ ಸುಧಾ ಪಾಟೀಲ್ ಅವರ 60ರ ಸಂಭ್ರಮದ ಅಭಿನಂದನಾ ಕೃತಿ ಲೋಕಾರ್ಪಣೆ ಕಾರ್ಯಕ್ರಮವು ಭಾನುವಾರ ಬೆಳಿಗ್ಗೆ 10 ಗಂಟೆಗೆ ವಿದ್ಯಾವರ್ಧಕ ಸಂಘದ ಡಾ. ಪಾಟೀಲ್ ಪುಟ್ಟಪ್ಪ ಸಭಾಭವನದಲ್ಲಿ ಜರುಗಲಿದೆ.
ಮಹಾದೇವ ಹೊರಟ್ಟಿ, ಚಿಂತಕರು ಧಾರವಾಡ ಅವರು ಕಾರ್ಯಕ್ರಮವನ್ನು ಉದ್ಘಾಟಿಸುತ್ತಾರೆ. ಡಾ.ಬಸವರಾಜ ಸಾದರ, ಸಾಹಿತಿಗಳು -ಚಿಂತಕರು ಬೆಂಗಳೂರು ಅವರು ಮುಖ್ಯ ಅತಿಥಿಗಳಾಗಿ ಆಗಮಿಸುತ್ತಾರೆ.
ಸುಧಾ ಪಾಟೀಲ ಅವರ ಕೃತಿಗಳ ಬಿಡುಗಡೆಯನ್ನು ಡಾ.ಸುರೇಶ ಜಂಗಮಶೆಟ್ಟಿ
ಕುಲಪತಿಗಳು, ಹಾವೇರಿ ವಿಶ್ವವಿದ್ಯಾಲಯ ಮತ್ತು ಡಾ. ಚಂದ್ರಶೇಖರ ಗಾಣಿಗೇರ, ಕಾರ್ಯದರ್ಶಿಗಳು ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ ಅವರು ನಡೆಸಿಕೊಡುತ್ತಾರೆ.
ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ ಪುಣೆ ಧಾರವಾಡ ಜಿಲ್ಲಾ ಘಟಕ ಉದ್ಘಾಟನೆಯನ್ನು ಡಾ.ಅಶೋಕ್ ಆಲೂರ, ಕುಲಪತಿಗಳು ಕೊಡಗು ವಿಶ್ವವಿದ್ಯಾಲಯ ಅವರು ನೆರವೇರಿಸುತ್ತಾರೆ.
ಜೀವ ಸುಧೆ ಅಭಿನಂದನಾ ಕೃತಿ ಬಿಡುಗಡೆಯನ್ನು ಖ್ಯಾತ ಸಾಹಿತಿ ಪ್ರೊ. ಎಸ್.ಜಿ.ಸಿದ್ದರಾಮಯ್ಯ ಬೆಂಗಳೂರು ಅವರು ಮಾಡಲಿದ್ದಾರೆ.
ಡಾ.ಶಶಿಕಾಂತ ಪಟ್ಟಣ ಅಧ್ಯಕ್ಷರು -ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ, ಪುಣೆ, ಸುಧಾ ಪಾಟೀಲ, ಸಾಹಿತಿಗಳು, ಬೆಳಗಾವಿ, ಪ್ರೊ.ಶಾರದಾ ಪಾಟೀಲ, ಸಿ.ಸಿ.ಹೇಮಲತಾ, ಶೈಲಜಾ ಭಿದಗೆ, ಡಾ.ಮೃತ್ಯುಂಜಯ ಶೆಟ್ಟರ, ಶರಣೆ ವಿಶ್ವೇಶ್ವರಿ ಹಿರೇಮಠ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು.
ಸುಧಾ ಪಾಟೀಲ ಅವರ ಒಟ್ಟಾರೆ ಕೃತಿಗಳ ಪರಿಚಯವನ್ನು ಡಾ.ತಾರಾ. ಬಿ. ಎನ್ ಮತ್ತು ಡಾ.ಶರಣಮ್ಮ ಗೊರೆಬಾಳ ಅವರು ಮಾಡಲಿದ್ದಾರೆ.
ಜಿ.ವಿ.ಕೊಂಗವಾಡ, ಐ.ಎ.ಎಸ್
( ನಿವೃತ್ತ) ಧಾರವಾಡ ಅವರು ಅಧ್ಯಕ್ಷತೆ ವಹಿಸಲಿದ್ದು, ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಸ್ವಾಗತ ಸಮಿತಿಯ ಅಧ್ಯಕ್ಷರಾದ ಪ್ರೊ.ಶಾರದಾ ಪಾಟೀಲ, ಸಂಪಾದಕರಾದ ಕುಸುಮಾ ದೀಪಕ ಚಂದ್ರ, ಸವಿತಾ ಪಾಟೀಲ, ಗುರುಪ್ರಸಾದ ಪಾಟೀಲ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.

