ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಮಟ್ಟದ ಸಮ್ಮೇಳನದಲ್ಲಿ ಶಾಸಕ ಯಶವಂತ್ರಾಯಗೌಡ ಅಭಿಮತ
ಇಂಡಿ: ಈ ಹಿಂದಿನ ಕಾಂಗ್ರೇಸ್ ಸರಕಾರದ ಅವಧಿಯಲ್ಲಿ ರಾಜ್ಯದ ಶಿಕ್ಷಕರಿಗೆ ೩೦% ವೇತನ ಹೆಚ್ಚಳ ಮಾಡುವ ಮೂಲಕ ಪ್ರತಿ ವರ್ಷ ಹತ್ತು ಸಾವಿರ ಕೋಟಿ ರೂ ಹೆಚ್ಚಿನ ಅನುದಾನ ನೀಡಿ ಸಿದ್ದರಾಮಯ್ಯನವರು ಶಿಕ್ಷಕರ ವೇತನ ಹೆಚ್ಚಿಸಿದ್ದಾರೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಶನಿವಾರ ಪಟ್ಟಣದ ಸಿಂದಗಿ ರಸ್ತೆಯಲ್ಲಿರುವ ತಾಲೂಕಾ ಸರಕಾರಿ ಪ್ರಾಥಮಿಕ ಸಹಕಾರಿ ಪತ್ತಿನ ಸಂಘ ಮತ್ತು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ನೂತನ ಕಟ್ಟಡಗಳ ಉದ್ಘಾಟನೆ ಹಾಗೂ ತಾಲೂಕಾ ಮಟ್ಟದ ಶೈಕ್ಷಣಿಕ ಸಮ್ಮೇಳನದಲ್ಲಿ ಅವರು ಮಾತನಾಡಿದರು.
ಶಿಕ್ಷಕರು ಬಡ ಮಕ್ಕಳ ಭವಿಷ್ಯ ರೂಪಿಸುವ ಕಾರ್ಯ ಮಾಡಬೇಕು. ದೇಶದ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಶ್ರೇಷ್ಠವಾಗಿದೆ. ಸರಕಾರಿ ಶಾಲೆಗಳೆಂಬ ತುಷ್ಠಿಕರಣ ಕೀಳರಿಮೆ ಬಿಟ್ಟು ಸರಕಾರಿ ಶಾಲೆಯಲ್ಲಿ ಒಳ್ಳೆಯ ಶಿಕ್ಷಣ ನೀಡಲು ಶಿಕ್ಷಕರು ಮುಂದಾಗಬೇಕು ಎಂದರು.
ದೇಶದಲ್ಲಿ ಎಲ್ಲ ರಂಗದಲ್ಲಿಯೂ ಸಹಕಾರಿ ಸಂಘಗಳು ಯಶಸ್ವಿ ಕಂಡಿದ್ದು ಸರಕಾರ ಮಾಡದ ಕೆಲಸವನ್ನು ಸಹಕಾರಿ ಸಂಘಗಳು ಮಾಡುತ್ತಿವೆ ಎಂದರು.
ಕಾತ್ರಾಳ ಆಶ್ರಮದ ಪ.ಪೂ ಅಮೃತಾನಂದ ಶ್ರೀಗಳು ಮಾತನಾಡಿ, ಶಿಕ್ಷಕರ ಸ್ಥಾನ ದೊಡ್ಡದು. ಮಕ್ಕಳನ್ನು ದೇಶದ ಆಸ್ತಿವಂತರನ್ನಾಗಿ ಮಾಡುವ ಜವಾದ್ಬಾರಿ ಶಿಕ್ಷಕರ ಮೇಲಿದೆ ಎಂದರು.
ಮಂಜುನಾಥ ಜುನಗೊಂಡ ಉಪನ್ಯಾಸ ನೀಡಿದರು.
ಎಐಪಿಟಿಎಫ್ ರಾಷ್ಟ್ರೀಯ ಕಾರ್ಯಾಧ್ಯಕ್ಷ ಬಸವರಾಜ ಗುರಿಕಾರ, ಇಂಡಿ ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪಿ.ಎಸ್. ಚಾಂದಕವಠೆ, ಡಾ. ಕಾಂತು ಇಂಡಿ ಮಾತನಾಡಿದರು.
ವೇದಿಕೆಯ ಮೇಲೆ ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎಸ್. ಅಲಗೂರ, ಸಹಕಾರ ರತ್ನ ಪುರಸ್ಕೃತ ಶ್ರೀಮಂತ ಇಂಡಿ, ಎಸ್.ಆರ್. ನಡಗಡ್ಡಿ, ಎ.ಎಸ್. ಲಾಳಸೇರಿ, ಪ್ರಾಥಮಿಕ ಶಾಲಾ ಶಿಕ್ಷಕರ ಇಂಡಿ ಘಟಕದ ಅಧ್ಯಕ್ಷ ಎಸ್.ವಿ. ಹರಳಯ್ಯ, ಜೆಓಸಿಸಿ ಬ್ಯಾಂಕಿನ ಉಪಾಧ್ಯಕ್ಷ ಅಲ್ಲಾಭಕ್ಷ ವಾಲಿಕಾರ, ಡಿ.ಜಿ. ರಾಠೋಡ, ಎಂ.ಎಂ. ನೇದಲಗಿ, ಪಿ.ಎ. ಎಲಗಾರ, ಪಿ.ಜಿ. ಕಲ್ಮನಿ ಮತ್ತಿತರಿದ್ದರು.
ಸಹಕಾರ ರತ್ನ ಪುರಸ್ಕೃತ ಶ್ರೀಮಂತ ಇಂಡಿ, ಶಿಕ್ಷಕರಾದ ಸುರೇಶ ಅವರಾದಿ, ರವೀಂದ್ರ ಆಳುರ, ಜಯರಾಮ ಚವ್ಹಾಣ, ಹಿರಿಯ ಶಿಕ್ಷಕರಾದ ಎಂ.ಕೆ. ಲಿಗಾಡೆ, ಚನಮಲ್ಲಪ್ಪ ಚನಗೊಂಡ, ಕೆ.ವಿ. ಪಾಟೀಲ, ಆರ್.ವಿ. ಮೋಮಿನ್, ಎಸ್.ಬಿ. ಗೌರಿ, ಅಂಬಣ್ಣ ಸುಣಗಾರ, ಪ್ರಭು ಹೊಸಮನಿ, ಎಸ್.ಆರ್. ಗಿಡಗಂಟಿ, ಜೆ.ಡಿ. ಕೊಟ್ನಾಳ ಮತ್ತಿತರರನ್ನು ಸನ್ಮಾನಿಸಲಾಯಿತು.

