ತಿಕೋಟಾದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದಿಂದ ಪತ್ರಿಕಾ ದಿನಾಚರಣೆ | ಸಂಘದ ಜಿಲ್ಲಾ ಪ್ರದಾನ ಕಾರ್ಯದರ್ಶಿ ಇಂದುಶೇಖರ ಮಣೂರ ಅಭಿಮತ
ಉದಯರಶ್ಮಿ ದಿನಪತ್ರಿಕೆ
ತಿಕೋಟಾ: ಪ್ರಜಾಪ್ರಭುತ್ವದಲ್ಲಿ ಮಾಧ್ಯಮಗಳ ಸ್ವಾತಂತ್ರ್ಯ, ಜವಾಬ್ದಾರಿ ಹಾಗೂ ನೈತಿಕತೆಯನ್ನು ಸ್ಮರಿಸಿ ಗೌರವಿಸುವುದೇ ಪತ್ರಿಕಾ ದಿನಾಚರಣೆ ಉದ್ದೇಶವಾಗಿದೆ ಎಂದು ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಪ್ರದಾನ ಕಾರ್ಯದರ್ಶಿ ಇಂದುಶೇಖರ ಮಣೂರ ಹೇಳಿದರು.
ಶುಕ್ರವಾರ ಪಟ್ಟಣದ ವಿರಕ್ತಮಠದಲ್ಲಿ ತಾಲೂಕು ಕಾನಿಪ ಘಟಕ ಹಮ್ಮಿಕೊಳ್ಳಲಾದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಾಪಾಡುವುದು, ಸತ್ಯವನ್ನು ಸಮಾಜಕ್ಕೆ ತಿಳಿಸುವುದು ಪತ್ರಕರ್ತರ ಜವಾಬ್ದಾರಿ. ದೀನ-ದುರ್ಬಲರ ಶೋಷಿತರ ಧ್ವನಿಯಾಗಿ ಅವರ ದೂರು-ದುಮ್ಮಾನಗಳನ್ನು ಜಿಲ್ಲಾಡಳಿತದ ಗಮನಕ್ಕೆ ತರುವಲ್ಲಿ ಪತ್ರಕರ್ತರ ಪಾತ್ರ ಮಹತ್ವದ್ದಾಗಿದೆ. ಕಾನಿಪ ಸಂಘದ ಗೌರವಕ್ಕೆ ಧಕ್ಕೆ ತರದಂತೆ ಪತ್ರಕರ್ತರು ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಬೇಕೆಂದು ಇಂದುಶೇಖರ ಕರೆ ನೀಡಿದರು.

ಹೆಸ್ಕಾಂ ಅಧಿಕಾರಿ ಜಿ ಎಸ್ ದೇಶಮುಖ ಮಾತನಾಡಿ, ಕಾನಿಪ ಅದ್ಯಕ್ಷ ಸಾತಲಿಂಗಯ್ಯಾ ಸಾಲಿಮಠ ಅವರು ಯಾರೆ ಆಗಿರಲಿ ನೀವು ತಪ್ಪು ಮಾಡುತ್ತಿದ್ದಿರಿ, ಸರಿಮಾಡಿಕೊಳ್ಳಿರಿ ಎಂದು ನೇರವಾಗಿ ಹೇಳುತ್ತಾರೆ. ತಾಲೂಕಿನಲ್ಲಿ ಅವರ ಮಾತಿಗೆ ಎಲ್ಲರು ಗೌರವ ಕೋಡುತ್ತಾರೆ. ಸಮಾಜಕ್ಕೆ ತಮ್ಮ ಸೇವೆ ಅಪಾರ ನಿಮ್ಮ ಬರವಣಿಗೆ ದಾರಿದೀಪವಾಗಲಿ ಎಂದು ಹೇಳಿದರು.
ತಿಕೋಟಾ-ಬಬಲೇಶ್ವರ ತಾಲೂಕು ಕಾನಿಪ ಅದ್ಯಕ್ಷ ಸಾತಲಿಂಗಯ್ಯಾ ಶಂ ಸಾಲಿಮಠ
ಪ್ರಾಸ್ತಾವಿಕ ಮಾತನಾಡಿದರು.
ಇದೇ ವೇಳೆ ಸಂಘದ ನೂತನ ಪದಾಧಿಕಾರಿಗಳಿಗೆ ಜಿಲ್ಲಾ ಪ್ರ.ಕಾರ್ಯದರ್ಶಿ ಇಂದುಶೇಖರ ಮಣೂರ ಪ್ರತಿಜ್ಞಾವಿಧಿ ಬೋಧಿಸಿದರು.
ಸಮಾರಂಭದ ಸಾನಿದ್ಯ ವಹಿಸಿದ ಸ್ಥಳೀಯ ವಿರಕ್ತಮಠದ ಚನ್ನಮಲ್ಲಿಕಾರ್ಜುನ ಸ್ವಾಮಿಗಳು ಆಶೀರ್ವಚನ ನೀಡಿದರು.
ನಂತರ ಪತ್ರಕರ್ತರಿಗೆ ಸಿದ್ದೇಶ್ವರ ಸ್ವಾಮಿಗಳ ಭಾವಚಿತ್ರ ನೀಡಿ ಆಶೀರ್ವದಿಸಿದರು.
ತಿಕೋಟಾ ಪಿಎಸೈ ಶಶಿಕಲಾ ಇಂಗೂಟಿ, ಶಿರಸ್ತೇದಾರ ರಾಜು ಸುಣಗಾರ, ಭೂ-ನ್ಯಾಯಮಂಡಳಿ ಸದಸ್ಯ ಲೇಪೂ ಕೋಣ್ಣುರ, ಸಂಘದ ತಾಲೂಕು ಉಪಾದ್ಯಕ್ಷೆ ಲಕ್ಷ್ಮಿ .ಚ ಹಿರೇಮಠ ವೇದಿಕೆ ಮೇಲಿದ್ದರು.
ಡಾ.ಸಂತೋಷ ನವಲಗುಂದ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ಪತ್ರಕರ್ತರಾದ ಚಂದ್ರಶೇಖರ ಹಿರೇಮಠ, ದತ್ತಾತ್ರೇಯ ಹಿಪ್ಪರಗಿ, ವಿರೇಶ ಹಟ್ಟಿಮಠ, ಮಮ್ಮು ಮುಜಾವರ, ರೈತ ಮುಖಂಡರಾದ ಸಂಗೀತಾ ರಾಠೋಡ, ಶಾನೂರ ನಂದರಗಿ, ದರೆಪ್ಪ ಅನಂತಪೂರ, ಸುಭಾಷ ಕೊಂಡಿ, ಸುರೇಶ ಕೋಣ್ಣುರ, ರವಿಕುಮಾರ ಹೊಸುರ, ಸುರೇಶ ಜತ್ತಿ, ಶಿವಪ್ಪ ಶಿರಹಟ್ಟಿ ಸೇರಿದಂತೆ ರೈತರು ಉಪಸ್ಥಿತರಿದ್ದರು.

