ಅಫಜಲಪುರ: ಪಿಯುಸಿ ಪರೀಕ್ಷೆ ಆರಂಭವಾಗಿದ್ದು ಮೊದಲ ದಿನದ ಪರೀಕ್ಷೆ ಸರಾಗವಾಗಿ ನಡೆದವು. ತಾಲೂಕಿನ ೪ ಪರೀಕ್ಷಾ ಕೇಂದ್ರಗಳಲ್ಲಿ ೨೪೫೧ವಿದ್ಯಾರ್ಥಿಗಳ ಪೈಕಿ ೨೩೭೪ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ೧೧೮ ವಿದ್ಯಾರ್ಥಿಗಳು ಗೈರಾಗಿದ್ದಾರೆ.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ೭೭೨ ವಿದ್ಯಾರ್ಥಿಗಳ ಪೈಕಿ ೭೪೩ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ೨೯ ವಿದ್ಯಾರ್ಥಿಗಳು ಗೈರಾಗಿದ್ದಾರೆ ಎಂದು ಪರೀಕ್ಷಾಧಿಕಾರಿ ಗುರುಲಿಂಗಯ್ಯ ಸಾಲಿಮಠ ತಿಳಿಸಿದ್ದಾರೆ. ತಾಲೂಕಿನ ಕರ್ಜಗಿ ಪಿಯು ಕಾಲೇಜಿನಲ್ಲಿ ೫೬೦ ವಿದ್ಯಾರ್ಥಿಗಳ ಪೈಕಿ ೫೨೯ ವಿದ್ಯಾರ್ಥಿಗಳು ಪರೀಕ್ಷರೆ ಬರೆದರೆ ೩೧ ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ಪರೀಕ್ಷಾಧಿಕಾರಿ ಸಂಜಯ ಪಾಟೀಲ್ ತಿಳಿಸಿದ್ದಾರೆ. ಪಟ್ಟಣದ ಬಸವರಾಜ ಪಾಟೀಲ್ ಸೇಡಂ ಕಾಲೇಜಿನಲ್ಲಿ ೩೫೦ ವಿದ್ಯಾರ್ಥಿಗಳ ಪೈಕಿ ೩೩೩ ವಿದ್ಯಾರ್ಥಿಗಳು ಪರೀಕ್ಷೆ ಬರೆದರೆ ೧೭ ವಿದ್ಯಾರ್ಥಿಗಳು ಗೈರಾಗಿದ್ದಾರೆ. ದಯಾನಂದ ಬಂದರವಾಡ ತಿಳಿಸಿದ್ದಾರೆ. ಮಹಾಂತಮ್ಮ ಪಾಟೀಲ್ ಪಿಯು ಕಾಲೇಜಿನಲ್ಲಿ ೭೬೧ ವಿದ್ಯಾರ್ಥಿಗಳ ಪೈಕಿ ೭೨೮ ವಿದ್ಯಾರ್ಥಿಗಳು ಪರೀಕ್ಷೆ ಬರೆದರೆ ೪೧ ವಿದ್ಯಾರ್ಥಿಗಳು ಗೈರಾಗಿದ್ದಾರೆ ಎಂದು ಪರೀಕ್ಷಾಧಿಕಾರಿ ಸುರೇಶ ಗಣಿಹಾರ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

