Author: editor.udayarashmi@gmail.com

ರಾಷ್ಟ್ರೀಯ ನಗರ ಸಹಕಾರ ಹಣಕಾಸು ಮತ್ತು ಅಭಿವೃದ್ಧಿ ನಿಗಮ ಲಿಮಿಟೆಡ್ ಉದ್ಘಾಟಿಸಿದ ಕೇಂದ್ರ ಸಚಿವ ಅಮಿತ್ ಶಾ ಅಭಿಮತ ನವದೆಹಲಿ: ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ಇಂದು ನವದೆಹಲಿಯಲ್ಲಿ ನಗರ ಸಹಕಾರಿ ಬ್ಯಾಂಕ್ಗಳ ಛತ್ರ ಸಂಸ್ಥೆಯಾದ ರಾಷ್ಟ್ರೀಯ ನಗರ ಸಹಕಾರ ಹಣಕಾಸು ಮತ್ತು ಅಭಿವೃದ್ಧಿ ನಿಗಮ ಲಿಮಿಟೆಡ್ (NUCFDC)ಅನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ, ಸಹಕಾರಿ ಸಂಸ್ಥೆಗಳ ನಡುವೆ ಸಹಕಾರದ ಮನೋಭಾವವನ್ನು ಬಲಪಡಿಸುವ ಬಗ್ಗೆ ಅಮಿತ್ ಶಾ ಒತ್ತಿ ಹೇಳಿದರು.ಸಹಕಾರಿ ಸಂಸ್ಥೆಗಳ ನಡುವೆ ಸಹಕಾರ ಮತ್ತು ಪರಸ್ಪರ ಪ್ರಗತಿಯನ್ನು ಉತ್ತೇಜಿಸದ ಹೊರತು ನಾವು ಮುಂದುವರಿಯಲು ಸಾಧ್ಯವಿಲ್ಲ ಎಂದು ಅಮಿತ್ ಶಾ ತಮ್ಮ ಭಾಷಣದಲ್ಲಿ ಹೇಳಿದರು.ಸುಮಾರು 20 ವರ್ಷಗಳ ಹೋರಾಟದ ನಂತರ ಇಂದು ಎನ್ಯುಸಿಎಫ್ಡಿಸಿ ಸ್ಥಾಪನೆಯಾಗುತ್ತಿದ್ದು, ಇದು ನಮಗೆಲ್ಲರಿಗೂ ಅತ್ಯಂತ ಮಂಗಳಕರ ದಿನವಾಗಿದೆ ಎಂದರು. ಕೇಂದ್ರ ಸಹಕಾರಿ ಸಚಿವರು, ಈ ಹಿಂದೆ ಸಹಕಾರ ಸಚಿವಾಲಯ ಮತ್ತು ಸಹಕಾರಿ ಕ್ಷೇತ್ರವು ಅನೇಕ ಸಚಿವಾಲಯಗಳಲ್ಲಿ ಹರಡಿಕೊಂಡಿತ್ತು ಎಂದು ಹೇಳಿದರು. ಸ್ವಾತಂತ್ರ್ಯದ 75…

Read More

ಚಿಮ್ಮಡ: ಪ್ರಪಂಚದಲ್ಲಿ ವಿದ್ಯೆ, ಸಾಧನೆ ಲಾಟರಿಯಿಂದ ಪಡೆಯಲಾಗುವುದಿಲ್ಲ, ಯಾವೂದೇ ಸಾಧನೆಗೆ ಕಠಿಣ ಪರೀಶ್ರಮವೇ ಮೂಲಮಂತ್ರವೆAದು ತೇರದಾಳ ಶಾಸಕ ಸಿದ್ದು ಸವದಿ ಹೇಳಿದರು.ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭದ ಉದ್ಘಾಟಣೆ ನೆರವೇರಿಸಿ ಮಾತನಾಡಿದ ಅವರು, ಯಾವುದೇ ಕಲಿಕೆಯ ಹಿಂದೆ ತಂದೆ-ತಾಯಿ, ಶಿಕ್ಷಕರು, ಶಾಲಾ ಸಮೀತಿ ಸೇರಿದಂತೆ ಹಲವಾರು ಜನರ ಪರೀಶ್ರಮ ಇರುತ್ತದೆ, ನಾವು ಉತ್ತಮ ಸಾಧನೆ ಮಾಡುವ ಮೂಲಕ ಅವರಿಗೆ ಗೌರವ ಕೊಡಬೇಕು, ಉತ್ತಮ ಪ್ರಜೆಯಾಗುವ ಮೂಲಕ ದೇಶದ ಋಣವನ್ನು ತೀರಿಸಬೇಕೆಂದರು.ಸಾನಿಧ್ಯವಹಿಸಿದ ಸ್ಥಳಿಯ ವಿರಕ್ತಮಠದ ಶ್ರೀ ಪ್ರಭು ಮಹಾಸ್ವಾಮಿಗಳು ಮಾತನಾಡಿದರು.ಸಿಆರ್‌ಪಿ ಸಮನ್ವಯ ಅಧಿಕಾರಿ ದ್ರಾಕ್ಷಾಯಿಣಿ ಮಂಡಿ, ಮುಖ್ಯ ಗುರುಮಾತೆ ಎಂ.ಎಸ್. ಜಿಟ್ಟಿ ಮಾತನಾಡಿದರು.ಸಮಾರಂಭದ ಸಾನಿಧ್ಯವನ್ನು ಓಂಕಾರ ಯರಗಟ್ಟಿಕರ ವಹಿಸಿದ್ದರು ಅಧ್ಯಕ್ಷತೆಯನ್ನು ಎಸ್‌ಡಿಎಂಸಿ ಅಧ್ಯಕ್ಷ ಮಾರುತಿ ಮಮದಾಪೂರ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಗ್ರಾ.ಪಂ ಮಾಜಿ ಅಧ್ಯಕ್ಷ ಆನಂದ ಕವಟಿ, ಪ್ರಕಾಶ ಪಾಟೀಲ, ಎಪಿಎಂಸಿ ನಿರ್ದೆಶಕ ಪ್ರಭು ಮುಧೋಳ, ಮನೋಜ ಹಟ್ಟಿ, ಬಾಳಪ್ಪ ಗಡೆಪ್ಪನವರ, ನಾಗಪ್ಪ ಆಲಕನೂರ, ಬಾಳೇಶ ಬ್ಯಾಕೋಡ, ಪ್ರಾದ್ಯಾಪಕ…

Read More

ಇಂಡಿ: ಇಲ್ಲಿಯ ಕಂದಾಯ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ತಮ್ಮ ಮಗು ಮಹಮ್ಮದ ಮತ್ತು ಮಗಳಿಗೆ ಪೋಲಿಯೊ ಹನಿ ಹಾಕುವ ಮೂಲಕ ತಾಲೂಕಿನಲ್ಲಿ ಪೊಲಿಯೊ ಲಸಿಕೆ ಅಭಿಯಾನಕ್ಕೆ ಇತ್ತೀಚೆಗೆ ಚಾಲನೆ ನೀಡಿದರು.೫ ವರ್ಷದೊಳಗಿನ ೬೧೬೨೯ ಕ್ಕೂ ಹೆಚ್ಚು ಮಕ್ಕಳಿಗೆ ಪೊಲಿಯೊ ಹನಿ ಹಾಕುವ ಗುರಿ ಹೊಂದಲಾಗಿದೆ ಸಂಜೆಯ ವರೆಗೆ ಶೇ ೯೬ ರಷ್ಟು ೫೯೧೬೩ ಮಕ್ಕಳಿಗೆ ಪೋಲಿಯೊ ಹಾಕಲಾಗಿದೆ ಎಂದು ಗದ್ಯಾಳ ತಿಳಿಸಿದರು.ಸಾರ್ವಜನಿಕ ಆಸ್ಪತ್ರೆಯಲ್ಲಿ ಡಾ|| ವಿಪುಲ್ ಕೋಳೆಕರ, ವಿಜಯಲಕ್ಷ್ಮಿ ಹಾದಿಮನಿ, ಗುರಸಂಗವ್ವ ಹಿರೇಪಟ್ಟ,ವೀರಕ್ಷಾ ಕೋಳಿ, ರೇಖಾ ಬಿದರಿ, ಬಸವರಾಜ ಧವಳಗಿ ಮತ್ತಿತರಿದ್ದರು.ತಾಲೂಕಿನಲ್ಲಿ ಇಂಡಿಯ ಸಾರ್ವಜನಿಕ ಕೇಂದ್ರ ಸೇರಿದಂತೆ ತಾಲೂಕಿನ ಎಲ್ಲ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ, ಗ್ರಾ.ಪಂ ಕಚೇರಿ, ಶಾಲೆ, ಅಂಗನವಾಡಿ ಕೇಂದ್ರಗಳು, ದೇವಸ್ಥಾನಗಳಲ್ಲಿ ಪೊಲಿಯೊ ಹಾಕಲಾಯಿತು.ಒಟ್ಟು ೨೬೪ ಕೇಂದ್ರಗಳಲ್ಲಿ , ಒಟ್ಟು ೫೨೮ ಸಿಬ್ಬಂದಿ, ೫೩ ಜನ ಸುಪರವಾಯಿಜರ್ ಪಾಲ್ಗೊಂಡಿದ್ದರು.ಪ್ರತಿ ತಂಡದಲ್ಲಿ ತಲಾ ಇಬ್ಬರು ಪೊಲಿಯೊ ಹನಿ ಹಾಕುವ ಸಿಬ್ಬಂದಿ ಮತ್ತು ತಲಾ ಇಬ್ಬರು ಸಹಾಯಕರು…

Read More

ಕೊಲ್ಹಾರ: ಉತ್ತರ ಕರ್ನಾಟಕ ಭಾಗದ ಕೂಡಗಿ ಗ್ರಾಮದ ಹತ್ತಿರ ನಿರ್ಮಾಣವಾಗಿರುವ ಉಷ್ಣ ವಿದ್ಯುತ್ ಸ್ಥಾವರದ ಕಾರ್ಯಾಚರಣೆಯಿಂದ ವಿಜಯಪೂರ ಜಿಲ್ಲೆ ವಿದ್ಯುತ್ ಕ್ಷೇತ್ರದಲ್ಲಿ ಮತ್ತು ವಿವಿಧ ಕಾಮಗಾರಿಗಳ ಮೂಲಕ ಅಭಿವೃದ್ದಿ ಹೊಂದುತ್ತಿದೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.ವಿಜಯಪುರದ ಎನ್.ಸಿ.ಸಿ. ಆವರಣದಲ್ಲಿ ಸೋಮವಾರ ದಿವಸ ಕೂಡಗಿಯ ಎನ್‌ಟಿಪಿಸಿ ಸಿ.ಎಸ್.ಆರ್ ಅನುಧಾನದಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ರೂ. ೭೦ ಲಕ್ಷಗಳ ವೆಚ್ಚದಲ್ಲಿ ಹಮ್ಮಿಕೊಂಡಿರುವ ಶೇಡ್ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.ವಿಜಯಪುರದಲ್ಲಿ ಉತ್ಕೃಷ್ಟ ಐಟಿಐ ಕೇಂದ್ರ ನಿರ್ಮಾಣಕ್ಕಾಗಿ ಎನ್‌ಟಿಪಿಸಿಯ ಆರ್&ಆರ್ ಅನುದಾನದಲ್ಲಿ ರೂ.೯೦ ಲಕ್ಷಗಳನ್ನು ಮೀಸಲಿರಿಸಲಾಗಿದೆ ಶಿಕ್ಷಣ, ಆರೋಗ್ಯ, ಮೂಲಬೂತ ಸೌಕರ್ಯ, ಸಿ.ಎಸ್.ಆರ್ ಅನುದಾನದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಈ ಎರಡು ಕಾಮಗಾರಿಗಳನ್ನು ನಿರ್ಮಿತ ಕೇಂದ್ರ ವಿಜಯಪುರದವರು ವಹಿಸಿಕೊಂಡಿದ್ದಾರೆ ಎಂದರು.ಈ ವೇಳೆ ಜಿಲ್ಲಾಧಿಕಾರಿಗಳಾದ ಟಿ. ಭೂಬಾಲನ್, ಕೂಡಗಿಯ ಎನ್‌ಟಿಪಿಸಿ ಚೀಪ್ ಜನರಲ್ ಮ್ಯಾನೇಜರ ಬಿದ್ಯಾನಂದ ಝಾ, ಕೆ.ಕೆ.ದತ್ತಾಜಿ. ಎಮ್ (ಓ&ಎಮ್), ಕೆ.ಎಸ್.ಮುರ್ತಿ, ನಿರ್ದೆಶಕರು ನಿರ್ಮಿತ ಕೇಂದ್ರ ವಿಜಯಪುರ, ಹಾಗೂ ಇನ್ನಿತರ ಅಧಿಕಾರಿಗಳು ಸಮಾರಂಭದಲ್ಲಿ ಉಪಸ್ಥಿತರಿದ್ದರು.

Read More

ಬೊಮ್ಮನಜೋಗಿ ಗ್ರಾಮದ ಸಾಮಾಜಿಕ ಕಳಕಳಿಯ ರಾಮನಗೌಡ ಕನ್ನೊಳ್ಳಿ ಯ ಗ್ರಾಮ ಸೇವೆ -ಸಾಯಬಣ್ಣ ಮಾದರ (ಸಲಾದಹಳ್ಳಿ) ವಿಜಯಪುರ: ಅದೊಂದು ಕುಗ್ರಾಮ. ಆ ಊರಿಗೆ ಬಸ್ಸಿನ ಸೌಕರ್ಯ ಇರುವುದಿಲ್ಲ. ರಸ್ತೆಯಂತೂ ನೋಡುತೀರದು, ಅಕ್ಷರಸ್ಥರು ಅಲ್ಲಿ ಕಂಡರೂ ಮೂಢನಂಬಿಕೆಯೆಂಬ ಅಂಧಕಾರವನ್ನು ಹೊದ್ದು ಮಲಗಿದ ಊರದು.ಆ ಗ್ರಾಮದಲ್ಲಿ ಮಹಿಳೆಯರಿಗೆ ಬಹಿರ್ದೆಸೆಗೆ ಹೋಗುವುದು ಒಂದು ಸಾಹಸದ ಕೆಲಸ. ಅವರು ಬಹಿರ್ದೇಸೆಗೆ ಕುಳಿತುಕೊಳ್ಳುವುದು ರೋಡಿನ ಪಕ್ಕದಲ್ಲಿಯೋ, ಕಾಲುದಾರಿಗಳ ಪಕ್ಕದಲ್ಲಿಯೋ ಕುಳಿತುಕೊಳ್ಳಬೇಕಾಗಿತ್ತು. ದಾರಿ ಹೋಕರು ಬರುವುದು ಕಂಡರೆ ಅವರು ಎದ್ದು ನಿಲ್ಲುವುದು ಸಾಮಾನ್ಯವಾಗಿತ್ತು. ಅವರು ಬಹಿರ್ದೇಸೆ ಮುಗಿಸುವಷ್ಟರಲ್ಲಿ ಹಲವು ಬಾರಿ ಎದ್ದು ಕುಳಿತುಕೊಳ್ಳಬೇಕಾಗಿತ್ತು. ಮಳೆಗಾಲದಲ್ಲಿ ಅಂತೂ ಹೇಳತೀರದ ಕಷ್ಟ. ರಾಡಿ ಗಲೀಜು ತುಂಬಿದ ರಸ್ತೆಗಳು, ಒಂದು ಕಾಲು ಎತ್ತಿ ಇಡಬೇಕೆಂದರೂ ಅಲ್ಲಿ ಬೆಂಕಿ ಕೆಂಡದಂತ ಹೊಲಸು. ಬಾಣಂತಿಯರು, ವೃದ್ಧರು ಅಂಗವಿಕಲರಿಗೆ ದೊಡ್ಡದೊಂದು ವ್ಯಥೆ. ಇಂತಹ ರಾಜ್ಯದ ಹಲವು ಹಳ್ಳಿಗಳಲ್ಲಿ ಇದು ಒಂದು ದೇವರ ಹಿಪ್ಪರಗಿ ತಾಲೂಕಿನ ಬೊಮ್ಮನಜೋಗಿ.ಇದನ್ನೆಲ್ಲಾ ಕಣ್ಣಾರೆ ನೋಡಿದ ಅದೇ ಗ್ರಾಮದ ರಾಮನಗೌಡ ಕನ್ನೊಳ್ಳಿ ಎಂಬ ಅಧಿಕಾರಿಯು ತಾನು…

Read More

ಮಾದಕ ದ್ರವ್ಯ ಮುಕ್ತ ಗುರಿ ಸಾಧಿಸುವೆಡೆ ಭಾರತ ವೇಗವಾಗಿ ಸಾಗುತ್ತಿದೆ :ಕೇಂದ್ರ ಸಚಿವ ಅಮಿತ್ ಶಾ ನವದೆಹಲಿ: ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ಮಾದಕವಸ್ತು ವ್ಯಾಪಾರ ಮತ್ತು ಅದರ ದುಷ್ಪರಿಣಾಮಗಳನ್ನು ಎದುರಿಸುವಲ್ಲಿ ಮೋದಿ ಸರ್ಕಾರದ ಯಶಸ್ಸಿನ ಕುರಿತು ಮೂರು ವೀಡಿಯೊಗಳನ್ನು ಬಿಡುಗಡೆ ಮಾಡಿದರು.ದೇಶದಲ್ಲಿ ಡ್ರಗ್ಸ್ ಪತ್ತೆ, ಜಾಲಗಳ ನಾಶ, ಅಪರಾಧಿಗಳ ಬಂಧನ ಮತ್ತು ಮಾದಕ ವ್ಯಸನಿಗಳ ಪುನರ್ವಸತಿ ಮೂಲಕ, ಮಾದಕ ದ್ರವ್ಯ ಮುಕ್ತ ಭಾರತದ ಗುರಿಯನ್ನು ಸಾಧಿಸುವತ್ತ ಮೋದಿ ಸರ್ಕಾರ ವೇಗವಾಗಿ ಸಾಗುತ್ತಿದೆ. ಮೋದಿಯವರ ನಾಯಕತ್ವ ಮತ್ತು ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ ಮಾದಕ ದ್ರವ್ಯ ಮುಕ್ತ ಭಾರತವು ಮುಂಬರುವ ಪೀಳಿಗೆಗೆ ಬಹುದೊಡ್ಡ ಕೊಡುಗೆಯಾಗಲಿದೆ.ಸ್ವಾತಂತ್ರ್ಯದ ಸುವರ್ಣ ಯುಗದಲ್ಲಿ, ಪ್ರಧಾನಿ ನರೇಂದ್ರ ಮೋದಿಯವರ ಕಟ್ಟುನಿಟ್ಟಿನ ಧೋರಣೆ ಮತ್ತು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರ ಸಮರ್ಥ ಮಾರ್ಗದರ್ಶನದಲ್ಲಿ, ಮಾದಕ ದ್ರವ್ಯ ವ್ಯಾಪಾರವನ್ನು ತಡೆಗಟ್ಟಲು ಸಿದ್ಧತೆಗಳು ಭರದಿಂದ ನಡೆಯುತ್ತಿವೆ, ಈ ಕ್ರಮಗಳ ಮೂಲಕ ಮಾದಕ…

Read More

ಸಿಂದಗಿ: ಜಿಲ್ಲೆಯಾದ್ಯಂತ ಎಲ್ಲ ಸರಕಾರಿ ಕಛೇರಿಗಳಲ್ಲಿ ಕೆಲಸ ಕಾರ್ಯಗಳ ಬಗ್ಗೆ ನಿಗಾ ಇಡಬೇಕೆಂದು ಆದೇಶವಿದ್ದ ಕಾರಣ ಇಂದು ಸಿಂದಗಿ ಪುರಸಭೆ ಕಾರ್ಯಾಲಯ ಮೇಲೆ ದಾಳಿ ಮಾಡಿದ್ದೇವೆ ಎಂದು ಲೋಕಾಯುಕ್ತ ಎಸ್ಪಿ ಟಿ.ಮಲ್ಲೇಶ ಹೇಳಿದರು.ಪಟ್ಟಣದ ಪುರಸಭೆ ಕಾರ್ಯಾಲಯಕ್ಕೆ ಏಕಾಏಕಿ ದಾಳಿ ಮಾಡಿದ ಲೋಕಾಯುಕ್ತರು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಂದಗಿ ಪುರಸಭೆಯಲ್ಲಿ ಲೋಪದೋಷಗಳು ಹೆಚ್ಚಾಗಿವೆ ಎಂದು ನಮಗೆ ದೂರುಗಳು ಬಂದಿದ್ದವು. ದೂರುಗಳ ಆಧಾರದ ಮೇಲೆ ದಾಳಿ ನಡೆಸಿದಾಗ ಇಲ್ಲಿನ ವಾತಾವರಣ ಹದಗೆಟ್ಟಿದೆ. ಜನನ ಮತ್ತು ಮರಣ ದಾಖಲಾತಿ ನೀಡಿವುದು ತಡ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರಿಂದ ದೂರು ಬಂದಿದೆ. ಎಲ್ಲದಕ್ಕಿಂತ ಮುಖ್ಯವಾಗಿ ಪುರಸಭೆಯಲ್ಲಿ ಸ್ವಚ್ಚತೆ ಎಂಬುದು ಮರೀಚಿಕೆಯಾಗಿದೆ. ಸಾರ್ವಜನಿಕರಿಗೆ ಸರಕಾರ ಸವಲತ್ತುಗಳು ಒದಗಿಸಬೇಕು ಮತ್ತು ಅವರಿಗೆ ಅನುಕೂಲ ಮಾಡಬೇಕು. ಆಡಳಿತ ಚುರುಕುಗೊಳಿಸುವ ನಿಟ್ಟಿನಲ್ಲಿ ನಾವು ದಾಳಿ ಮಾಡಿದ್ದೇವೆ ಎಂದರು.ಸಿಬ್ಬಂದಿಗೆ ತರಾಟೆ ಊರಿನ ಶುಚಿತ್ವ ಕಾಪಾಡಬೇಕಾದ ಪುರಸಭೆಯೇ ಮೊದಲು ಶುಚಿತ್ವದಿಂದ ಕೂಡಿಲ್ಲವೆಂದರೆ ಊರನ್ನು ಹೇಗೆ ಸ್ವಚ್ಚವಾಗಿ ಇಡುತ್ತಿರಿ? ನಿಮ್ಮ ಮನೆಯನ್ನು ಹೀಗೆ ಇಟ್ಟುಕೊಳ್ಳುತ್ತೀರಾ ಎಂದು ಪುರಸಭೆ ಮುಖ್ಯ…

Read More

ಫಲಾನುಭವಿಗಳ ಪಟ್ಟಿ ರದ್ದು ಪಡಿಸಿದ್ದಕ್ಕೆ ಶಾಸಕ ಮನಗೂಳಿ ವಿರುದ್ದ ಬಿಜೆಪಿ ಬೃಹತ್ ಪ್ರತಿಭಟನೆ ಸಿಂದಗಿ: ಎಸ್.ಸಿ.ಪಿ.ಟಿ ಮತ್ತು ಟಿ.ಎಸ್.ಪಿ ಅನುದಾನದ ಕ್ರಿಯಾಯೋಜನೆಯಲ್ಲಿ ರೂ.೫ಕೋಟಿ ಅನುದಾನ ಬಿಡುಗಡೆಗೊಳಿಸಿ ೬೯ ಪಲಾನುಭವಿಗಳಿಗೆ ಟೆಂಡರ್ ಕರೆಯಲಾಗಿತ್ತು. ಆದರೆ ನನ್ನ ಅವಧಿಯಲ್ಲಿ ಆಯ್ಕೆಯಾದ ಫಲಾನುಭವಿಗಳ ಹೆಸರನ್ನು ಬದಲಾಯಿಸಿ ಬೇರೆ ಹೆಸರುಗಳನ್ನು ಸೇರಿಸುವಂತೆ ಈಗಿನ ಶಾಸಕರು ಸಚಿವರಿಗೆ ಪತ್ರ ಬರೆದಿರುವುದು ಖಂಡಿಸುತ್ತೇವೆ ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಮಾಜಿ ಶಾಸಕ ರಮೇಶ ಭೂಸನೂರ ಹೇಳಿದರು.ತಾಲೂಕಿನ ರಾಂಪೂರ ಪಿಎ ಗ್ರಾಮದ ಅಂಬೇಡ್ಕರ್ ವೃತ್ತದಿಂದ ಕೆಬಿಜೆಎನ್‌ಎಲ್ ಕಾರ್ಯಾಲಯದವರೆಗೆ ಬಿಜೆಪಿ ಮಂಡಲದ ವತಿಯಿಂದ ಹಮ್ಮಿಕೊಂಡ ೨೦೨೨-೨೩ನೆಯ ಸಾಲಿನ ಎಸ್‌ಸಿಪಿ/ಟಿಎಸ್‌ಪಿ ಅನುದಾನದಡಿಯಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮದ ಮೂಲಕ ಅರ್ಹ ಗಂಗಾ ಕಲ್ಯಾಣ ಯೋಜನೆಯ ಫಲಾನುಭವಿಗಳ ಪಟ್ಟಿ ರದ್ದು ಪಡಿಸಿರುವ ಸ್ಥಳೀಯ ಶಾಸಕರ ವಿರುದ್ದ ಬೃಹತ್ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಅವರು, ನನ್ನ ಅವಧಿಯಲ್ಲಿನ ಫಲಾನುಭವಿಗಳ ಪಟ್ಟಿಯನ್ನು ರದ್ದು ಪಡಿಸುವಂತೆ ಪತ್ರ ಬರೆದು ದೀನ ದಲಿತರಿಗೆ ಸ್ಥಳೀಯ ಶಾಸಕರು ಅನ್ಯಾಯ ಮಾಡುತ್ತಿದ್ದಾರೆ, ಇದನ್ನು…

Read More

ಆಲಮೇಲ: ಕೇವಲ ಶಿಕ್ಷಣದಿಂದ ಮಾತ್ರ ಸಮಾಜ ಪರಿವರ್ತನೆ ಆಗುವದಿಲ್ಲ. ಶಿಕ್ಷಣದ ಜೊತೆಗೆ ಸಂಸ್ಕಾರವು ಮುಖ್ಯವಾಗಿದೆ ಹಂತ ಸಂಸ್ಕಾರ ಸೀಗಬೇಕು ಎಂದರೆ ಮಠ ಮಂದಿಗಳಲ್ಲಿ ಮಾತ್ರ ಎಂದು ಶಿರಶ್ಯಾಡದ ಅಭಿನವ ಮುರುಘೇಂದ್ರ ಶಿವಾಚಾರ್ಯರು ಹೇಳಿದರು.ಮಂಗಳವಾರ ಪಟ್ಟಣದ ನಿತ್ಯಾನಂದ ಆರೋಡ ಸಂಗನಬದವೇಶ್ವರ ಜಾತ್ರಾ ಮಹೋತ್ಸವದ ನಿಮಿತ್ಯ ನಡೆದ ಸಾಮೂಹಿಕ ವಿವಾಹ ಹಾಗೂ ಧರ್ಮ ಸಭೆಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.ಮಠ-ಮಂದಿರಗಳು ಇರುವುದೇ ಸಮಾಜ ದಾರಿ ತಪ್ಪಿದಾಗ ತಿದ್ದುವ ಸಲುವಾಗಿ, ಅದಕ್ಕೆ ಸಮಾಜ ಸುದಾರಣೆ ಆಗಬೇಕು ಎಂದರೆ ಮೊದಲು ಸಂಸ್ಕಾರ ಬೇಕಾಗಿದೆ. ಅಂತಹ ಸಂಸ್ಕಾರ ಮಠ ಮಂದಿರಗಳಲ್ಲಿದೆ. ಅದಕ್ಕೆ ಮಠ ಮಂದಿರಗಳಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು. ಆಲಮೇಲದ ನಿತ್ಯಾನಂದ ಆರೋಢ ಮಠದಲ್ಲಿ ಹಲವಾರು ವರ್ಷಗಳಿಂದ ಸಾಮೂಹಿಕ ವಿವಾಹ ಮಾಡಿಕೊಂಡು ಬಂದಿದ್ದು ಇದರಿಂದ ಬಡವರಿಗೆ ಸಾಕಷ್ಟು ಅನಕೂಲವಾಗಿದೆ ಎಂದು ಹೇಳಿದರು.ರಾಂಪೂರದ ನಿತ್ಯಾನಂದ ಮಹಾರಾಜರು, ಚಿಂಚೋಳಿಯ ಶರಬಸವ ಶರಣರು, ಮಠದ ಪೀಠಾಧಿಕಾರಿ ಬಸವರಲಿಂಗ ಶರಣರು, ಪಂಚಯ್ಯ ರಾಂಪೂರಮಠ, ಚನ್ನಯ್ಯ ಸಾರಂಗಮಠ, ಶಿಕ್ಷಕ ಪಂಡಿತ ಅವಜಿ, ಅಮರೇಶ ಸಾಲಕ್ಕಿ…

Read More

ಮಕ್ಕಳ ಕವನ ಸಂಕಲನ ’ಸೀಸದ ಕಡ್ಡಿ’ ಕೃತಿ ಲೋಕಾರ್ಪಣೆ | ಮಕ್ಕಳ ಸಾಹಿತಿ ಪ.ಗು.ಸಿದ್ದಾಪೂರ ಅಭಿಮತ ಆಲಮೇಲ: ಮಕ್ಕಳ ಸಾಹಿತ್ಯ ಲೇಖನಗಳು ಬರೆಯಬೇಕೆಂದರೆ ಮಕ್ಕಳ ಮನೋಭಾವದ ಮಟ್ಟಕ್ಕೆ ಇಳಿದು ಬರೆದರೆ ಮಾತ್ರ ಅದು ಮಕ್ಕಳ ಸಾಹಿತ್ಯವಾಗಲಿದೆ ಎಂದು ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿವೃತ ಶಿಕ್ಷಕ ಹಾಗೂ ಮಕ್ಕಳ ಸಾಹಿತಿ ಹ.ಮ. ಪೂಜಾರ ಹೇಳಿದರು.ಮಂಗಳವಾರ ತಾಲೂಕಿನ ಬಳಗಾನೂರ ಗ್ರಾಮದ ಗುರು ಕೇದಾರಲಿಂಗೇಶ್ವರ ಪ್ರೌಢಶಾಲೆಯಲ್ಲಿ ಬಂಥನಾಳದ ಮಾದಿರಿ ಪ್ರಕಾಶನ ಪ್ರಕಟಿಸಿರುವ ಲೇಖಕ ರಾಚು ಕೊಪ್ಪ ಅವರ ಮಕ್ಕಳ ಕವನ ಸಂಕಲನ ’ಸೀಸದ ಕಡ್ಡಿ’ ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿದರು.ಎಲ್ಲರೂ ಮಕ್ಕಳ ಸಾಹಿತ್ಯ ಲೇಖನಗಳು ಬರೆಯುವದು ಕಷ್ಟದ ಕೆಲಸ. ಯಾರು ಮಕ್ಕಳ ಜೊತೆ ನಿರಂತರ ಒಡನಾಟ ಇರುವುದೊ ಅಂತವರು ಮಾತ್ರ ಮಕ್ಕಳ ಸಾಹಿತ್ಯವನ್ನು ಬರೆಯಬಲ್ಲರು. ಮಕ್ಕಳ ಕುರಿತು ಸಾಹಿತ್ಯವನ್ನು ರಚಿಸಬೇಕು ಎಂದರೆ ಅದು ಜನ್ಮ ಕೊಟ್ಟ ತಾಯಿ ಇನ್ನೊಬ್ಬರು ವಿದ್ಯೆ ಕಲಿಸಿದ ಗುರುವಿನಿಂದ ಮಾತ್ರ. ಇವರಿಬ್ಬರು ಮಕ್ಕಳ ಜೊತೆ ಮಕ್ಕಳಾಗಿ ಮಕ್ಕಳ ಮನೋಬಾವವನ್ನು ಬಲ್ಲವರಾಗಿರುತ್ತಾರೆ ಎಂದರು.ಮಕ್ಕಳ ಕವನ…

Read More