ಮಕ್ಕಳ ಕವನ ಸಂಕಲನ ’ಸೀಸದ ಕಡ್ಡಿ’ ಕೃತಿ ಲೋಕಾರ್ಪಣೆ | ಮಕ್ಕಳ ಸಾಹಿತಿ ಪ.ಗು.ಸಿದ್ದಾಪೂರ ಅಭಿಮತ
ಆಲಮೇಲ: ಮಕ್ಕಳ ಸಾಹಿತ್ಯ ಲೇಖನಗಳು ಬರೆಯಬೇಕೆಂದರೆ ಮಕ್ಕಳ ಮನೋಭಾವದ ಮಟ್ಟಕ್ಕೆ ಇಳಿದು ಬರೆದರೆ ಮಾತ್ರ ಅದು ಮಕ್ಕಳ ಸಾಹಿತ್ಯವಾಗಲಿದೆ ಎಂದು ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿವೃತ ಶಿಕ್ಷಕ ಹಾಗೂ ಮಕ್ಕಳ ಸಾಹಿತಿ ಹ.ಮ. ಪೂಜಾರ ಹೇಳಿದರು.
ಮಂಗಳವಾರ ತಾಲೂಕಿನ ಬಳಗಾನೂರ ಗ್ರಾಮದ ಗುರು ಕೇದಾರಲಿಂಗೇಶ್ವರ ಪ್ರೌಢಶಾಲೆಯಲ್ಲಿ ಬಂಥನಾಳದ ಮಾದಿರಿ ಪ್ರಕಾಶನ ಪ್ರಕಟಿಸಿರುವ ಲೇಖಕ ರಾಚು ಕೊಪ್ಪ ಅವರ ಮಕ್ಕಳ ಕವನ ಸಂಕಲನ ’ಸೀಸದ ಕಡ್ಡಿ’ ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿದರು.
ಎಲ್ಲರೂ ಮಕ್ಕಳ ಸಾಹಿತ್ಯ ಲೇಖನಗಳು ಬರೆಯುವದು ಕಷ್ಟದ ಕೆಲಸ. ಯಾರು ಮಕ್ಕಳ ಜೊತೆ ನಿರಂತರ ಒಡನಾಟ ಇರುವುದೊ ಅಂತವರು ಮಾತ್ರ ಮಕ್ಕಳ ಸಾಹಿತ್ಯವನ್ನು ಬರೆಯಬಲ್ಲರು. ಮಕ್ಕಳ ಕುರಿತು ಸಾಹಿತ್ಯವನ್ನು ರಚಿಸಬೇಕು ಎಂದರೆ ಅದು ಜನ್ಮ ಕೊಟ್ಟ ತಾಯಿ ಇನ್ನೊಬ್ಬರು ವಿದ್ಯೆ ಕಲಿಸಿದ ಗುರುವಿನಿಂದ ಮಾತ್ರ. ಇವರಿಬ್ಬರು ಮಕ್ಕಳ ಜೊತೆ ಮಕ್ಕಳಾಗಿ ಮಕ್ಕಳ ಮನೋಬಾವವನ್ನು ಬಲ್ಲವರಾಗಿರುತ್ತಾರೆ ಎಂದರು.
ಮಕ್ಕಳ ಕವನ ಸಂಕಲ ’ಸೀಸದ ಕಡ್ಡಿ’ ಕೃತಿಯ ಲೇಖಕ ರಾಚು ಕೊಪ್ಪ ಪ್ರಾಥಮಿಕ ಶಿಕ್ಷಕರಾಗಿರುವದರಿಂದ ಮಕ್ಕಳ ಕವನವನ್ನು ಬರೆಯಲು ಸಾದ್ಯವಾಗಿದೆ. ಪ್ರಾಥಮಿಕ ಹಂತದಿಂದಲೆ ಮಕ್ಕಳು ಪಠ್ಯಪುಸ್ತಕದೊಂದಿಗೆ ಕಥೆ ಕಾದಂಬರಿಗಳು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾಗೂ ಮುಳವಾಡದ ಮಕ್ಕಳ ಸಾಹಿತಿ ಪ.ಗು. ಸಿದ್ದಾಪೂರ ಮಾತನಾಡಿದರು.
ಲೇಖಕ ರಾಚು ಕೊಪ್ಪ ಪ್ರಾಸ್ಥಾವಿಕವಾಗಿ ಮಾತನಾಡಿದರು.
ಕರ್ನಾಟಕ ರಾಜ್ಯ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶಿವರಾಜ ಬಿರಾದಾರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಆನಂದ ಭೂಸನೂರ, ಮುಖ್ಯ ಶಿಕ್ಷಕ ಎಂ.ಎಸ್. ಸಾವಳಸಂಗ, ಅವಧೂತ ಬಂಡಗಾರ, ಎಸ್.ಎಚ್. ಬಿರಾದಾರ, ಡಿ.ಕೆ. ಕತ್ನಳ್ಳಿ, ಸಾಧಕ ಮಲ್ಲಿಕಾರ್ಜುನ ಉಪ್ಪಾರ ಮುಂತಾದವರು ಉಪಸ್ಥಿತರಿದ್ದರು.

