ಕೊಲ್ಹಾರ: ಉತ್ತರ ಕರ್ನಾಟಕ ಭಾಗದ ಕೂಡಗಿ ಗ್ರಾಮದ ಹತ್ತಿರ ನಿರ್ಮಾಣವಾಗಿರುವ ಉಷ್ಣ ವಿದ್ಯುತ್ ಸ್ಥಾವರದ ಕಾರ್ಯಾಚರಣೆಯಿಂದ ವಿಜಯಪೂರ ಜಿಲ್ಲೆ ವಿದ್ಯುತ್ ಕ್ಷೇತ್ರದಲ್ಲಿ ಮತ್ತು ವಿವಿಧ ಕಾಮಗಾರಿಗಳ ಮೂಲಕ ಅಭಿವೃದ್ದಿ ಹೊಂದುತ್ತಿದೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ವಿಜಯಪುರದ ಎನ್.ಸಿ.ಸಿ. ಆವರಣದಲ್ಲಿ ಸೋಮವಾರ ದಿವಸ ಕೂಡಗಿಯ ಎನ್‌ಟಿಪಿಸಿ ಸಿ.ಎಸ್.ಆರ್ ಅನುಧಾನದಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ರೂ. ೭೦ ಲಕ್ಷಗಳ ವೆಚ್ಚದಲ್ಲಿ ಹಮ್ಮಿಕೊಂಡಿರುವ ಶೇಡ್ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ವಿಜಯಪುರದಲ್ಲಿ ಉತ್ಕೃಷ್ಟ ಐಟಿಐ ಕೇಂದ್ರ ನಿರ್ಮಾಣಕ್ಕಾಗಿ ಎನ್‌ಟಿಪಿಸಿಯ ಆರ್&ಆರ್ ಅನುದಾನದಲ್ಲಿ ರೂ.೯೦ ಲಕ್ಷಗಳನ್ನು ಮೀಸಲಿರಿಸಲಾಗಿದೆ ಶಿಕ್ಷಣ, ಆರೋಗ್ಯ, ಮೂಲಬೂತ ಸೌಕರ್ಯ, ಸಿ.ಎಸ್.ಆರ್ ಅನುದಾನದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಈ ಎರಡು ಕಾಮಗಾರಿಗಳನ್ನು ನಿರ್ಮಿತ ಕೇಂದ್ರ ವಿಜಯಪುರದವರು ವಹಿಸಿಕೊಂಡಿದ್ದಾರೆ ಎಂದರು.
ಈ ವೇಳೆ ಜಿಲ್ಲಾಧಿಕಾರಿಗಳಾದ ಟಿ. ಭೂಬಾಲನ್, ಕೂಡಗಿಯ ಎನ್‌ಟಿಪಿಸಿ ಚೀಪ್ ಜನರಲ್ ಮ್ಯಾನೇಜರ ಬಿದ್ಯಾನಂದ ಝಾ, ಕೆ.ಕೆ.ದತ್ತಾಜಿ. ಎಮ್ (ಓ&ಎಮ್), ಕೆ.ಎಸ್.ಮುರ್ತಿ, ನಿರ್ದೆಶಕರು ನಿರ್ಮಿತ ಕೇಂದ್ರ ವಿಜಯಪುರ, ಹಾಗೂ ಇನ್ನಿತರ ಅಧಿಕಾರಿಗಳು ಸಮಾರಂಭದಲ್ಲಿ ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
ಉಷ್ಣ ವಿದ್ಯುತ್ ಸ್ಥಾವರದಿಂದ ಅಭಿವೃದ್ದಿ ಕಾರ್ಯ :ಶಾಸಕ ಯತ್ನಾಳ
Related Posts
Add A Comment

