ಚಿಮ್ಮಡ: ಪ್ರಪಂಚದಲ್ಲಿ ವಿದ್ಯೆ, ಸಾಧನೆ ಲಾಟರಿಯಿಂದ ಪಡೆಯಲಾಗುವುದಿಲ್ಲ, ಯಾವೂದೇ ಸಾಧನೆಗೆ ಕಠಿಣ ಪರೀಶ್ರಮವೇ ಮೂಲಮಂತ್ರವೆAದು ತೇರದಾಳ ಶಾಸಕ ಸಿದ್ದು ಸವದಿ ಹೇಳಿದರು.
ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭದ ಉದ್ಘಾಟಣೆ ನೆರವೇರಿಸಿ ಮಾತನಾಡಿದ ಅವರು, ಯಾವುದೇ ಕಲಿಕೆಯ ಹಿಂದೆ ತಂದೆ-ತಾಯಿ, ಶಿಕ್ಷಕರು, ಶಾಲಾ ಸಮೀತಿ ಸೇರಿದಂತೆ ಹಲವಾರು ಜನರ ಪರೀಶ್ರಮ ಇರುತ್ತದೆ, ನಾವು ಉತ್ತಮ ಸಾಧನೆ ಮಾಡುವ ಮೂಲಕ ಅವರಿಗೆ ಗೌರವ ಕೊಡಬೇಕು, ಉತ್ತಮ ಪ್ರಜೆಯಾಗುವ ಮೂಲಕ ದೇಶದ ಋಣವನ್ನು ತೀರಿಸಬೇಕೆಂದರು.
ಸಾನಿಧ್ಯವಹಿಸಿದ ಸ್ಥಳಿಯ ವಿರಕ್ತಮಠದ ಶ್ರೀ ಪ್ರಭು ಮಹಾಸ್ವಾಮಿಗಳು ಮಾತನಾಡಿದರು.
ಸಿಆರ್‌ಪಿ ಸಮನ್ವಯ ಅಧಿಕಾರಿ ದ್ರಾಕ್ಷಾಯಿಣಿ ಮಂಡಿ, ಮುಖ್ಯ ಗುರುಮಾತೆ ಎಂ.ಎಸ್. ಜಿಟ್ಟಿ ಮಾತನಾಡಿದರು.
ಸಮಾರಂಭದ ಸಾನಿಧ್ಯವನ್ನು ಓಂಕಾರ ಯರಗಟ್ಟಿಕರ ವಹಿಸಿದ್ದರು ಅಧ್ಯಕ್ಷತೆಯನ್ನು ಎಸ್‌ಡಿಎಂಸಿ ಅಧ್ಯಕ್ಷ ಮಾರುತಿ ಮಮದಾಪೂರ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಗ್ರಾ.ಪಂ ಮಾಜಿ ಅಧ್ಯಕ್ಷ ಆನಂದ ಕವಟಿ, ಪ್ರಕಾಶ ಪಾಟೀಲ, ಎಪಿಎಂಸಿ ನಿರ್ದೆಶಕ ಪ್ರಭು ಮುಧೋಳ, ಮನೋಜ ಹಟ್ಟಿ, ಬಾಳಪ್ಪ ಗಡೆಪ್ಪನವರ, ನಾಗಪ್ಪ ಆಲಕನೂರ, ಬಾಳೇಶ ಬ್ಯಾಕೋಡ, ಪ್ರಾದ್ಯಾಪಕ ಡಾ;ಎಚ್.ಎಂ. ಕುಂಬಾರ ಇಲಾಹಿ ಜಮಖಂಡಿ ಸೇರಿದಂತೆ ಹಲವಾರು ಜನ ಪ್ರಮುಖರು ವೇದಿಕೆಯಲ್ಲಿದ್ದರು.
ಇದೇ ವೇಳೆ ಕ್ರೀಡಾಕೂಟಗಳಲ್ಲಿ ವಿಜೇತರಾದ ಹಾಗೂ ಹಲವು ಸಾಧಕ ವಿದ್ಯಾರ್ಥಿಗಳನ್ನು ಸತ್ಕರಿಸಿ ಗೌರವಿಸಲಾಯಿತು.
Subscribe to Updates
Get the latest creative news from FooBar about art, design and business.
Related Posts
Add A Comment

