Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಪೋಲಿಯೋ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ

ಮಕ್ಕಳಲ್ಲಿ ಕಲಿಕೆಯ ಆಸಕ್ತಿ ಹೆಚ್ಚಿಸುವ ಪ್ರವಾಸಗಳು :ಹಿರೇಮಠ

ಸಾತಿಹಾಳ-ರಬಿನಾಳ ಸಂಪರ್ಕ ರಸ್ತೆ ಸುಧಾರಣೆಗೆ ಗ್ರಾಮಸ್ಥರಿಂದ ಮನವಿ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಮಾದಕ ವ್ಯಸನಿಗಳ ಪತ್ತೆ, ಮಾದಕ ದ್ರವ್ಯ ಜಾಲಗಳ ನಾಶ
(ರಾಜ್ಯ ) ಜಿಲ್ಲೆ

ಮಾದಕ ವ್ಯಸನಿಗಳ ಪತ್ತೆ, ಮಾದಕ ದ್ರವ್ಯ ಜಾಲಗಳ ನಾಶ

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಮಾದಕ ದ್ರವ್ಯ ಮುಕ್ತ ಗುರಿ ಸಾಧಿಸುವೆಡೆ ಭಾರತ ವೇಗವಾಗಿ ಸಾಗುತ್ತಿದೆ :ಕೇಂದ್ರ ಸಚಿವ ಅಮಿತ್ ಶಾ

ನವದೆಹಲಿ: ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ಮಾದಕವಸ್ತು ವ್ಯಾಪಾರ ಮತ್ತು ಅದರ ದುಷ್ಪರಿಣಾಮಗಳನ್ನು ಎದುರಿಸುವಲ್ಲಿ ಮೋದಿ ಸರ್ಕಾರದ ಯಶಸ್ಸಿನ ಕುರಿತು ಮೂರು ವೀಡಿಯೊಗಳನ್ನು ಬಿಡುಗಡೆ ಮಾಡಿದರು.
ದೇಶದಲ್ಲಿ ಡ್ರಗ್ಸ್ ಪತ್ತೆ, ಜಾಲಗಳ ನಾಶ, ಅಪರಾಧಿಗಳ ಬಂಧನ ಮತ್ತು ಮಾದಕ ವ್ಯಸನಿಗಳ ಪುನರ್ವಸತಿ ಮೂಲಕ, ಮಾದಕ ದ್ರವ್ಯ ಮುಕ್ತ ಭಾರತದ ಗುರಿಯನ್ನು ಸಾಧಿಸುವತ್ತ ಮೋದಿ ಸರ್ಕಾರ ವೇಗವಾಗಿ ಸಾಗುತ್ತಿದೆ. ಮೋದಿಯವರ ನಾಯಕತ್ವ ಮತ್ತು ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ ಮಾದಕ ದ್ರವ್ಯ ಮುಕ್ತ ಭಾರತವು ಮುಂಬರುವ ಪೀಳಿಗೆಗೆ ಬಹುದೊಡ್ಡ ಕೊಡುಗೆಯಾಗಲಿದೆ.
ಸ್ವಾತಂತ್ರ್ಯದ ಸುವರ್ಣ ಯುಗದಲ್ಲಿ, ಪ್ರಧಾನಿ ನರೇಂದ್ರ ಮೋದಿಯವರ ಕಟ್ಟುನಿಟ್ಟಿನ ಧೋರಣೆ ಮತ್ತು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರ ಸಮರ್ಥ ಮಾರ್ಗದರ್ಶನದಲ್ಲಿ, ಮಾದಕ ದ್ರವ್ಯ ವ್ಯಾಪಾರವನ್ನು ತಡೆಗಟ್ಟಲು ಸಿದ್ಧತೆಗಳು ಭರದಿಂದ ನಡೆಯುತ್ತಿವೆ, ಈ ಕ್ರಮಗಳ ಮೂಲಕ ಮಾದಕ ದ್ರವ್ಯಗಳ ಜಫ್ತಿ ಮತ್ತು ಬಂಧನಗಳ ಸಂಖ್ಯೆಯಲ್ಲಿ ತೀವ್ರ ಹೆಚ್ಚಳವಾಗಿದೆ. ಶಾ ಅವರ ನಿಷ್ಠುರ ನೀತಿಗಳಿಂದಾಗಿ, ಸರ್ಕಾರಗಳು ಮತ್ತು ಏಜೆನ್ಸಿಗಳ ನಡುವಿನ ಸಮನ್ವಯ, ಸಹಕಾರ ಮತ್ತು ಸಹಯೋಗದ ಮೂಲಕ, ಮಾದಕವಸ್ತು ವಶಪಡಿಸಿಕೊಳ್ಳುವಿಕೆಯಲ್ಲಿ ಮತ್ತು ಪ್ರಕರಣಗಳ ದಾಖಲೆಗಳಲ್ಲಿ ವೃದ್ಧಿಯಾಗಿದೆ.
ಮೋದಿಯವರ ನಾಯಕತ್ವ ಮತ್ತು ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ ಗೃಹ ಸಚಿವಾಲಯವು ಅಕ್ರಮ ಮಾದಕ ದ್ರವ್ಯದ ವ್ಯಾಪಾರವನ್ನು ತಡೆಯಲು ನಡೆಸಿದ ಬಹುಮುಖ ಪ್ರಯತ್ನಗಳಿಂದ, ವಶಪಡಿಸಿಕೊಂಡ ಮಾದಕವಸ್ತುಗಳ ಪ್ರಮಾಣವು ಸುಮಾರು 100% ಹೆಚ್ಚಾಗಿವೆ ಮತ್ತು ಅದನ್ನು ವ್ಯವಹರಿಸುವವರ ವಿರುದ್ಧ ದಾಖಲಾಗುವ ಪ್ರಕರಣಗಳು 152% ಹೆಚ್ಚಾಗಿವೆ.
ಅಂಕಿಅಂಶಗಳ ಪ್ರಕಾರ, 2006 ರಿಂದ 2013 ರ ಅವಧಿಯಲ್ಲಿ ದಾಖಲಾದ ಪ್ರಕರಣಗಳ ಸಂಖ್ಯೆ 1257 ಇತ್ತು, ಇದು 2014-2023 ರ ಅವಧಿಯಲ್ಲಿ 3 ಪಟ್ಟು ಏರಿಕೆಯಾಗಿ 3755 ಕ್ಕೆ ತಲುಪಿದೆ. 2006-13 ರ ಅವಧಿಯಲ್ಲಿ 1363 ಬಂಧನಗಳಾಗಿದ್ದವು, ಇವು 4 ಪಟ್ಟು ಹೆಚ್ಚಿ 2014-23 ಅವಧಿಯಲ್ಲಿ ಬಂಧನಗಳ ಸಂಖ್ಯೆ 5745 ಕ್ಕೆ ತಲುಪಿದೆ. 2006-13ರಲ್ಲಿ ವಶಪಡಿಸಿಕೊಂಡಿದ್ದ 1.52 ಲಕ್ಷ ಕೆಜಿ ಡ್ರಗ್ಸ್ ಪ್ರಮಾಣ ಮೋದಿ ಆಡಳಿತದಲ್ಲಿ ದ್ವಿಗುಣಗೊಂಡು 3.95 ಲಕ್ಷ ಕೆಜಿಗೆ ತಲುಪಿದೆ. 2006-13ರ ಅವಧಿಯಲ್ಲಿ ವಶಪಡಿಸಿಕೊಂಡ ಡ್ರಗ್ಸ್ ಮೌಲ್ಯವು ರೂ.768 ಕೋಟಿಯಿತ್ತು, ಇದು ಮೋದಿ ಸರ್ಕಾರದ ಅವಧಿಯಲ್ಲಿ 30 ಪಟ್ಟು ಹೆಚ್ಚಾಗಿ ರೂ.22,000 ಕೋಟಿಗೆ ತಲುಪಿದೆ.
ಮೋದಿಯವರ ನಾಯಕತ್ವ ಮತ್ತು ಶಾ ಅವರ ದೂರದೃಷ್ಟಿಯಿಂದಾಗಿ, ಮಾದಕ ದ್ರವ್ಯ ವಿರೋಧಿ ಸಂಸ್ಥೆಗಳು 12,000 ಕೋಟಿ ರೂಪಾಯಿ ಮೌಲ್ಯದ 12 ಲಕ್ಷ ಕಿಲೋಗ್ರಾಂಗಳಷ್ಟು ಡ್ರಗ್ಸ್ಅನ್ನು ನಾಶಪಡಿಸುವ ಅಭೂತಪೂರ್ವ ಕೆಲಸವನ್ನು ಮಾಡಿವೆ. ಮಾದಕ ದ್ರವ್ಯ ಮುಕ್ತ ಭಾರತದ ಕನಸನ್ನು ನನಸಾಗಿಸಲು ಕೇಂದ್ರ ಮತ್ತು ರಾಜ್ಯ ಮಾದಕ ದ್ರವ್ಯ ಕಾನೂನು ಜಾರಿ ಸಂಸ್ಥೆಗಳ ನಡುವೆ ಉತ್ತಮ ಒಗ್ಗಟ್ಟು ಮತ್ತು ಹೊಂದಾಣಿಕೆಗಾಗಿ 2019 ರಲ್ಲಿ ನಾಲ್ಕು ಹಂತದ NCORD ಕಾರ್ಯವಿಧಾನವನ್ನು ಬಲಪಡಿಸಲಾಯಿತು.
ಮೋದಿ ಸರಕಾರದಲ್ಲಿ, ಮಾದಕ ವ್ಯಸನ ಮುಕ್ತ ನವ ಭಾರತ ನಿರ್ಮಾಣಕ್ಕೆ ಅಮಿತ್ ಶಾ ಅವರ ತಂತ್ರಗಾರಿಕೆಗಳು ಫಲ ನೀಡುತ್ತಿರುವುದಕ್ಕೆ ಕೇವಲ ನಮ್ಮ ದೇಶವಲ್ಲದೇ ಜಗತ್ತಿನಾದ್ಯಂತದ ಜನರು ಸಾಕ್ಷಿಯಾಗಿದ್ದಾರೆ.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಪೋಲಿಯೋ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ

ಮಕ್ಕಳಲ್ಲಿ ಕಲಿಕೆಯ ಆಸಕ್ತಿ ಹೆಚ್ಚಿಸುವ ಪ್ರವಾಸಗಳು :ಹಿರೇಮಠ

ಸಾತಿಹಾಳ-ರಬಿನಾಳ ಸಂಪರ್ಕ ರಸ್ತೆ ಸುಧಾರಣೆಗೆ ಗ್ರಾಮಸ್ಥರಿಂದ ಮನವಿ

ಹಿಂದುತ್ವದ ಮೂಲಕ ದೇಶ, ಸಂವಿಧಾನವನ್ನು ಗೌರವಿಸೋಣ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಪೋಲಿಯೋ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ
    In (ರಾಜ್ಯ ) ಜಿಲ್ಲೆ
  • ಮಕ್ಕಳಲ್ಲಿ ಕಲಿಕೆಯ ಆಸಕ್ತಿ ಹೆಚ್ಚಿಸುವ ಪ್ರವಾಸಗಳು :ಹಿರೇಮಠ
    In (ರಾಜ್ಯ ) ಜಿಲ್ಲೆ
  • ಸಾತಿಹಾಳ-ರಬಿನಾಳ ಸಂಪರ್ಕ ರಸ್ತೆ ಸುಧಾರಣೆಗೆ ಗ್ರಾಮಸ್ಥರಿಂದ ಮನವಿ
    In (ರಾಜ್ಯ ) ಜಿಲ್ಲೆ
  • ಹಿಂದುತ್ವದ ಮೂಲಕ ದೇಶ, ಸಂವಿಧಾನವನ್ನು ಗೌರವಿಸೋಣ
    In (ರಾಜ್ಯ ) ಜಿಲ್ಲೆ
  • ಶಾಸಕ ಮನಗೂಳಿ ಯಿಂದಅಹವಾಲು ಸ್ವೀಕಾರ
    In (ರಾಜ್ಯ ) ಜಿಲ್ಲೆ
  • ಇಂದು ವ್ಯಸನಮುಕ್ತ ಶಿಬಿರದ ಸಮಾರೋಪ :ಅಲ್ಲಾಪೂರ
    In (ರಾಜ್ಯ ) ಜಿಲ್ಲೆ
  • ಸಿಂದಗಿ: ಇಂದು ವಿದ್ಯುತ್ ವ್ಯತ್ಯೆಯ
    In (ರಾಜ್ಯ ) ಜಿಲ್ಲೆ
  • ಒಕ್ಕಲಿಗನೊಕ್ಕದಿರೆ ಬಿಕ್ಕುವುದು ಈ ಜಗವೆಲ್ಲ..
    In ವಿಶೇಷ ಲೇಖನ
  • ಕುಡಿವ ನೀರಿನ ಕಾಮಗಾರಿಗಳನ್ನು ತೀವ್ರಗತಿಯಲ್ಲಿ ಪೂರ್ಣಗೊಳಿಸಿ
    In (ರಾಜ್ಯ ) ಜಿಲ್ಲೆ
  • ಶರಣ ಭೋಗಣ್ಣನವರ ಕುರಿತು ಸಂಶೋಧನೆ ಅಗತ್ಯ :ಗೋಗಿ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2025 udayarashminews.com. Designed by udayarashmi news .

Type above and press Enter to search. Press Esc to cancel.