ಆಲಮೇಲ: ಕೇವಲ ಶಿಕ್ಷಣದಿಂದ ಮಾತ್ರ ಸಮಾಜ ಪರಿವರ್ತನೆ ಆಗುವದಿಲ್ಲ. ಶಿಕ್ಷಣದ ಜೊತೆಗೆ ಸಂಸ್ಕಾರವು ಮುಖ್ಯವಾಗಿದೆ ಹಂತ ಸಂಸ್ಕಾರ ಸೀಗಬೇಕು ಎಂದರೆ ಮಠ ಮಂದಿಗಳಲ್ಲಿ ಮಾತ್ರ ಎಂದು ಶಿರಶ್ಯಾಡದ ಅಭಿನವ ಮುರುಘೇಂದ್ರ ಶಿವಾಚಾರ್ಯರು ಹೇಳಿದರು.
ಮಂಗಳವಾರ ಪಟ್ಟಣದ ನಿತ್ಯಾನಂದ ಆರೋಡ ಸಂಗನಬದವೇಶ್ವರ ಜಾತ್ರಾ ಮಹೋತ್ಸವದ ನಿಮಿತ್ಯ ನಡೆದ ಸಾಮೂಹಿಕ ವಿವಾಹ ಹಾಗೂ ಧರ್ಮ ಸಭೆಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಮಠ-ಮಂದಿರಗಳು ಇರುವುದೇ ಸಮಾಜ ದಾರಿ ತಪ್ಪಿದಾಗ ತಿದ್ದುವ ಸಲುವಾಗಿ, ಅದಕ್ಕೆ ಸಮಾಜ ಸುದಾರಣೆ ಆಗಬೇಕು ಎಂದರೆ ಮೊದಲು ಸಂಸ್ಕಾರ ಬೇಕಾಗಿದೆ. ಅಂತಹ ಸಂಸ್ಕಾರ ಮಠ ಮಂದಿರಗಳಲ್ಲಿದೆ. ಅದಕ್ಕೆ ಮಠ ಮಂದಿರಗಳಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು. ಆಲಮೇಲದ ನಿತ್ಯಾನಂದ ಆರೋಢ ಮಠದಲ್ಲಿ ಹಲವಾರು ವರ್ಷಗಳಿಂದ ಸಾಮೂಹಿಕ ವಿವಾಹ ಮಾಡಿಕೊಂಡು ಬಂದಿದ್ದು ಇದರಿಂದ ಬಡವರಿಗೆ ಸಾಕಷ್ಟು ಅನಕೂಲವಾಗಿದೆ ಎಂದು ಹೇಳಿದರು.
ರಾಂಪೂರದ ನಿತ್ಯಾನಂದ ಮಹಾರಾಜರು, ಚಿಂಚೋಳಿಯ ಶರಬಸವ ಶರಣರು, ಮಠದ ಪೀಠಾಧಿಕಾರಿ ಬಸವರಲಿಂಗ ಶರಣರು, ಪಂಚಯ್ಯ ರಾಂಪೂರಮಠ, ಚನ್ನಯ್ಯ ಸಾರಂಗಮಠ, ಶಿಕ್ಷಕ ಪಂಡಿತ ಅವಜಿ, ಅಮರೇಶ ಸಾಲಕ್ಕಿ ಮುಂತಾದವರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

