Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ವಿದ್ಯಾರ್ಥಿಗಳ ಆರಾಧ್ಯ ಗುರು ಎಚ್.ಟಿ. ಕುಲಕರ್ಣಿ ಇನ್ನಿಲ್ಲ!

ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ವಿನೂತನ ಸೈಕಲ್ ಯಾತ್ರೆ

ಆ.೦೨ ರಂದು ಸುಧಾ ಪಾಟೀಲ್ ಅಭಿನಂದನಾ ಕೃತಿ ಲೋಕಾರ್ಪಣೆ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ಪರೀಕ್ಷೆ ಮತ್ತು ಅಭ್ಯಾಸ
ವಿಶೇಷ ಲೇಖನ

ಪರೀಕ್ಷೆ ಮತ್ತು ಅಭ್ಯಾಸ

By No Comments3 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಲೇಖನ
– ವೀಣಾ ಹೇಮಂತಗೌಡ ಪಾಟೀಲ್.
ಮುಂಡರಗಿ
ಗದಗ ಜಿಲ್ಲೆ

ಉದಯರಶ್ಮಿ ದಿನಪತ್ರಿಕೆ

ಬೇಸಿಗೆಯ ಧಗೆಯ ದಿನಗಳಲ್ಲಿ ಪರೀಕ್ಷೆಯ ಕಾವು ಮತ್ತು ಸೂರ್ಯನ ಬಿಸಿಲು ಎರಡರ ತಾಪಮಾನ
ಹೆಚ್ಚಾಗಿಯೇ ಇರುತ್ತದೆ. ಬಾನಲ್ಲಿ ರವಿ ಉರಿದರೆ ಭುವಿಯಲ್ಲಿ ಪಾಲಕರು. ರವಿಯ ಉರವಣಿಗೆಗೆ ಮನೆಯಲ್ಲಿ ಕುಳಿತುಕೊಳ್ಳುವ ಬಹುತೇಕ ಪಾಲಕರು ಮಕ್ಕಳಿಗೆ ಪರೀಕ್ಷೆ ಹತ್ತಿರ ಇರುವುದರಿಂದ ಅಭ್ಯಾಸ ಮಾಡು ಎಂದು ಒಂದೇ ಸಮನೆ ಒತ್ತಾಯವನ್ನು ಮಾಡುತ್ತಾರೆ. ಇದು ಮಕ್ಕಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸುತ್ತದೆ.
ಅವರು ತಮ್ಮ ಓದುವ ಸ್ಥಳಕ್ಕೆ ಹೋಗಿ ಕುಳಿತುಕೊಂಡು ಏನನ್ನೋ ಓದಿ, ಒಂದಷ್ಟು ಬರೆದು ಮತ್ತಷ್ಟು ಅತ್ತಿತ್ತ ಗಮನ ಹರಿಸಿ ಓದುವುದು ಮುಗಿಯಿತು ಎಂದು ಹೇಳುತ್ತಾರೆ. ಆದರೆ ನಿಜವಾಗಿಯೂ ಅಭ್ಯಾಸ ಮಾಡುವುದು ಎಂದರೆ ಏನು? ಎಂದು ಕೇಳಿದರೆ ಮಕ್ಕಳು ತಮ್ಮ ತಲೆಯನ್ನು ಅತ್ತಿತ್ತ ಅಲ್ಲಾಡಿಸುವುದು ಖಂಡಿತ. ಕೊರೋನಾ ಪ್ಯಾಂಡೆಮಿಕ್ ನಂತರ ವಿಶೇಷವಾಗಿ ಮಕ್ಕಳು, ಪಾಲಕರು, ಶಿಕ್ಷಕರು, ಶಾಲಾ ಆಡಳಿತ ವರ್ಗದವರು ಮಕ್ಕಳಿಗೆ ಹೇಗೆ ಕಲಿಸಬೇಕು ಎಂಬ ವಿಷಯದಲ್ಲಿ ವಿಚಲಿತರಾಗಿರುವುದು ನೂರು ಶೇಕಡ ನಿಜ. ಮಕ್ಕಳಲ್ಲಿ ಕುಸಿತಗೊಂಡಿರುವ ಕಲಿಕಾ ಆಸಕ್ತಿಯೇ ಇದಕ್ಕೆಲ್ಲ ಕಾರಣ. ಮತ್ತೆ ಕೆಲ ಮಕ್ಕಳ ಕಲಿಕೆಯ ಬುನಾದಿಯೇ ಸರಿಯಾಗಿಲ್ಲದೆ ಹೋಗಿರುವುದು ಅವರಲ್ಲಿ ಕಲಿಕೆಯ ಆಸಕ್ತಿಯನ್ನು ಬತ್ತಿಸಿದೆ.


ಮಕ್ಕಳಿಗೆ ಪಾಲಕರು ತಾವೇ ಖುದ್ದಾಗಿ ಬೆಳಗಿನ ಜಾವದಲ್ಲಿ ಗಣಿತದ ಲೆಕ್ಕಗಳನ್ನು ಬಿಡಿಸಲು ಸಾಯಂಕಾಲ ಸಮಾಜ ವಿಜ್ಞಾನ ಮತ್ತು ಕನ್ನಡ, ಹಿಂದಿ,ಇಂಗ್ಲಿಷ್ ನಂತಹ ಭಾಷಾ ಶಾಸ್ತ್ರಗಳನ್ನು ವಿಜ್ಞಾನ ಪುಸ್ತಕದಲ್ಲಿನ ವಿವಿಧ ಚಿತ್ರಗಳನ್ನು ಬಿಡಿಸಲು ಹೇಳಬಹುದು. ಬೆಳಗಿನ ಜಾವದಲ್ಲಿ ಓದಲು ಹೇಳಿದರೆ ಮಕ್ಕಳು ಆಗ ತಾನೆ ನಿದ್ದೆಯಿಂದ ಎದ್ದಿರುವ ಕಾರಣ ಓದಲು ಕುಳಿತಾಗ ಅವರಿಗೆ ನಿದ್ರೆ ಬರಬಹುದು. ಆದಕಾರಣ ಬರೆಯುವ ಗಣಿತದ ಲೆಕ್ಕಗಳನ್ನು ಮಾಡುವ ಅಭ್ಯಾಸದಿಂದ ಅವರು ಮತ್ತಷ್ಟು ಕ್ರಿಯಾಶೀಲರಾಗಿ ಕಾರ್ಯ ನಿರ್ವಹಿಸಬಹುದು. ಈ ನಿಟ್ಟಿನಲ್ಲಿ ಪಾಲಕರು ಮಕ್ಕಳಿಗೆ ಸಲಹೆ ಮತ್ತು ಸೂಚನೆಗಳನ್ನು ನೀಡಲೇಬೇಕು.
ಕೆಲವು ವಿಷಯಗಳನ್ನು ಓದಿ ಮನನ ಮಾಡಿಕೊಂಡು ಅವುಗಳನ್ನು ಬರೆಯುವುದರ ಮೂಲಕ ಮಾಡುವ ಅಭ್ಯಾಸ ಮನಃ ಪಟಲದಲ್ಲಿ ಹಾಗೆಯೇ ಉಳಿದು ಹೋಗುತ್ತದೆ. ಮಕ್ಕಳಿಗೆ ವಿಶೇಷವಾಗಿ ಕೆಲವು ವಿಷಯಗಳನ್ನು ಹೇಳಲೇಬೇಕಾಗುತ್ತದೆ.. ಹೇಳಬೇಕು ಕೂಡ.
ಸಾಮಾನ್ಯವಾಗಿ ಮನೆಯಲ್ಲಿ ಹೆಣ್ಣು ಮಕ್ಕಳು ಏನು ಅಡುಗೆ ಮಾಡಲಿ? ಎಂದು ಬಂದು ಕೇಳಿದಾಗ ಏನಾದರೂ ಮಾಡು ಎಂದು ಮನೆಯ ಗಂಡಸರು ಎಲ್ಲ ಜವಾಬ್ದಾರಿಯನ್ನು ಹೆಣ್ಣು ಮಕ್ಕಳ ಮೇಲೆ ಹಾಕುತ್ತಾರೆ ಆ ಹೆಣ್ಣು ಮಗಳು ತನಗೆ ಬೇಕಾದನ್ನು ಅಡುಗೆ ಮಾಡಿದಾಗ ಇದನ್ನ ಯಾಕೆ ಮಾಡಿದೆ?, ಹೀಗೇಕೆ ಮಾಡಿದೆ? ಇದರ ಬದಲು ಅದನ್ನು ಮಾಡಬೇಕಿತ್ತು! ಎಂದು ಬೇರೊಂದು ಅಡುಗೆಯನ್ನು ತಿಂಡಿಯನ್ನು ಹೆಸರಿಸಿ ಕೇಳುತ್ತಾರೆ. ಹಾಗೆ ಕೇಳುವಾಗ ಅವರಿಗೆ ಈ ಮುಂಚೆ ಆಕೆ ಕೇಳಿದಾಗ ತಾವು ಏನಾದರು ಮಾಡು ಎಂದು ಹೇಳುವುದರ ಬದಲು ಇದನ್ನೇ ಮಾಡು ಎಂದು ಹೇಳಬಹುದಿತ್ತಲ್ಲವೇ? ಹಾಗೆ ಏನಾದರೂ ಮಾಡು ಎಂದು ಹೇಳಿದಾಗ ಮಾಡಿ ಕೊಟ್ಟದ್ದನ್ನು ತಿನ್ನಬೇಕು.. ಇಲ್ಲದ ಕೊಂಕು ಮಾತಾಡಬಾರದು ಅಲ್ವೇ. ಮಕ್ಕಳ ವಿಷಯದಲ್ಲಿಯೂ ಹಾಗೆಯೇ ಏನಾದರೂ ಅಭ್ಯಾಸ ಮಾಡು ಎಂದು ಹೇಳುವುದರ ಬದಲು ಇದನ್ನೇ ಓದಬೇಕು ಇದನ್ನೇ ಬರೆಯಬೇಕು ಎಂದು ಒತ್ತುಕೊಟ್ಟು ಹೇಳಿ ಅವರಿಂದ ಕೆಲಸ ತೆಗೆಯುವುದನ್ನು ಕಲಿಯಬೇಕು.


ಎಷ್ಟೋ ಬಾರಿ ಕೆಲ ವಿಷಯಗಳನ್ನು, ಲೆಕ್ಕಗಳನ್ನು, ಪ್ರಮೇಯಗಳನ್ನು ಮಕ್ಕಳು ಓದುವುದಾಗಲಿ ಬರೆಯುವುದಾಗಲಿ ಮಾಡುವುದೇ ಇಲ್ಲ. ಇದಕ್ಕೆ ಕಾರಣವೇನು ಎಂದು ಹುಡುಕಿದಾಗ ನಮ್ಮ ಅರಿವಿಗೆ ಬರುವುದು ‘ವಿ ರೀಡ, ವಾಟ್ ವಿ ಲವ್ ಟು ರೀಡ್” ಎಂಬ ವಾಕ್ಯ. ನಾವು ನಮಗಿಷ್ಟವಾದನ್ನೇ ಓದುತ್ತೇವೆ ಎಂದು ಅರ್ಥ ಕೊಡುವ ಈ ವಾಕ್ಯ ಖಂಡಿತವಾಗಿಯೂ ನಿಜ. ನಾವು ಒಂದು ವಿಷಯವನ್ನು ತೆಗೆದುಕೊಂಡಾಗ ಅದರಲ್ಲಿ ನಮಗೆ ಅನುಕೂಲವೆನ್ನಿಸಿದ ನಾವು ಇಷ್ಟಪಡುವ ಪಾಠಗಳನ್ನು ಮಾತ್ರ ಪದೇ ಪದೇ ಓದುತ್ತೇವೆಯೇ ಹೊರತು ನಮಗೆ ಕಷ್ಟವೆನಿಸುವ ಪಾಠಗಳನ್ನು ಓದದೆ ಹಾಗೆಯೇ ಬಿಡುತ್ತೇವೆ. ಮತ್ತೆ ಕೆಲ ದಿನಗಳ ನಂತರ ಇದು ನೆನಪಾದರು ಕೂಡ ನಾವು ಪ್ರಯತ್ನಿಸಲು ಹಿಂಜರಿಯುತ್ತೇವೆ. ಆಗ ಇಂತಹ ಉಳಿದ ಪಾಠಗಳನ್ನು ಬರೆಯುವ ಮೂಲಕ ಅರ್ಥೈಸಿಕೊಳ್ಳುವ ಅಭ್ಯಾಸ ಮಾಡಬೇಕು.
ಪ್ರಖ್ಯಾತ ಲೇಖಕರೊಬ್ಬರ ಮಾತು ಹೀಗಿದೆ.. ‘ಇಫ್ ಯು ಆರ್ ನಾಟ್ ಸಾಟಿಸ್ಫೈಡ್ ವಿತ್ ದ ರಿಸಲ್ಟ್, ದೆನ್ ಚೇಂಜ್ ಯುವರ್ ಅಪ್ರೋಚ್ ‘.. ನೀವು ಪಡೆಯುವ ಫಲಿತಾಂಶದ ಬಗ್ಗೆ ನಿಮಗೆ ತೃಪ್ತಿ ಇಲ್ಲದೆ ಇದ್ದಾಗ ನೀವು ನಿಮ್ಮ ನೋಡುವ ದೃಷ್ಟಿಕೋನವನ್ನು ಬದಲಾಯಿಸಿಕೊಳ್ಳಿ ಅಥವಾ ಬೇರೆ ರೀತಿಯಲ್ಲಿ ನಿಮಗೆ ಬೇಕಾದ ಫಲಿತಾಂಶವನ್ನು ಪಡೆಯುವ ನಿಟ್ಟಿನಲ್ಲಿ ಪ್ರಯತ್ನಿಸಿ. ನಿಮಗೆ ತಿಳಿಯದೆ ಹೋದ ಮೂರು ಪಾಠಗಳನ್ನು ಬರೆದು ತೆಗೆದಾಗ ನಿಮಗೆ ಬಹುಶಹ ಆ ವಿಷಯ ಮತ್ತಷ್ಟು ಹೆಚ್ಚು ಅರ್ಥವಾಗಬಹುದು.
ಇತ್ತೀಚಿಗೆ ನಮ್ಮ ದೇಶದ ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಮನ್ ಕಿ ಬಾತ್ ನಲ್ಲಿ ಪರೀಕ್ಷಾ ಪೇ ಚರ್ಚ ಎಂಬ ವಿಷಯದ ಕುರಿತು ತಮ್ಮ ಮನ್ ಕಿ ಬಾತ್ ನಲ್ಲಿ ಹೇಳಿದ್ದು ಹೀಗೆ.. “ಪರೀಕ್ಷೆ ಎಂಬುದು ಸಂಭ್ರಮದ ವಿಷಯವಾಗಬೇಕು, ಪರೀಕ್ಷೆಗಳು ಮಕ್ಕಳಲ್ಲಿ ಹುಮ್ಮಸ್ಸನ್ನು ತುಂಬಬೇಕು. ಪರೀಕ್ಷೆ ನಮ್ಮ ಬಲಾಬಲಗಳನ್ನು ತೋರುವ ವಿಷಯವಾಗಬೇಕೇ ಹೊರತು ಅಂಕಪಟ್ಟಿಯಲ್ಲಿ ಹೆಚ್ಚಿನ ಮೊತ್ತದ ಅಂಕಿಗಳನ್ನು ಸೇರಿಸುವುದಲ್ಲ” ಎಂದು. ಅವರ ಮಾತು ಅಕ್ಷರಶಃ ಸತ್ಯವಲ್ಲವೇ.
ಇನ್ನೇನು ಪರೀಕ್ಷೆ ಒಂದೆರಡು ತಿಂಗಳು ಇರುವಾಗ ಪಾಲಕರು ತಮ್ಮ ಮಕ್ಕಳಿಗೆ ಪರೀಕ್ಷೆ ಬರುತ್ತಿವೆ ಇನ್ನಾದರೂ ಓದಲು ಆರಂಭಿಸು, ಇನ್ನೇನು ಪರೀಕ್ಷೆಗೆ ಕೆಲವೇ ದಿನ ಉಳಿಯಿತು ನಿನ್ನ ಓಡಾಟ ಹಾರಾಟಗಳೆಲ್ಲ ಬಂದ್, ಪರೀಕ್ಷೆ ಬರುತ್ತಿವೆ ನಿಮ್ಮ ಪಿಕ್ಚರ್, ಪಿಕ್ನಿಕ್ ಗಳೆಲ್ಲ ಇನ್ನು ಮೇಲೆ ಬಂದ್. ಎಂದು ಪರೀಕ್ಷೆಯ ಗುಮ್ಮನನ್ನು ತೋರಿಸಿ ಪದೇಪದೇ ಹೆದರಿಸಿ ಪರೀಕ್ಷೆ ಎಂದರೆ ರೇಜಿಗೆಯನ್ನು ಉಂಟು ಮಾಡುತ್ತಾರೆ.
ಇದರ ಬದಲಾಗಿ ಮಕ್ಕಳ ಜೊತೆಯಲ್ಲಿ ಕುಳಿತುಕೊಂಡು ತುಸು ಸಮಯ ಕಳೆಯಬೇಕು. ಅವರಿಗೆ ಅರ್ಥವಾಗದ ವಿಷಯಗಳನ್ನು ಗ್ಯಾಜೆಟ್ ಗಳ ಸಹಾಯದಿಂದ ತಿಳಿಸಿ ಹೇಳಬೇಕು. ಪರೀಕ್ಷೆ ಎಂಬ ಸಂಭ್ರಮವನ್ನು ಆಸಕ್ತಿಯಿಂದ ಎದುರುಗೊಳ್ಳಲು ಅಣಿ ಮಾಡುವ ಮೂಲಕ ಮಕ್ಕಳನ್ನು ಪರೀಕ್ಷೆಗೆ ಸಜ್ಜಾಗಿಸುವ ಅಭ್ಯಾಸವನ್ನು ಪಾಲಕರು ಮಾಡಬೇಕು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ವಿದ್ಯಾರ್ಥಿಗಳ ಆರಾಧ್ಯ ಗುರು ಎಚ್.ಟಿ. ಕುಲಕರ್ಣಿ ಇನ್ನಿಲ್ಲ!

ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ವಿನೂತನ ಸೈಕಲ್ ಯಾತ್ರೆ

ಆ.೦೨ ರಂದು ಸುಧಾ ಪಾಟೀಲ್ ಅಭಿನಂದನಾ ಕೃತಿ ಲೋಕಾರ್ಪಣೆ

ಕೃತಕ ಬುದ್ಧಿಮತ್ತೆಯ (AI) ಇತಿಹಾಸ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ವಿದ್ಯಾರ್ಥಿಗಳ ಆರಾಧ್ಯ ಗುರು ಎಚ್.ಟಿ. ಕುಲಕರ್ಣಿ ಇನ್ನಿಲ್ಲ!
    In (ರಾಜ್ಯ ) ಜಿಲ್ಲೆ
  • ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ವಿನೂತನ ಸೈಕಲ್ ಯಾತ್ರೆ
    In (ರಾಜ್ಯ ) ಜಿಲ್ಲೆ
  • ಆ.೦೨ ರಂದು ಸುಧಾ ಪಾಟೀಲ್ ಅಭಿನಂದನಾ ಕೃತಿ ಲೋಕಾರ್ಪಣೆ
    In (ರಾಜ್ಯ ) ಜಿಲ್ಲೆ
  • ಕೃತಕ ಬುದ್ಧಿಮತ್ತೆಯ (AI) ಇತಿಹಾಸ
    In ವಿಶೇಷ ಲೇಖನ
  • ಮಹಿಳೆಯರಿಗಾಗಿ ಸ್ವಾವಲಂಬಿ ಸಬಲಾ ಕಾರ್ಯಾಗಾರ
    In (ರಾಜ್ಯ ) ಜಿಲ್ಲೆ
  • ಪತ್ರಕರ್ತರ ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರ ಮುಂದಾಗಲಿ
    In (ರಾಜ್ಯ ) ಜಿಲ್ಲೆ
  • ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಾಪಾಡುವುದು ಪತ್ರಕರ್ತರ ಜವಾಬ್ದಾರಿ
    In (ರಾಜ್ಯ ) ಜಿಲ್ಲೆ
  • ತಾಳಿಕೋಟಿ: ಕಾನಿಪ ಸಂಘದಿಂದ ಪತ್ರಿಕಾ ದಿನಾಚರಣೆ
    In (ರಾಜ್ಯ ) ಜಿಲ್ಲೆ
  • ಅಥ್ಲೆಟಿಕ್ಸ್ ಕ್ರೀಡಾಪಟುಗಳ ಆಯ್ಕೆ ಶಿಬಿರ ಆ.2 ರಂದು
    In (ರಾಜ್ಯ ) ಜಿಲ್ಲೆ
  • ಪರೀಕ್ಷೆ ಮತ್ತು ಅಭ್ಯಾಸ
    In ವಿಶೇಷ ಲೇಖನ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.