ಸಿಂದಗಿ: ಜಿಲ್ಲೆಯಾದ್ಯಂತ ಎಲ್ಲ ಸರಕಾರಿ ಕಛೇರಿಗಳಲ್ಲಿ ಕೆಲಸ ಕಾರ್ಯಗಳ ಬಗ್ಗೆ ನಿಗಾ ಇಡಬೇಕೆಂದು ಆದೇಶವಿದ್ದ ಕಾರಣ ಇಂದು ಸಿಂದಗಿ ಪುರಸಭೆ ಕಾರ್ಯಾಲಯ ಮೇಲೆ ದಾಳಿ ಮಾಡಿದ್ದೇವೆ ಎಂದು ಲೋಕಾಯುಕ್ತ ಎಸ್ಪಿ ಟಿ.ಮಲ್ಲೇಶ ಹೇಳಿದರು.
ಪಟ್ಟಣದ ಪುರಸಭೆ ಕಾರ್ಯಾಲಯಕ್ಕೆ ಏಕಾಏಕಿ ದಾಳಿ ಮಾಡಿದ ಲೋಕಾಯುಕ್ತರು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಂದಗಿ ಪುರಸಭೆಯಲ್ಲಿ ಲೋಪದೋಷಗಳು ಹೆಚ್ಚಾಗಿವೆ ಎಂದು ನಮಗೆ ದೂರುಗಳು ಬಂದಿದ್ದವು. ದೂರುಗಳ ಆಧಾರದ ಮೇಲೆ ದಾಳಿ ನಡೆಸಿದಾಗ ಇಲ್ಲಿನ ವಾತಾವರಣ ಹದಗೆಟ್ಟಿದೆ. ಜನನ ಮತ್ತು ಮರಣ ದಾಖಲಾತಿ ನೀಡಿವುದು ತಡ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರಿಂದ ದೂರು ಬಂದಿದೆ. ಎಲ್ಲದಕ್ಕಿಂತ ಮುಖ್ಯವಾಗಿ ಪುರಸಭೆಯಲ್ಲಿ ಸ್ವಚ್ಚತೆ ಎಂಬುದು ಮರೀಚಿಕೆಯಾಗಿದೆ. ಸಾರ್ವಜನಿಕರಿಗೆ ಸರಕಾರ ಸವಲತ್ತುಗಳು ಒದಗಿಸಬೇಕು ಮತ್ತು ಅವರಿಗೆ ಅನುಕೂಲ ಮಾಡಬೇಕು. ಆಡಳಿತ ಚುರುಕುಗೊಳಿಸುವ ನಿಟ್ಟಿನಲ್ಲಿ ನಾವು ದಾಳಿ ಮಾಡಿದ್ದೇವೆ ಎಂದರು.
ಸಿಬ್ಬಂದಿಗೆ ತರಾಟೆ ಊರಿನ ಶುಚಿತ್ವ ಕಾಪಾಡಬೇಕಾದ ಪುರಸಭೆಯೇ ಮೊದಲು ಶುಚಿತ್ವದಿಂದ ಕೂಡಿಲ್ಲವೆಂದರೆ ಊರನ್ನು ಹೇಗೆ ಸ್ವಚ್ಚವಾಗಿ ಇಡುತ್ತಿರಿ? ನಿಮ್ಮ ಮನೆಯನ್ನು ಹೀಗೆ ಇಟ್ಟುಕೊಳ್ಳುತ್ತೀರಾ ಎಂದು ಪುರಸಭೆ ಮುಖ್ಯ ಅಧೀಕ್ಷಕರಿಗೆ ತರಾಟೆಗೆ ತೆಗೆದುಕೊಂಡರು.
ಅಧಿಕಾರಿಗಳು ಯಾವ ಸಮಯಕ್ಕೆ ಕಛೇರಿಗೆ ಬರುತ್ತಾರೆ ಎಂದು ನೋಟಿಸ್ ಬೋರ್ಡಗೆ ಹಾಕಿ ಸಿಬ್ಬಂದಿಗಳಿಗೆ ಸೂಚಿಸಿದರು.
ಪುರಸಭೆಯ ಅವ್ಯವಸ್ಥೆಯನ್ನು ಕಂಡು ಲೋಕಾಯುಕ್ತರು ಗರಂ ಆದರು.
ಇದೇ ಸಂದರ್ಭದಲ್ಲಿ ಲೋಕಾಯುಕ್ತ ಡಿವೈಎಸ್‌ಪಿ ಸುರೇಶರೆಡ್ಡಿ ಎಂ.ಎಸ್, ಆನಂದ ಡೋಣಿ, ಪಿಎಸ್‌ಐ ಆನಂದ ಠಕಳೆ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

