Subscribe to Updates
Get the latest creative news from FooBar about art, design and business.
Author: editor.udayarashmi@gmail.com
ವಿಜಯಪುರ: ನಗರದ ವಿವಿಧ ವಾರ್ಡ್ ಗಳಲ್ಲಿ ಮಂಗಳವಾರ ನಡೆದ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಅವರು ಭಾಗವಹಿಸಿ, ನಂತರ ಸಾರ್ವಜನಿಕರ ಅಹವಾಲು ಆಲಿಸಿದರು.ವಾರ್ಡ್ ನಂ.21 ರಲ್ಲಿ ಬರುವ ಇಬ್ರಾಹಿಂಪುರದ ಮಲ್ಲಿಕಾರ್ಜುನ ದೇವಸ್ಥಾನ ಹತ್ತಿರ 2022-23ನೇ ಸಾಲಿನ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಮಂಜೂರಿಸಿದ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ಬಳಿಕ, ಸನ್ ಶೈನ್ ಸಿಟಿಯಲ್ಲಿ ರೂ.1 ಕೋಟಿ ಅನುದಾನದಲ್ಲಿ ಆಂತರಿಕ ಸಿಸಿ ರಸ್ತೆ ಅಭಿವೃದ್ಧಿ ಪಡಿಸುವ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.ವಾರ್ಡ್ ನಂ.28ರ ಸರ್.ಎಂ.ವಿಶ್ವೇಶ್ವರಯ್ಯ ರಸ್ತೆಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆ ನಂ.13 ರಲ್ಲಿ ವಿವೇಕ ಯೋಜನೆಯಡಿ ಮಂಜೂರಿಸಿ, ನಿರ್ಮಾಣ ಮಾಡಲಾದ ಶಾಲಾ ಕೊಠಡಿ ಉದ್ಘಾಟಿಸಿ, ನಂತರ ವಾರ್ಡ್ ನಂ.29ರ ರಾಜಾಜಿನಗರದ ನಮ್ಮ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ನಂ.40 ರಲ್ಲಿ ವಿವೇಕ ಯೋಜನೆಯಡಿ ಮಂಜೂರಿಸಿ, ನಿರ್ಮಾಣ ಮಾಡಲಾದ ಎರಡು ಶಾಲಾ ಕೊಠಡಿಗಳನ್ನು ಉದ್ಘಾಟಿಸಿದರು.ಪ್ರತಿ ಕಾರ್ಯಕ್ರಮದ ಬಳಿಕ ಸಾರ್ವಜನಿಕರ ಕುಂದುಕೊರತೆಗಳನ್ನು…
ಯಡ್ರಾಮಿ: ತಾಲೂಕಿನ ಸುಕ್ಷೇತ್ರ ಕಡಕೋಳ ಶ್ರೀ ಮಡಿವಾಳೇಶ್ವರ ಮಹಾಮಠದಲ್ಲಿ ಮಹಾಶಿವಾರಾತ್ರಿ ನಿಮಿತ್ಯ ಶ್ರೀಮಠದ ಪೀಠಾಧಿಪತಿಗಳಾದ ಪೂಜ್ಯ ಡಾ| ರುದ್ರಮುನಿ ಶಿವಾಚರ‍್ಯ ಸ್ವಾಮೀಜಿಗಳ ಸಾನಿಧ್ಯದಲ್ಲಿ ಶುಕ್ರವಾರ ರಾತ್ರಿ ೭ಗಂಟೆಗೆ ಶಿವಾನುಭಾವ ಚಿಂತನ ಕಾರ್ಯಕ್ರಮ ಜರುಗಲಿದೆ ಎಂದು ಶ್ರೀಮಠದ ಸದ್ಭಕ್ತ ಮಂಡಳಿ ತಿಳಿಸಿದೆ.ನೇತೃತ್ವವನ್ನು ಕೊಕಟನೂರ ವಿರಕ್ತಮಠದ ಪೂಜ್ಯ ಮಡಿವಾಳ ಮಹಾಸ್ವಾಮಿಗಳು, ಮಳ್ಳಿ ಹಿರೇಮಠದ ಪೂಜ್ಯ ರುದ್ರಮುನಿ ಶಿವಾಚರ‍್ಯ ಸ್ವಾಮೀಜಿ, ಕೆಕೆಆರ್‌ಡಿಬಿ ಅಧ್ಯಕ್ಷ ಹಾಗೂ ಜೇವರ್ಗಿ ಶಾಸಕ ಡಾ| ಅಜಯಸಿಂಗ್ ಕರ‍್ಯಕ್ರವi ಉದ್ಘಾಟಿಸುವರು. ಕಲಬುರಗಿ ಡಿಸಿಸಿ ಬ್ಯಾಂಕ ನಿರ್ದೇಶಕ ಸುರೇಶ ಸಾಹು ಸಜ್ಜನ ಅಧ್ಯಕ್ಷತೆ ವಹಿಸುವರು. ಮುಖ್ಯ ಅಥಿಗಳಾಗಿ ವಿಧಾನ ಪರಿಷತ್ ಸದಸ್ಯ ತಿಪ್ಪಣಪ್ಪ ಕಮಕನೂರ, ಜೇವರ್ಗಿ ಕಾಂಗ್ರೆಸ್ ಮುಖಂಡ ರಾಜಶೇಖರ ಸಾಹು ಸೀರಿ, ಯುವ ಮುಖಂಡ ವಿಜಯಕುಮಾರ ಕೆ. ಹಿರೇಮಠ, ಯಡ್ರಾಮಿ ಪಪಂ ಸಿಒ ಸಂತೋಷರೆಡ್ಡಿ, ಯಡ್ರಾಮಿ ತಾಪಂ ಇಒ ಮಹಾಂತೇಶ ಪುರಾಣಿಕ, ಅಪ್ಪಯ್ಯ ಮುತ್ತ್ಯಾ ಹಿರೇಮಠ, ಕಡಕೋಳ ಗ್ರಾಪಂ ಪಿಡಿಒ ಸೋಮಲಿಂಗಪ್ಪ ಬಿರಾದರ, ಶ್ರೀಶೈ¯ ಹಿರೇಮಠ ನಾಗರಹಳ್ಳಿ. ಕಡಕೋಳ ಗ್ರಾಪಂ ಸರ್ವ ಸದ್ಯಸರು…
ಇಂಡಿ: ಮಕ್ಕಳು ಶಿಕ್ಷಣವಂತರಾದಾಗ ಮಾತ್ರ ಈ ದೇಶ ಸಮೃದ್ಧವಾಗುತ್ತದೆ. ಪಾಲಕರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಸಮಾಜದಲ್ಲಿ ಸತ್ ಪ್ರಜೆಗಳಾಗಿ ಬದುಕಿ ಬಾಳುವಂತೆ ಮಾಡಬೇಕು ಎಂದು ಶಿಕ್ಷಕ ಎನ್ ಕೆ ಬಿರಾದಾರ ಹೇಳಿದರು.ಅವರು ಪಟ್ಟಣದ ವಿಜಯಪುರ ರಸ್ತೆಯಲ್ಲಿರುವ ಶ್ರೀ ಭಾಗ್ಯವಂತಿ ಕನ್ನಡ ಪೂರ್ವ ಹಾಗೂ ಹಿರಿಯ ಪ್ರಾಥಮಿಕ ಶಾಲೆಯ 19ನೇ ವರ್ಷದ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಮಕ್ಕಳಿಗೆ ಶಿಕ್ಷಣ ನೀಡಿದರೆ ಸಮಾಜದಲ್ಲಿ ಅಪರಾಧ ಕೃತ್ಯಗಳು ಕಡಿಮೆಯಾಗುತ್ತವೆ ಮನೆಯಲ್ಲಿ ಪಾಲಕರು ತಮ್ಮ ಮಕ್ಕಳಿಗೆ ಪಾಠದ ಜೊತೆಗೆ ಸಂಸ್ಕಾರವನ್ನು ನೀಡುವ ಕಾರ್ಯ ಮಾಡಬೇಕು ಎಂದರು.ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದ ಪ್ರಾಧ್ಯಾಪಕ ಚಂದುಗೌಡ ಬಿರಾದಾರ ಮಾತನಾಡಿದರು.ಶಾಲಾ ಮುಖ್ಯ ಶಿಕ್ಷಕ ವಿಶ್ವನಾಥ ಇಮ್ಮನದ ಅಧ್ಯಕ್ಷತೆ ವಹಿಸಿದ್ದರು.ಪತ್ರಕರ್ತ ಉಮೇಶ ಬಳಬಟ್ಟಿ, ಮಲ್ಲನಗೌಡ ಪಾಟೀಲ, ಎಸ್. ಸಿ. ಇಂಡಿ, ಬಸವರಾಜ ಗೊರನಾಳ, ಎ.ಜೆ. ಚೌದರಿ, ಬಾಳು ರಾಠೋಡ್, ರಾಜಕುಮಾರ ಪವಾರ, ಅರವಿಂದ ಪಾಟೀಲ, ಶರಣಬಸಪ್ಪ ನಾಟೀಕಾರ, ಸೇರಿದಂತೆ ಇನ್ನಿತರರು ಇದ್ದರು. ಶಾಲಾ ಸಹ ಶಿಕ್ಷಕಿ ಕಾವೇರಿ…
ಕೊಲ್ಹಾರ: ನಮ್ಮಗಳ ಧರ್ಮ ಯಾವುದಾದರೇನು ನಾವು ವಾಸಿಸುವ ನೆಲ ಭಾರತ ನಾವೆಲ್ಲರೂ ಭಾರತೀಯರು ಎನ್ನುವ ಮನೋಭಾವನೆಯಿಂದ ಸರ್ವಜನಾಂಗದವರು ಸಹಿಷ್ಣುತಾ ಭಾವದಿಂದ ದೇಶದಲ್ಲಿ ಜೀವಿಸುವದೇ ಭಾವಕ್ಯತೆಯ ಸಂಕೇತವಾಗಬೇಕು ಎಂದು ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಹೇಳಿದರು.ಪಟ್ಟಣದ ಅಜಾದ ನಗರದಲ್ಲಿ ಕಾನಕಾಯೆ ಗಪಾರಿಯಾ ಗುರುಕುಲದ ಉರುಸು ನಿಮಿತ್ಯವಾಗಿ ನಡೆದ ೨೦ನೇ ಶತಮಾನದ ಸೂಪಿ ಸಂತ ಶ್ರೀಗುರು ಅಲ್ ಹಾಜ್ ಶಾಹಮಹಮ್ಮದ ಅಬ್ದುಲಗಫಾರಿ ಕಾದ್ರಿಯವರ ೩೧ನೇ ಉರುಸಿನ ನಿಮಿತ್ಯವಾಗಿ ನಡೆದ ೨೪ನೇ ಸರ್ವ ಧರ್ಮ ಸದ್ಭಾವನಾ ಸಮಾರಂಭದಲ್ಲಿ ಮಾತನಾಡುತ್ತಿದ್ದರು.ಜಗತ್ತಿನಲ್ಲಿ ನಾಲ್ಕು ಯುಗಗಳ ಕಾಲಕ್ಕೆ ತಕ್ಕಂತೆ ಭೂಮಿಯ ಮೇಲೆ ಭಗವಂತನ ಅವತಾರವಾಗಿದ್ದು ಆತನ ಅನುಯಾಯಿಗಳಾಗಿ ಮನುಜಕುಲ ಒಂದೆ ಭಾವನೆ ತತ್ವದ ಅಡಿಯಲ್ಲಿ ನಾವುಗಳು ಜೀವಿಸಬೇಕು ಎಂದು ಕರೆ ಕೊಟ್ಟರು.ರಾಜ್ಯಮಟ್ಟದ ಸರ್ವಧರ್ಮದ ಸದ್ಭಾವನಾ ೧೯ನೇಯ ಅಲಹಾಬಾದ ಮೌಲಾನಾ ಭಾವೈಕ್ಯತಾ ಪ್ರತಿಷ್ಟಿತ ಪ್ರಶಸ್ತಿಯನ್ನು ಪ್ರಸಕ್ತ ಸಾಲಿನಲ್ಲಿ ಜಾನಪದ ವಿದ್ವಾಂಸ ಡಾ|| ಶಂಭು ಬಳಿಗಾರ ಅವರಿಗೆ ಕೊಡಮಾಡಲು ನಿರ್ಧರಿಸಿದಂತೆ ಅವರ ಆರೋಗ್ಯದ ಸಮಸ್ಯೆಯಿಂದ ಅನುಪಸ್ಥಿತಿಯಲ್ಲಿ ಅವರ ಧರ್ಮ ಪತ್ನಿ ಶ್ರೀಮತಿ ಪ್ರೇಮಾ ಶಂಭು…
ಬಸವನಬಾಗೇವಾಡಿ: ಪಟ್ಟಣದ ಪ್ರಮುಖ ರಸ್ತೆಯಲ್ಲಿ ವಾಹನ ಸಂಚಾರ ಸುಗಮವಾಗಲು ರಸ್ತೆ ಬದಿ ಬೈಕ್, ವಾಹನಗಳನ್ನು ಅಡಾದಿಡ್ಡಿಯಾಗಿ ನಿಲ್ಲಿಸದೇ ಸರಿಯಾಗಿ ನಿಲ್ಲಿಸಬೇಕೆಂದು ಪಿಐ ವಿಜಯ ಮರಗುಂಡಿ ಹೇಳಿದರು.ಪಟ್ಟಣದ ವಿಜಯಪುರ ಪ್ರಮುಖ ರಸ್ತೆ, ಬಸ್ ನಿಲ್ದಾಣದ ರಸ್ತೆಯ ಎರಡು ಬದಿಗಳಲ್ಲಿ ಅಡಾದಿಡ್ಡಿಯಾಗಿ ನಿಂತಿರುವ ಬೈಕ್, ಇತರೇ ವಾಹನಗಳ ಮಾಲೀಕರಿಗೆ ಗುರುವಾರ ತಿಳಿಸುವ ಮೂಲಕ ವಾಹನ ಸಂಚಾರ ಸುಗಮವಾಗಲು, ಅಪಘಾತ ತಡೆಗಟ್ಟಲು ಪೊಲೀಸ್ ಇಲಾಖೆಯೊಂದಿಗೆ ಸಹಕಾರ ನೀಡಬೇಕೆಂದು ಹೇಳಿದ ಅವರು, ಭಾರತೀಯ ಸ್ಟೇಟ್ ಬ್ಯಾಂಕಿಗೆ ನಿತ್ಯ ಸಾಕಷ್ಟು ಗ್ರಾಹಕರು ಬರುತ್ತಾರೆ. ಬ್ಯಾಂಕಿಗೆ ಬರುವ ಗ್ರಾಹಕರ ಬೈಕ್ಗಳನ್ನು ಸಾಲಾಗಿ ನಿಲ್ಲಿಸುವಂತೆ ಬ್ಯಾಂಕಿನ ಸೆಕ್ಯೂರಿಟಿಗೆ ಸೂಚನೆ ನೀಡಬೇಕೆಂದು ಬ್ಯಾಂಕಿನ ವ್ಯವಸ್ಥಾಪಕರಿಗೆ ಹೇಳಿದರು. ನಂತರ ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುವವರು ರಸ್ತೆಗೆ ಬರದಂತೆ ನೋಡಿಕೊಂಡು ತಮ್ಮ ವ್ಯಾಪಾರ ವಹಿವಾಟು ಮಾಡಿಕೊಳ್ಳಬೇಕು. ಬೈಕ್ ಸವಾರರು, ಇತರೇ ವಾಹನದವರು ತಮ್ಮ ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸದೇ ರಸ್ತೆ ನಿಯಮಗಳನ್ನು ಪಾಲಿಸುವ ಮೂಲಕ ವಾಹನ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು. ಒಂದು ವೇಳೆ ರಸ್ತೆ ನಿಯಮಗಳನ್ನು…
ಮುದ್ದೇಬಿಹಾಳ: ಜಾನಪದ ಮಾನವ ಜನಾಂಗದ ಸಂಸ್ಕೃತಿಯಾಗಿದೆ. ಕಾಡು ಮಾನವರು ನಾಡಿಗೆ ಬಂದು ಸಂಘಟಿತರಾಗಿ ಬದುಕಿಗಾಗಿ ಒಳ್ಳೆಯ ಆಚಾರ, ವಿಚಾರ, ನಂಬಿಕೆ, ಸಂಪ್ರದಾಯ, ಮನೋರಂಜನೆ ರೂಢಿಸಿಕೊಂಡು ಜೀವನ ಪ್ರಾರಂಭಿಸಿದರು. ಈ ಎಲ್ಲ ಪದ್ದತಿಗಳು ಜಾನಪದ ಸಂಸ್ಕೃತಿಯಾಗಿ ಇಂದು ನಮ್ಮ ಬದುಕಿಗೆ ದಾರಿ ದೀಪವಾಗಿವೆ ಎಂದು ಎಂಜಿವ್ಹಿಸಿ ಬಿ.ಇಡಿ ಕಾಲೇಜ ಪ್ರಾಚಾರ್ಯ ಡಾ.ಆರ್.ಜಿ.ಚಿಕ್ಕಮಠ ಅಭಿಪ್ರಾಯಪಟ್ಟರು.ತಾಲೂಕಿನ ಕುಂಟೋಜಿ ಗ್ರಾಮದಲ್ಲಿ ಹಿರೇಮಠದ ಡಾ.ಚನ್ನವೀರ ದೇವರ ಪಟ್ಟಾಧಿಕಾರ ಮಹೋತ್ಸವ ಹಾಗೂ ಕನ್ನಡ ಜಾನಪದ ಪರಿಷತ್ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಏರ್ಪಡಿಸಿದ ” ಜಾನಪದ ಕಲಾ ಮೇಳ” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ನಮ್ಮ ಹಿರಿಯರು ಅನುಭವದ ಮೂಲಕ ಕಟ್ಟಿಕೊಟ್ಟ ಜಾನಪದ ಸಿದ್ದಾಂತ ಸರ್ವ ಜನಾಂಗಕ್ಕೂ ಒಳಿತನ್ನು ಬಯಸುವ ಶ್ರೇಷ್ಠ ಪರಂಪರೆಯಾಗಿದೆ. ಅದನ್ನು ಅರಿತು ಅಳವಡಿಸಿಕೊಂಡು ಬದುಕನ್ನು ಸಾರ್ಥಕ ಮಾಡಿಕೊಳ್ಳಬೇಕೆಂದು ಕರೆ ನೀಡಿದರು.” ಜಾನಪದ ಸಂಸ್ಕೃತಿ ಉಳಿಸಿ ಬೆಳೆಸುವಲ್ಲಿ ಕನ್ನಡ ಜಾನಪದ ಪರಿಷತ್ತಿನ ಪಾತ್ರ” ಕುರಿತು ಉಪನ್ಯಾಸ ನೀಡಿದ ಕಜಾಪ ಬಸವನಬಾಗೇವಾಡಿ ತಾಲೂಕಾಧ್ಯಕ್ಷ ದೇವೇಂದ್ರ ಗೋನಾಳ, ಕಜಾಪ ೯ ವರ್ಷದಲ್ಲಿ ಯಾವ…
ಬ್ರಹ್ಮದೇವನಮಡು: ಸಿಂದಗಿ ತಾಲೂಕು ಮಟ್ಟದ ತ್ರೈಮಾಸಿಕ ಪರಿಶೀಲನಾ (ಕೆಡಿಪಿ) ಸಮಿತಿಗೆ ನಾಮನಿದೇ೯ಶಕರಾಗಿ ಸಿಂದಗಿ ತಾಲೂಕಿನ ಗೋಲಗೇರಿ ಗ್ರಾಮದ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಶಿವಯೋಗೆಪ್ಪ ಹತ್ತರಕಿ ಅವರನ್ನು ನೇಮಕ ಮಾಡಲಾಗಿದೆ ಎಂದು ಶಾಸಕ ಅಶೋಕ ಮನಗೂಳಿ ತಿಳಿಸಿದ್ದಾರೆ.
ಬ್ರಹ್ಮದೇವನಮಡು: ಸಿಂದಗಿ ತಾಲೂಕು ಮಟ್ಟದ ತ್ರೈಮಾಸಿಕ ಪರಿಶೀಲನಾ( ಕೆಡಿಪಿ) ಸಮಿತಿಗೆ ನಾಮನಿದೇ೯ಶರಾಗಿ ನೇಮಕವಾದ ಗೋಲಗೇರಿ ಗ್ರಾಮದ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಶಿವಯೋಗೆಪ್ಪ ಹತ್ತರಕಿ ಅವರನ್ನು ಕಾಂಗ್ರೆಸ್ ಪಕ್ಷದ ಯುವ ಮುಖಂಡ ಚಂದ್ರಶೇಖರ ಕೆಂಭಾವಿ ಸನ್ಮಾನಿಸಿದರು.ಈ ವೇಳೆ ಪಕ್ಷದ ಮುಖಂಡ ಶಿವು ಹತ್ತಿ, ಹಷ೯ಪ್ಪಗೌಡ ಬಿರಾದಾರ, ಪತ್ರಕತ೯ ಮಲ್ಲು ಕೆಂಭಾವಿ ಇದ್ದರು.
ದೇವರಹಿಪ್ಪರಗಿ: ಕಾಲುವೆಯಲ್ಲಿ ಕಾಲು ಜಾರಿ ತಾಯಿ, ಮಗು ಸಾವನ್ನಪ್ಪಿದ ಘಟನೆ ಪಡಗಾನೂರ ಗ್ರಾಮದಲ್ಲಿ ಜರುಗಿದೆ.ತಾಲ್ಲೂಕಿನ ಪಡಗಾನೂರ ಗ್ರಾಮದಲ್ಲಿ ಗುರುವಾರ ಈ ಘಟನೆ ಸಂಭವಿಸಿದೆ. ಭಾರತಿ ಶ್ರೀಶೈಲ ಸಾತಿಹಾಳ(೨೮) ಎಂಬ ಮಹಿಳೆ ಬಟ್ಟೆ ತೊಳೆಯಲು ತನ್ನ ಮಗ ಸಂಪತ್(೧೦) ನೊಂದಿಗೆ ಮುಳವಾಡ ಮುಖ್ಯ ಕಾಲುವೆಗೆ ತೆರಳಿದ್ದು, ಈ ಸಮಯದಲ್ಲಿ ಮಗ ಸಂಪತ್ ಕಾಲು ಜಾರಿ ಕಾಲುವೆಗೆ ಬಿದ್ದಿದ್ದನ್ನು ಗಮನಿಸಿದ ತಾಯಿ ಅವನನ್ನು ರಕ್ಷಿಸಲು ತಾನು ಕಾಲುವೆಗೆ ಇಳಿದ ಪರಿಣಾಮ ಈಜು ಬಾರದೇ ಇಬ್ಬರು ಮೃತಪಟ್ಟಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ದೇವರಹಿಪ್ಪರಗಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇಂಡಿ: ತಾಲೂಕಿನಲ್ಲಿ ಕೃಷಿಗೆ ಯೋಗ್ಯವಾದ ಮಣ್ಣಿನ ಅಕ್ರಮ ಸಾಗಾಣೆ ಧಂದೆ ಅವ್ಯಾಹತವಾಗಿ ನಡೆಯುತ್ತಿದ್ದು, ಕೂಡಲೇ ಅಕ್ರಮ ಮಣ್ಣು ಸಾಗಾಟಗಾರರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಕರವೇ ಸ್ವಾಭಿಮಾನ ಬಣದ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಉಪ ತಹಶಿಲ್ದಾರ ಧನಪಾಲಶೆಟ್ಟಿ ದೇವೂರ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.ಪಟ್ಟಣದ ಆಡಳಿತ ಸೌಧಕ್ಕೆ ತೆರಳಿದ ಕಾರ್ಯಕರ್ತರು ನದಿ ಪಾತ್ರದಲ್ಲಿನ ಮತ್ತು ರೈತರ ಜಮೀನಿನಲ್ಲಿನ ಮಣ್ಣನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದಾರೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು, ಅಕ್ರಮವಾಗಿ ಮಣ್ಣು ಸಾಗಾಟವನ್ನು ತಡೆಗಟ್ಟಬೇಕು. ಅಲ್ಲದೇ ಕಾನೂನು ಬಾಹಿರವಾಗಿ ಎಲ್ಲೆಲ್ಲಿ ಮಣ್ಣು ಶೇಖರಣೆ ಆಗಿದಿಯೋ ಅದನ್ನು ವಶಕ್ಕೆ ಪಡೆದುಕೊಂಡು ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು. ಒಂದು ವೇಳೆ ನಿರ್ಲಕ್ಷ್ಯ ತೋರಿದರೆ, ಉಗ್ರವಾದ ಹೋರಾಟಕ್ಕೆ ಸಹಕಾರ ನೀಡಿದಂತಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಈ ಸಂದರ್ಭದಲ್ಲಿ ಕರವೇ ಸ್ವಾಭಿಮಾನ ಬಣದ ಉತ್ತರ ಕರ್ನಾಟಕ ಅಧ್ಯಕ್ಷ ಲಕ್ಷ್ಮಣ ಕೆಂಬಾಗೆ, ಜಿಲ್ಲಾಧ್ಯಕ್ಷ ಜಗದೇವ್ ಸೂರ್ಯವಂಶಿ, ತಾಲ್ಲೂಕು ಅಧ್ಯಕ್ಷ ಶಿವು ಬಡಿಗೇರ, ಗಿರೀಶ್ ಕಲಕಟ್ಟಿ, ನಿಂಗರಾಜು, ಸಂತೋಷ…
