ಯಡ್ರಾಮಿ: ತಾಲೂಕಿನ ಸುಕ್ಷೇತ್ರ ಕಡಕೋಳ ಶ್ರೀ ಮಡಿವಾಳೇಶ್ವರ ಮಹಾಮಠದಲ್ಲಿ ಮಹಾಶಿವಾರಾತ್ರಿ ನಿಮಿತ್ಯ ಶ್ರೀಮಠದ ಪೀಠಾಧಿಪತಿಗಳಾದ ಪೂಜ್ಯ ಡಾ| ರುದ್ರಮುನಿ ಶಿವಾಚರ‍್ಯ ಸ್ವಾಮೀಜಿಗಳ ಸಾನಿಧ್ಯದಲ್ಲಿ ಶುಕ್ರವಾರ ರಾತ್ರಿ ೭ಗಂಟೆಗೆ ಶಿವಾನುಭಾವ ಚಿಂತನ ಕಾರ್ಯಕ್ರಮ ಜರುಗಲಿದೆ ಎಂದು ಶ್ರೀಮಠದ ಸದ್ಭಕ್ತ ಮಂಡಳಿ ತಿಳಿಸಿದೆ.
ನೇತೃತ್ವವನ್ನು ಕೊಕಟನೂರ ವಿರಕ್ತಮಠದ ಪೂಜ್ಯ ಮಡಿವಾಳ ಮಹಾಸ್ವಾಮಿಗಳು, ಮಳ್ಳಿ ಹಿರೇಮಠದ ಪೂಜ್ಯ ರುದ್ರಮುನಿ ಶಿವಾಚರ‍್ಯ ಸ್ವಾಮೀಜಿ, ಕೆಕೆಆರ್‌ಡಿಬಿ ಅಧ್ಯಕ್ಷ ಹಾಗೂ ಜೇವರ್ಗಿ ಶಾಸಕ ಡಾ| ಅಜಯಸಿಂಗ್ ಕರ‍್ಯಕ್ರವi ಉದ್ಘಾಟಿಸುವರು. ಕಲಬುರಗಿ ಡಿಸಿಸಿ ಬ್ಯಾಂಕ ನಿರ್ದೇಶಕ ಸುರೇಶ ಸಾಹು ಸಜ್ಜನ ಅಧ್ಯಕ್ಷತೆ ವಹಿಸುವರು. ಮುಖ್ಯ ಅಥಿಗಳಾಗಿ ವಿಧಾನ ಪರಿಷತ್ ಸದಸ್ಯ ತಿಪ್ಪಣಪ್ಪ ಕಮಕನೂರ, ಜೇವರ್ಗಿ ಕಾಂಗ್ರೆಸ್ ಮುಖಂಡ ರಾಜಶೇಖರ ಸಾಹು ಸೀರಿ, ಯುವ ಮುಖಂಡ ವಿಜಯಕುಮಾರ ಕೆ. ಹಿರೇಮಠ, ಯಡ್ರಾಮಿ ಪಪಂ ಸಿಒ ಸಂತೋಷರೆಡ್ಡಿ, ಯಡ್ರಾಮಿ ತಾಪಂ ಇಒ ಮಹಾಂತೇಶ ಪುರಾಣಿಕ, ಅಪ್ಪಯ್ಯ ಮುತ್ತ್ಯಾ ಹಿರೇಮಠ, ಕಡಕೋಳ ಗ್ರಾಪಂ ಪಿಡಿಒ ಸೋಮಲಿಂಗಪ್ಪ ಬಿರಾದರ, ಶ್ರೀಶೈ¯ ಹಿರೇಮಠ ನಾಗರಹಳ್ಳಿ. ಕಡಕೋಳ ಗ್ರಾಪಂ ಸರ್ವ ಸದ್ಯಸರು ಹಾಗೂ ಮಠದ ಭಕ್ತರು ಭಾಗವಹಿಸಲಿದ್ದಾರೆ. ಇದೇ ವೇಳೆ ಉದಯವಾಣಿ ಹೊರತಂದಿರುವ ಕಲ್ಯಾಣ ದರ್ಶನ ವಿಶೇಷ ಸಂಚಿಕೆ ಬಿಡುಗಡೆಗೊಳ್ಳಲಿದೆ.
ಈ ವೇಳೆ ಯಡ್ರಾಮಿ ತಾಲೂಕಿನಲ್ಲಿನ ಗ್ರಾಪಂ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರುಗಳಿಗೆ ವಿಶೇಷ ಸನ್ಮಾನ ಕಾರ‍್ಯಕ್ರಮ ನಡೆಯಲಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಭಕ್ತರು ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

