ಇಂಡಿ: ಮಕ್ಕಳು ಶಿಕ್ಷಣವಂತರಾದಾಗ ಮಾತ್ರ ಈ ದೇಶ ಸಮೃದ್ಧವಾಗುತ್ತದೆ. ಪಾಲಕರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಸಮಾಜದಲ್ಲಿ ಸತ್ ಪ್ರಜೆಗಳಾಗಿ ಬದುಕಿ ಬಾಳುವಂತೆ ಮಾಡಬೇಕು ಎಂದು ಶಿಕ್ಷಕ ಎನ್ ಕೆ ಬಿರಾದಾರ ಹೇಳಿದರು.
ಅವರು ಪಟ್ಟಣದ ವಿಜಯಪುರ ರಸ್ತೆಯಲ್ಲಿರುವ ಶ್ರೀ ಭಾಗ್ಯವಂತಿ ಕನ್ನಡ ಪೂರ್ವ ಹಾಗೂ ಹಿರಿಯ ಪ್ರಾಥಮಿಕ ಶಾಲೆಯ 19ನೇ ವರ್ಷದ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಮಕ್ಕಳಿಗೆ ಶಿಕ್ಷಣ ನೀಡಿದರೆ ಸಮಾಜದಲ್ಲಿ ಅಪರಾಧ ಕೃತ್ಯಗಳು ಕಡಿಮೆಯಾಗುತ್ತವೆ ಮನೆಯಲ್ಲಿ ಪಾಲಕರು ತಮ್ಮ ಮಕ್ಕಳಿಗೆ ಪಾಠದ ಜೊತೆಗೆ ಸಂಸ್ಕಾರವನ್ನು ನೀಡುವ ಕಾರ್ಯ ಮಾಡಬೇಕು ಎಂದರು.
ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದ ಪ್ರಾಧ್ಯಾಪಕ ಚಂದುಗೌಡ ಬಿರಾದಾರ ಮಾತನಾಡಿದರು.
ಶಾಲಾ ಮುಖ್ಯ ಶಿಕ್ಷಕ ವಿಶ್ವನಾಥ ಇಮ್ಮನದ ಅಧ್ಯಕ್ಷತೆ ವಹಿಸಿದ್ದರು.
ಪತ್ರಕರ್ತ ಉಮೇಶ ಬಳಬಟ್ಟಿ, ಮಲ್ಲನಗೌಡ ಪಾಟೀಲ, ಎಸ್. ಸಿ. ಇಂಡಿ, ಬಸವರಾಜ ಗೊರನಾಳ, ಎ.ಜೆ. ಚೌದರಿ, ಬಾಳು ರಾಠೋಡ್, ರಾಜಕುಮಾರ ಪವಾರ, ಅರವಿಂದ ಪಾಟೀಲ, ಶರಣಬಸಪ್ಪ ನಾಟೀಕಾರ, ಸೇರಿದಂತೆ ಇನ್ನಿತರರು ಇದ್ದರು. ಶಾಲಾ ಸಹ ಶಿಕ್ಷಕಿ ಕಾವೇರಿ ಪವಾರ್ ಶಾಲಾ ಮಕ್ಕಳಿಗಾಗಿ ಶುದ್ಧ ಕುಡಿಯುವ ನೀರಿನ ಪ್ಲಾಂಟ್, 32 ಇಂಚಿನ ಒಂದು ಟಿವಿಯನ್ನು ಉಡುಗೊರೆಯಾಗಿ ನೀಡಿದರು.
Subscribe to Updates
Get the latest creative news from FooBar about art, design and business.
Related Posts
Add A Comment

