ಬಸವನಬಾಗೇವಾಡಿ: ಪಟ್ಟಣದ ಪ್ರಮುಖ ರಸ್ತೆಯಲ್ಲಿ ವಾಹನ ಸಂಚಾರ ಸುಗಮವಾಗಲು ರಸ್ತೆ ಬದಿ ಬೈಕ್, ವಾಹನಗಳನ್ನು ಅಡಾದಿಡ್ಡಿಯಾಗಿ ನಿಲ್ಲಿಸದೇ ಸರಿಯಾಗಿ ನಿಲ್ಲಿಸಬೇಕೆಂದು ಪಿಐ ವಿಜಯ ಮರಗುಂಡಿ ಹೇಳಿದರು.
ಪಟ್ಟಣದ ವಿಜಯಪುರ ಪ್ರಮುಖ ರಸ್ತೆ, ಬಸ್ ನಿಲ್ದಾಣದ ರಸ್ತೆಯ ಎರಡು ಬದಿಗಳಲ್ಲಿ ಅಡಾದಿಡ್ಡಿಯಾಗಿ ನಿಂತಿರುವ ಬೈಕ್, ಇತರೇ ವಾಹನಗಳ ಮಾಲೀಕರಿಗೆ ಗುರುವಾರ ತಿಳಿಸುವ ಮೂಲಕ ವಾಹನ ಸಂಚಾರ ಸುಗಮವಾಗಲು, ಅಪಘಾತ ತಡೆಗಟ್ಟಲು ಪೊಲೀಸ್ ಇಲಾಖೆಯೊಂದಿಗೆ ಸಹಕಾರ ನೀಡಬೇಕೆಂದು ಹೇಳಿದ ಅವರು, ಭಾರತೀಯ ಸ್ಟೇಟ್ ಬ್ಯಾಂಕಿಗೆ ನಿತ್ಯ ಸಾಕಷ್ಟು ಗ್ರಾಹಕರು ಬರುತ್ತಾರೆ. ಬ್ಯಾಂಕಿಗೆ ಬರುವ ಗ್ರಾಹಕರ ಬೈಕ್ಗಳನ್ನು ಸಾಲಾಗಿ ನಿಲ್ಲಿಸುವಂತೆ ಬ್ಯಾಂಕಿನ ಸೆಕ್ಯೂರಿಟಿಗೆ ಸೂಚನೆ ನೀಡಬೇಕೆಂದು ಬ್ಯಾಂಕಿನ ವ್ಯವಸ್ಥಾಪಕರಿಗೆ ಹೇಳಿದರು. ನಂತರ ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುವವರು ರಸ್ತೆಗೆ ಬರದಂತೆ ನೋಡಿಕೊಂಡು ತಮ್ಮ ವ್ಯಾಪಾರ ವಹಿವಾಟು ಮಾಡಿಕೊಳ್ಳಬೇಕು. ಬೈಕ್ ಸವಾರರು, ಇತರೇ ವಾಹನದವರು ತಮ್ಮ ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸದೇ ರಸ್ತೆ ನಿಯಮಗಳನ್ನು ಪಾಲಿಸುವ ಮೂಲಕ ವಾಹನ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು. ಒಂದು ವೇಳೆ ರಸ್ತೆ ನಿಯಮಗಳನ್ನು ಪಾಲಿಸದೇ ಇದ್ದರೇ ಇಲಾಖೆಯು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಪಿಎಸ್ಐಗಳಾದ ರವಿ ಪವಾರ, ಎನ್.ಟಿ.ದಡ್ಡಿಮನಿ, ಸಿಬ್ಬಂದಿಗಳಾದ ವಿಜಯ ದುದಗಿ, ಜಿ.ಎಸ್.ತಕ್ಕೋಡ, ಬಸವರಾಜ ಸೇಬಗೊಂಡ, ಮಂಜು ಕಟಬರ, ಮಲ್ಲಿಕಾರ್ಜುನ ಅವಟಿ, ಅಮರೇಶ ಬಿರಾದಾರ, ಬಸನಗೌಡ ಯತ್ನಾಳ, ಚಾಂದ ಮುಲ್ಲಾ, ಬಳ್ಳೊಳ್ಳಿ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

