ಕೊಲ್ಹಾರ: ನಮ್ಮಗಳ ಧರ್ಮ ಯಾವುದಾದರೇನು ನಾವು ವಾಸಿಸುವ ನೆಲ ಭಾರತ ನಾವೆಲ್ಲರೂ ಭಾರತೀಯರು ಎನ್ನುವ ಮನೋಭಾವನೆಯಿಂದ ಸರ್ವಜನಾಂಗದವರು ಸಹಿಷ್ಣುತಾ ಭಾವದಿಂದ ದೇಶದಲ್ಲಿ ಜೀವಿಸುವದೇ ಭಾವಕ್ಯತೆಯ ಸಂಕೇತವಾಗಬೇಕು ಎಂದು ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಹೇಳಿದರು.
ಪಟ್ಟಣದ ಅಜಾದ ನಗರದಲ್ಲಿ ಕಾನಕಾಯೆ ಗಪಾರಿಯಾ ಗುರುಕುಲದ ಉರುಸು ನಿಮಿತ್ಯವಾಗಿ ನಡೆದ ೨೦ನೇ ಶತಮಾನದ ಸೂಪಿ ಸಂತ ಶ್ರೀಗುರು ಅಲ್ ಹಾಜ್ ಶಾಹಮಹಮ್ಮದ ಅಬ್ದುಲಗಫಾರಿ ಕಾದ್ರಿಯವರ ೩೧ನೇ ಉರುಸಿನ ನಿಮಿತ್ಯವಾಗಿ ನಡೆದ ೨೪ನೇ ಸರ್ವ ಧರ್ಮ ಸದ್ಭಾವನಾ ಸಮಾರಂಭದಲ್ಲಿ ಮಾತನಾಡುತ್ತಿದ್ದರು.
ಜಗತ್ತಿನಲ್ಲಿ ನಾಲ್ಕು ಯುಗಗಳ ಕಾಲಕ್ಕೆ ತಕ್ಕಂತೆ ಭೂಮಿಯ ಮೇಲೆ ಭಗವಂತನ ಅವತಾರವಾಗಿದ್ದು ಆತನ ಅನುಯಾಯಿಗಳಾಗಿ ಮನುಜಕುಲ ಒಂದೆ ಭಾವನೆ ತತ್ವದ ಅಡಿಯಲ್ಲಿ ನಾವುಗಳು ಜೀವಿಸಬೇಕು ಎಂದು ಕರೆ ಕೊಟ್ಟರು.
ರಾಜ್ಯಮಟ್ಟದ ಸರ್ವಧರ್ಮದ ಸದ್ಭಾವನಾ ೧೯ನೇಯ ಅಲಹಾಬಾದ ಮೌಲಾನಾ ಭಾವೈಕ್ಯತಾ ಪ್ರತಿಷ್ಟಿತ ಪ್ರಶಸ್ತಿಯನ್ನು ಪ್ರಸಕ್ತ ಸಾಲಿನಲ್ಲಿ ಜಾನಪದ ವಿದ್ವಾಂಸ ಡಾ|| ಶಂಭು ಬಳಿಗಾರ ಅವರಿಗೆ ಕೊಡಮಾಡಲು ನಿರ್ಧರಿಸಿದಂತೆ ಅವರ ಆರೋಗ್ಯದ ಸಮಸ್ಯೆಯಿಂದ ಅನುಪಸ್ಥಿತಿಯಲ್ಲಿ ಅವರ ಧರ್ಮ ಪತ್ನಿ ಶ್ರೀಮತಿ ಪ್ರೇಮಾ ಶಂಭು ಬಳಿಗಾರ ಪ್ರಶಸ್ತಿಯನ್ನು ಶ್ರೀಗಳ ಗಣ್ಯಮಾನ್ಯರ ಸಮ್ಮುಖದಲ್ಲಿ ಸ್ವೀಕರಿಸಿದರು.
ಲಾಲಾ ಹುಸೇನ ಕಲಾದಗಿ ಮಾತನಾಡಿ ತಲೆತಲಾಂತರಗಳಿಂದ ಶರಣ ಸಂಪ್ರದಾಯ ಮತ್ತು ಸೂಫಿ ಸಂತರ ತತ್ವಸಿದ್ದಾಂತಗಳು ಮನುಜಕುಲದ ಉದ್ದಾರಕ್ಕಾಗಿಯೇ ಶ್ರಮಿಸಿದ್ದು ಅವರ ಗುರಿ ಹಿಂದೂ ಮುಸ್ಲೀಂ ಕ್ರೆöÊಸ್ತ ಜೈನ ಭೌಧ್ದ ಇನ್ನೀತರ ಧರ್ಮ ಎನ್ನುವ ಭಾವ ಇರಲಿಲ್ಲ ಸರ್ವಧರ್ಮಿಯರು ಪರಸ್ಪರ ಅನ್ಯೋನತೆಯಿಂದ ಮಾನವರಾಗಿ ಬದುಕುವದನ್ನು ನೋಡುವದಾಗಿತ್ತು ಅದರಂತೆ ಸಮಾಜದಲ್ಲಿ ನಾವು ನೀವುಗಳು ಬದುಕುವಾಗ ಅಕ್ಷರವಂತ ಜ್ಞಾನಿಗಳಿಂದಲೇ ಅಹಂ ಮತ್ತು ಅಹಂಕಾರ ಕೋಮುವಾದದ ಮನೋಭಾವ ಸೃಷ್ಟಿಯಾಗುತ್ತಿದ್ದು ಅಂತಹ ಘಟಣೆಗಳು ನಡೆಯಬಾರದು ಎಂದರೆ ಯಾವುದೇ ಧರ್ಮದ ಮತಾಂದ ವ್ಯಕ್ತಿಯಿಂದ ನಡೆಯುವ ಕೋಮುವಾದವನ್ನು ಹತ್ತಿಕ್ಕುವ ಕೆಲಸ ನಮ್ಮದಾಗಬೇಕು ಎಂದರು.
ಯರನಾಳದ ಸಂಗನಬಸವ ಶ್ರೀಗಳು ಮಾತನಾಡಿದರು.
ಕೊಲ್ಹಾರ & ಬೇಲೂರ ಹಿರೇಮಠದ ಪ್ರಭುಕುಮಾರ ಶಿವಾಚಾರ್ಯರು ಮಾತನಾಡಿದರು.
ಅಧ್ಯಕ್ಷತೆಯನ್ನು ಖಾನಕಾಯೆ ಗಫಾರಿಯಾ ಆಶ್ರಮದ ಪೀಠಾಧಿಕಾರಿ ಡಾ|| ಭಕ್ತಿಯಾರಖಾನ ಕಾದ್ರಿ ವಹಿಸಿದ್ದರು ಖ್ಯಾತ ಸಂಶೋಧಕ ಡಾ|| ಕೃಷ್ಣಕೊಲ್ಹಾರ ಕುಲಕರ್ಣಿ, ಚಂದ್ರಶೇಖರಯ್ಯ ಗಣಕುಮಾರ, ನಂದಬಸಪ್ಪ ಚೌದರಿ, ಉಸ್ಮಾನಸಾಬ ಪಟೇಲ, ಈರಣಗೌಡ ಕೋಮಾರ, ಮಲ್ಲು ದೇಸಾಯಿ ರೋಣಿಹಾಳ, ಈರಣ್ಣ ಔರಸಂಗ, ಬಿ.ಎಸ್.ಹಂಗರಗಿ, ಇಸ್ಮಾಯಿಲಸಾಬ ತಹಶೀಲ್ದಾರ, ಬಿ.ಡಿ.ಕಲಾದಗಿ, ಹಟೇಲಸಾಬ ಕಂಕರಪೀರ, ಪಟ್ಟಣ ಪಂಚಾಯತ ಸದಸ್ಯರಾದ ಬಾಬು ಭಜಂತ್ರಿ, ತೌಶೀಪ ಗಿರಗಾಂವಿ, ದಸ್ತಗೀರ ಕಲಾದಗಿ, ಎಂ.ಆರ್.ಕಲಾದಗಿ ಪ್ರಮುಖರು ಆಗಮಿಸಿದ್ದರು. ಜಿಯಾಉಲ್‌ಖಾನ ಕುರಾನ ಪಠಿಸಿದರು, ನೌಶಾದ ಡಾಂಗೆ ನಾಥ ಹೇಳಿದರು. ಕುದಾತಖಾನ್ ಪಠಾಣ ಸ್ವಾಗತಿಸಿದರು. ಅಯುಬಖಾನ ಪಠಾಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಪರಶುರಾಮ ಬ. ಗಣಿ ನಿರೂಪಿಸಿದರು. ಸಭೆಯಲ್ಲಿ ಗಣ್ಯಮಾನ್ಯರನ್ನು ಗೌರವಿಸಲಾಯಿತು.
Subscribe to Updates
Get the latest creative news from FooBar about art, design and business.
Related Posts
Add A Comment

