Author: editor.udayarashmi@gmail.com

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,- ವಿವೇಕಾನಂದ. ಎಚ್. ಕೆ. ಬೆಂಗಳೂರು ಎಂದೋ ಆಗಬಹುದು ಎಂದು ಊಹಿಸಿದ್ದ ಜಾಗತಿಕ ತಾಪಮಾನದ ಬಿಸಿ ಈಗ ಭಾರತದೊಳಗೆ, ಕರ್ನಾಟಕವನ್ನು ಪ್ರವೇಶಿಸಿ ನಮ್ಮ ನಮ್ಮ ಮನೆಯೊಳಗೆ ದೇಹ ಸುಡುವಷ್ಟು ಹತ್ತಿರ ಬಂದಿದೆ..ಅದರ ದುಷ್ಪರಿಣಾಮಗಳು ಮುಂದೆಂದೂ ಆಗಬಹುದು ಎಂದು ಇಡೀ ಆಡಳಿತ ವ್ಯವಸ್ಥೆ ಮತ್ತು ಸಮಾಜ ಭಾವಿಸಿತ್ತು. ಆದರೆ ಅದು ಎಲ್ಲರ ನಿರೀಕ್ಷೆಗಳನ್ನು ಹುಸಿ ಮಾಡಿ ಅತ್ಯಂತ ತೀವ್ರವಾಗಿ ನಮ್ಮನ್ನು ಕಾಡಲು ಪ್ರಾರಂಭಿಸಿದೆ..ಹಣ ಕೇಂದ್ರಿತ ಅಭಿವೃದ್ಧಿಯ ಹಿಂದೆ ಬಿದ್ದ ಮಾನವ ಸಮಾಜ ಪರಿಸರವನ್ನು ನಿರ್ಲಕ್ಷಿಸಿರುವುದು ಮಾತ್ರವಲ್ಲ ನಾಶಪಡಿಸುವುದನ್ನು ನಿರಂತರವಾಗಿ ಮಾಡುತ್ತಾ ಸಾಗಿದ್ದರ ಫಲಿತಾಂಶ ಈಗ ನಾವು ಅನುಭವಿಸಬೇಕಾಗಿದೆ..ಗಾಳಿ ನೀರು ಆಹಾರ ಕಲುಷಿತವಾಗುತ್ತಿರುವುದಕ್ಕಿಂತ ಅಪಾಯಕಾರಿಯಾಗಿ ವಾತಾವರಣದಲ್ಲಿ ಉಷ್ಣ ತಾಪಮಾನ ಹೆಚ್ಚಾಗುತ್ತಿರುವುದು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕಾಗಿದೆ..ಮೊದಲು ಕೆಲವೇ ಜಿಲ್ಲೆಗಳಿಗೆ ಸೀಮಿತವಾಗಿದ್ದ ತೀವ್ರ ತಾಪಮಾನ ಈಗ ರಾಜ್ಯದ ಎಲ್ಲಾ ಕಡೆ ಏಕಪ್ರಕಾರವಾಗಿ ವರದಿಯಾಗುತ್ತಿದೆ. ಬಹುತೇಕ 40 ಡಿಗ್ರಿ ಸೆಲ್ಸಿಯಸ್ ನ ಆಸು ಪಾಸಿನಲ್ಲಿ ಕರ್ನಾಟಕ ರಾಜ್ಯ ಕುದಿಯುತ್ತಿದೆ..ಪ್ರಾಕೃತಿಕವಾಗಿ, ಸ್ವಾಭಾವಿಕವಾಗಿ ಸಂಭವಿಸುವ ವೈಪರೀತ್ಯ ಗಳಿಗೆ…

Read More

ಸಂತೋಷ್ ರಾವ್ ಪೆರ್ಮುಡ (ವ್ಯಕ್ತಿತ್ವ ವಿಕಸನ ತರಬೇತುದಾರರು)ಪೆರ್ಮುಡ ಮನೆ, ಪಟ್ರಮೆ ಗ್ರಾಮ ಅಂಚೆ ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ-೫೭೪೧೯೮ದೂ: ೯೭೪೨೮೮೪೧೬೦ ಇಡೀ ವಿಶ್ವವೇ ಕೊರೋನಾ ಮಹಾಮಾರಿಗೆ ತತ್ತರಿಸಿ ಈಗಷ್ಟೇ ಈ ಜಾಡ್ಯದಿಂದ ನಿಧಾನವಾಗಿ ಹೊರಗೆ ಬರುತ್ತಿದೆ. ಇಂದು ಜನರ ಜೀವನ ಶೈಲಿಯಲ್ಲಿ ಬಹಳಷ್ಟು ಕೊರೋನಾ ಕಾರಣದಿಂದ ಬದಲಾವಣೆಗಳಾಗಿದ್ದು, ಇದುವರೆಗೂ ಬೇಕಾಬಿಟ್ಟಿಯಾಗಿ ಎಲ್ಲೆಂದರಲ್ಲಿ ರಾಜಾರೋಷವಾಗಿ ಅಲೆದಾಡುತ್ತಿದ್ದ ಮಂದಿ ಇಂದು ಮನೆಯಿಂದ ಹೊರಗೆ ಕಾಲಿಡುವ ಮೊದಲು ಹಲವು ಬಾರಿ ಯೋಚಿಸುವಂತೆ ಆಗಿದೆ. ಮನೆಯೊಳಗೆ ಕುಳಿತು ಉಂಟಾಗುವ ಏಕತಾನತೆಯನ್ನು ಕಳೆಯಲು ಈ ಎಲ್ಲಾ ಚಟುವಟಿಕೆಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬಹುದು.ವಿವಿಧ ಜರ್ನಲ್ ಹಾಗೂ ಬ್ಲಾಗ್‌ಗಳನ್ನು ಪ್ರಾರಂಭಿಸಬಹುದು:ನಿಮಗೆ ಬರವಣಿಗೆಯ ಕ್ಷೇತ್ರದಲ್ಲಿ ಆಸಕ್ತಿಯಿದ್ದರೆ, ನಿಮ್ಮ ಜೀವನದ ಸವಿನೆನಪುಗಳು, ಅಜ್ಜಿ ಹೇಳಿದ ಹಳೆಯ ಕಥೆಗಳು ಮತ್ತು ವಿಶೇಷ ಸನ್ನಿವೇಶಗಳು, ವಿಶೇಷ ಸಾಧನೆಗಳು, ಬಾಲ್ಯದ ಅನುಭವಗಳು ಮತ್ತು ರೋಚಕ ಸಂದರ್ಭಗಳನ್ನು ಬರೆದು ಅವುಗಳನ್ನು ನಿಮ್ಮದೇ ಆದ ಜರ್ನಲ್ ಯಾ ಬ್ಲಾಗ್‌ಗಳಲ್ಲಿ ಆನ್‌ಲೈನ್ ಮೂಲಕ ಮತ್ತು ಕೂ ಅಪ್ಲಿಕೇಶನ್ ಮೂಲಕ ಸಂಚಿಕೆಗಳಂತೆ ಗೆಳೆಯರೊಂದಿಗೆ ಹಂಚಿಕೊಳ್ಳಬಹುದು.ಗೊತ್ತಿರುವ…

Read More

ತಾಂಬಾ: ‘ದೇಶಕ್ಕೆ ಕಾಂಗ್ರೆಸ್ ಮಾತ್ರ ಪರ‍್ಯಾಯ’ ಎಂದು ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ ಹೇಳಿದರು.ಸಿಂದಗಿ ಮತಕ್ಷೇತ್ರದ ತಾಂಬಾದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿ, ದೇಶವೀಗ ಬದಲಾವಣೆ ಬಯಸಿದೆ. ವಿಜಯಪುರ ಲೋಕಸಭೆ ಕ್ಷೇತ್ರದ ಜನರೂ ಹೊಸ ಬೆಳಕಿನ ನಿರೀಕ್ಷೆಯಲ್ಲಿದ್ದಾರೆ. ತಮಗೆ ಮತ ನೀಡಿ ಆರಿಸಿ ಕಳಿಸಿದ್ದೇ ಆದರೆ, ಜಿಲ್ಲೆ ಹಿಂದೆಂದೂ ಕಂಡರಿಯದ ಅಭಿವೃದ್ಧಿ ಮಾಡಿ ತೋರಿಸುವೆ. ನಿಮ್ಮೆಲ್ಲರ ನಂಬಿಕೆ ಉಳಿಸಿಕೊಳ್ಳುವೆ ಎಂದು ಭರವಸೆ ನೀಡಿದರು.ಶಾಸಕರಾದ ಅಶೋಕ ಮನಗೂಳಿ ಮಾತನಾಡಿ, ಕಾಂಗ್ರೆಸ್ ಪಕ್ಷದಿಂದ ಮಾತ್ರ ಜನ ಹಿತ ಸಾಧ್ಯ. ಇಷ್ಟು ವರ‍್ಷ ನೀವು ಕೇಂದ್ರ ಸರಕಾರದಿಂದ ಬರುವ ನಿಮ್ಮ ಹಕ್ಕಿನಿಂದ ವಂಚಿತರಾಗಿದ್ದೀರಿ. ನಿಮ್ಮ ಬದುಕು ಹಸನಾಗಲು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿ. ಮೋದಿಯವರು ಭಾವನಾತ್ಮಕ ವಿಷಯ ಕೆದಕಿ ಜನರನ್ನು ಪ್ರಚೋದಿಸುತ್ತಾರೆ. ಫುಲ್ವಾಮಾ, ರಾಮ ಮಂದಿರ ಎನ್ನುತ್ತಾರೆ. ಕಾಂಗ್ರೆಸ್‌ನ ಕೆಲಸಗಳನ್ನು ನೋಡಿ ನೀವು ಮತ ಹಾಕಿ ಎಂದು ಮನವಿ ಮಾಡಿದರು.ಮುಖಂಡರಾದ ಎಸ್.ಎಂ. ಪಾಟೀಲ ಗಣಿಹಾರ, ಜಿ.ಪಂ. ಸದಸ್ಯ ಗುರಣ್ಣಗೌಡ ಪಾಟೀಲ ಚಾಂದಕವಟೆ, ರವಿ ಚವ್ಹಾಣ,…

Read More

ಬಸವನಬಾಗೇವಾಡಿ: ತಾಲೂಕಿನ ಹೂವಿನಹಿಪ್ಪರಗಿ ಗ್ರಾಮದಲ್ಲಿ ಪ್ರತ್ಯೇಕವಾಗಿ ಇಬ್ಬರು ವ್ಯಕ್ತಿಗಳು ತಮ್ಮ ಅನಾರೋಗ್ಯದಿಂದ ಮನನೊಂದು ನೇಣಿಗೆ ಶರಣಾದ ಘಟನೆ ಜರುಗಿದೆ.ಗ್ರಾಮದ ಸಿದ್ದಪ್ಪ ಪಕೀರಪ್ಪ ಅಂಬಿಗೇರ(೪೩) ಅವರು ಮೂಲವ್ಯಾದಿಯಿಂದ ಬಳಲುತ್ತಿರುವದರಿಂದಾಗಿ ಅವರು ಮನನೊಂದು ತಮ್ಮ ಮನೆಯಲ್ಲಿ ಏ.೨, ಮಂಗಳವಾರದಂದು ಸಂಜೆ ಸುಮಾರಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಹುಣಶ್ಯಾಳ ಪಿಬಿ ಗ್ರಾಮದ ಭೀಮಪ್ಪ ಗಿರಿಯಪ್ಪ ಡೋಣೂರ(ಹಳ್ಳಿ) (೮೪) ಅವರು ತೀವ್ರ ಅನಾರೋಗ್ಯದಿಂದ ಬಳಲುತ್ತಿರುವದರಿಂದಾಗಿ ಹೂವಿನಹಿಪ್ಪರಗಿ ಗ್ರಾಮದ ಬಸ್ ನಿಲ್ದಾಣದಲ್ಲಿ ಏ.೨ ಮತ್ತು ೩ ರ ಬೆಳಗಿನ ಜಾವದ ಮಧ್ಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಎರಡು ಘಟನಾ ಸ್ಥಳಕ್ಕೆ ಪಿಐ ವಿಜಯ ಮರಗುಂಡಿ, ಪಿಎಸ್ಐ ರವಿ ಪವಾರ, ಎಎಸ್ಐ ಎಂ.ಐ.ತಳವಾರ, ಎ.ಎಚ್.ರೆಡ್ಡೇರ ಭೇಟಿ ನೀಡಿ ಪರಿಶೀಲನೆ ಮಾಡಿದರು. ಈ ಕುರಿತು ಬಸವನಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಎಸ್.ಬಿ.ವಿಸ್ಡಮ್ ಕರಿಯರ್ ಅಕಾಡೆಮಿಯ ಕಾರ್ಯಕ್ರಮದಲ್ಲಿಡಾ.ಅಮೃತಾನಂದ ಸ್ವಾಮೀಜಿ ಅಭಿಮತ ವಿಜಯಪುರ: ಒಂದು ರಾಷ್ಟ್ರ ಸರ್ವತೋಮುಖ ಬೆಳವಣಿಗೆ ಆಗಬೇಕಾದರೆ ಯುವಕರ ಜ್ಞಾನ ಮತ್ತು ಬಲ, ರೈತರ ಶ್ರಮ, ರಾಜಕಾರಣಿಗಳ ದೇಶಾಭಿಮಾನ ಮಹತ್ವದಾಯಕ ಎಂದು ಬಾಲಗಾಂವ ಗುರುದೇವ ಆಶ್ರಮದ ಡಾ.ಅಮೃತಾನಂದ ಮಹಾಸ್ವಾಮಿಗಳು ಹೇಳಿದರು.ಶ್ರೀಗಳು ವಿಜಯಪುರ ನಗರದ ಪ್ರತಿಷ್ಠಿತ ಸ್ಪರ್ಧಾತ್ಮಕ ತರಬೇತಿ ಕೇಂದ್ರ ಎಸ್.ಬಿ.ವಿಸ್ಡಮ್ ಕರಿಯರ್ ಅಕಾಡೆಮಿಯಲ್ಲಿ ಜರುಗಿದ “ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರ” ಎಂಬ ವಿಷಯದ ಕುರಿತು ಉಪನ್ಯಾಸ ನೀಡಿ ಮಾರ್ಗದರ್ಶನ ಮಾಡಿದರು.ಯುವಕರು ರಾಷ್ಟ್ರದ ಶಕ್ತಿ. ಯುವಕರಲ್ಲಿ ದೇಶಪ್ರೇಮ ಸೇವಾ ಮನೋಭಾವ ಯಾವುದೇ ಪಲಾಪೇಕ್ಷೆ ಇಲ್ಲದೆ ಅರ್ಪಣಾ ಮನೋಭಾವದಿಂದ ಬರಬೇಕು. ರಾಷ್ಟ್ರದ ಜಲಸಂಪತ್ತು ಹಾಗೂ ಪ್ರಕೃತಿ ಸಂಪತ್ತನ್ನು ಹಾಳಾಗದಂತೆ ಕಾಯುವುದು ಯುವಕರ ದೊಡ್ಡ ಜವಾಬ್ದಾರಿಯಾಗಿದೆ. ಶಿಸ್ತು ಸಮಯ ಪಾಲನೆ ಹಾಗೂ ದೇಶಪ್ರೇಮವನ್ನು ಇಂದಿನ ಯುವಕರು ಮೈಗೂಡಿಸಿಕೊಳ್ಳಬೇಕು ಎಂದು ಕಿವಿಮಾತು ನೀಡಿದರು.ಸಂಸ್ಥೆಯ ಗೌರವ ಅಧ್ಯಕ್ಷ ಶರಣಯ್ಯ ಎಸ್. ಭಂಡಾರಿಮಠ ಮಾತನಾಡಿ, ರಾಷ್ಟ್ರದ ಅಳಿವು ಉಳಿವು ಯುವಕರ ಕೈಯಲ್ಲಿದೆ. ನಮ್ಮ ರಾಷ್ಟ್ರದಲ್ಲಿರುವ ಯುವಕರು ದೈಹಿಕವಾಗಿ, ಮಾನಸಿಕವಾಗಿ, ಜ್ಞಾನಾತ್ಮಕವಾಗಿ ಸದೃಢರಾದರೆ…

Read More

ಢವಳಗಿ: ಸಮೀಪದ ರೂಡಗಿ ಗ್ರಾಮದ ಶ್ರೀ ಯಲ್ಲಾಲಿಂಗ ಮಹಾರಾಜರ ಜಾತ್ರಾ ಮಹೋತ್ಸವದ ಅಂಗವಾಗಿ ಬುಧವಾರ ಅದ್ದೂರಿಯಾಗಿ ರಥೋತ್ಸವ ಜರುಗಿತು.ತೇರಿಗೆ ಭಕ್ತರು ಉತ್ತತ್ತಿ,ಬಾಳೆಹಣ್ಣು , ಚುರುಮುರಿ,ಎಸೆದು ತಮ್ಮ ಭಕ್ತಿಯನ್ನು ಸಮರ್ಪಿಸಿದರು.ಇದಕ್ಕೂ ಮೊದಲು ಶ್ರೀ ಸಿದ್ದಲಿಂಗೇಶ್ವರ ಮತ್ತು ಯಲ್ಲಾಲಿಂಗೇಶ್ವರ ಗದ್ದುಗೆಗೆ ರುದ್ರಾಭಿಷೇಕ ಮತ್ತು ಶ್ರೀ ಅಕ್ಕ ಮಹಾದೇವಿ ಮಹಿಳಾ ಸಂಘ ರೂಢಗಿ ಇವರಿಂದ ಪಂಚಮುಖಿ ಪಲ್ಲಕ್ಕಿಗಳಿಗೆ ಮಹಾಪೂಜೆ ಮತ್ತು ಶ್ರೀ ಸಿದ್ದಲಿಂಗ ದೇವರು ಶ್ರೀ ಖಾಸ್ಗತೇಶ್ವರ ಮಠ ತಾಳಿಕೋಟಿ ಇವರ ಸಮ್ಮುಖದಲ್ಲಿ ಶ್ರೀ ಯಲ್ಲಾಲಿಂಗ ಮಹಾರಾಜರು ಪುಣ್ಯಶ್ರಮ ರೂಢಗಿ ಹಾಗೂ ಶ್ರೀ ತಿಪ್ಪಣ್ಣ ಪೂಜಾರಿ ಇವರಿಂದ ಮುಂಜಾನೆ 11 ಘಂಟೆಗೆ ಅಗ್ನಿ ಪ್ರವೇಶ ಮಾಡಿ ಭಕ್ತಿ ಸಮರ್ಪಿಸಿದರು. ನಂತರ ಸಾಯಂಕಾಲ 6 ಘಂಟೆಗೆ ರೂಢಗಿ ಗ್ರಾಮಸ್ಥರಿಂದ ಮತ್ತು ಸುತ್ತಮುತ್ತಲಿನ ಗ್ರಾಮದ ಸಹಸ್ರಾರು ಭಕ್ತರು ಸೇರಿ ತೇರು ಎಳೆದು ಸಂಭ್ರಮಿಸಿದರು.ಇದೇ ವೇಳೆ ಗ್ರಾಮದ ಹಿರಿಯರಾದ ಬಸವರಾಜ ದೋಡಮನಿ, ಶಿವಾನಂದ ಕೋರಿ ಎಸ್ ಪೀ ಸೇವಾಲಾಲ್, ಶ್ರೀಶೈಲ ದೊಡಮನಿ, ಬಸವರಾಜ ವಡ್ಡರ, ಬಸವರಾಜ ಬೆಲ್ಲದ, ಸಂಗಮೇಶ ಹಾರಿವಾಳ,…

Read More

ತಾತ ಕೊರೆಸಿದ್ದ ಕೊಳವೆ ಬಾವಿಗೆ ಬಿದ್ದ 2 ವರ್ಷದ ಮೊಮ್ಮಗ ವಿಜಯಪುರ: ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದ ಸಮೀಪ ಜಮೀನಿನಲ್ಲಿ ಕೊರೆಸಿದ್ದ ತೆರೆದ ಕೊಳವೆ ಬಾವಿಗೆ ಎರಡು ವರ್ಷದ ಮಗು ಬಿದ್ದಿರುವ ಘಟನೆ ನಡೆದಿದೆ.ಮಂಗಳವಾರ ಕೊಳವೆ ಬಾವಿಯನ್ನು ಕೊರೆಸಲಾಗಿತ್ತು. ಆದರೆ ನೀರು ಬರದ ಹಿನ್ನಲೆಯಲ್ಲಿ ಅದನ್ನು ಹಾಗೆ ಬಿಡಲಾಗಿತ್ತು. ಶಂಕರಪ್ಪ ಅವರು ತಮ್ಮ ಜಮೀನಿನಲ್ಲಿ ಕೊಳವೆ ಬಾವಿ ಕೊರೆಸಿದ್ದರು. ಇಂದು ಆಟವಾಡಲು ಹೋಗಿದ್ದ ವೇಳೆ ಶಂಕರಪ್ಪ ಅವರ ಮೊಮ್ಮಗ ಸ್ವಾತಿಕ್ ಆಯತಪ್ಪಿ ಬೋರ್ ವೆಲ್ ಗೆ ಬಿದ್ದಿದ್ದಾನೆ. ಸಾತ್ವಿಕ್ ರಕ್ಷಣೆಗೆ ಬಿರುಸಿನ ಕಾರ್ಯಾಚರಣೆ ಆರಂಭಿಸಲಾಗಿದೆ.ಇಂಡಿ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಘಟನಾ ಸ್ಥಳಕ್ಕೆ ದೌಡಾಯಿಸಿದ್ದು ರಕ್ಷಣಾ ಕಾರ್ಯಾಚರಣೆಗೆ ಮುಂದಾಗಿದ್ದಾರೆ.ಈ ಕುರಿತು ಸಹಾಯಕ ಕಮಿಷನರ್ ಅಬಿದ್ ಗದ್ಯಾಲ್ ಅವರು, ಸಂಜೆ 6 ಗಂಟೆ ಸುಮಾರಿಗೆ ಬಾಲಕ ಬಿದ್ದಿದ್ದಾನೆ. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಪೊಲೀಸರು, ಕಂದಾಯ ಅಧಿಕಾರಿಗಳು, ಅಗ್ನಿಶಾಮಕ ಮತ್ತು ತುರ್ತು ರಕ್ಷಣಾ ಸಿಬ್ಬಂದಿಯ ತಂಡವನ್ನು…

Read More

ಬಸವನಬಾಗೇವಾಡಿ: ತಾಲೂಕಿನ ಮುತ್ತಗಿ ಗ್ರಾಮದ ರುದ್ರಮುನಿ ಹಿರೇಮಠದ ಜಾತ್ರಾಮಹೋತ್ಸವದಂಗವಾಗಿ ಏ.೧೯ ರಂದು ಭರತನಾಟ್ಯ ಮತ್ತು ಗಾಯನ ಸ್ಪರ್ಧೆಗಳನ್ನು ರುದ್ರಸ್ವಾಮೀಜಿ ಯೂಥ್ ಫೌಂಡೇಷನ್ ಆಯೋಜನೆ ಮಾಡಲಾಗಿದೆ. ಗಾಯನ ಸ್ಪರ್ಧೆಯಲ್ಲಿ ಭಾಗವಹಿಸುವವರಿಗೆ ಯಾವುದೇ ವಯಸ್ಸಿನ ಮಿತಿ ಇರುವುದಿಲ್ಲ. ಸಾಹಿತ್ಯವನ್ನು ನೋಡಿ ಹಾಡುವಂತಿಲ್ಲ. ಪಕ್ಕವಾದ್ಯ, ಶೃತಿ ಪೆಟ್ಟಿಗೆ, ಕರೋಕೆ ಬಳಕೆಯೊಂದಿಗೆ ಗರಿಷ್ಠ ೩ ನಿಮಿಷಗಳಲ್ಲಿ ಹಾಡಬೇಕು. ಈ ಸ್ಪರ್ಧೆಯಲ್ಲಿ ಭಾಗಿಯಾಗುವವರಿಗೆ ಏ.೧೪ ರಂದು ಬೆಳಗ್ಗೆ ೧೦ ಗಂಟೆಗೆ ಧ್ವನಿ ಪರೀಕ್ಷೆ ನಡೆದು ಏ.೧೯ ರಂದು ಸಂಜೆ ೫.೩೦ ಗಂಟೆಗೆ ಸ್ಪರ್ಧೆ ನಡೆಯಲಿದೆ. ಭರತನಾಟ್ಯ ಸ್ಪರ್ಧೆಯಲ್ಲಿ ಗರಿಷ್ಠ ೨೧ ವಯಸ್ಸಿನೊಳಗಿನವರು ಭಾಗಿಯಾಗಬಹುದು.. ಇವರ ಪೂರ್ವ ಪರೀಕ್ಷೆಯನ್ನು ಏ.೧೫ ರಂದು ಬೆಳಗ್ಗೆ ೧೦ ಗಂಟೆಗೆ ನಡೆಸಲಾಗುವುದು. ರುದ್ರಸ್ವಾಮೀಜಿ ಸಂಸ್ಥಾನ ಹಿರೇಮಠದಲ್ಲಿ ನಡೆಯಲಿರುವ ಎರಡು ಸ್ಪರ್ಧೆಗಳಲ್ಲಿ ಭಾಗಿಯಾಗುವ ಕಲಾಕಾಂಕ್ಷಿಗಳು ಏ.೧೦ ರೊಳಗೆ ತಮ್ಮ ಹೆಸರನ್ನು ನೋಂದಾಯಿಸಬೇಕು. ಹೆಚ್ಚಿನ ಮಾಹಿತಿ, ಹೆಸರು ನೋಂದಾಯಿಸಲು ವೈ.ಕೆ.ಪತ್ತಾರ ಮೊ-೯೫೯೦೦೬೪೦೫೯, ಎಂ.ಜಿ.ಮಾಳಜಿ ಮೊ- ೯೦೩೫೧೮೧೬೯೫ ಇವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Read More

ನಾಗೂರ ಯಮನೂರೇಶ್ವರ ಜಾತ್ರೆ | ಹೊನಲುಬೆಳಕಿನ ಕಬಡ್ಡಿ ಟೂರ್ನಾಮೆಂಟ್ ಬಸವನಬಾಗೇವಾಡಿ: ಗ್ರಾಮೀಣ ಕ್ರೀಡೆಗಳ ಉಳಿವು ಮತ್ತು ಬೆಳವಣಿಗೆಗೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ಮಣ್ಣೂರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಹೇಶ ಮುಳವಾಡ ಹೇಳಿದರು.ಪಟ್ಟಣದ ಸಮೀಪವಿರುವ ನಾಗೂರ ಗ್ರಾಮದ ಆರಾಧ್ಯದೈವ ಯಮನೂರೇಶ್ವರ ಜಾತ್ರೆಯಂಗವಾಗಿ ಮಂಗಳವಾರ ಸಂಜೆ ಗೆಳೆಯರ ಬಳಗವು ಹಮ್ಮಿಕೊಂಡಿದ್ದ ಹೊನಲು-ಬೆಳಕಿನ ಕಬಡ್ಡಿ ಟೂರ್ನಾಮೆಂಟ್ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಕ್ರೀಡೆಯಾಗಿರುವ ಕಬಡ್ಡಿ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ಮಹತ್ವ ಪಡೆಯಬೇಕಾಗಿದೆ. ಕಬಡ್ಡಿಯಲ್ಲಿ ಪ್ರತಿನಿಧಿಸುವ ಕ್ರೀಡಾಪಟುಗಳು ಸೋಲು-ಗೆಲುವುವನ್ನು ಸರಿ ಸಮಾನವಾಗಿ ಸ್ವೀಕರಿಸಬೇಕು. ಗ್ರಾಮೀಣ ಮಟ್ಟದಲ್ಲಿ ನಡೆಯುವ ಕ್ರೀಡೆಗಳಿಗೆ ಎಲ್ಲರೂ ಪ್ರೋತ್ಸಾಹ ನೀಡಬೇಕೆಂದರು.ದೇಶೀಯ ಆಟಗಳಾದ ಕಬಡ್ಡಿ, ಹಾಕಿ, ಖೋ ಖೋ, ಕುಸ್ತಿಯಂತಹ ಕ್ರೀಡೆಗಳನ್ನು ಆಯೋಜಿಸುವ ಮೂಲಕ ಇಂತಹ ಕ್ರೀಡೆಗಳಲ್ಲಿ ಯುವಜನಾಂಗ ಭಾಗವಹಿಸುವಂತೆ ಪ್ರೇರಣೆ ನೀಡುವಂತಾಗಬೇಕು. ದೇಶೀಯ ಕ್ರೀಡೆಗಳಿಂದ ನಮ್ಮ ದೇಹ, ಮನಸ್ಸು ಸದೃಢವಾಗುತ್ತದೆ. ಇಂದು ಪಾಶ್ಚಿಮಾತ್ಯ ಕ್ರೀಡೆಯಾದ ಕ್ರಿಕೆಟ್ ಹೆಚ್ಚು ಜನಪ್ರಿಯತೆ ಪಡೆದುಕೊಳ್ಳುತ್ತಿದೆ. ಇದೇ ರೀತಿಯಲ್ಲಿ ನಮ್ಮ ದೇಶೀಯ ಕ್ರೀಡೆಗಳು ಜನಪ್ರಿಯತೆ ಗಳಿಸುವಂತೆ ಮಾಡಬೇಕಿದೆ…

Read More