ಬಸವನಬಾಗೇವಾಡಿ: ತಾಲೂಕಿನ ಮುತ್ತಗಿ ಗ್ರಾಮದ ರುದ್ರಮುನಿ ಹಿರೇಮಠದ ಜಾತ್ರಾಮಹೋತ್ಸವದಂಗವಾಗಿ ಏ.೧೯ ರಂದು ಭರತನಾಟ್ಯ ಮತ್ತು ಗಾಯನ ಸ್ಪರ್ಧೆಗಳನ್ನು ರುದ್ರಸ್ವಾಮೀಜಿ ಯೂಥ್ ಫೌಂಡೇಷನ್ ಆಯೋಜನೆ ಮಾಡಲಾಗಿದೆ. ಗಾಯನ ಸ್ಪರ್ಧೆಯಲ್ಲಿ ಭಾಗವಹಿಸುವವರಿಗೆ ಯಾವುದೇ ವಯಸ್ಸಿನ ಮಿತಿ ಇರುವುದಿಲ್ಲ. ಸಾಹಿತ್ಯವನ್ನು ನೋಡಿ ಹಾಡುವಂತಿಲ್ಲ. ಪಕ್ಕವಾದ್ಯ, ಶೃತಿ ಪೆಟ್ಟಿಗೆ, ಕರೋಕೆ ಬಳಕೆಯೊಂದಿಗೆ ಗರಿಷ್ಠ ೩ ನಿಮಿಷಗಳಲ್ಲಿ ಹಾಡಬೇಕು. ಈ ಸ್ಪರ್ಧೆಯಲ್ಲಿ ಭಾಗಿಯಾಗುವವರಿಗೆ ಏ.೧೪ ರಂದು ಬೆಳಗ್ಗೆ ೧೦ ಗಂಟೆಗೆ ಧ್ವನಿ ಪರೀಕ್ಷೆ ನಡೆದು ಏ.೧೯ ರಂದು ಸಂಜೆ ೫.೩೦ ಗಂಟೆಗೆ ಸ್ಪರ್ಧೆ ನಡೆಯಲಿದೆ. ಭರತನಾಟ್ಯ ಸ್ಪರ್ಧೆಯಲ್ಲಿ ಗರಿಷ್ಠ ೨೧ ವಯಸ್ಸಿನೊಳಗಿನವರು ಭಾಗಿಯಾಗಬಹುದು.. ಇವರ ಪೂರ್ವ ಪರೀಕ್ಷೆಯನ್ನು ಏ.೧೫ ರಂದು ಬೆಳಗ್ಗೆ ೧೦ ಗಂಟೆಗೆ ನಡೆಸಲಾಗುವುದು. ರುದ್ರಸ್ವಾಮೀಜಿ ಸಂಸ್ಥಾನ ಹಿರೇಮಠದಲ್ಲಿ ನಡೆಯಲಿರುವ ಎರಡು ಸ್ಪರ್ಧೆಗಳಲ್ಲಿ ಭಾಗಿಯಾಗುವ ಕಲಾಕಾಂಕ್ಷಿಗಳು ಏ.೧೦ ರೊಳಗೆ ತಮ್ಮ ಹೆಸರನ್ನು ನೋಂದಾಯಿಸಬೇಕು. ಹೆಚ್ಚಿನ ಮಾಹಿತಿ, ಹೆಸರು ನೋಂದಾಯಿಸಲು ವೈ.ಕೆ.ಪತ್ತಾರ ಮೊ-೯೫೯೦೦೬೪೦೫೯, ಎಂ.ಜಿ.ಮಾಳಜಿ ಮೊ- ೯೦೩೫೧೮೧೬೯೫ ಇವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
Subscribe to Updates
Get the latest creative news from FooBar about art, design and business.
Related Posts
Add A Comment
