Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ವಿಶಾಲವಾಗಿ ಹಬ್ಬಿ ಬೆಳೆಯುವ ವಟವೃಕ್ಷ

ಮಧ್ಯಸ್ಥಗಾರರ 2.0 ಅಭಿಯಾನ ಸದುಪಯೋಗಕ್ಕೆ ನ್ಯಾ. ಶಶಿಧರ ಸೂಚನೆ

ದಿ.ಅಟಲ್ ಬಿಹಾರಿ ವಾಜಪೇಯಿ ಜನ್ಮದಿನೋತ್ಸವ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ಜಾಗತಿಕ ತಾಪಮಾನ ನಮ್ಮ ಮನ-ಮನೆ, ದೇಹ-ಮನಸ್ಸು ಸುಡುವ ಮುನ್ನ..
ವಿಶೇಷ ಲೇಖನ

ಜಾಗತಿಕ ತಾಪಮಾನ ನಮ್ಮ ಮನ-ಮನೆ, ದೇಹ-ಮನಸ್ಸು ಸುಡುವ ಮುನ್ನ..

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,- ವಿವೇಕಾನಂದ. ಎಚ್. ಕೆ. ಬೆಂಗಳೂರು

ಎಂದೋ ಆಗಬಹುದು ಎಂದು ಊಹಿಸಿದ್ದ ಜಾಗತಿಕ ತಾಪಮಾನದ ಬಿಸಿ ಈಗ ಭಾರತದೊಳಗೆ, ಕರ್ನಾಟಕವನ್ನು ಪ್ರವೇಶಿಸಿ ನಮ್ಮ ನಮ್ಮ ಮನೆಯೊಳಗೆ ದೇಹ ಸುಡುವಷ್ಟು ಹತ್ತಿರ ಬಂದಿದೆ..
ಅದರ ದುಷ್ಪರಿಣಾಮಗಳು ಮುಂದೆಂದೂ ಆಗಬಹುದು ಎಂದು ಇಡೀ ಆಡಳಿತ ವ್ಯವಸ್ಥೆ ಮತ್ತು ಸಮಾಜ ಭಾವಿಸಿತ್ತು. ಆದರೆ ಅದು ಎಲ್ಲರ ನಿರೀಕ್ಷೆಗಳನ್ನು ಹುಸಿ ಮಾಡಿ ಅತ್ಯಂತ ತೀವ್ರವಾಗಿ ನಮ್ಮನ್ನು ಕಾಡಲು ಪ್ರಾರಂಭಿಸಿದೆ..
ಹಣ ಕೇಂದ್ರಿತ ಅಭಿವೃದ್ಧಿಯ ಹಿಂದೆ ಬಿದ್ದ ಮಾನವ ಸಮಾಜ ಪರಿಸರವನ್ನು ನಿರ್ಲಕ್ಷಿಸಿರುವುದು ಮಾತ್ರವಲ್ಲ ನಾಶಪಡಿಸುವುದನ್ನು ನಿರಂತರವಾಗಿ ಮಾಡುತ್ತಾ ಸಾಗಿದ್ದರ ಫಲಿತಾಂಶ ಈಗ ನಾವು ಅನುಭವಿಸಬೇಕಾಗಿದೆ..
ಗಾಳಿ ನೀರು ಆಹಾರ ಕಲುಷಿತವಾಗುತ್ತಿರುವುದಕ್ಕಿಂತ ಅಪಾಯಕಾರಿಯಾಗಿ ವಾತಾವರಣದಲ್ಲಿ ಉಷ್ಣ ತಾಪಮಾನ ಹೆಚ್ಚಾಗುತ್ತಿರುವುದು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕಾಗಿದೆ..
ಮೊದಲು ಕೆಲವೇ ಜಿಲ್ಲೆಗಳಿಗೆ ಸೀಮಿತವಾಗಿದ್ದ ತೀವ್ರ ತಾಪಮಾನ ಈಗ ರಾಜ್ಯದ ಎಲ್ಲಾ ಕಡೆ ಏಕಪ್ರಕಾರವಾಗಿ ವರದಿಯಾಗುತ್ತಿದೆ. ಬಹುತೇಕ 40 ಡಿಗ್ರಿ ಸೆಲ್ಸಿಯಸ್ ನ ಆಸು ಪಾಸಿನಲ್ಲಿ ಕರ್ನಾಟಕ ರಾಜ್ಯ ಕುದಿಯುತ್ತಿದೆ..
ಪ್ರಾಕೃತಿಕವಾಗಿ, ಸ್ವಾಭಾವಿಕವಾಗಿ ಸಂಭವಿಸುವ ವೈಪರೀತ್ಯ ಗಳಿಗೆ ದೇಹ ಮತ್ತು ಮನಸ್ಸು ಹೇಗೋ ಹೊಂದಾಣಿಕೆ ಮಾಡಿಕೊಳ್ಳುತ್ತದೆ. ಆದರೆ ಮನುಷ್ಯನ ದುರಾಸೆಯಿಂದ ನಿರ್ಮಿತವಾದ ವ್ಯತ್ಯಾಸಗಳಿಗೆ ಸ್ವತ ಮನುಷ್ಯನೇ ನಿಯಂತ್ರಣ ಕಳೆದುಕೊಂಡು ಆಘಾತಕ್ಕೆ ಒಳಗಾಗುತ್ತಾನೆ..
ಆದರೆ ಈ ವಿದ್ಯಮಾನಗಳಿಗೆ ನೇರವಾಗಿ ಯಾರನ್ನೋ ಹೊಣೆ ಮಾಡುವುದು ಅಷ್ಟು ಉತ್ತಮ ಅಭಿಪ್ರಾಯವಲ್ಲ. ಏಕೆಂದರೆ ಇಡೀ ವ್ಯವಸ್ಥೆಯ ಪ್ರತಿ ಮಾನವ ಜೀವಿಯು ಇದರ ಜವಾಬ್ದಾರಿಯನ್ನು, ಹೊಣೆಗಾರಿಕೆಯನ್ನು ಹೊರಬೇಕಾಗುತ್ತದೆ..
ಜನಸಂಖ್ಯೆಯ ಹೆಚ್ಚಳ, ಎಲ್ಲೆಂದರಲ್ಲಿ ಟಾರು – ಸಿಮೆಂಟ್ ರಸ್ತೆಗಳು, ಮಿತಿಮೀರಿದ ವಾಹನಗಳು, ಎಲ್ಲೆಲ್ಲೂ ಹವಾನಿಯಂತ್ರಿತ ವ್ಯವಸ್ಥೆ, ಹೊಗೆ ಉಗುಳುವ ಫ್ಯಾಕ್ಟರಿಗಳು, ಎಲ್ಲವನ್ನು ಸುಟ್ಟು ಭಸ್ಮ ಮಾಡುವ ಹಪಾಹಪಿತನ ಹೀಗೆ ಒಂದು ಕಡೆ ಮನುಷ್ಯ ತನ್ನ ಅನುಕೂಲಕರ ಸೌಲಭ್ಯಕ್ಕಾಗಿ ಅಭಿವೃದ್ಧಿಯ ಹೆಸರಿನಲ್ಲಿ ಈ ರೀತಿಯ ಹುಚ್ಚಾಟಗಳನ್ನು ಮಾಡುತ್ತಿದ್ದರೆ, ಮತ್ತೊಂದು ಕಡೆ ಈ ಎಲ್ಲಾ ಅಭಿವೃದ್ಧಿಯ ಮಾನದಂಡಗಳನ್ನು ಪೂರೈಸಲು ಪರಿಸರದ ಮೇಲೆ ನಿರಂತರ ಅತ್ಯಾಚಾರ ಅಂದರೆ ಕಾಡು ನಾಶ, ಕೆರೆಗಳ ನಾಶ, ಪ್ರಾಣಿ ಪಕ್ಷಿಗಳ ನಾಶ, ನಗರಗಳ ಗಿಡಮರಗಳಿಗೆ ಕೊಡಲಿ ಏಟು, ಅನಾವಶ್ಯಕ ಅಪಾರ್ಟ್ಮೆಂಟ್ ಸಂಸ್ಕೃತಿ, ತನ್ನ ಶ್ರೀಮಂತಿಕೆ ಪ್ರದರ್ಶನಕ್ಕಾಗಿ ವಾಹನಗಳ ಖರೀದಿ ಹೀಗೆ ಊಹಿಸಲು ಅಸಾಧ್ಯವಾದ ಅನೇಕ ತಪ್ಪುಗಳು, ಇದರೆಲ್ಲದರ ಪರಿಣಾಮ ಇಡೀ ವಾತಾವರಣದ ಉಷ್ಣಾಂಶ ಪ್ರತಿವರ್ಷ ಹೆಚ್ಚಾಗುತ್ತಾ ಬಂದು ಈಗ ಅದು ತನ್ನ ಮಿತಿಯನ್ನು ಮೀರಿದೆ..
ಧೂಳು, ಹೊಗೆ, ಬಿಸಿಲ ತಾಪ, ಉಷ್ಣಾಂಶ ಏರಿಕೆ ಇವೆಲ್ಲವೂ ಮನುಷ್ಯನ ದೇಹದ ಮೇಲೆ ಗಂಭೀರ ಪರಿಣಾಮ ಬೀರಿ ಮನಸ್ಸುಗಳು ಸಂಕುಚಿತಗೊಂಡು ಒಂದು ರೀತಿ ಅಸಹನೀಯ ವಾತಾವರಣದಲ್ಲಿ ಜೀವಿಸಬೇಕಾದ ಅನಿವಾರ್ಯತೆಗೆ ಸಿಲುಕಿದ್ದೇವೆ..
ಈಗಲೂ ಕಾಲ ಮಿಂಚಿಲ್ಲ. ಏನನ್ನಾದರೂ ಈ ನಿಟ್ಟಿನಲ್ಲಿ ಪ್ರಯತ್ನಿಸಿದರೆ ಖಂಡಿತವಾಗಿಯು ಜಾಗತಿಕ ತಾಪಮಾನದ ಪ್ರಮಾಣವನ್ನು ಅದರೊಂದಿಗೆ ನಮ್ಮ ರಾಜ್ಯದ ಉಷ್ಣಾಂಶವನ್ನು ಕಡಿಮೆಗೊಳಿಸುವ ಅಥವಾ ಹೆಚ್ಚಾಗದಂತೆ ತಡೆಯುವ ಅನೇಕ ಸೂತ್ರಗಳು, ಕಾರ್ಯಯೋಜನೆಗಳು ಈಗಲೂ ಇವೆ..
ಜನರಿಗೆ, ರಾಜಕೀಯ ಪಕ್ಷಗಳಿಗೆ, ಸರ್ಕಾರಗಳಿಗೆ, ಅಧಿಕಾರಿಗಳಿಗೆ ಇಚ್ಛಾಶಕ್ತಿ ಮಾತ್ರ ಬೇಕಾಗಿದೆ. ಅದಿಲ್ಲದೆ ಏನೋ ಉಡಾಫೆಯಾಗಿ ದಿನದೂಡುತ್ತಾ ಹೋದರೆ ಇನ್ನು ಕೆಲವೇ ವರ್ಷಗಳಲ್ಲಿ ಕೋವಿಡ್ – 19 ಗಿಂತ ಭಯಂಕರ ದುಷ್ಪರಿಣಾಮವನ್ನು ಈ ತಾಪಮಾನ ನಮಗೆ ಉಂಟು ಮಾಡಬಹುದು..
ಈ ನಿಟ್ಟಿನಲ್ಲಿ ಚುನಾವಣೆಯ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ಈ ಉಷ್ಣಾಂಶ ಏರಿಕೆಯನ್ನು ತಡೆಗಟ್ಟಲು ಶೀಘ್ರವಾಗಿ ಯುದ್ಧೋಪಾದಿಯ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂಬುದನ್ನು ಅವರ ಚುನಾವಣಾ ಭರವಸೆಯ ಪಟ್ಟಿಯಲ್ಲಿ ಸೇರಿಸಬೇಕೆಂದು ಆಗ್ರಹಿಸಿ ರಾಜ್ಯದ ಎಲ್ಲಾ ಪ್ರಜ್ಞಾವಂತ, ಪ್ರಬುದ್ಧ ಮನಸ್ಸುಗಳು, ಪರಿಸರ ಪ್ರೇಮಿಗಳು ಇದೆ ಏಪ್ರಿಲ್ 6ರಂದು, ಶನಿವಾರ, ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ, ಬೆಳಗ್ಗೆ 10 ಗಂಟೆಯಿಂದ ಸಂಜೆ 4:00 ವರೆಗೆ ರಾಜಕೀಯ ಪಕ್ಷಗಳಿಗೆ ಒತ್ತಾಯಿಸುವ ಒಂದು ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ..
ದಯವಿಟ್ಟು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಜಾಗತಿಕ ಮಟ್ಟದಲ್ಲಿ ಅಲ್ಲದಿದ್ದರು ನಮ್ಮ ರಾಜ್ಯದ ಮಟ್ಟಿಗಾದರೂ ಪರಿಸರ ಉಳಿಸಿ, ತಾಪಮಾನ ತಡೆಯುವ ಕೆಲಸಕ್ಕೆ ಅಳಿಲುಸೇವೆ ಸಲ್ಲಿಸುವ ಅವಕಾಶ ತಪ್ಪಿಸಿಕೊಳ್ಳಬಾರದಾಗಿ ಈ ಮೂಲಕ ಮನವಿ ಮಾಡಿಕೊಳ್ಳುತ್ತಿದ್ದೇವೆ..
ಹೆಚ್ಚಿನ ಮಾಹಿತಿಗಾಗಿ..
ಶ್ರೀ ಆರ್ ಪಿ ವೆಂಕಟೇಶ್ ಮೂರ್ತಿ ಅವರನ್ನು ಸಂಪರ್ಕಿಸಿ.
94484 07561..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
– ವಿವೇಕಾನಂದ. ಎಚ್. ಕೆ. ಬೆಂಗಳೂರು

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ವಿಶಾಲವಾಗಿ ಹಬ್ಬಿ ಬೆಳೆಯುವ ವಟವೃಕ್ಷ

ಮಧ್ಯಸ್ಥಗಾರರ 2.0 ಅಭಿಯಾನ ಸದುಪಯೋಗಕ್ಕೆ ನ್ಯಾ. ಶಶಿಧರ ಸೂಚನೆ

ದಿ.ಅಟಲ್ ಬಿಹಾರಿ ವಾಜಪೇಯಿ ಜನ್ಮದಿನೋತ್ಸವ

ಇರ್ಫಾನ್ ಬೀಳಗಿ ಗೆ ರಾಷ್ಟ್ರೀಯ ಮಾಧ್ಯಮ ಸೇವಾ ರತ್ನ ಪ್ರಶಸ್ತಿ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ವಿಶಾಲವಾಗಿ ಹಬ್ಬಿ ಬೆಳೆಯುವ ವಟವೃಕ್ಷ
    In ವಿಶೇಷ ಲೇಖನ
  • ಮಧ್ಯಸ್ಥಗಾರರ 2.0 ಅಭಿಯಾನ ಸದುಪಯೋಗಕ್ಕೆ ನ್ಯಾ. ಶಶಿಧರ ಸೂಚನೆ
    In (ರಾಜ್ಯ ) ಜಿಲ್ಲೆ
  • ದಿ.ಅಟಲ್ ಬಿಹಾರಿ ವಾಜಪೇಯಿ ಜನ್ಮದಿನೋತ್ಸವ
    In (ರಾಜ್ಯ ) ಜಿಲ್ಲೆ
  • ಇರ್ಫಾನ್ ಬೀಳಗಿ ಗೆ ರಾಷ್ಟ್ರೀಯ ಮಾಧ್ಯಮ ಸೇವಾ ರತ್ನ ಪ್ರಶಸ್ತಿ
    In (ರಾಜ್ಯ ) ಜಿಲ್ಲೆ
  • ಕಾಯಂ ವ್ಯವಸ್ಥೆಗೆ ಕೋರಿ ಮುಂದಿನ ಕ್ರಮ: ಎಂ.ಬಿ.ಪಾಟೀಲ
    In (ರಾಜ್ಯ ) ಜಿಲ್ಲೆ
  • ಮಕ್ಕಳ ಸಾಹಿತ್ಯ ಸಂಗಮದ ಅಧ್ಯಕ್ಷರಾಗಿ ಲಕ್ಷ್ಮೀಪುತ್ರ ಆಯ್ಕೆ
    In (ರಾಜ್ಯ ) ಜಿಲ್ಲೆ
  • ಪ್ರಜಾಪ್ರಭುತ್ವ ಮೌಲ್ಯಗಳ ಬಲಪಡಿಸಲು ಡಿಜಿಟಲ್ ವೇದಿಕೆಗಳು ಅಗತ್ಯ
    In (ರಾಜ್ಯ ) ಜಿಲ್ಲೆ
  • ವಿಜ್ಞಾನ-ತಂತ್ರಜ್ಞಾನವೇ ದೇಶದ ಭವಿಷ್ಯಶಕ್ತಿ :ಡಾ.ಕಾಕೋಡಕರ
    In (ರಾಜ್ಯ ) ಜಿಲ್ಲೆ
  • ದಲಿತರು-ಮುಸಲ್ಮಾನರು ಒಗ್ಗಟ್ಟಿನಿಂದ ಹೋರಾಟ ಮಾಡಿ
    In (ರಾಜ್ಯ ) ಜಿಲ್ಲೆ
  • ಆಧ್ಯಾತ್ಮ ನಮ್ಮನ್ನು ಪ್ರಸನ್ನರನ್ನಾಗಿ ಮಾಡುತ್ತದೆ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2025 udayarashminews.com. Designed by udayarashmi news .

Type above and press Enter to search. Press Esc to cancel.